ದಾಸ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಹೊಂದಿರುವುದು 12ನೇ ಶತಮಾನದಿಂದ 19ನೇ ಶತಮಾನದವರೆಗೆ ಅನೇಕ ದಾಸರು ಪದಗಳನ್ನು ರಚಿಸಿದ್ದಾರೆ. ವಿಜಯದಾಸರು,ಗೋಪಾಲದಾಸರು,ಜಗನ್ನಾಥದಾಸರು,ಕನಕದಾಸರು,ಹೀಗೆ ಇನ್ನೂ ಅನೇಕ ದಾಸರು ದೇವರನ್ನು ಸ್ತುತಿಸುತ್ತ ಕೊಂಡಾಡುತ್ತ ಹಲವಾರು ಪದಗಳನ್ನು ರಚಿಸಿದ್ದಾರೆ. ಇವರಲ್ಲಿ ಪುರಂದರದಾಸರು ಶ್ರೇಷ್ಠರೆನಿಸಿಕೊಂಡಿದ್ದಾರೆ. "ದಾಸರೆಂದರೆ ಪುರಂದರದಾಸರಯ್ಯಾ…….."ಎಂದು ಸ್ವತಃ ಗುರು ವ್ಯಾಸರಾಯರಿಂದಲೇ ಕೊಡಾಡಿಸಿಕೊಂಡ ಹಿರಿಮೆ ಇವರದು.
ದೇವತೆಗಳಲ್ಲಿ ಸಂಗೀತ ವಿಶಾರದ ನಾರದ ಮಹರ್ಷಿಗಳ ಅವತಾರವೇ ಪುರಂದರದಾಸರೆಂಬ ಪ್ರತೀತಿಯೂ ಇದೆ. ಶಾಲಿವಾಹನ ಶೆಕೆ 1858 ರಲ್ಲಿ ಮಹಾರಾಷ್ಟ್ರದ ಪಂಡರಪುರದ ಹತ್ತಿರದ ಗ್ರಾಮವೊಂದರಲ್ಲಿ ಬ್ರಾಹ್ಮಣ ವಂಶದಲ್ಲಿ ಜನಿಸಿದರು. ಇವರ ತಂದೆಯ ಹೆಸರು ವರದಪ್ಪನಾಯಕ, ತಾಯಿ ಲಕ್ಷ್ಮೀಬಾಯಿ. ಇವರದು ಚಿನಿವಾಲ ವೃತ್ತಿ ಇವರಿಗೆ ನವಕೋಟಿ ನಾರಾಯಣನೆಂಬ ಹೆಸರೂ ಇತ್ತು. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ. ಶ್ರೀನಿವಾಸ ನಾಯಕರಲ್ಲಿ ಅಪಾರ ಸಂಪತ್ತಿತ್ತು. ಆದರೆ ಇವರು ಮಾತ್ರ ದಾನ ಎಂಬ ಶಬ್ದದಿಂದಲೇ ದೂರವಿದ್ದರು. ಧನ ಸಂಪತ್ತಿನ ವ್ಯಾಮೋಹ ಇವರಿಗೆ ತುಂಬಾನೆ ಇತ್ತು. ಒಂದು ಬಿಡಿ ಕಾಸು ಹೊರಗೆ ಹೋಗದಂತೆ ಕಾಯುತ್ತಿದ್ದರು. ಈ ಸ್ವಭಾವದ ಶ್ರೀನಿವಾಸ ನಾಯಕರನ್ನು ಪರೀಕ್ಷಿಸಲು ಸ್ವತಃ ಪರಮಾತ್ಮನು ಬಡಬ್ರಾಹ್ಮಣನ ವೇಷದಲ್ಲಿ ಬಂದು
ದಾನ ಮಾಡುವಂತೆ ಪರಿಪರಿಯಾಗಿ ಬೇಡಿಕೊಂಡನು. ಆದರೆ ನಾಯಕನ ಮನಸ್ಸು ಕರಗಲಿಲ್ಲ,ಆಗ ಪರಮಾತ್ಮನು ಮನೆಗೆ ಹೋಗಿ ನಾಯಕರ ಹೆಂಡತಿ ಸರಸ್ವತಿಯವರಲ್ಲಿ ದಾನ ಮಾಡುವಂತೆ ಕೆಳಿದನು. ಸರಸ್ವತಿಯ ಮನಸ್ಸು ಕರಗಿ ದಾನ ಮಾಡಬೇಕಾದರೆ ಅವಳ ಹತ್ತಿರ ಏನು ಇರಲಿಲ್ಲ. ಎಲ್ಲವನ್ನೂ ನಾಯಕರು ಭದ್ರವಾಗಿ ಮುಚ್ಚಿಟ್ಟಿದ್ದರು. ಅಲ್ಲದೇ ಯಾರಿಗೂ ಮುಷ್ಠಿ ಅಕ್ಕಿಯನ್ನು ಕೊಡದಂತೆ ಕಟ್ಟು ನಿಟ್ಟು ಮಾಡಿದ್ದರು. ಬಡಬ್ರಾಹ್ಮಣನ ಮಾತಿಗೆ ಇಲ್ಲವೆನ್ನಲಾಗದೆ.ಅವನ ಕಷ್ಟಕ್ಕೆ ಅನುಕೂಲವಾಗಲೆಂದು ತಮ್ಮ ಮೂಗುತಿಯನ್ನೇ ದಾನ ಮಾಡಿದರು. ಈ ಬಡಬ್ರಾಹ್ಮಣ ಆ ಮೂಗುತಿಯನ್ನು ತೆಗೆದುಕೊಂಡು ಮತ್ತೆ ನಾಯಕರ ಚಿನಿವಾಲ ಅಂಗಡಿಗೆ ಬಂದು ಆ ಮೂಗುತಿಯನ್ನು ಮಾರಲು ಹೋದ.ತಮ್ಮ ಮಡದಿಯ ಮೂಗುತಿಯನ್ನು ನೋಡಿದ ನಾಯಕರಿಗೆ ಅಚ್ಚರಿಯಾಯಿತು. ಆ ಬ್ರಾಹ್ಮಣನನ್ನು ಅಲ್ಲೇ ಕೂಡ್ರಲು ಹೇಳಿ ಮನೆಗೆ ಹೋಗಿ ಹೆಂಡತಿಯನ್ನು ಮೂಗುತಿಯನ್ನು ಕುರಿತು ವಿಚಾರಿಸಿದಾಗ "ಮೂಗುತಿಯನ್ನು ಪೆಟ್ಟಿಗೆಯಲ್ಲಿ ಇಟ್ಟಿದ್ದೇನೆ". ಎಂದು ಸುಳ್ಳು ಹೇಳಿ,ಪೆಟ್ಟಿಗೆಯೊಂದನ್ನು ಕೊಟ್ಟರು.
ನಾಯಕರು ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಮೂಗುತಿ ಅದರಲ್ಲಿಯೇ ಇರುವುದು ಕಂಡು ಬಂತು,ಮತ್ತೆ ಮರಳಿ ಅಂಗಡಿಗೆ ಹೋಗುವಷ್ಟರಲ್ಲಿ ಆ ಬ್ರಾಹ್ಮಣ ಎಲ್ಲಿಯೋ ಹೋಗಿಬಿಟ್ಟಿದ್ದ ಭಗವಂತನೇ ಈ ರೀತಿ ನಮ್ಮನ್ನು ಪರೀಕ್ಷೆ ಮಾಡಿದನೆಂದು ತಿಳಿದ ಸರಸ್ವತಿ ನಡೆದ ಸಂಗತಿಯನ್ನು ಸವಿಸ್ತಾರವಾಗಿ ಪತಿಯ ಮುಂದೆ ಹೇಳಿದಳು. ಇದರಿಂದ ನಾಯಕರ ಮನಸ್ಸು ಪರಿವರ್ತನೆಗೊಂಡಿತು. ಅಪಾರ ಸಂಪತ್ತನ್ನು ಹೊಂದಿದ್ದರೂ ಏನು ಪ್ರಯೋಜನೆಯಿಲ್ಲವೆಂದು ದಾನವನ್ನು ಕೊಡದ ತಮ್ಮ ಜಿಪುಣತನವನ್ನು ಕಂಡು ತಮಗೆ ಬೇಸರ ಉಂಟಾಯಿತು. ಎಲ್ಲ ಸಂಪತ್ತನ್ನು ಬಿಟ್ಟು ಮಡದಿಯೊಂದಿಗೆ ಹರಿಭಕ್ತರಾಗಿ ದಾಸರಾಗಿ ತಂಬೂರಿ,ತಾಳಗಳನ್ನು ಹಿಡಿದು ಭಕ್ತಿ ಮಾರ್ಗ ಹಿಡಿದರು. ಅಂದಿನಿಂದ ಅವರು ಶ್ರೀನಿವಾಸನಾಯಕರಿಂದ ಪುರಂದರದಾಸರಾಗಿ ಪ್ರಸಿದ್ಧರಾದರು.
ಪುರಂದರದಾಸರು ಅನಂತರ ಹಂಪೆಗೆ ಬಂದು ವ್ಯಾಸರಾಯರಿಂದ ದೀಕ್ಷೆ ಪಡೆದು ಮುಂದಿನ ತಮ್ಮ ಸಂಪೂರ್ಣ ಜೀವನವನ್ನು ಹರಿಗೆ ಅರ್ಪಿಸಿ ದಾಸಶ್ರೇಷ್ಠರಾಗಿ ಮೆರೆದ ಇವರು ಶಾಲಿವಾಹನಶಕೆ 1564 ಪೌಷ್ಯ ಮಾಸದ ಅಮಾವಾಸ್ಯೆಯ ದಿನದಂದು ಭಗವಂತನಲ್ಲಿ ಲೀನರಾದರು.
ಪುರಂದರದಾಸರು ಭಕ್ತಿ,ಜ್ಞಾನ,ವ್ಯೆರಾಗ್ಯಗಳ ಸಂಗಮವಾಗಿದ್ದರು. ಸಂಗೀತ ಪ್ರಕಾರಗಳಲ್ಲಿ ಕರ್ನಾಟಕ ಸಂಗೀತಕ್ಕೆ ಪುರಂದರದಾಸರ ಕೊಡುಗೆ ಅಪಾರವಾಗಿರುವುದು. ದೇವರ ನಾಮಸಂಕೀರ್ತನೆ ಮಾಡುತ್ತ ಮೂರು ಲಕ್ಷಕ್ಕಿಂತ ಹೆಚ್ಚು ದಾಸರ ಪದಗಳನ್ನು ರಾಗತಾಳಗಳೊಂದಿಗೆ ರಚಿಸಿ ಹಾಡಿತೋರಿಸಿದ ಮಾಹಾನುಭಾವರು ವಿವಿಧ ಸಂದರ್ಭಗಳಲ್ಲಿ ಶ್ರೀಹರಿಯ ಸಾಧನೆಯನ್ನು ಭಕ್ತರ ಮೇಲಿನ ಪ್ರೀತಿಯನ್ನು ತಮ್ಮ ರಚನೆಗಳ ಮೂಲಕ ತಿಳಿಸಿದ್ದಾರೆ. ಶ್ರೀಹರಿಯನ್ನು ಕೊಂಡಾಡುವಾಗ ಮಧ್ವ ಮತವನ್ನು ಎತ್ತಿ ಹಿಡಿದಿದ್ದಾರೆ. ನಾಮಸ್ಮರಣೆ, ಶ್ರವಣ,ಕೀರ್ತನೆ,ಪಾದಸೇವೆ,ದಾಸ್ಯ,ಗೆಳೆತನ,ನಿವೇದನೆ,ಮಧುರತೆ ಹೀಗೆ ನಾನಾ ರೀತಿಯ ಭಾವನೆಗಳು ಅವರ ಪದಗಳಲ್ಲಿ ವ್ಯಕ್ತವಾಗಿವೆ.
ಪುರಂದರದಾಸರು ತಮ್ಮ ಸಕಲ ಪರಿವಾರದೊಂದಿಗೆ ಹರಿಭಕ್ತರಾಗಿ, ಹರಿದಾಸರಾಗಿ ಮೆರೆದವರಾಗಿದ್ದಾರೆ. ದಾಸಕೀರ್ತನೆಗಳಲ್ಲಿ. ಮುಖ್ಯವಾಗಿ ಕಂಡುಬರುವ ತತ್ವಗಳು ಈ ರೀತಿಯಾಗಿವೆ, ಪಂಚಭೇದಗಳು, ಶ್ರೀಹರಿಯ ದಾಸ್ಯಭಾವ, ಮುಕ್ತಿಯ ಮಾರ್ಗ,ಮುಕ್ತಿಗೆ ಭಕ್ತಿಯೇ ಸಾಧನವೆಂಬುದು ಶ್ರೀಹರಿಯ ಹಲವು ವಿಧಧ ಅವತಾರಗಳ ವರ್ಣನೆಯು, ಕೃಷ್ಣನ ಬಾಲ ಲೀಲೆಗಳು ರಾಕ್ಷಸರ ಸಂಹಾರ,ಶಿಷ್ಟರ ರಕ್ಷಣೆ,ಮಾನವ ಜೀವನದಲ್ಲಿ ಗುರುಗಳ ಮಹತ್ವ ಮುಂತಾದವುಗಳು ಪುರಂದರದಾಸರ ರಚನೆಗಳ ವಿಷೇಷತೆಗಳಗಿವೆ.
ಪುರಂದರದಾಸರ ಕೀರ್ತನೆಗಳಲ್ಲಿ ಅಂಕಿತ, ರಾಗ,ತಳ,ಲಯ ಹಾಗೂ ಭಾವಗಳ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ. ಅಂದು ಮಾಡಿದ ಸಂಗೀತ ಮತ್ತು ಸಾಹಿತ್ಯಗಳಲ್ಲಿಯ ಸಾಧನೆಯು ಇಂದಿಗೂ ಸಹ ಸಂಗೀತ ಸಾಹಿತ್ಯ ಪ್ರೀಯರಿಗೆ ಅಮೂಲ್ಯ ಕೃತಿಗಳಾಗಿವೆ.
ಹರಿಯವರ್ಣನೆಗಳನ್ನು ಸ್ವಲ್ಪದರಲ್ಲಿಯೇ ಬಹು ವಿಷಯಗಳನ್ನು ನೆನಪಿಸುವರು 'ನೀನ್ಯಾಕೋ ನಿನ್ನ ಹಂಗ್ಯಾಕೋ……' 'ಕೃಷ್ಣಾ ಎನಬಾರದೆ………' 'ಕಂಡೆ ನಾ ಕನಸಿನಲಿ….' 'ದೇವ ಬಂದಾ ನಮ್ಮ……' ಮುಂತಾದ ಪದಗಳಲ್ಲಿ ಭಗವಂತನ ರೂಪಗಳನ್ನು ವರ್ಣಿಸಿದ್ದಾರೆ. 'ಈಸಬೇಕು ಇದ್ದು ಜೈಸಬೇಕು…'ಮಾನವಜನ್ಮ ದೊಡ್ಡದು….' 'ಇದು ಭಾಗ್ಯವಿದು …' 'ನಗೆಯುಬರುತಿದೆ ಎನಗೆ ನಗೆಯು ಬರುತಿದೆ….' 'ಆಚಾರವಿಲ್ಲದ ನಾಲಿಗೆ ….'ಈ ರೀತಿಯ ಪದ್ಯಗಳಲ್ಲಿ ಲೋಕದ ಡೊಂಕುಗಳನ್ನು ಎತ್ತಿತೋರಿಸಿ ಸರಿದಾರಿಗೆ ಬರುವಂತೆ ಕೇಳಿಕೊಂಡಿದ್ದಾರೆ. ಭಾಗ್ಯದಾ ಲಕ್ಷ್ಮೀ ಬಾರಮ್ಮಾ……' ಹೂವು ತರುವವರ ಮನೆಗೆ ಹುಲ್ಲು ತರುವರೆ….' 'ಕಂಡು ಕಂಡು ನೀ ಎನ್ನ ಕೈ ಬಿಡುವರೆ…..' ನಾ ನಿನ್ನ ಧ್ಯಾನದೊಳಿರಲು ಸದಾ ….' ಉದರ ವೈರಾಗ್ಯವಿದು…. ' 'ಧರ್ಮವೇ ಜಯವೆಂಬ ದಿವ್ಯ ಮಂತ್ರ ….' ಹೀಗೇ ಸಾಗುತ್ತದೆ. ಪುರಂದರದಾಸರ ಕೀರ್ತನೆಗಳು ಭಾವದ ಮಧುರ್ಯ ಲಯದ ಸಂಗಮಗೀತೆಗಳಿವು. ಕೀರ್ತನೆಗಳಲ್ಲದೇ ಸುಳಾದಿಗಳನ್ನು ಉಗಾಭೋಗಗಳನ್ನು ಇವರು ರಚಿಸಿದ್ದಾರೆ.
"ಕರ್ನಾಟಕ ಸಂಗೀತದ ಪಿತಾಮಹ "ಎಂದು ಕರೆಯುವ ಪುರಂದರದಾಸರನ್ನು ಅಪಾರ ಭಕ್ತಿಗೀತೆಗಳನ್ನು ರಚಿಸಿ ತನ್ಮೂಲಕ ಕನ್ನಡ ಸಾಹಿತ್ಯ ಮತ್ತು ಜನಸಾಮಾನ್ಯ ರ ನಡುವೆ ಸಂವಹನದ ಹೊಸ ಅರ್ಥವನ್ನೇ ಸೃಷ್ಠಿಸಿದರೆಂದರೆ ಉತ್ಪ್ರೇಕ್ಷೆಯಾಗಲಾರದು. *****
ನೈಜವಾಗಿದೆ
ಚೆನ್ನಾಗಿದೆ..
ದಾಸವರೇಣ್ಯರು ಯಾವುದೇ ಫಲಾಪೇಕ್ಷೆಯಿಲ್ಲದೇ ತಮ್ಮ ಸಾಹಿತ್ಯದಿಂದ ದೇವರ ಸಾಕ್ಷಾತ್ಕಾರಕ್ಕಾಗಿ ಹಂಬಲಿಸಿದವರು. ಇವರು ಯಾವುದೇ ಪ್ರಶಸ್ತಿ ಪುರಸ್ಕಾರಕ್ಕಾಗಿ ತಮ್ಮ ಕೃತಿಗಳನ್ನು ರಚಿಸಿದವರಲ್ಲ. ಲಕ್ಷಕ್ಕೂ ಹೆಚ್ಚಿನ ತಮ್ಮ ರಚನೆಯಿಂದ ಭಗವಂತನನ್ನು ಆರಾಧಿಸಿದವರು. ಇವರ ಕೃತಿಗಳನ್ನು ಹಾಡುತ್ತ, ಲೇಖನಗಳಿಂದ ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕಾದುದು ಅತ್ಯವಶ್ಯ. ಇಂತಹ ದಾಸಸಾಹಿತ್ಯದ ಪಿತಾಮಹ ಪುರಂಧರ ದಾಸರನ್ನು ನೆನಪಿಸಿಕೊಂಡಿರುವ ರಶ್ಮಿ ಕುಲಕರ್ಣಿಯವರು ಅಭಿನಂದನಾರ್ಹರು. ಇವರಿಂದ ಇನ್ನಷ್ಟು ಒಳ್ಳೊಳ್ಳೆ ಲೇಖನಗಳು ಬರಲೆಂದು ಆಶಿಸುತ್ತೇನೆ.
ಗುಂಡೇನಟ್ಟಿ ಮಧುಕರ, ಬೆಳಗಾವಿ.
ಮೊ: 9448093589
Good. Its really informative about Purandara Das.
Arun Karjol
09986698987
ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು
ಪುರಂದರ ದಾಸರ ಬಗೆಗಿನ ಲೇಖನ ಚೆನ್ನಾಗಿದೆ. ಅವರ ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು…
ಭೀಮಶೇನರಾವ್ ಕುಲಕರ್ಣಿ
ಪುರಂದರ ದಾಸರ ಬಗೆಗಿನ ಲೇಖನ ಚೆನ್ನಾಗಿದೆ. ಇನ್ನೂ ಇಂಥ ಮಹತ್ವ್ ಪೂರ್ಣ್ ಲೇಖನ ಬರಲಿ ಅವರ ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು…
Magana kalikege upayogakke banthu…thanx..
-Kousthubha
ಲೇಖನ ಮಾಹಿತಿಪೂರ್ಣವಾಗಿದೆ.ಆದರೆ ಪುರಂಧರ ದಾಸರ ಜನನ ವರ್ಷ ಬಹುಶಃ ಮುದ್ರಣ ದೋಷ ಾಗಿರಬೇಕು 1484 ಆಗಬೇಕು
Baraha Chennagide
Congrats
Prasann