ಗೆಳೆಯ..ಗೆಳೆಯ.. ಏ.. ಮರಿ .. ಮರಿ ನಂಗೆ ತುಂಬ ಖುಷಿ ಆಗ್ತಾ ಇದೆ. ನಂಗೆ ನಂಬೋಕೆ ಆಗ್ತಾ ಇಲ್ಲ. ನಂಗೆ ನಗು ಬರ್ತಾ ಇದೆ. ಮತ್ತದೇ ನಾಚಿಕೆ ನನ್ನಲ್ಲಿ ಮೂಡುತ್ತಿದೆ. ಯಾಕೆ ಗೊತ್ತಾ ನಮ್ಮ ಪ್ರೇಮಕ್ಕೆ 10 ವರ್ಷವಂv!!!É. ನಿಮಗೆ ನಂಬೋಕೆ ಆಗ್ತಾ ಇದ್ಯಾ. ನೀವ್ ಬಿಡಿ ನನಗಿಂತ ತುಂಬಾ ಹುಷಾರು . ಎಲ್ಲವನ್ನು ನೆನೆಪಿಡುವ ಮಹಾ ರಸಿಕ. ನೋಡಿ ಒಮ್ಮೆ ಹಿಂದೆ ಹೋಗಿ ಬರ್ಲಾ. ನಮ್ಮ ಪ್ರೇಮಕ್ಕೆ 10ವರ್ಷದ ಹೊಸ್ತಿಲು. ನೆನೆದಷ್ಟು ಮೊಗೆದಷ್ಟು, ಬೆರೆತಷ್ಟು, ಕಲೆತಷ್ಟು ಅದೇ ಹಿತಮಿತವಾದ ಪ್ರೀತಿ – ಪ್ರೇಮ, ಪ್ರಣಯ – ರಾಗ ಲಾಲಿತ್ಯ!!!
ಅಂದ್ರೆ ನಾವಿಬ್ಬರೂ ಮನಸಿನ ಭಾವನೆ ಹೇಳಿಕೊಂಡಿದ್ದು ಮೌನದಲ್ಲಿ. ನಿಮ್ಮ ಗಂಭೀರ(ಈಗಲೂ ಅದೇ ಗಂಭೀರತೆ) ಮುಖ!!!. ಅಬ್ಬ್ಬಾ!!! ಎಲ್ಲರೂ ನೋಡಿ ಹೆದರುತ್ತಿದ್ದರು. .ಇದ್ಯಾವ ದೂರ್ವಾಸಮುನಿ ಇವಳಿಗೆ ಗಂಟು ಬಿದ್ದ ಅಂತ. ಆದರೆ ನನಗೆ ಮಾತ್ರ ಗೊತ್ತು ನೀವೇನು ಅಂತ ಅಲ್ವಾ!!!!!!! ಮರಿ.. ನಂಗೆ ಯಾಕೋ ನಿಮ್ಮ ನೆನೆಪು ತುಂಬಾ ಕಾಡುತ್ತಿದೆ. ನಿತ್ಯವೂ ಕನಿಷ್ಠ ಮೂರು ಬಾರಿಯಾದರೂ ನಾ ನಿಮಗೆ ಕಾಲ್ ಮಾಡ್ತೇನೆ. ಫೋನ್ ಕಾಲ್ ಮಾಡಿ ಇಬ್ಬರೂ ಮಾತಾಡ್ತೇವೆ. ಆದರೂ ಮಾತುಗಳ ಮಂಟಪಕ್ಕೆ ಮಿತಿಯೇ ಇಲ್ಲ. ಅದೇ ನಮ್ಮ ಮಗಳು ಸುಮ್ಮನೇ ತಮಾಷೆ ಮಾಡ್ತಾಳೆ. ಅಮ್ಮಾ ಏನದು ನಿನ್ನ ಮತ್ತು ಪಪ್ಪನ ಮಾತುಗಳು ಎನ್ನುತ್ತಾ ತನ್ನ ಮುದ್ದು ಮಾತಿನಲ್ಲಿ. ಅವಳು ನಮ್ಮ ಪ್ರೇಮದ ಕುರುಹು. ತುಂಬಾ ಪ್ರೀತಿಯ ಖುಷಿ ಅವಳು. ಅವಳ ಕಾಳಜಿಯೂ ನಮ್ಮ ಪ್ರೀತಿ ಜೊತೆ ಸೇರಿಕೊಂಡಿದೆ. ಎನ್ ಗೊತ್ತಾ ಅವಳ ಎದುರಿಗೆ ನಾನು ನೀವು ಜಗಳ ಆಡಿದ್ರೆ ಅಷ್ಟೇ. ನಮ್ಮಿಬ್ಬರ ನಡುವಿನ ಪ್ರೇಮ ಸೇತು ಅವಳು ಅಂತ್ಲೆ ಹೇಳಬಹುದು. ಇನ್ನೊಂದು ಬರುವ ತವಕದಲ್ಲಿದೆಯಷ್ಟೇ. ಅದೇ ಮಧು ಮಧುರ ಭಾವನೆಗಳನ್ನು ಹೊತ್ತುಕೊಳ್ಳುತ್ತಿದೆ. ಮರಿ ಯಾಕೋ ನೀವು ಇವತ್ತು ತುಂಬಾ ನೆನೆಪಾಗಿ ಕಾಡುತ್ತಿದ್ದೀರಿ. ಯಾಕೆ ಅಂತ ಗೊತ್ತಿಲ್ಲ. ಇರಲಿ ನಮ್ಮ ಭಾವನೆಗಳನ್ನು ತೋರಿಸುವ ನಮ್ಮ ಪ್ರೇಮ ಪತ್ರಗಳಿಗೇನು ಬರವಿಲ್ಲ. ಇದೆಲ್ಲಾ ನೋಡಿಯೇ ನಂಗೆ ನಿಮ್ಮ ನೆನೆಪು ತುಂಬಾ ಕಾಡೋಕೆ ಶುರುವಾಗಿದೆ. ಈಗ ಬೇರೆ ಇನ್ನೊಂದು ಪಾಪು ಬರುವುದರಲ್ಲಿದೆ. ಅದಕ್ಕಾಗಿಯೂ ಇರಬಹುದು. ಆದರೂ ಹಳೆಯ ನೆನೆಪುಗಳ ಮೆಲುಕುವಿಕೆಯಷ್ಟೇ.
ನಮ್ಮ ಪ್ರೇಮ ಸಲ್ಲಾಪ ನೆನೆಪಿಸಿದಷ್ಟು ತುಂಬಾ ಖುಷಿ ಆಗ್ತಾ ಇದೆ. ಎಲ್ಲರೂ ದೊಡ್ಡ ದೊಡ್ಡ ಸಂತೋಷವನ್ನು ಅರಸಿಕೊಂಡು ಹೊರಟರೆ ನಾವು ಚಿಕ್ಕಪುಟ್ಟ ಸಮತೊಷದೊಮದಲೇ ಅನುಭವಿಸಿದ ಮಧುರತೆ ಅಷ್ಟಷ್ಟಲ್ಲ. ಹುಣ್ಣಮೆ ಚಂದಿರನ ಬೆಳಕಿನಲ್ಲಿ ನಾವಿಬ್ಬರೂ ಕಾಲೇಜಿನ ಕಟ್ಟೆಯ ಮೇಲೆ ಈಗಲೂ ಕುಳಿತ ಕಳೆದ ಕ್ಷಣಗಳು ಹಾಗೆ ಹಸಿಹಸಿಯಾಗಿದೆ. . ಅರೆ ನಮ್ಮ ಪ್ರೇಮಕ್ಕೆ 10 ವರ್ಷಗಳ ಹೊಸ್ತಿಲು. ನಮ್ಮ ನನಗೊ ನಿಮಗೋ ಅಪರಿಮಿತ ಸಂತೋಷ. ನಾನು ಪತ್ರಗಳನ್ನು ಇಟ್ಟಿಲ್ಲ. ಆದರೆ ನೀವು ಎಲ್ಲವನ್ನು ಹಾಗೆ ಬೆಚ್ಚಗೆ ಇಟ್ಟಿದ್ದೀರಾ. ಪ್ರೇಮವೂ ಸಹ ಬೆಚ್ಚಗೆ ಚುಮು ಚುಮು ಚಳಿಯಲ್ಲಿ ಅವಿತು ಕುಳಿತು ನಮ್ಮನ್ನು ಸುಮ್ಮನೇ ಮುದ್ದು ಮುದ್ದಾದ ಮಕ್ಕಳ ಹೆಸರಲ್ಲಿ ಕೆಣಕುತ್ತಿದೆ.
ವಿಚಿತ್ರ ಅಂದ್ರೆ ನನ್ನ ನಿಮ್ಮ ವೃತ್ತಿಯೇ ಬೇರೆ. ನಾವಿಬ್ಬರೂ ಅಪರಿಚಿತರು. ಎಲ್ಲೋ ಆಕಸ್ಮಿಕವಾದ ಭೇಟಿ ಪರಿಚಯವಾಗಿ ಹೆಮ್ಮರವಾಗಿ ಬೆಳೆದು ದಾಂಪತ್ಯಕ್ಕೆ ಬೆಸುಗೆಯಾಗಿದೆ. ಕಳೆದ ನೆನೆಪುಗಳು ಈಗ ನಡೆದಂತಿದೆ. ಪ್ರಸ್ತುತವು ನಡೆಯುತ್ತಿದೆ ಎನ್ನುವುದು ಅಪರಿಮಿತ ಆನಂದವನ್ನು ಕೊಡುವಂತದ್ದು.
ನೀವು ದೂರದ ನಮ್ಮದೇ ಊರಿನಲ್ಲಿ ಇರೋದು. ನಾನು ಪರ ಊರಿನಲ್ಲಿ ಇರೋದು. ಒಲ್ಲದ ಮನಸಿನಿಂದ ದೂರ ಇರಬೇಕಾದ ಅನಿವಾರ್ಯತೆ ನಮ್ಮನ್ನು ಕಾಡ್ತಾ ಇದೆ. ನೀವು ನಿಮ್ಮ ಕೆಲಸದಲ್ಲಿ ತುಂಬಾ ಬಿಸಿ. ಯಾಕಂದ್ರೆ ನಿಮಗೆ ನಿಮ್ಮ ಕೆಲಸವೇ ದೇವರು. ನನಗೆ ಅದಕ್ಕೆ ಖುಷಿಯಾಗೋದು. ನಾವಿಬ್ಬರೂ ಹೊಂದಿಕೊಂಡಿದ್ದೇವೆ. ಮರಿ ನಮ್ಮ ಪ್ರೇಮಕ್ಕೆ ಈಗಾಗಲೇ 10 ವರ್ಷಗಳ ಹೊಸ್ತಿಲು. ಈವರೆಗೆ ನಮ್ಮ ಎಷ್ಟೋ ಪತ್ರಗಳು ಅಂಚೆ ಕಚೇರಿಯಿಂದ ನಮಗೆ ತಲುಪಿರಬಹುದು.
ಯಾಕೊ ನಾವಿಬ್ಬರೂ ಈ ಮೊದಲು ಭೇಟಿಯಾಗಿದ್ದು ಕಡಿಮೆ. ದಾಂಪತ್ಯಕ್ಕೆ ಬಂದ ಮೇಲು ಹನಿಮೂನು ತಿರುಗಾಟ ಅಂತ ಓಡಾಡಿದ್ದು ಕಡಿಮೆ. ನಂಗೆ ನವಿರಾದ ನಾಚಿಕೆ ಉಂಟಾಗಿದೆ. ಆಗತಾನೆ ಎಲೆಯ ಮೇಲೆ ಬಿದ್ದ ಮುಂಜಾವಿನ ಹಿಮದ ಬಿಂದುವಿನಂತೆ ನಿಷ್ಕಲ್ಮಶವಾದ ಆಕಾಶದಂತೆ ಸ್ವಚ್ಛಂದವಾದ ಹಕ್ಕಿಯಂತೆ ಪ್ರೀತಿ – ಪ್ರೇಮ ಹೊಚ್ಚ ಹೊಸದಾಗಿ ದಿನದಿಂದ ದಿನಕ್ಕೆ ಅರಳುತ್ತಿದೆ.
ಎಲ್ರೂ ಅವರವರ ಪ್ರೇಮಿಗೆ ರಿ ರಿ ರಿ ಅಂತ ಕರಿತಾರೆ. ನಂಗ್ಯಾಕೋ ಅದು ಕಿರಿ ಕಿರಿ ಅನಿಸುತ್ತೆ. ಆದರೆ ನಾ ನಿಮಗೆ ಮರಿ ಅಂತ ನೀವ್ ನನಗೆ ಮರಿ ಅಂತ. ಯಾರೋ ಒಬ್ಬಳು ಹುಡುಗಿ ಹಿಂದೆ ಒಮ್ಮೆ ನಿಮ್ಮನ್ನು ‘ರಿ’ ಅಂತ ಕರೆದಿದ್ದಕ್ಕೆ ನಾನೆಷ್ಟು ಕೋಪ ಮಾಡಿಕೊಂಡು.. .. ನೀವ್ ಸಮಾಧಾನ ಮಾಡಿದ್ದು ಆಯಿತು.
ಮರಿ.. ಪ್ರೇಮಕ್ಕೆ ಭಾಷ್ಯ ಬರೆದವರು ಯಾರೋ ಗೊತ್ತಿಲ್ಲ. ಆದರೆ ನಾನು ಮತ್ತು ನೀವು ಹೊಂದಿಣಿಕೆ, ಅರ್ಥೈಸುವಿಕೆಯೇ ನಿಜವಾದ ಪ್ರೀತಿ ಅಂತ ನಂಬಿರೋರು. ದಿನದಿಂದ ದಿನಕ್ಕೆ ನನ್ನ ನಿಮ್ಮ ಪ್ರೀತಿ ಪ್ರೇಮ ಮಾಗಿದರೂ ಏನೋ ಒಂದು ರೀತಿಯ ಹೊಸತನ ಮನೆಮಾಡುತ್ತಿದೆ ಎಂದು ನನಗನಿಸುತ್ತಿದೆ. ಇನ್ನು ಪ್ರೀತಿ ಪಕ್ವವಾಗಿದೆ. ಮತ್ತೆ ಮತ್ತೆ ಬೇಕು ಬೇಕು ಅನಿಸುವಷ್ಟು ಇನ್ನೇನೋ ಮಾತಾಡುವುದು ಹಂಚಿಕೊಳ್ಳುವುದು ಇದೆ ಎನ್ನುವಷ್ಟು ತೀವ್ರವಾಗಿದೆ. ಮಾಗಿದ ಅನುಭವಗಳು ಎಷ್ಟು ಗಟ್ಟಿಯೋ ಅಷ್ಟೇ ನಮ್ಮ ಪ್ರೇಮ ಗಟ್ಟಿಯಾಗಿರಲಿ. ನಾವಿಬ್ಬರೂ ನೋಡುವವರ ಕಣ್ಣಿಗೆ ಸೀರಿಯಸ್ ಗೊಂಬೆಗಳು ಇವರೇನು ಸಂಗಾತಿಗಳೆ ಇಲ್ಲವೇ ಕೋಪ ಮಾಡಿಕೊಂಡಿದ್ದಾರೆಯೇ ಅಂತ ಜನ ಎಲ್ಲಾ ಮಾತಾಡಿಕೊಳ್ಳುತ್ತಾರಂತೆ ಯಾಕಂದ್ರೆ ನೀವ್ ಸ್ವಲ್ಪ ಹಾಗೆ. ನೀವು ಸ್ವಲ್ಪ ಸ್ವಾಭಿಮಾನದ ವ್ಯಕ್ತಿತ್ವ. ಚೆಲ್ಲುಚೆಲ್ಲುಗಿ ವರ್ತಿಸೋದು ನಿಮಗೆ ಆಗಿ ಬರುವುದಿಲ್ಲ. ಅದಕ್ಕೆ ನನಗೆ ನೀವಿಷ್ಟ.
ನಮ್ಮ 10 ವರ್ಷದ ಪ್ರೇಮದಲ್ಲಿ ಸಿಟ್ಟು, ಹುಸಿಮುನಿಸು, ಖುಷಿ ಅನುರಾಗ ಎಲ್ಲವೂ ಬಂದಿವೆ. ಜೀವನದ ಒಳ್ಳೆಯದರ ಪಾಠ ಕಲಿಸಿದೆ. ನಮ್ಮ ನಡುವೆ ಒಲವು ಇನ್ನೂ ಹೆಚ್ಚಾಗಲೂ ಕಾರಣವಾಗಿದೆ. ನನ್ನನ್ನು ಮಾನಸಿಕವಾಗಿ ತುಂಬಾ ಗಟ್ಟಿ ಮಾಡಿದ ಪ್ರೇಮಿ ನೀವು ಎಂದು ಹೇಳಿಕೊಳ್ಳಲು ನನಗೆ ತುಂಬಾ ಸಂತೋಷವೆನಿಸುತ್ತದೆ. ಜೀವನದ ಎಲ್ಲಾ ನೋವು ನಿರಾಸೆಗಳನ್ನು ಒಟ್ಟಾಗಿ ಸ್ವೀಕರಿಸಿದ್ದೇವೆ. ಮುಂದೆಯೂ ಯಾರ ದೃಷ್ಟಿಯೂ ನಮ್ಮ ಮೇಲೆ ಬೀಳದಿರಲಿ ಎಂದು ಎಷ್ಟೋ ಸಂದರ್ಭಗಳಲ್ಲಿ ನಾವಿಬ್ಬರೂ ಬಯಸಿದ್ದಿದೆ. ದೇವರಲ್ಲಿ ಕಷ್ಟದಲ್ಲಿರುವವರಿಗೆ ನಮ್ಮ ಕೈಲಾದ ಸಹಾಯ ಮಾಡುವಷ್ಟು ಶಕ್ತಿ ಕೊಡು ಸಮ್ಮಸ್ತರನ್ನು ಚೆನ್ನಾಗಿರಿಸು ಜೊತೆಗೆ ನಮ್ಮ ಪ್ರೀತಿಯನ್ನು ಖುಷಿಯಾಗಿರಿಸು ಎಂದು ಹೇಳಿಕೊಳ್ಳುವ ನಮ್ಮ ಪ್ರಾರ್ಥನೆ ಖಂಡಿತ ದೇವರಿಗೆ ತಲುಪಲಿ.
ಹಾಗೆ ಮರಿ.. .. ನಾ ನಿಮಗೆ ಎನ್ ಗಿಪ್ಟ್ ಕೊಡಲಿ. ಅಂತ ಯೋಚಿಸುತ್ತಿದ್ದೇನೆ. ಏನಾದರೂ ಅದು ನಿಮಗೆ ನನಗೆ ನವಿರಾದ ಖುಷಿಯನ್ನು ತಂದುಕೊಡಲಿ. ಪ್ರೇಮಿಗಳ ದಿನದ ಶುಭಾಶಯದೊಂದಿಗೆ ನಮ್ಮ ಪ್ರೇಮ ಚಿರನೂತನವಾಗಿರಲಿ .