ಚುಟುಕ

ತೊಟ್ಟಿಕ್ಕೋ ಕಾವ್ಯದ ಹನಿಗಳು!: ಸಂತೆಬೆನ್ನೂರು ಫೈಜ್ನಟ್ರಾಜ್

1.ವೈಶಾಲ್ಯ

ಮನೆ ಸುತ್ತಾ ಕಾಂಪೌಂಡ್

ಹಾಕಿಕೊಳ್ಳುವ ನಾವು ಮನದ ಅದಮ್ಯ

ಬಯಕೆಗಳಿಗೆ ಯಾವ ಬೇಲಿಯೂ

ಹಾಕದ ವಿಶಾಲಿಗಳು !

 

2.ಸಡಗರ

ಬೀಳೋ ಮಳೆಗೆ

ಭೂಮಿ ಸೇರೋ

ತವಕ

ಭೂಮಿಗೋ ಒಡಲ

ತುಂಬಿಕೊಳ್ವ

ತವಕ !

 

3.ಒಲವೇ

ನಿನ್ನೊಲವೇ ನನ್ನ ಕಾಯುವುದು

ಕಣ್ಮುಚ್ಚಿ ತೆರೆದರೆ

ಬರಿ ನಿನ್ನ ನೆನಪೇ

ಕಾಡುವುದು !

 

4.ವಿಪರ್ಯಾಸ

ಕತ್ತಲ ವಾಸಕ್ಕಂಜಿ

ಬೆಳಕ ಹಂಚುತ್ತಾ ಹೊರಟ

ಹಣತೆ

ಕೊನೆಗೆ ಅದೇ ಕತ್ತಲಲ್ಲಿ ಕಣ್ಮುಚ್ಚಿತು!

 

5.ಹೂ-ಚುಕ್ಕಿ

ನಕ್ಕ ಹೂ ನೋಡಿ ಅತ್ಯಾವು ಚುಕ್ಕಿ

ಮುಡಿಗೇರ್ವ ಭಾಗ್ಯ

ತಮಗಿಲ್ಲವೆಂದು !

 

6.ಪ್ರೀತಿ

ಸಿಹಿ ನದಿ ಕೂಡಾ

ಉಪ್

ಸಮುದ್ರ ಸೆರೋಕೆ ಓಡೊದು

ಕೇವಲ ಪ್ರೀತಿಗೆ !

 

7.ಬದಲಾವಣೆ

ಕವನವಾಗೋ ಹುಡುಗಿ

ಮದುವೆಯಾಗಿ

ಕಥೆಯಾದಳು !

 

8.ಕವಿತೆ

ನೂರಾರು ಕತೆಗಳ ನಡುವೆ

ಕಳೆದು ಹೋದ ಕವಿತೆ

ಮೌನವಾಗಿ ಎಲ್ಲೋ

ಬಿಕ್ಕಳಿಸುತಿದೆ !

 

9.ಭರವಸೆ

ಎಲೆ ಮೇಲೆ ಮಲಗಿದ ಮಂಜಿನ

ಹನಿಗೆ ಎಲೆ ಕೇಳಿತು;ಎಷ್ಟೊತ್ತು ಹೀಗೇ

ಇರ್ತಿಯಾ?

ಸಾಯೋವರೆಗೂ ಅಂತು ಹನಿ

ಇದನ್ನ ನಾನು ನಂಬಲಾ-ಎಂಬ ಎಲೆ

ಮಾತಿಗೆ-ರವಿಕಿರಣ ಬರೋತನಕ

ಕಾದು ನೋಡೆಂದ ಹನಿ ಮಾತಿಗೆ

ಎಲೆ ಮೂಕಾಯಿತು !

 

10.ಅಚ್ಚರಿ

ಬಣ್ಣದ ಪ್ರಪಂಚದಲ್ಲಿ

ಕಪ್ಪು-ಬಿಳುಪು ಕೂಡಾ ಒಚಿದು

ಬಣ್ಣ ಅಲ್ಲದಿರುವುದು !

 

11.ಸಾವು

ಸತ್ತಂತಿದ್ದು

ಬದುಕಿನ ಪ್ರಶ್ನೆಗೆ

ಉತ್ತರವಾಗೋ ಕ್ಷಣ !

 

12.ಅಲ್ವಾ ?

ಎಡವಿದ ಹೆಜ್ಜೆ

ಸರಿ ಹೊದೀತು

ಎಡವಿದ ಮನಕ್ಕೆಲ್ಲಿದೆ ದಾರಿ ?

 

13.ಕನಸು

ನಡೆದಷ್ಟೆ ಪಯಣ

ಇದೆಯಂದಾದ ಮೇಲೆ

ನಿಂತೇ ಕನಸು ಕಾಣು ಬಿಡಿ!

 

14.ಒಂದು ಒಂದಕೆ

ಕತ್ತಲ ಲೋಕದಿ

ಬೆಳಕಿನ ಬೇಟೆ

ನಡೆಯುವ ಹಾದಿಗೆ

ಪಯಣದ ಗುರಿ

ಹಾರೋ ಹಕ್ಕಿಗೆ ಬಾನ

ಸೀಮೆಯ ತಾಣ

ಒಂದೊಂದಕೆ ಒಂದೊಂದು ಉಚಿಟು

ಅರಸೋ ಪ್ರೀತಿಗೆ

ಮನಸ ಜೋಕಾಲಿ ಜೀಕುತಿದೆ!

 

15.ಕಾವುದು

ನೂರು ಕವಿತೆ ಹುಟ್ಟುವ

ಆ ಕಣ್ಣ ಬೆಳಕಲ್ಲಿ

ನನ್ನ ಪ್ರೀತಿ ಹಣತೆ ಹಚ್ಚಿ

ಗಾಳಿ ಬಾರದಂತೆ ಕಾಯುವೆ!

 

16.ಕಣ್ಣಾ ಮುಚ್ಚೆ……

ಬೀಳೋ ಮಳೆಗೆ ತಾಳೋ ಕೊಡೆ ಹಾಗೆ

ಆಗೋ ಚಳಿಗೆ ಬೇಕಾಗೋ

ಕಾಫಿ ಹಾಗೆ ಕಾಡೋ

ಮನಕ್ಕೆ

ಬೇಡೋ ನೆನಪಿನ ಹಾಗೆ

ವಿನಾ ಕಾರಣ ಪದೇ ಪದೇ

ನೀನು ಉಸಿರಂತೆ ಎದುರಾಗಿ ಕಣ್ಮರೆ

ಆಗೋದ್ಯಾಕೆ;

ಎಲ್ಲಾ ಇದ್ದೂ ಏನೂ ಇಲ್ಲದ

ಈ ಬಾಳಿನಂತೆ !

 

17.ನನ್ನಮ್ಮ -1

ಕಡಲ ಮನದ ಬಾನ ಭಾವದ

ನೆಲದ ಕರುಣೆಯ ಗಾಳಿ ತಂಪಿನ

ಪ್ರತಿ ಮನೆಯ ಆರದ,ಆರಬಾರದ

ಹಣತೆ-ನನ್ನಮ್ಮ!

 

ನನ್ನಮ್ಮ -2

ನೆತ್ತಿ ಮೇಲಿನ ತುತ್ತತುದಿಯ

ಲ್ಲಿನ ರೆಂಬೆಗೂ ನೀರುಣಿಸೋ

ನೆಲದಾಳದ ಬೇರೆಂಬ

ಜೀವವೇ ಅಮ್ಮ !

 

ನನ್ನಮ್ಮ-3

ಬೀಳೋ ಮಳೇಲಿ

ನೆಂದ ಮಗುನ ಬೈಯೋರೆ ಎಲ್ಲಾರು

ಆದರೆ ಮಳೇನ ಬೈದು ಲಟಕಿ

ಮುರಿಯೋಳೇ ಅಮ್ಮ !

 

18.ಪಯಣ

ಬಸ್ಸಿನ ತುಂಬಾ ಜನ

ಯಾರ್ಯಾರ ಪಯಣ ಎಲ್ಲೆಲ್ಲಿಗೋ

ಕೂತಿದ್ದಾರೆ

ಆಜೂ-ಬಾಜು ಸುಮ್ಮನೆ

ಬರುವ ನಿಲ್ದಾಣ ಕಾದು

ಜೀವನವೇ ಹೀಗೆ ಕಾಯುತ್ತಾ

ಕಾಯುತ್ತಾ ಸಾಗುವುದು !

 

19.ಜಲ್ದಿ

ನಾಕು ಒಳ್ಳೆ ಮಾತಾಡು

ಸಮಯ ಜಾರೀತು

ಒಂದಿಷ್ಟು ನಗು ಕಲಿ

ಬಾಳು ಬೇಸರಾದೀತು

ಪ್ರೀತಿ ಇಚಿದೇ ಹೇಳ್ಕ

ನಾಲೆ ಬಾರದೇ ಇದ್ದೀತು !

 

20.ಎಲ್ಲಾ ಇಲ್ಲೆ

ಬಿತ್ತಿರಿ ಬೆಳೆಯಿರಿ

ಇಲ್ಲೆ ನೆಲದಲಿ

ಸ್ವರ್ಗದೊಳೇನೂ ಇಲ್ಲ

ಕಾಣಿರಿ ಪ್ರೀತಿ-ಪ್ರೇಮ

ನಮ್ಮೀ ನಾಡಲಿ

ಬೇರೆಡೆ ಏನೂ ಇಲ್ಲ!

 

21.ಗಾಂಧಿವಾದಿ

ನಾನೂ ಅಪ್ಪಟ ಗಾಂಧಿವಾದಿ

ನನ್ನವಳು ಒಂದು ಕೆನ್ನಗೆ ಕೊಟ್ಟರೆ

ಮತ್ತೊಂದನ್ನು ತೋರಿಸುತ್ತೇನೆ!

 

22.ಪ್ಲೀಸ್..

ನಿನ್ನ ಕಣ್ಣ ಬೆಳಕಲಿ ನೂರು

ನೂರು ದಾರಿ ಕಂಡು ನಡೆವೆನು

ದಯಮಾಡಿ ಕಣ್

ಮುಚ್ಚಬೇಡ ಎಡವಿ ಬಿದ್ದೇನು !

 

23.ನಡೆ

ನಮ್ದಾಗಲೀ, ನಿಮ್ದಾಗಲೀ

ನಡೆಯೋತನಕ ನಾಣ್ಯ

ಆಮೇಲೆ ಇನ್ನೇನಿದೆ

ಬರಿದೆ ಬರಿದು ನಗಣ್ಯ!

 

24.ಹಸಿವು

ನಿಮ್ಮ ಕವಿತೆ,ಕತೆ

ಇಟ್ಟುಕೊಳ್ಳಿನೀವೇ ನಮಗೆ ಬೇಡಿ

ನಮಗೆ ಚೂರು ರೊಟ್ಟಿ

ಇಷ್ಟು ಹಿಟ್ಟು ಕೊಟ್ಟು ಬಿಡಿ

 

25.ದೃಷ್ಟಿ

ಏನೆಲ್ಲಾ ಕಾಣುತ್ತೆ

ಕಾಣುತ್ತೆ ಇದ್ರೆ ಕಣ್ಣು

ಏನಿದ್ರೂ ಕಾಣೋಲ್ಲ

ಮುಂದಿದ್ರೆ ಹೆಣ್ಣು!

 

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ತೊಟ್ಟಿಕ್ಕೋ ಕಾವ್ಯದ ಹನಿಗಳು!: ಸಂತೆಬೆನ್ನೂರು ಫೈಜ್ನಟ್ರಾಜ್

  1. ಹಾಯ್ ಬೆಂಗಳೂರು ಮತ್ತು ಇನ್ನೂ ಕೆಲ  ಪತ್ರಿಕೆಗಳಲ್ಲಿ
    ಫೈಜ್ ನಟರಾಜರನ್ನ ಓದಿದ ನೆನಪು, ಪಂಜುವಿನಲ್ಲಿ ನೋಡಿ ಖುಷಿಯಾಯಿತು.
    ನನ್ನಮ್ಮ, ಹೂಚುಕ್ಕಿ , ಪ್ರೀತಿ ತುಂಬಾ ಇಷ್ಟ ಆಯ್ತು
    ಬರೆಯುತ್ತೀರಿ

Leave a Reply

Your email address will not be published.