ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದ್ದರೆನ್ನಲಾದ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಒಂದು ಘಟನೆ. ದಲಿತ ಸಮುದಾಯದವರು ಸಾಮೂಹಿಕ ಭೋಜನದಲ್ಲಿ ತುಪ್ಪವನ್ನು ಬಡಿಸಿ, ಊಟ ಮಾಡುವ ವೇಳೆ ಮೇಲ್ವರ್ಗದ ಜನರು ಅಡುಗೆ ಪಾದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡಿ ಊಟ ಮಾಡುತ್ತಾ ಕುಳಿತ ಜನರನ್ನು ಹಿಗ್ಗಾಮುಗ್ಗಾ ಥಳಿಸಿದ್ದರಂತೆ. ಕಾರಣ, ಆ ವರ್ಗದ ಜನರು ತುಪ್ಪ ತಿನ್ನಬಾರದು. ತಿಂದದ್ದು ಮೇಲ್ವರ್ಗದ ಜನಗಳಿಗೆ ಮಾಡಿದ ಅಪಮಾನವಂತೆ. ಇಂಥ ಪಿಡುಗುಗಳನ್ನು ಸಾಕ್ಷರತೆ ಸಾರುವ ಮೂಲಕ ಮಾತ್ರ ತೊಡಗಿಸಲು ಸಾಧ್ಯವೆಂದರಿತು ಡಾ. ಬಿ. ಆರ್. ಅಂಬೇಡ್ಕರ್ ಅವರು ಅಂದೇ ಪಣ ತೊಟ್ಟವರಂತೆ ಕಾರ್ಯೊನ್ಮುಖರಾಗಿದ್ದರೆನ್ನುವುದು ಆ ಒಟ್ಟಾರೆ ಸನ್ನಿವೇಶದ, ಬರಹದ ಸಾರಾಂಶ. . ಯಾರೋ ಸ್ನೇಹಿತ ರೊಬ್ಬರು ಈ ಪ್ರಸಂಗವೊಂದನ್ನು ಮೊನ್ನೆ ಹಂಚಿಕೊಂಡಿದ್ದರು. ಆಗಿನ ತುಪ್ಪ ತಿನ್ನುವುದನ್ನು ಆಕ್ಷೇಪಿಸುವಂಥ ಪರಿಸ್ಥಿತಿಯನ್ನು ಪ್ರತಿಭಟಿಸುವ, ಸಮಾನತೆಗೆ ಹೋರಾಡಿದ ಪ್ರಸಂಗವದು. ಅದೂ ನಿಜ ಮತ್ತು ಸಹಜ. ಅದನ್ನು ಓದುತ್ತಿದ್ದಾಗಲೇ ಆಗಾಗ ಕೆಲವರು ಹೇಳಿದ್ದ, ಈಗಲೂ "ಸಾಲ ಮಾಡಿಯಾದರೂ ತುಪ್ಪ ತಿನ್ನು" ಅನ್ನುವ ಮಾತು ನೆನಪಾಯಿತು.
"ಸಾಲ ಮಾಡಿಯಾದ್ರೂ ತುಪ್ಪ ತಿನ್ನು" ಅಂದು ಸಾಲಕ್ಕೆ ಸ್ವಪ್ರೇರಣೆಯಾಗುವ, ಪ್ರೇರೇಪಿಸುವ ಸಾಲಿಗೂ ಮೇಲಿನ ಪ್ರಸಂಗ ಪ್ರಸ್ತಾಪಿಸಿದ್ದಕ್ಕೂ ವೃಥಾ ಸಂಭಂಧವಿಲ್ಲ. ಆ ಘಟನೆ ವಿವರ ಓದುತ್ತಿದ್ದಾಗ ಇದು ನೆನೆಪಾಯಿತು ಅಷ್ಟೇ. ಆದರೆ, ತುಪ್ಪ ತಿನ್ನಲಿಕ್ಕೋಸ್ಕರವೇ ಮಾಡಿದ "ಸಾಲ"ದಂತೆ ಎಲ್ಲದಕ್ಕೂ ಮಾರುದ್ದ ಕೈ ಚಾಚಿದರೆ ಹೇಗೆ? ಅನ್ನುವುದಷ್ಟೇ ನನ್ನ ಪ್ರಶ್ನೆ. ಈ "ಸಾಲ ಮಾಡಿಯಾದ್ರೂ …… …. " ಅನ್ನುವುದನ್ನು ತುಸು ಹೆಚ್ಚೇ ರೂಢಿಸಿಕೊಂಡರೆ ಮಾತ್ರ ಒಳ್ಳೆಯದಲ್ಲ. ಹಾಗೇನೆ "ಸಾಲ"ಕ್ಕೆ ಪ್ರೋತ್ಸಾಹಿಸುವಂಥದ್ದಾಗಲೀ ಸಾಲಕ್ಕೆ ಜಾಮೀ ನಾಗಿ ನಿಲ್ಲುವ, "ನಾನೇ ನಿಂತ್ ಕಾಲಲ್ಲಿ ಸಾಲ ಕೊಡಿಸಿದೆ" ಅನ್ನುವ ಅರ್ಥದಲ್ಲಿ ನಡೆದುಕೊಂಡರೆ ಆಗುವ ಪರಿಣಾಮಗಳ ಬಗ್ಗೆ ಅನುಭವವಿದ್ದವರು ತುಸು ಸಂಕಟಪಟ್ಟೇ ಹೇಳಬಹುದು.
ಮನುಷ್ಯನ ಜೀವನದಲ್ಲಿ ಆರ್ಥಿಕ ಮುಗ್ಗಟ್ಟುಗಳು ಸಾಮಾನ್ಯ. ಇದ್ದ ಇತಿಮಿತಿಗಳಲ್ಲೇ ಎಲ್ಲವನ್ನೂ ನಿಭಾಯಿಸು ತ್ತೇವೆನ್ನುವುದೂ ಆಗದ ಮತ್ತು ಅಗ್ಗದ ಮಾತು. ಅಮದನಿಯದು ಒಂದೇ ಚೌಕಟ್ಟು. ವರ್ಷಕ್ಕೊಮ್ಮೆ, ಆರು ತಿಂಗಳಿಗೊಮ್ಮೆ ಒಂದಷ್ಟು ಮೊತ್ತ ನೂರರ ಲೆಕ್ಕದಲ್ಲಿ, ಹತ್ತತ್ತಿರ ಸಾವಿರ ಹೆಚ್ಚಾಗಬಹುದು. ಆದರೆ, ಖರ್ಚಿನದು ಗಾಳಿ ಮತ್ತು ಜೋರು ಗಾಳಿಯಂತಹುದು. ಗಾಳಿ ಅಂತೇಕೆ ಹೇಳಿದೆನೆಂದರೆ, ಒಂದಷ್ಟು ಖರ್ಚುಗಳನ್ನು ನಾವು ನಮ್ಮ ಇಷ್ಟ, ಸಂತೋಷ, ಖುಷಿಗಳಿಗೆ ಮಾಡಿಕೊಂಡಿರುತ್ತೇವೆ. ಅದಕ್ಕೆ ಬೇಸರ,ಸಂಕಟವಾಗಲಾರದು. ಇನ್ನು ಕೆಲವಿರುತ್ತವೆ; ಅವಕ್ಕೆ ಆಮಂತ್ರಣ, ನಿರೀಕ್ಷೆ, ಇರುವುದಿಲ್ಲ. ಅನಾರೋಗ್ಯ, ಅಪಘಾತ, ಇನ್ಯಾವುದಾದರೂ ದಾರಿಗುಂಟ ಎದೆ ಮೇಲೆ ಬಂದು ಕುಳಿತ ಖರ್ಚುಗಳನ್ನು ಹಗುರಕ್ಕೆ ಕೊಡವಿಕೊಂಡೆ ಎನ್ನುವಂತಿಲ್ಲ. ಅನಾಮತ್ತು ಇನ್ನೆರಡು ಅಥವಾ ನಾಲ್ಕು ಕೈಗಳ ಆಸರೆ ಬೇಕೇಬೇಕು, ಅಂಥಹ ಭಾರ. ಆ ಭಾರ ಇಳಿಸಿದ, ಇಳಿಸುವ ಮಾರ್ಗವೇ ಕೈಗಡ, ಸಾಲ. ಇದು ನೌಕರರ ವಿಚಾರದಲ್ಲಿ "ಸಾಲ" ಕೈ ಹಿಡಿದಿಡಿದು ಆಡಿದರೆ, ವ್ಯವಹಾರಸ್ಥರ ಲೆಕ್ಕದಲ್ಲಿ ಅದರ ವಿಸ್ತಾರ ಹೆಚ್ಚೇ.
ಗೃಹೋಪಯೋಗಿ ವಸ್ತುಗಳ ಖರೀದಿ ಸಾಲ, ಗೃಹ ಸಾಲ, ವಾಹನ ಸಾಲ, ವಿದ್ಯಾಭ್ಯಾಸಕ್ಕಾಗಿ ಸಾಲ, ಇವು ದೊಡ್ಡ ದೊಡ್ಡ ಸಾಲಗಳು. ಇವುಗಳನ್ನು ಹೇಳಿಕೊಳ್ಳಲು ಯಾವ ಮುಜುಗರವೂ ಆಗುವುದಿಲ್ಲ. ಆದರೆ, ಇಸ್ಪೀಟ್ ಆಟಕ್ಕಾಗಿ ಸಾಲ, ರೇಸ್, ಬೆಟ್ಟಿಂಗ್ ಗಾಗಿ ಸಾಲ, ಕುಡಿತಕ್ಕಾಗಿ ಸಾಲ, ಇಂಥವೇ ಮನುಷ್ಯನನ್ನು ದೈನೇಸಿ ಸ್ಥಿತಿಗೆ ತಂದಿಡುತ್ತವೆ. ಇವಲ್ಲದೇ ಇನ್ನು ಹತ್ತು ಹಲವು ಸಾಲದ ಮುಖಗಳಿವೆ. ಅಂಥ "ಹಲವು" "ಸಾಲ"ಗಳ ಒಂದೆರಡು ಪರಿಚಯ ನೀಡುವುದು ನನ್ನ ಇವತ್ತಿನ ಆಶಯ.
ನಾವು ಓದುತ್ತಿದ್ದ ಸಂಧರ್ಭದಲ್ಲಿ ಹಾಸ್ಟೆಲ್ ನಲ್ಲಿ ನನ್ನ ಗೆಳೆಯರಲ್ಲಿ ಒಬ್ಬನಿದ್ದ. ಅವನ ಧಿರಿಸು ಮತ್ತು ಧಿಮಾಕು ಎಷ್ಟು ಕರಾರುವಾಕ್ಕಾಗಿ ಇದ್ದವೆಂದರೆ, ಅವನು ಬಡ ಕುಟುಂಬದಿಂದ ಬಂದ ಹುಡುಗನೆನ್ನುವುದಾಗಲೀ ಅಥವಾ ಆ ಹುಡುಗನ ಕುಟುಂಬದವರು ಅವನ ತಿಂಗಳ ಮೆಸ್ ಬಿಲ್ ಆಗಿನ ದಿನಗಳಲ್ಲಿ ಅದು ಕೇವಲ ಮೂರು,ನಾಲ್ಕು ನೂರಾದರೂ ಅದನ್ನೇ ಕಳುಹಿಸಲು ಹೆಣಗುತ್ತಿದ್ದರೆನ್ನುವುದನ್ನು ಯಾರೂ ನಂಬದಂತೆ ಜಬರ್ದಸ್ತ್ ಆಗಿ ಖರ್ಚು ಮಾಡುತ್ತಿದ್ದ. ಜೊತೆಗೆ ಯಾರಾದರೂ ಹುಡುಗಿಯರು ಸಲುಗೆಯಿಂದ ಹಲ್ಲು ಫಳಫಳಿಸಿದರೂ ಸಾಕು ಅವರನ್ನು ತಿಂಡಿಗೆ, ಸಿನೆಮಾಕ್ಕೆ ಕರೆದು ಧಾರಾಳಿಯಾಗುತ್ತಿದ್ದ. ಬದಲಿಗೆ ಅವನು ಅಲ್ಲಲ್ಲಿ ಸಾಲ ಎಷ್ಟು ಮಾಡಿದ್ದನೆಂದು ಯಾರೋ ಹೇಳಿದಾಗ ಪೆಚ್ಹಾಗಿದ್ದೆವು. "ಅದು ಹತ್ತರಿಂದ ಹದಿನೈದು ಸಾವಿರ"ವಾಗಿತ್ತು. ಆ ಗೆಳೆಯನ ಸಾಲದ ಹಿಂದೆ "ಬಹುಪರಾಕ್" ಹೇಳುವ ಹುಡುಗರ ಸಾಕಷ್ಟು ಶ್ರಮವಿತ್ತೆನ್ನುವುದು ಅಷ್ಟೇ ನಿಜ. ಅದನ್ನು ಸರಿದೂಗಿ ಸಲು ಪರೀಕ್ಷೆಯ ಅಂತ್ಯಕ್ಕೆ "ನಕಲು ಪ್ರಶ್ನೆ ಪತ್ರಿಕೆ" ಬೆನ್ನತ್ತಿದ್ದ. ಓದನ್ನು ಬಿಟ್ಟು, ಊಟ, ವಸತಿ ಇತರೆ ಖರ್ಚು ಎನ್ನುವುದು ಇತಿ ಮಿತಿಯಲ್ಲಿದ್ದರೆ ಚೆನ್ನ. ಮುಂದೆ ಅದೇನಾಯಿತೋ, ನಾವು ಕಾಲೇಜಿಗೆ ಮಣ್ಣು ಹೊರುವುದು ಕೇವಲ ಮೂರೇ ವರ್ಷವೆಂದು ಕರಾರು ಬರೆದುಕೊಟ್ಟವರಂತೆ ಎದ್ದು ಬಂದದ್ದಾಯಿತು.
ಅದಾಯಿತಾ? ನನ್ನ ಹೊಸ ನೌಕರಿ ಬದುಕಿನಲ್ಲಿ ಹಿರಿಯ ಸಹುದ್ಯೋಗಿ ಒಬ್ಬ, ಅವರವಸರವಾಗಿ ಒಮ್ಮೆ ಕೆಲ ಪೇಪೆರ್ ಮೇಲೆ ಸಹಿ ಮಾಡಿಸಿಕೊಂಡು ಹೋದ. "ನಾನಂದುಕೊಂಡಂತೆ" ಅದು ಕೇವಲ ಕೆಲವೇ ಸಾವಿರಗಳ ಸಾಲದ ಜಾಮೀನು ಪತ್ರಗಳು. ಆ ಸಹುದ್ಯೋಗಿ ಪಡೆದ ಸಾಲಕ್ಕೆ ವರ್ಷಗಳ ಆಯುಷ್ಯ ತುಂಬಿದಂತೆ ವಯ ಸ್ಸಿಗೆ ಬಂದ ಹುಡುಗಿ ನೋಡಿ ಆನಂದಿಸುವಷ್ಟೇ ಬಡ್ಡಿ ತುಂಬಿದ ಸಾಲದ ಹೊರೆಯ ಸಂಕಟವೂ ಆಗುತ್ತಿತ್ತು. ಸಾಲ ತುಂಬಲು ಈಗ ಸಾಲ ಪಡೆದವ, ನನ್ನ ಸಹುದ್ಯೋಗಿ ಅಲ್ಲ. ಇನ್ನೊಂದೂರಲ್ಲಿ ಇನ್ನೊಂದು ಇಲಾಖೆಯಲ್ಲಿ ಗುಮಾಸ್ತ. ನಾನು ಪ್ರತಿ ಭಾನುವಾರ ಅದೇ ಊರಿನ ನಿವಾಸಿಯಾದ್ದರಿಂದ ಆತನ ಮನೆಯಲ್ಲಿ ಬೆಳಿಗ್ಗೆ ಆರೂವರೆ ಗಂಟೆಗೆ " ಸಾರ್, ಸಾಲ ತುಂಬಿ ಅನ್ನಬೇಕು, "ಬರ್ಲಿ ತಗಾ ತಮ್ಮಾ, ನೀನ್ಯಾಕ್ ಯೋಚ್ನೆ ಮಾಡ್ತಿ, ಸಾಲ ಮಾಡಿರೋದು ನಾನು. ಕೋರ್ಟಿನಿಂದ ಆರ್ಡರ್ ಬಂದ್ರೆ ನನ್ ಸಂಬಳ್ದಾಗ ಮುರೀತಾರ, ನಡಿ" ಅಂದವನೇ ಒಂದು ಕಪ್ಪು ಚಹ ಕುಡಿಸಿ ದಬ್ಬುತ್ತಿದ್ದ. ಅಷ್ಟರಲ್ಲಾಗಲೇ ಸಾಲ ಕೊಟ್ಟವರು ಕೋರ್ಟಿಗೆ ಕೇಸ್ ಹಾಕಿ ಡಿಕ್ರಿ ಪಡೆದು ಅಮಲ್ಜಾರಿ (Execution Petition) ಪ್ರಕರಣ ದಾಖಲಿಸಿ ಸಾಲ ಪಡೆದವರ ಮತ್ತು ಜಾಮೀನು ಹಾಕಿದವರ ವಿರುದ್ಧ ವೇತನ ಕಟಾವಿಗೆ ಆದೇಶಕ್ಕೆ ಬಾಕಿ ಇರಿಸಿದ್ದರು.
ಸರಿಸುಮಾರು ನಾಲ್ಕು ವರ್ಷ ಆತನ ಮನೆಗೆ ಅಲೆದಾಡಿದರೂ "ಕ್ಯಾರೆ" ಅನ್ನಲಿಲ್ಲ. ಹಾಗಂತ ಆತನಿಗೆ ಆರ್ಥಿಕ ಸಂಕಷ್ಟಗಳ್ಯಾವು ಇದ್ದಿಲ್ಲ. ಹೆಂಡತಿ ನೌಕರಸ್ಥೆ, ಮಗ ರಿಯಲ್ ಎಸ್ಟೇಟ್ ವವ್ಯಹಾರಸ್ಥ. ನಾನು ಒಂದಿನ ಒಂದು ಹಾಳೆಯಲ್ಲಿ ದಬಾ ದಬಾ ದಬಾ ಟೈಪು ಕುಟ್ಟಿ ಅಂದಿನ ಜಿಲ್ಲಾಧಿಕಾರಿಯನ್ನು ನೇರವಾಗಿ ಕಂಡು ಇದ್ದ ವಾಸ್ತವ ವನ್ನೇ ಅತ್ಯಂತ ರೋಚಕವಾಗಿ ಕಥೆಯನ್ನಾಗಿಸಿ ಡಿಕ್ರಿ ಪ್ರತಿಯನ್ನು ಮನವಿಯೊಂದಿಗೆ ಲಗತ್ತಿಸಿ ಕೈ ಮುಗಿದು ಬಂದಿದ್ದೆ. ನಂಬುತ್ತೀರೋ ಇಲ್ಲವೋ ಒಂದು ಕೋರ್ಟ್ ಆದೇಶವಿದ್ದರೂ ಪೂರ್ತಿ ಸಂಬಳ ನೀಡದಂತೆ ಸಾಲದ ಮೊತ್ತವನ್ನು ಕಟಾವು ಮಾಡಿ ಸಾಲದ ಮೊತ್ತಕ್ಕೆ ಜಮೆ ಮಾಡುವಂತಿಲ್ಲ. ಅದನ್ನೂ ಕಂತು ಕಂತಾಗಿ ಕಟಾಯಿಸಲು ಮಾತ್ರವೇ ಸಾಧ್ಯ. ಅಂಥಾದ್ದರಲ್ಲಿ ಜಿಲ್ಲಾಧಿಕಾರಿಯು ಆ ನೌಕರನಿದ್ದ ಮೇಲಧಿಕಾರಿಗೆ ಸೂಚಿಸಿ ಸಾಲದ ಮೊತ್ತವನ್ನು ಎರಡು ತಿಂಗಳ ವೇತನವನ್ನು ತಡೆಹಿಡಿದು ಸಾಲದ ಮೊತ್ತವನ್ನು ಕಟ್ಟಿದ ಮೇಲೆಯೇ ಕೈಬಿಟ್ಟಿದ್ದರು. ಅದಾಗಿ ಒಂದು ವಾರವೂ ಆಗಿದ್ದಿಲ್ಲ. ಯಾವ ವ್ಯಕ್ತಿ ಮನೆ ಮುಂದೆ ವರ್ಷಗಳ ಕಾಲ ಅಲೆ ದಿದ್ದೇನೋ ಆ ವ್ಯಕ್ತಿ ನಾನಿದ್ದ ಸ್ಥಳಕ್ಕೆ ಬಂದು "ಹಿಂಗ್ಮಾಡ್ಬುಟ್ಟಾರ" ಅಂದ. ನಾನು "ಅರೇ, ಅದೆಂಗೆ ಮಾಡ್ತಾರ್ ಸಾ… ಹಾಕ್ರಿ ಕೋರ್ಟಿಗೆ ಕೇಸ್" ಅಂದಿದ್ದೆ.
ವ್ಯತಿರಿಕ್ತವಾಗಿ ಇನ್ನೊಬ್ಬ ಹಿರಿಯ ನೌಕರರು. ಅವರಿಗೆ ಟೀ, ಕಾಫಿ, ಸಿಗರೇಟ್, ಡ್ರಿಂಕ್ ಯಾವ ದುರಭ್ಯಾಸವೂ ಇದ್ದಿಲ್ಲ. ಆದರೆ, ಆತನ ಪರಿಚಯಸ್ಥರು, ಸ್ನೇಹಿತರು, ಸಹುದ್ಯೋಗಿಗಳು ಯಾರಾದರೂ ಸರಿ, ಆಸ್ಪತ್ರೆ ಸೇರಿದ್ದಾರೆಂದರೆ, ರಕ್ತದಾನ ಮಾಡುತ್ತಿದ್ದ, ಮಾಡುವವರನ್ನು ಕರೆತಂದು ರಕ್ತದಾನ ಮಾಡಿಸುತ್ತಿದ್ದ. ಕಷ್ಟ ಎಂದವರಿಗೆ ತನ್ನಿಂದಾದರೆ ಸರಿ, ಇಲ್ಲವಾದರೆ, ಕಡಿಮೆ ನ್ಯಾಯ ಬಡ್ಡಿ ದರದಲ್ಲಿ ಸಾಲ ನೀಡುವವರಲ್ಲಿ ಕರೆದೊಯ್ದು ತನ್ನ ನಂಬಿಕೆ ಮೇಲೆ ಸಾಲ ಕೊಡಿಸುತ್ತಿದ್ದ. ಒಮ್ಮೊಮ್ಮೆ ತೀರ ಅರ್ಜೆಂಟ್ ಅಂತಿದ್ದರೆ, ಈತನ ಒಂದು ಸಹಿ ಇರುವ ಸಣ್ಣ ಚೀಟಿ ಮೇಲೆ ಇಂತಿಷ್ಟು ಮೊತ್ತ ಅಂತಿದ್ದರೆ ಸಾಕು, ಅಷ್ಟು ಸಾಲ ಕೊಟ್ಟು ಕಳಿಸುವಂಥ ಹೆಸರು ಉಳಿಸಿಕೊಂಡಿದ್ದ. ಸಾಲ ಪಡೆದವರು ಸಾಲ ಪಡೆದಾಗಿನ ಸಂಧರ್ಭಕ್ಕೆ ಕೈ ಮುಗಿದು ತಿಂಗಳ ತಿಂಗಳ ಕೊನೆಗೆ ಈತನ ಕೈಗೆ ಬಡ್ಡಿಯನ್ನು ಸಾಧ್ಯವಾದರೆ ಅಸಲನ್ನೂ ಸೇರಿಸಿ ಚುಕ್ತಾ ಮಾಡುತ್ತಿದ್ದರು.
ಸಾಲ ಕೊಡುವವರು, ಕೊಡಿಸುವವರು ಇದ್ದಾರೆಂದರೆ, ಸಾಲ ಪಡೆವ ಕೈಗಳು "ತುಪ್ಪ ತಿಂದ ನಂತರವೂ" ಎರಡಿದ್ದದ್ದು ಆರಾರು, ಎಂಟೆಂಟು, ಹತ್ತತ್ತೂ ಆಗುತ್ತವೆ. ನೌಕರಿ ಇದ್ದಾಗಿನ ಸ್ನೇಹಿತರು ತಮ್ಮ ತಮ್ಮ ನಿವೃತ್ತಿ ನಂತರ ಬರುವ ದುಡ್ಡನ್ನು ಈ ಸಾಲದ ಮೊತ್ತಕ್ಕೆ ಹೊಂದಿಸಿಕೊಡುತ್ತೆನೆನ್ನುವವರು, ಇನ್ಯಾವುದೋ ಹಣದ ಹೊಂದಾಣಿಕೆ ಎಂದವರು, ಹಂಗಂಗೆ ಕಣ್ಣಿಗೆ ತಪ್ಪಿಸಿಕೊಂಡು ಓಡಾಡತೊಡಗಿದರು. ಸಾಲ ಕೊಡಿಸಿದ ಈ ಮನುಷ್ಯ ಸಾಲ ಪಡೆದವರಿಂದ ಒಂದೇ ಒಂದು ಪ್ರಾಮಿಸರಿ ನೋಟು, ಬಾಂಡು ಬರೆಸಿಕೊಳ್ಳದೇ ಕೇವಲ ತನ್ನ ಹೆಸರ ಜಾಮೀನಿನ ಮೇಲೆ ಸಾಲ ಕೊಡಿಸಿದ್ದ. ಸಾಲ ಕೊಟ್ಟವ ಈತನನ್ನೇ ಹೊಣೆಗಾರನನ್ನಾಗಿಸಿದ. ಇನ್ನೆಲ್ಲೂ ಹೋಗಲಿಚ್ಚಿಸದ, ಇದ್ದ ಅದೇ ಊರಿನ ತಾನು ಮರ್ಯಾದೆಗೆ, ತನ್ನ ಮಾತಿಗೋಸ್ಕರವಾದರೂ ಆ ಸಾಲದ ಹೊಣೆಯನ್ನು ಹೊರಬೇಕಾಯಿತು. ಸುಮಾರು ತಿಂಗಳ ಕಾಲ ಈತನೇ ಸಾಲಗಾರರ ಬಡ್ಡಿಯನ್ನು ಕಟ್ಟಿದ. ಸಾಲದೇ ಹೋದಾಗ, enough ಅಂದವರೇ ಸ್ವಯಂ ನಿವೃತ್ತಿ ಪಡೆದು ಬಂದ ನಿವೃತ್ತಿ ಉಪದಾನದ ಮೊತ್ತದಲ್ಲೇ ಕೊಡಿಸಿದ ಕೆಲ ಲಕ್ಷಗಳ ಸಾಲವನ್ನೂ ತೀರಿಸಿ ಬರುವ ಪಿಂಚಣಿ ಮೊತ್ತದ ಜೊತೆ ಖಾಸಗಿಯಾಗಿ ದುಡಿಯಲು ಶುರು ಮಾಡಿದ. ಸಾಲ ಮಾಡಿದವರಲ್ಲಿ ಕೆಲವರು ಏನೇನೋ ಆಗಿ ತೀರಿದರಂತೆ. ಇದ್ದವರೂ ಇಲ್ಲೇ ನರಕ ಅನುಭವಿಸುತ್ತಿದ್ದಾರಂತೆ.
ಸಾಲ ಕೊಡಿಸಿದಾತ ಆಗಾಗ ಗೊಣಗುತ್ತಿದ್ದುದು ಅರಿವಿಗೆ ಬಂತು; "ಮಾಡಿದ್ದುಣ್ಣೋ ಮಾರಾಯಾ"
****
Kelavarige sala madalu mathra barathe. Adanna theerisalu sariyada yojane hakondiralla. Adarindane samasyegalu. Nanu kelavarinda thurthu sala kaisala padedidene. Adu kevala ond thingalu meeri nilluvudilla. Innu KGID, GPF sala thogothini aste adu anivarya sandarbagalalli. Nanu anekarige sala kottidene. Kelavaru kai ethidare. Kelvarige sala theerisuva bagge margadarshana kottidene. Adarinda avaru indu runa muktha ragi santhoshada jeevana nadesuthiddare. Nanage ade kushi.
Idakkaagiye Amar 'Kottavanu Koadangi Iskondavanu Veerabhdra' annoa maathu iroadu!
good one sir.
ಅಮರ್, ಕಥೆ ತುಂಬಾ ಹಿಡಿಸಿತು! ಸಾಲ ತೆಗೆದುಕೊಳ್ಳುವಾಗಿನಕಿಂತ ಯಾರಿಗಾದರೂ ಕೊಡಿಸುವಾಗ ಇನ್ನೂ ಹುಶಾರಾಗಿರಬೇಕು 🙂
Kelavaru maaDuva tappige innu yaarigoo sahaya maadalebaaradu ennuva manobhavane baruttade. neevu pechaadiddu mattu innobba sahrudayigaLu paradaDiddu noDi yaava mulaajigoo kattubiddu yaarigoo sala koDisabaaradu enisuttade.
Olleya lekhana!!
ಲೇಖನ ಚೆನ್ನಾಗಿದೆ ಸರ್
Thumba channagide amar. Nijakku i think krishnappa ingaadru olledhannu madidhane.
Amar
i too also have some more experience in this regard. good article.. go ahead
Hi sir. It's very nice.