ತುಂಬಿದ ಕೊಡ… (ಒಂದು ನೈಜಕಥೆಯ ಸುತ್ತ): ಸಂದೇಶ್ ಎಲ್.ಎಮ್.

ಬೆಂಗಳೂರು ಎಂಬ ಕಾಂಕ್ರಿಟ್ ಕಾಡಿನಲ್ಲಿ ಹೆಚ್ಚಿನ ಮಂದಿ ರಜೆ ಅಥವಾ ವಾರಾಂತ್ಯದಲ್ಲಿ  ಕಾಲ ಕಳೆಯಬೇಕೆಂದು ಬಯಸುವುದು ಮನೆಯಲ್ಲಷ್ಟೇ. ದೈನಂದಿನ ಚಟುವಟಿಕೆಗಳಲ್ಲಿ ಟ್ರಾಫಿಕ್, ತಲೆ ಬಿಸಿ, ಕೆಲಸದ ಗಡಿಬಿಡಿ ಇತ್ಯಾದಿ ಜಂಜಾಟಗಳಿಂದ ಬೇಸತ್ತವರಿಗೆ ರಜೆ ಎಂದರೆ ಹಬ್ಬದಷ್ಟೇ ಸಂಭ್ರಮ. 

ರಜೆ ಸಿಕ್ಕಮೇಲೆ ಕೇಳಬೇಕೆ? ಹೆಂಡತಿ, ಮಕ್ಕಳು, ಸ್ನೇಹಿತರು, ಉಳಿದ ಕೆಲಸಗಳು, ಅಬ್ಬಾ ಪ್ಲಾನ್ ಮಾಡುವುದೇ ಬೇಡ, ನೀರು ಕುಡಿದಷ್ಟೇ ಸಲೀಸಾಗಿ ಮುಗಿದು ಹೋಗುವಂತದ್ದು. ಇಂತಹ ಸಂತೋಷದ ದಿನಗಳಲ್ಲಿ ನಮ್ಮ ಕವಿ ಮಹಾಶಯರು ತಮ್ಮ ಚೊಚ್ಚಲ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ಇಟ್ಟುಕೊಂಡರೆ ಪರಿಸ್ಥಿತಿ ಹೇಗಾಗಬೇಡ?

ರಜೆ ದಿನಗಳೆಂದರೆ ಕೇಳಬೇಕೆ? ಬೆಳಗ್ಗೆ 9 ಗಂಟೆಗೆ ಮುನ್ನ ಹಾಸಿಗೆಯಿಂದ ಏಳದ ದೇಹ, 6 ಗಂಟೆಯಿಂದ ಬಡಿದುಕೊಳ್ಳಲಾರಂಭಿಸಿದ ಗಡಿಯಾರದ ತಲೆಯ ಮೇಲೆ ಮೊಟಕಿ ಮೊಟಕಿ ಎದ್ದಾಗ 8 ಗಂಟೆ.

ನಿತ್ಯಕರ್ಮಗಳ ಮುಗಿಸಿ, ದೇವರ ಪೂಜಿಸಿ, ಇಸ್ತ್ರಿ ಮಾಡಿದ ಬಟ್ಟೆಗಳ ತೊಡುವಾಗ ಮನೆಯಾಕೆ ಕೇಳಿದ್ದು "ಏನ್ರೀ ಇವತ್ತು ಆಫೀಸ್ ಇದ್ಯಾ?" 

"ಇಲ್ಲಾ ಕಣೆ, ನನ್ ಫ್ರೆಂಡ್ದು ಬುಕ್ ರಿಲೀಸ್ function ಇದೆ ಹಿಂಗ್ ಹೋಗಿ, ಹಿಂಗ್ ಬರ್ತೀನಿ" ಎಂದು ಗಾಡಿಯ ಕಿಕ್ಕರ್ ಅದುಮಿದವನಿಗೆ, ಗಾಡಿಯ ವೊರ್ ವೊರ್ ಶಬ್ದಕ್ಕಿಂತ ಹೆಚ್ಚು ಕೇಳಿಸಿದ್ದು ಮನೆಯಾಕೆಯ ಸುಪ್ರಭಾತ!!

ಬಿಡುಗಡೆ ಸಮಾರಂಭಕ್ಕೆ ಹೋಗುವುದಕ್ಕೆ ಒಂದು ಮುಖ್ಯ ಕಾರಣ ನನ್ನ ನೆಚ್ಚಿನ ಲೇಖಕರೊಬ್ಬರು ಆಗಮಿಸುತ್ತಿದದು! ಹೊರಟಿದ್ದೂ ಲೇಟು, ಸೇರಿದ್ದೂ ಲೇಟು! ಪಾಪಗೇಡಿ ತಲುಪಿದ ಸಮಯಕ್ಕೆ ಟಿಫನ್ ಖಾಲಿ. ಹೇಗಾಗಿರಬೇಡ ಪರಿಸ್ಥಿತಿ? ಆದರೂ ಮನಸ್ಸು ಧೃತಿಗೆಡಲಿಲ್ಲ. ಸ್ನೇಹಿತರಿಗೆ ಒಂದು good luck ಹೇಳಿ, at least ಪುಸ್ತಕವನ್ನಾದರೂ ಕೊಳ್ಳೋಣ ಎಂದು ಮಾರಟಕ್ಕಿಟ್ಟಿದ್ದ ಪುಸ್ತಕಗಳ ಕಡೆ ಕಣ್ಣಾಡಿಸುತ್ತಿದ್ದೆ. 

ಸುಮಾರು 50 ವರ್ಷದ ಹಿರಿಯರೊಬ್ಬರು ಪುಸ್ತಕಗಳನ್ನು ಹುಡುಕುತ್ತಿದ್ದರು, ಅವು ಚಿಕ್ಕವಾದ್ದರಿಂದ ಅದರ ಮೇಲೆ ನಮೂದಿಸಿದ ಬೆಲೆ ಅಸ್ಪಷ್ಟವಾಗಿತ್ತು. ಮಾರಲು ಕುಳಿತ್ತಿದ್ದ ಹುಡುಗರ ಬಳಿ ಕೇಳಿದಾಗ, "ಸಾರ್, ಪುಸ್ತಕದ ಬೆಲೆ 150, ಇವತ್ತು ಪುಸ್ತಕ  ಬಿಡುಗಡೆ ಆಗಿರೋದ್ರಿಂದ ಡಿಸ್ಕೌಂಟ್ ಇದೆ, ಬರಿ 100" ಎಂದು ಕೈಗಿತ್ತ ಪುಸ್ತಕಗಳನ್ನ ಏಕೋ ಬೇಡ ಎನ್ನಲು ಮನಸ್ಸಾಗಲಿಲ್ಲ ಇವರಿಗೆ. 

"ಪುಸ್ತಕ ನೋಡಿದ್ರೆ ನಾವು primary ಸ್ಕೂಲಿನಲ್ಲಿ ಓದುತಿದ್ದಾಗ ಸಿಗ್ತಾ ಇದ್ದ ಮಗ್ಗಿ ಪುಸ್ತಕ ಥರ ತುಂಬ ಚಿಕ್ಕದು, ಯಾಕೆ 100 ಕೊಡ್ಬೇಕು ಅಂತ ಕೇಳಬೇಕು" ಅನ್ನಿಸಿತೋ ಏನೋ… 

ಹಾಗೆ ಹೇಳುವಷ್ಟರಲ್ಲಿ ಪುಸ್ತಕದ ಕೌಂಟರ್ನಲ್ಲಿ ಇದ್ದವರು ಬೇರೆ ಗ್ರಾಹಕರನ್ನು ಅಟೆಂಡ್ ಮಾಡುವ  ಭರಾಟೆಯಲ್ಲಿದರು. ಪ್ರಶ್ನಿಸಲು ಯಾಕೋ ಆ ಹಿರಿಯರಿಗೆ ಮನಸ್ಸಾಗಲಿಲ್ಲ. ಆದರೂ ಅವರ ಮನಸ್ಸಿಗೇಕೋ ಮುಜುಗರ! " ಅನ್ಯಾಯವಾಗಿ ಪುಟಾಣಿ ಪುಸ್ತಕಕ್ಕೆ 100 ರೂ ಕೊಟ್ಟೆನಲ್ಲ" ಎಂಬ ನೋವು, ಮನಸು ಯಾಕೋ ತನಗಾದ ಅನ್ಯಾಯವನ್ನು ಯಾರಲ್ಲಾದರೂ ಹೇಳಿಕೊಳ್ಳಬೇಕೆಂದು ಹಂಬಲಿಸಿದಂತೆ ಕಾಣುತ್ತಿತ್ತು. ಪುಸ್ತಕ ಕೊಳ್ಳಲು ಬಂದ ನನ್ನ ಕಣ್ಣುಗಳು CC TV ಯಂತೆ ಎಲ್ಲವನ್ನು ಸೆರೆಹಿಡಿಯುತ್ತಿತ್ತು. 

ಒಂದೆರಡು ನಿಮಿಷಗಳಾಗಿರಬಹುದು. ಬರೋಬ್ಬರಿ 6 ಅಡಿ ಉದ್ದ, ಕಪ್ಪು ಬಣ್ಣ, ನೀಳ ಮೈಕಟ್ಟಿನ ವ್ಯಕ್ತಿಯೊಬ್ಬರು ಅತ್ತಲಿಂದ ನಡೆದು ಬರುತ್ತಿದರು. ಮುಖ ನೋಡಿದರೆ ಜೀವನದಲ್ಲಿ ಅದೇನೋ ಗೆದ್ದ ಭಾವ, ಏನೇ ಬಂದರೂ ಎದುರಿಸುತ್ತೇನೆ ಎನ್ನುವ ಮೊನಚು ಕಣ್ಣು, ಯಾರೇ ಆದರೂ ತಕ್ಷಣ ನಿಂತು ಗೌರವಿಸಬೇಕೆನಿಸಿಬಿಡುವ ವ್ಯಕ್ತಿ-ವ್ಯಕ್ತಿತ್ವ. ಅದಾಗಲೇ ಗೊತ್ತಾದದ್ದು, ಅವರೇ ನಾ ಇಷ್ಟಪಡುವ ಇದುವರೆಗೂ ಕೇವಲ ಪುಸ್ತಕಗಳಲ್ಲಿ ಓದಿದ ಲೇಖಕರೆಂದು. 

ಇವರೊಬ್ಬರೇ ನನ್ನ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯ ಅಂತ 100 ರೂಪಾಯಿ ಕೊಟ್ಟು ಪುಸ್ತಕ ಕೊಂಡ ಆ ಹಿರಿಯರಿಗೆ ಅನ್ನಿಸಿರಬೇಕು. ತಕ್ಷಣ ಆ ಹಿರಿಯ ಲೇಖಕರ ಬಳಿ ಹೋಗಿ ಅವರ ಕುಶಲೋಪರಿ ವಿಚಾರಿಸಿ, 

"ಸಾರ್ ನಿಮ್ಮ ಪುಸ್ತಕಗಳನ್ನ ನಾನು ಓದಿದ್ದೇನೆ, ತುಂಬ ಚೆನ್ನಾಗಿವೆ. ನಿಮ್ಮ ಕೆಲವು ಪುಸ್ತಕಗಳು ಸಿನಿಮಾ ಆಗಿರುವುದು ಕೂಡ ಸಂತೋಷದ ಸಂಗತಿ, ನಿಮ್ಮನ್ನು ಈ ಕಾರ್ಯಕ್ರಮದಲ್ಲಿ ನೋಡಿ ನಾನು ನಿಜವಾಗಿಯೂ ಧನ್ಯ ಸರ್.  ಈಗ ತಾನೇ ಈ ಪುಸ್ತಕವನ್ನು ಖರೀದಿಸಿದೆ, ನಿಮ್ಮಂತ ಹಿರಿಯ ಲೇಖಕರ ಪುಸ್ತಕಗಳೇ ಕಡಿಮೆ ಬೆಲೆಯಲ್ಲಿ ದಕ್ಕುತ್ತಿರಬೇಕಾದರೆ, ಇವರ್ಯಾರೋ ಚಿಕ್ಕ ಹುಡುಗರ ಕವಿತೆಗಳ ಪುಟಾಣಿ ಪುಸ್ತಕಕ್ಕೆ ಏಕೆ ಹೆಚ್ಚು ಕೊಡಬೇಕು? ತುಂಬ ಬೇಸರ ಆಯಿತು ಸರ್" ಎಂದು ತನ್ನ ಮನಸಿನ ಅಳಲನ್ನು ತೋಡಿಕೊಂಡರು. 

ಒಂದು ಕ್ಷಣ ಯೋಚಿಸಿದ ಆ ಹಿರಿಯ ಲೇಖಕರು ತಕ್ಷಣ ನುಡಿದರು."ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ನಿಮ್ಮಲ್ಲಿ ಒಂದು ಮನವಿ, ದಯವಿಟ್ಟು ಪುಸ್ತಕಗಳನ್ನು ಕೊಂಡುಕೊಂಡೆ ಅನ್ನೋ ಮನಸ್ಥಿತಿಯನ್ನು ಮರೆತು, ಹೊಸ ಪ್ರತಿಭೆಗಳ ಹುಟ್ಟಿಗೆ ನಾನು ಸಹ ಕಾರಣನಾಗಿದ್ದೇನೆ. ಕನ್ನಡಮ್ಮನ ಸೇವೆ ಹೀಗೆ ನನ್ನಿಂದ ಪರೋಕ್ಷವಾಗಿ ಆಗುತ್ತಿದೆ ಅಂತ ಒಂದು ಕ್ಷಣ ನಿಮಗೆ ನೀವೇ ಹೇಳಿಕೊಂಡು ಒಂದು ಪುಟ್ಟ ಬದಲಾವಣೆ ತಂದುಕೊಳ್ಳಿ. ಆಗ ನಿಮಗೆ ನನ್ನ ಮಾತಿನ ಅರ್ಥವಾಗುತ್ತದೆ. ನಿಮ್ಮ ಪ್ರೋತ್ಸಾಹದಿಂದ ಎಷ್ಟೋ ಮಹಾನ್ ಪ್ರತಿಭೆಗಳು ಉಗಮವಾಗಲಿ. ನಿಮ್ಮಂಥಹವರ ಪುಟ್ಟ ಸಹಾಯವನ್ನ ಈ ಯುವ ಪ್ರತಿಭೆಗಳು ಮುಂದೆಂದೂ ಮರೆಯುವುದಿಲ್ಲ….ನನ್ನ ಹಾಗೆ!"

ಪ್ರಶ್ನೆ ಕೇಳಿದವನ ಮುಖದಲ್ಲಿ ಏನೋ ತೃಪ್ತಿ, ತುಂಬು ಮನಸಿನಿಂದ ಧನ್ಯವಾದ ಹೇಳಬೇಕೆಂದುಕೊಂಡು ತಿರುಗುವಷ್ಟರಲ್ಲಿ ಅವರು ಆ ಸ್ಥಳದಿಂದ ನಿರ್ಗಮಿಸಿದ್ದರು, ಉತ್ತರಕ್ಕಾಗಿ ಕೂಡ ಕಾಯದೇ!… ಅದೆಷ್ಟೋ ಮತ್ತಷ್ಟು ಹೃದಯಗಳ ಪರಿವರ್ತಿಸಲು!

ಈ ಘಟನೆ ಮುಗಿದು ಅದೆಷ್ಟೋ ದಿನಗಳಾಗಿವೆ, ಮನಸ್ಸು ಮಾತ್ರ ಅಲ್ಲೇ ಗಿರಕಿ ಹೊಡೆಯುತ್ತಿದೆ!

*****

ಸಂದೇಶ್ ರವರು ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿಯವರು. ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.. 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

13 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ವೆರಿ ಗುಡ್ ಸಂದೇಶ್.

Sandesh L M
Sandesh L M
10 years ago

ಧನ್ಯವಾದಗಳು sir

umesh desai
10 years ago

good one.

Sandesh L M
Sandesh L M
10 years ago
Reply to  umesh desai

Thank u

Santhoshkumar LM
10 years ago

Beautiful Brother…..Keep Going 🙂

Sandesh L M
Sandesh L M
10 years ago

Thank u bro..

amardeep.ps
amardeep.ps
10 years ago

ಚೆನ್ನಾಗಿದೆ ಸಂದೇಶ್… ಬರಹ ಮುಂದುವರೆಸಿ….ಅಭಿನಂದನೆಗಳು.

Sandesh L M
Sandesh L M
10 years ago
Reply to  amardeep.ps

ಧನ್ಯವಾದಗಳು

Gaviswamy
10 years ago

ಹಿರಯರ ಸಂದೇಶ ಚೆನ್ನಾಗಿದೆ . ಒಳ್ಳೆಯ ಲೇಖನ

Sandesh L M
Sandesh L M
10 years ago
Reply to  Gaviswamy

ಧನ್ಯವಾದಗಳು Gaviswamy

mamatha himanth
mamatha himanth
10 years ago

Good one………. brother

Sandesh L M
Sandesh L M
10 years ago

thank u sister

Utham Danihalli
8 years ago

ಒಳ್ಳೆಯ ಲೇಖನ
ಹೀಗೆ ಬರೆಯುತ್ತಿರಿ

13
0
Would love your thoughts, please comment.x
()
x