ನಮ್ಮ ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ಒಂದು ವಿಶೇಷ ಸ್ಥಾನವಿದೆ, ಉಪನಿಷತ್ತಿನ ಪ್ರಕಾರ ಗುರು ಶಬ್ದಕ್ಕೆ ಗು ಎಂದರೆ ಅಂಧಕಾರ ಮತ್ತು ರು ಎಂದರೆ ದೂರ ಮಾಡುವವನು ಅಥವಾ ಅಜ್ಞಾನದ ಅಂಧಕಾರವನ್ನ ನಿವಾರಿಸಿ ಜ್ಞಾನ ಮಾರ್ಗವನ್ನು ತೋರಿಸುವವ, ಸಂಸ್ಕೃತದಲ್ಲಿ ಗುರು ಎಂಬ ಶಬ್ದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆ, ಯಾರು ಜ್ಞಾನದಿಂದ ಭಾರವಾಗಿರುತ್ತಾರೋ ಅವನೇ ಗುರು , . ಈ ಗುರುವಿನ ಕುರಿತು ಪುರಂದರ ದಾಸರು ಗುರುವಿನ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯ್ತು ಭಕುತಿ ಅಂತಾ ಹೇಳಿದ್ದಾರೆ,
ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರು ಏನ್ ಮಹಾ?????????
ಅರೆ ಇದೇನಿದು ಗುರವೇ ನಮಃ ಇದ್ದದ್ದನ್ನಾ ಗುರು ಏನು ಮಹಾ ಅಂತಾ ಏಕೆ ಬರೆದೇ ಅಂತಾ ಅಚ್ಚರಿ ಆಗತಿರಬೇಕಲ್ಲ,,, ಹೌದು…. ಎಷ್ಟೋ ಜನ ಇವತ್ತು ಗುರು ಏನ್ ಮಹಾ? ಅಂತಾ ನಗಚಾಟಿಕೆ ಮಾಡಲು ಇವತ್ತು ಉಚ್ಚರಿಸುತ್ತಾರೆ, ಅಂಥವರಿಗೆಲ್ಲ ಗುರು ಏನು ಮಹಾ? ಎಷ್ಟು ಮಹಾ? ಅಂತಾ ಹೇಳಲು ಈ ಕಥೆಯನ್ನ ಬರೆದೆ,
ಸ್ವಲ್ಪ ನಮ್ಮ ಪುರಾಣ ಕಾಲಕ್ಕೆ ಹೋಗೋಣ, ಏನಪ್ಪಾ ಈ ಕಂಪ್ಯೂಟರ್ ಯುಗದಲ್ಲಿ ಮತ್ತೇ ಪುರಾಣ ಕಾಲಕ್ಕೆ ಹೋಗೋದಾ,,, ಹೌದು ಸ್ವಲ್ಪ ಫ್ಲಾಶ್ ಬ್ಯಾಕ್,… ಈ ಗುರು ಅಂತಾ ಒಬ್ಬ ಜ್ಯೋತಿಷಿ, ಅವನು ತುಂಬಾ ದೊಡ್ಡ ಜ್ಯೋತಿಷಿ, ಪ್ರಕಾಂಡ ಪಾಂಡಿತ್ಯವನ್ನ ಹೊಂದಿದವನು, ಅವನಿಗೇ ಅನೇಕ ಜನ ಶಿಷ್ಯರಿದ್ದರು, ಆ ಶಿಷ್ಯೋತ್ತಮರಲ್ಲಿ ಶುಕ್ರ ಅಂತಾ ಒಬ್ಬ ಶಿಷ್ಯ ಇದ್ದ, ಇವನ ಪಾಂಡಿತ್ಯವು ಕೂಡ ಆ ಗುರುವನ್ನ ಮೀರಿಸುವಂತೆ ಇತ್ತು, ಇಬ್ಬರೂ ಸೇರಿದರೆ ಎಲ್ಲಿ ಏನು ನಡಿದಿದೆ ಅಂತಾ ಹೇಳುವಷ್ಟು ಪಾಂಡಿತ್ಯವನ್ನ ಹೊಂದಿರುವಂಥವರು, ಗುರುವಿಗೇ ತುಂಬಾ ಸಂತೋಷ ನನ್ನ ಶಿಷ್ಯನಾದ ಶುಕ್ರ ನನ್ನನ್ನು ಮೀರಿಸುವಷ್ಟು ಬುದ್ಧಿವಂತ. ಇಂಥಾ ಶಿಷ್ಯರು ಸಿಕ್ಕರೇ ಗುರುವಿಗೇ ಮತ್ತೇನು ಬೇಡಾ ಅಲ್ಲವೇ…. ಆದರೇ ಶುಕ್ರನಿಗೆ ನಾನು ನನ್ನ ಗುರುವನ್ನು ಮೀರಿಸುವಷ್ಟು ಬೆಳೆದಿದ್ದೇನೆ ಅಂತಾ ಗರ್ವ ಬಂದಿತು, ಈ ವಿಷಯ ಗುರುವಿಗೇ ತಿಳಿಯಿತು, ಶುಕ್ರನಿಗೆ ಪಾಠ ಕಲಿಸಲು ಇದೇ ಸರಿಯಾದ ಸಮಯ ಅಂತಾ ಯೋಚಿಸಿ ಗುರುವು ಶುಕ್ರನನ್ನ ಕರೆಸುತ್ತಾನೆ, ಗುರುಗಳು ಕರೆದರೆ ಶಿಷ್ಯ ಓಡಿ ಬಂದು ನಮಸ್ಕಾರ ಮಾಡಿದ, ಆದರೇ ಆ ನಮಸ್ಕಾರ ವಿನಮ್ರತೆಯಿಂದ ಕೂಡಿರಲಿಲ್ಲ, ಅದೇ ನಮಸ್ಕಾರ ಮಾಡಬೇಕು ಅಂತಾ ಮಾಡ್ತಾರಲ್ಲ ಹಾಗೇ ಇತ್ತು, ಗರ್ವ, ಸೊಕ್ಕಿನಿಂದ ಕೂಡಿತ್ತು,
ಶುಕ್ರ ಕೇಳ್ತಾನೆ ಗುರುಗಳೇ ನನ್ನನು ಇಲ್ಲಿ ಕರೆಸಿದ ಉದ್ದೇಶ. ಅದಕ್ಕೆ ಗುರು ಹೇಳುತ್ತಾನೆ ನೀನು ನನಗಿಂತ ಬುದ್ಧಿವಂತ, ನನ್ನನು ಮೀರಿಸುವಷ್ಟು ಪಾಂಡಿತ್ಯವನ್ನ ಹೊಂದಿದವನು ನೀನು, ಆದರೂ ಇವತ್ತು ನಿನಗೇ ಒಂದು ಪರೀಕ್ಷೆಯನ್ನ ಇಡ್ತೇನೆ, ಅದಕ್ಕೆ ಶಿಷ್ಯೋತ್ತಮ ಹೇಳುತ್ತಾನೆ ನಾನು ಆ ಪರೀಕ್ಷೆಗೆ ಸಿದ್ಧ, ಏನು ನಿಮ್ಮ ಪ್ರಶ್ನೇ ಅಂತಾ ಮತ್ತೇ ಗರ್ವದಿಂದ ಕೇಳುತ್ತಾನೆ, ಆಗ ಗುರುವು ಅಷ್ಟೇ ಸೌಮ್ಯದಿಂದ ಮಂದಹಾಸದಿಂದ ಶಿಷ್ಯೋತ್ತಮ ಈಗ ಇಂದ್ರನ ಆಸ್ಥಾನದಲ್ಲಿ ಏನು ನಡೆದಿದೆ? ಅದಕ್ಕೇ ಶುಕ್ರನು ಕ್ಷಣಾರ್ಧದಲ್ಲೇ ಗುರುಗಳೇ ಇಂದ್ರನ ಆಸ್ಥಾನದಲ್ಲಿ ಈಗ ನೃತ್ಯ ನಡೆದಿದೆ, ರಂಭೆ, ಊರ್ವಶಿ ಮೇನಕೆ ನೃತ್ಯ ಮಾಡುತ್ತಾ ಇದ್ದಾರೆ, ಅದಕ್ಕೆ ಗುರು ಭಲೇ ಶುಕ್ರ, ಮತ್ತೆ ಏನು ನಡೆದಿದೆ? ಹೇಳು ಅಂದಾಗ, ಶುಕ್ರ ಹೇಳುತ್ತಾನೆ ಮೇನಕೆಯ ಕಿವಿಯಲ್ಲಿ ಹಾಕಿದ ಓಲೆ ಈಗಷ್ಟೇ ಕೆಳಗೇ ಬಿತ್ತು, ಆಗ ಗುರುವು ಹಾಗಾದರೆ ಆ ಓಲೆ ಎಲ್ಲಿ ಬಿದ್ದಿದೆ ಅಂತಾ ಕೇಳುತ್ತಾನೆ, ಆಗ ಶುಕ್ರ ಅದು ಅವಳ ಕಾಲಿನ ಹತ್ತಿರ ಬಿದ್ದಿದೆ, ಅದಕ್ಕೇ ಗುರುಗಳು ಹೇಳುತ್ತಾರೆ ನೋಡಪ್ಪ ಶುಕ್ರ ಆಕೇಯ ಓಲೆ ಏನಿದೆ ಅದು ಕಾಲಿನ ಹತ್ತಿರ ಬಿದ್ದಿಲ್ಲ, ಅಲ್ಲಿ ಅತ್ರಿ ಋಷಿಗಳು ಕುಳಿತಿದ್ದಾರೆ ಅವರ ಕಾಲಿನ ಹತ್ತಿರ ಬಿದ್ದಿದೆ, ಅಂತಾ ಅದಕ್ಕೆ ಶುಕ್ರನು ಇಲ್ಲಾ ಅದು ಮೇನಕೆಯ ಕಾಲಿನ ಹತ್ತಿರ ಬಿದ್ದಿದೆ, ಅದಕ್ಕೇ ಗುರು ಮತ್ತೇ ಶುಕ್ರನ ನಡುವೆ ಒಂದು ವಾದವೇ ನಡೆಯಿತು, ಆಗ ಗುರುಗಳು ನೋಡು ಯಾಕೆ =ಇಬ್ಬರೂ ವಾದವನ್ನ ಮಾಡೋದು ಇಬ್ಬರೂ ಆ ದೇವೇಂದ್ರನ ಆಸ್ಥಾನಕ್ಕೆ ಹೋಗೋಣ, ಅದಕ್ಕೇ ಶಿಷ್ಯನು ಒಪ್ಪಿಕೊಂಡ.
ಇಬ್ಬರೂ ಆ ಇಂದ್ರನ ಆಸ್ಥಾನಕ್ಕೆ ಬಂದರು, ಗುರು ಮತ್ತು ಶಿಷ್ಯನ ಆಗಮಿಸಿದನ್ನು ಕಂಡು ಇಂದ್ರನು ಸಂತೋಷದಿಂದ ಅವರಿಬ್ಬರನ್ನು ಆದರದಿಂದ ಬರಮಾಡಿಕೊಂಡ, ಅವರಿಗೇ ಆಸನದಲ್ಲಿ ಕೂಡಿಸಿ ಸತ್ಕರಿಸಿದ, ಆಗ ಇಂದ್ರನು ವಿನಮೃತೆಯಿಂದ ಕೇಳುತ್ತಾನೆ, ಇಬ್ಬರೂ ಇಲ್ಲಿ ಬಂದಿರುವ ಉದ್ದೇಶ ಏನೂ? ಆಗ ಗುರು ನಡೆದ ವಿಷಯವನ್ನ ತಿಳಿಸುತ್ತಾನೆ, ಆಗ ಅದೇ ಸಮಯಕ್ಕೇ ಮೇನಕೆ ನನ್ನ ವಜ್ರದ ಕಿವಿಯ ಓಲೆ ಕಳೆದಿದೆ ಅಂತಾ ಇಂದ್ರನಿಗೆ ಹೇಳತ್ತ ಬರುತ್ತಾಳೆ, ಆಗ ಗುರು ಹೇಳುತ್ತಾನೆ, ಮೇನಕೆ ಅದು ಎಲ್ಲೂ ಹೋಗಿಲ್ಲ ಅತ್ರಿ ಋಷಿಗಳು ಏನು ಕುಳಿತಿದ್ದಾರೆ ಆ ಆಸನದ ಕೆಳಗೇ ಅದು ಬಿದ್ದಿದೆ, ನೀನು ನೃತ್ಯ ಮಾಡಬೇಕಾದರೆ ಅದು ನಿನ್ನ ಕಿವಿಯುಂದ ಕಳಚಿ ಅಲ್ಲಿ ಬಿದ್ದಿತು ಅಂತ, ಆಗ ಇಂದ್ರ ಅತ್ರಿ ಋಷಿಗಳು ಕುಳಿತ ಆಸನದ ಕೆಳಗೇ ಆ ಕಿವಿಯ ಓಲೆ ಇತ್ತು, ಎಲ್ಲರಿಗೂ ಆಶ್ಚರ್ಯ ಮತ್ತು ಸಂತೋಷವಾಯಿತು, ಆ ಗುರುವನ್ನ ಎಲ್ಲರೂ ಕೊಂಡಾಡುತ್ತಾರೆ, ಆಗ ಶುಕ್ರನಿಗೆ ತನ್ನ ತಪ್ಪಿನ ಅರಿವು ಆಯಿತು, ಆಗ ಶುಕ್ರನು ಗುರುವಿಗೇ ನಮಸ್ಕರಿಸಿ ನನ್ನದು ತಪ್ಪಾಯಿತು ಎಂದು ಕೇಳಿಕೊಳ್ಳುತ್ತಾನೆ, ಆಗ ಗುರುವು ಅವನನ್ನ ಕ್ಷಮಿಸುತ್ತಾನೆ, ಶುಕ್ರನು ಕೇಳುತ್ತಾನೆ ಗುರುಗಳೇ ಆ ಮೇನಕೆಯ ಕಿವಿಯ ಓಲೆ ಆಸನದ ಕೆಳಗಡೆ ಬಿದ್ದಿದೆ ಅಂತಾ ಹೇಗೆ ಗೊತ್ತಾಯಿತು? ತಮಗೇ ದಯವಿಟ್ಟು ತಿಳಿಸಿ ಆಗ ಗುರುವು ಮಂದಹಾಸದಿಂದ ಹೇಳುತ್ತಾನೆ, ಶಿಷ್ಯೋತ್ತಮ ಮೇನಕೆ ಕಿವಿಗೆ ಧರಿಸಿದ ಓಲೆ ಡುಂಡ ಗಿದ್ದು ಅದು ನುಣಪಾದ ನೆಲದ ಮೇಲೆ ಜಾರುತ್ತದೆ, ಒಂದು ವೇಳೆ ನೀನು ಹೇಳಿದ ಹಾಗೆ ಅದು ಮೇನಕೆಯ ಕಾಲಿನ ಹತ್ತಿರ ಬಿದ್ದಿದರೆ ಅದು ಅವಳ ಕಾಲಿಗೆ ಚುಚ್ಚಿ ನೃತ್ಯ ಮಾಡಬೇಕಾದರೆ ಬಿಳುತಿದ್ದಳು ಅಲ್ಲವೇ ,,,, ಅದಕ್ಕೇ ಶುಕ್ರನು ಕೂಡ ಒಪ್ಪಿಕೊಂಡ, ಶುಕ್ರನಿಗೆ ತನ್ನ ತಪ್ಪಿನ ಅರಿವಾಯಿತು, ಆ ಗುರುವಿಗೇ ವಿನಯದಿಂದ ನಮಸ್ಕರಿಸಿ ಹೇಳುತ್ತಾನೆ, ನನಗೆ ಜ್ಞಾನವಿದೆ, ಆದರೇ ಗುರುಗಳೇ ತಮಗೇ ಆ ಸುಜ್ಞಾನದ ಜೊತೆಗೆ ಅನುಭವವು ಇದೆ, ಅದಕ್ಕೆ ನಾನು ತಮಗೇ ತಲೆ ಬಾಗುತ್ತೇನೆ, ನನ್ನದು ತಪ್ಪಾಯಿತು, ನನ್ನ ಗರ್ವವನ್ನು ನೀವು ಹೊಡೆದು ಓಡಿಸಿದಿರಿ,
ಹೀಗೆ ಪ್ರತಿಯೊಬ್ಬರ ಜೀವನದಲ್ಲೂ ಗುರುವೂ ಅವಶ್ಯ, ಅವನು ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ಕೊಡುತ್ತಾನೆ,
ಕಬೀರ್ ದಾಸರು ಒಂದು ಕಡೆ ಹೇಳುತ್ತಾರೆ गुरु गोविन्द दोऊ खड़े काको लागूं पायं।
बलिहारी गुरु आपने गोबिन्द दियो बताय, Guru and god both are here to whom should I first bow, All glory be unto the path to god who did bestow ಗುರು ಮತ್ತು ಗೋವಿಂದ ಬಂದು ಇಬ್ಬರೂ ಒಟ್ಟಿಗೆ ನಿಂತಾಗ ಮೊದಲು ನಾನು ಗುರುವಿಗೇ ನಮಸ್ಕಾರ ಮಾಡ್ತೇನೆ, ಯಾಕಂದ್ರೆ ಆ ಗುರುವು ನನಗೆ ದೇವರನ್ನ ತೋರಿಸಿದವನು ಆದ್ದರಿಂದ ಮೊದಲು ಗುರುವಿಗೇ ವಂದಿಸುತ್ತೇನೆ,
ಅದಕ್ಕೇ ಅಲ್ಲವೇ ವಿದ್ಯಾ ದದಾತಿ ವಿನಯಂ ಮತ್ತು ವಿದ್ಯಾ ವಿನಯೇನ ಶೋಭತೆ ಅಂತಾ ಹೇಳಿದ್ದು,
ಅದಕ್ಕೆ ನಾವು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಏರಿದರು ಗುರುಗಳನ್ನ ಹಾಗೂ ಅವರು ಹಾಕಿಕೊಟ್ಟ ಮಾರ್ಗವನ್ನ ಮರೆಯಬಾರದು.
ಮಹಾಭಾರತದಲ್ಲಿ ಅರ್ಜುನ ರುದ್ರದೇವರಿಂದ ಪಶುಪತವನ್ನು ಪಡೆದ ನಂತರ, ಇಂದ್ರ ಅರ್ಜುನನನ್ನ ಸ್ವರ್ಗಕ್ಕೆ ಆಹ್ವಾನಿಸಿ ರಥವನ್ನ ಕಳಿಸುತ್ತಾನೆ, ಆಗ ಅರ್ಜುನ ರಥವನ್ನ ಏರುವ ಮೊದಲು ತನ್ನ ತಂದೆ-ತಾಯಿ, ಹಿರಿಯರಿಗೆ ಮತ್ತು ಕೊನೆಯಲ್ಲಿ ತನ್ನ ಗುರುಗಳಿಗೆ ನಮಸ್ಕಾರ ಮಾಡುತ್ತಾನೆ,
गुरुमुखेन श्रुतः वेदः अनुश्रवः,ಯಾವುದೇ ಶಾಸ್ತ್ರವನ್ನ ನಾವು ಗುವಿನಿಂದಲೇ ತಿಳಿಯಬೇಕು ಎಂದು ಶಾಸ್ತ್ರವು ಹೇಳುತ್ತದೆ.
ಶಂಕರಾಚಾರ್ಯರು ಹೇಳುತ್ತಾರೆ “विदेशेषु मान्यः स्वदेशेषु धन्यःसदाचारवृत्तेषु मत्तो न चान्यः। लग्नं गुरोरंघ्रिपद्मे ಟ ततः किं ततः किं ततःकिंततः किम्। ಇದರ ಅರ್ಥ Even if you are considered great abroad, rich in your own place, And greatly regarded in virtues and life, If your mind does not bow at the Guru’s feet, What is the use? What is the use? And What is the use?
ವಿದೇಶದಲ್ಲಿ ತುಂಬಾ ಹೆಸರು ಮಾಡಿ, ಸ್ವದೇಶದಲ್ಲಿ ಆಚಾರ ಪಾಲಿಸಿ, ಎಲ್ಲರಿಗಿಂತ ಶ್ರೇಷ್ಟ ವ್ಯಕ್ತಿ ಎಂಬ ಹೆಸರು ಪಡೆದಿದ್ದರೂ ಸಹ ಗುರುಚರಣಳಲ್ಲಿ ಭಕ್ತಿ ಇಲ್ಲದವನ ಜೀವನ ನಿರರ್ಥಕ, ಗುರುವಿನ ಪಾದಗಳಲ್ಲಿ ಮನಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟ ಸಾಧ್ಯ.
ಇನ್ನೂ ಸ್ಕಂದ ಪುರಾಣದಲ್ಲಿ “ ಅಖಂಡಂ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ ಟ ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀ ಗುರುವೇ ನಮಃ ಟ ಅಂದರೆ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನ ಈಶ್ಲೋಕದಲ್ಲಿ ತಿಳಿಸಲಾಗಿದೆ. ಆದ್ದರಿಂದ ನಾವು ಗುರುಗಳಿಗೆ ವಂದಿಸಬೇಕು, ಗುರುಗಳಾದವರು ನಮ್ಮಿಂದ ಏನು ಬಯಸುವುದಿಲ್ಲ, ನಿಮ್ಮ ಗುರುಗಳು ಎಲ್ಲಾದರೂ ಸಿಕ್ಕಾಗ ಅವರನ್ನು ಮಾತನಾಡಿಸಿ, ಒಮ್ಮೆ ನಮಸ್ಕರಿಸಿ, ನಾನು ನಿಮ್ಮ ಶಿಷ್ಯ ಅಂತಾ ಹೇಳಿದಾಗ ಅವರಲ್ಲಿ ಆಗುವ ಆನಂದವೇ ಬೇರೆ,
ಗುರು ಏನು ಮಹಾ ಅಂತಾ ಈಗ ತಿಳಿಯಿತೋ ಈಗ ನಾನು ಮೇಲೆ ತಪ್ಪಾಗಿ ಬರೆದ ಶ್ಲೋಕವನ್ನ ಸರಿ ಮಾಡಿ ಬರೆಯುತ್ತಿದ್ದೇನೆ
ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೆ ನಮಃ
ಇಷ್ಟೇಲ್ಲಾ ಈ ಕಥೆ ಓದಿದ ನಂತರ ನಿಮ್ಮ ಗುರುಗಳು ನೆನಪಾದರೆ,,, ಹಾಗಾದ್ರೆ ತಡಾಯಾಕೆ ಅವರನ್ನ ಒಮ್ಮೆ ಹೋಗಿ ಭೇಟಿಯಾಗಿ,,, ಭೇಟಿಯಾಗಲು ಸಾಧ್ಯವಾಗದಿದ್ರೆ ಆ ಗುರುಗಳನ್ನ ದೂರವಾಣಿ ಯಿಂದ ಅಥವಾ ಸಾಮಾಜಿಕ ಜಾಲತಾಣಗಳಿಂದ ಸಂಪರ್ಕದಲ್ಲಿ ಇಡಿ,
ಶ್ರೀ ಗುರುಭ್ಯೋ ನಮಃ