ಡೆಸರ್ಟ್ ಫ್ಲವರ್’ ಇಂಗ್ಲಿಷ್ ಚಲನಚಿತ್ರ ಪ್ರದರ್ಶನ ಮತ್ತು ಉಪನ್ಯಾಸ

ಸಹಮತ ಫಿಲಮ್ ಸೊಸಯಟಿ ಮಂಗಳೂರು ಮತ್ತು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನವಂಬರ್ 30ರ ಭಾನುವಾರ ಮಧ್ಯಾಹ್ನ 2.00 ಗಂಟೆಯಿಂದ 6.00 ಗಂಟೆ ತನಕ ಮಂಗಳೂರು ಉರ್ವಸ್ಟೋರ್ ನಲ್ಲಿರುವ ಸಾಹಿತ್ಯ ಸದನದಲ್ಲಿ ಸೋಮಾಲಿಯನ್ ರೂಪದರ್ಶಿ ವಾರೀಸ್ ಡೇರಿಯ ಆತ್ಮಕತೆಯಾಧಾರಿತ .' ಡೆಸರ್ಟ್ ಫ್ಲವರ್' ಇಂಗ್ಲಿಷ್ ಚಲನಚಿತ್ರ ಪ್ರದರ್ಶನ ಮತ್ತು ಉಪನ್ಯಾಸ ಏರ್ಪಡಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ಕವಿ ಡಾ. ಅನುಪಮ ಎಚ್ ಎಸ್ .ಮತ್ತು ಮಂಗಳೂರಿನ ಚಿಂತಕ ಡಾ.ಬಿ.ಎಸ್ ಕಕ್ಕಿಲ್ಲಾಯ ಚಲನಚಿತ್ರದ ಬಗ್ಗೆ ಮತ್ತು ಮಹಿಳೆಯರನ್ನು ಅವರ ದೇಹವನ್ನು ಅಂಕೆಯಲ್ಲಿಡಲು ದೇಶದ ಜಗತ್ತಿನ ಪುರುಷ ಲೋಕ ಬಳಸುತ್ತಿರುವ ನಾನಾ ಬಗೆಯ ಕ್ರೂರ ಆಚರಣೆಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ವಾರೀಸ್ ಡೇರಿಯ ಆತ್ಮಕಥೆಯನ್ನು ಹಿರಿಯ ಪತ್ರಕರ್ತ ಆರ್ ಜಗದೀಶ್ ಕೊಪ್ಪರವರು 'ಮರುಭೂಮಿಯ ಹೂ' ಎಂದು ಕನ್ನಡಕ್ಕೆ ಅನುವಾದಿಸಿದ್ದು ಈ ಪುಸ್ತಕದ ಮಾರಾಟವೂ ಇರುತ್ತದೆ….ಚಲನಚಿತ್ರ ಆಸಕ್ತರಿಗೆ ಮತ್ತು ಸಾಹಿತ್ಯ ಪ್ರಿಯರಿಗೆ ಆದರದ ಸ್ವಾಗತ.

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x