ಈ ಬಾರಿಯ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಮಿನೆಸೊಟಾ ರಾಜ್ಯದ ರಾಚೆಸ್ಟರ್‍ನಲ್ಲಿ ನೆಲೆಸಿರುವ ಗುರುಪ್ರಸಾದ ಕಾಗಿನೆಲೆ ಅವರ ಕೃತಿ: ಹಿಜಾಬ್ ಇದಕ್ಕೆ ದೊರೆತಿದೆ.
ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ: ಆಗಸ್ಟ್ 13, 2018 ಸೋಮವಾರ ಅಪರಾಹ್ನ: 2.00 ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿ ಗಳಾಗಿ ಎಸ್. ದಿವಾಕರ್ ಆಗಮಿಸಲಿದ್ದಾರೆ.
ಕಾರ್ಯಕ್ರಮದ ವಿವರ
ಡಾ. ಹೆಚ್. ಶಾಂತಾರಾಮ್
ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ
ಬೆಳಿಗ್ಗೆ 9.30 ರಿಂದ
ನಿನಾದ
ಕನ್ನಡ ಕಾವ್ಯ ಗಾಯನ
ಪ| ರವಿಕಿರಣ್ ಮಣಿಪಾಲ, ಡಾ. ಶಶಿಕಾಂತ ಕೌಡೂರು ಮತ್ತು ಬಳಗ
ಉಪನ್ಯಾಸ
ಎಸ್. ದಿವಾಕರ್, ಬೆಂಗಳೂರು
ವಿಷಯ: ಕಾವ್ಯ ಎಂದರೇನು?
ಅಪರಾಹ್ನ: 2.00 ಗಂಟೆಗೆ
ಪ್ರಶಸ್ತಿ ಪ್ರದಾನ
ಗುರುಪ್ರಸಾದ ಕಾಗಿನೆಲೆ ಇವರಿಗೆ
ಕೃತಿ: ಹಿಜಾಬ್
ಮುಖ್ಯ ಅತಿಥಿ: ಎಸ್. ದಿವಾಕರ್
ದಿನಾಂಕ: ಆಗಸ್ಟ್ 13, 2018 ಸೋಮವಾರ
ಸ್ಥಳ: ಆರ್. ಎನ್. ಶೆಟ್ಟಿ ಹಾಲ್, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ
ಗುರುಪ್ರಸಾದ ಕಾಗಿನೆಲೆ: ಹುಟ್ಟಿದ್ದು ಶಿವಮೊಗ್ಗ. ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜೆಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವಿ. ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್‍ನಲ್ಲಿ ಪತ್ನಿ ಪದ್ಮ ಮತ್ತು ಮಕ್ಕಳಾದ ಪ್ರಣಿತ ಮತ್ತು ಪ್ರಭವರೊಂದಿಗೆ ವಾಸ. ಓಮ್‍ಸ್ಟೆಡ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ಎಮರ್ಜೆನ್ಸಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಪ್ರಕಟಿತ ಕೃತಿಗಳು: ‘ನಿರ್ಗುಣ’(2003) ಶಕುಂತಳಾ (2007), ದೇವರ ರಜಾ (2014) ಕಥಾಸಂಕಲನಗಳು. ‘ವೈದ್ಯ, ಮತ್ತೊಬ್ಬ’ ಲೇಖನ ಸಂಗ್ರಹ (2005)‘ಬಿಳಿಯ ಚಾದರ’ (2007), ಗುಣ (2010), ಹಿಜಾಬ್ (2017) ಕಾದಂಬರಿಗಳು.‘ಆಚೀಚೆಯ ಕತೆಗಳು’ (2006) ಬೇರು – ಸೂರು (ಅನಿವಾಸಿ ಅನುಭವ ಕಥನ) ಇವು ಸಂಪಾದಿತ ಕೃತಿಗಳು.‘ವೈದ್ಯ, ಮತ್ತೊಬ್ಬ’ ಕೃತಿಗೆ 2005ರ ಡಾ. ಪಿ. ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ, ‘ಗುಣ’ ಕಾದಂಬರಿಗೆ ಸೂರ್ಯನಾರಾಯಣ ಚಡಗ ಪ್ರಶಸ್ತಿ, ‘ಹಿಜಾಬ್’ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ ದೊರಕಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಯೋಜನೆಯಡಿಯಲ್ಲಿ ಮರಾಠಿ, ಕೊಂಕಣಿ ಮತ್ತು ತೆಲುಗು ಭಾಷೆಗೂ ಕೆಲವು ಕಥೆಗಳು ಅನುವಾದವಾಗಿವೆ. ಮಲೆಯಾಳಿ ಭಾಷೆಯ ಪತ್ರಿಕೆ ‘ಚಂದ್ರಿಕಾ’ ದಲ್ಲಿ ಕಥೆ ‘ಅಲಬಾಮಾದ ಅಪಾನವಾಯು’ ಕಥೆ ಮಲೆಯಾಳಂ ಅನುವಾದ ಪ್ರಕಟವಾಗಿದೆ. ತನ್ನ ವೃತ್ತಿಯೊಂದಿಗೆ ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಗುರುಪ್ರಸಾದ ಕಾಗಿನೆಲೆ ಯವರ ‘ಹಿಜಾಬ್’ ಕನ್ನಡ ಕಾದಂಬರಿ ಲೋಕಕ್ಕೊಂದು ಅಪೂರ್ವ ಕೊಡುಗೆ.