ಡಾ.ಬಸವಲಿಂಗ ಪಟ್ಟದೇವರ ಸಾಹಿತ್ಯಿಕ ಕೊಡುಗೆ: ಸಂಜೀವಕುಮಾರ ಶಿವಪುತ್ರಪ್ಪಾ ನಡುಕರ


Sanjeevkumar Nadukar

ಕರ್ನಾಟಕದಲ್ಲಿ ಬಸವತತ್ವ ಚಿಂತನೆ ಧರ್ಮ ಪ್ರಚಾರದ ಜೊತೆಗೆ ಅನೇಕ ಮಠಾಧೀಶರು ಸಾಹಿತ್ಯದ ಬರವಣಿಗೆಯಲ್ಲಿ ಸಹ ತೊಡಗಿದ್ದಾರೆ. ಅವರಲ್ಲಿ ಡಾ.ಜಚನಿ, ಡಾ.ಮೂಜಗಂ, ಡಾ.ಅನ್ನದಾನೀಶ್ವರ ಸ್ವಾಮಿಗಳು, ಡಾ.ಮುರುಘ ಶರಣರು ಅವರಂತೆ ಡಾ. ಬಸವಲಿಂಗ ಪಟ್ಟದೇವರು ಕೂಡಾ ಒಬ್ಬರು. ಬಸವಲಿಂಗ ಪಟ್ಟದೇವರು ವೈಚಾರಿಕ ಕ್ರಾಂತಿಯ ಮೂಲಕ ಸಾಮಾಜಿಕ ಚಿಂತನೆಯ ಪ್ರಗತಿಪರ ಚಿಂತಕರು ಹೌದು. ಅವರು ಬಸವ ತತ್ವ ಚಿಂತನೆ ಸಾಹಿತ್ಯವನ್ನು ರಚಿಸಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಜೊತೆಗೆ ಸಾಹಿತ್ಯದ ರಚನೆಗೂ ತೊಡಗಿದ್ದಾರೆ.

ಬಸವಲಿಂಗ ಪಟ್ಟದೇವರು ಮೂಲತಃ ಕವಿಗಳು ಅವರು ವಿದ್ಯಾರ್ಥಿ ದೆಸೆಯಲ್ಲಿ ಚೆನ್ನಬಸವ ಪಟ್ಟದೇವರು. ಜಯದೇವಿತಾಯಿ ಲಿಗಾಡೆ, ಬಸವರಾಜ ಸಂಗಮದ, ಶಾಂತರಸರ ಒಡನಾಟದಲ್ಲಿ ಬೆಳೆದಿದ್ದಾರೆ. ಹೀಗಾಗಿ ಚೆಂಬೆಳಕು ಕವನ ಸಂಕಲನದಲ್ಲಿ ಇವರ ಹಲವಾರು ಕವಿತೆಗಳು ಪ್ರಕಟಗೊಂಡಿವೆ. ಶಾಂತಿಕಿರಣ ಪತ್ರಿಕೆಯ ಗೌರವ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದುವರೆಗೂ ಇವರ ಹದಿಮೂರು ಕೃತಿಗಳು ಪ್ರಕಟಗೊಂಡಿವೆ. ಕವನದ ಮೂಲಕ ಗದ್ಯದ ಕಡೆಗೆ ಹೊರಳಿದರು. ಇದರಲ್ಲಿ ಶರಣ ವಚನ, ಬಸವತತ್ವ ಚಿಂತನೆಗಳ ಕುರಿತಾದ ಕೃತಿಗಳೇ ಹೆಚ್ಚಾಗಿವೆ. ಅವರ ಹದಿಮೂರು ಕೃತಿಗಳಲ್ಲಿ ಒಂಬತ್ತು ಗದ್ಯ ಕೃತಿಗಳು ಮತ್ತು ನಾಲ್ಕು ಸಂಪಾದನೆಗಳು ಸೇರಿಕೊಂಡಿವೆ.

bhalkisamsthana-matha

channabasava_pattadevaru

ಇವರು ಈ ಕೃತಿಗಳಲ್ಲದೇ ಬಸವ ಬೆಳಗು, ಮಹಾಮನೆ, ಪ್ರಸಾದ, ಬಸವಪಥ, ಶಾಂತಿಕಿರಣದ ಸಂಪಾದಕೀಯ ಲೇಖನಗಳು ಪ್ರಕಟಗೊಂಡಿವೆ. ಅವುಗಳ ಬಿಡಿ ಬರಹಗಳೇ ಅಧಿಕವಾಗಿವೆ. ಅವೇ ಒಂದು ಸಮಗ್ರ ಸಂಪುಟವಾಗುತ್ತದೆ. ಇದಲ್ಲದೇ ಜಿಲ್ಲೆಯ ಹೊರ ಒಳಗು ರಾಜ್ಯದ ಅನೇಕ ಅಭಿನಂದನಾ ಗ್ರಂಥಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಇವಲ್ಲದೇ ಅಭಿನಂದನ ಗ್ರಂಥ, ಸ್ಮರಣ ಸಂಚಿಕೆ, ಬೇರೆ ಬೇರೆ ಗ್ರಂಥಗಳಲ್ಲಿ ಸಂದೇಶಗಳು ಇವೆ. ಈ ಸಂದೇಶಗಳು ಸರ್ವಕಾಲಿಕ ಪ್ರಸ್ತುತ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿವೆ. ಅವರ ಒಟ್ಟು ಹದಿಮೂರು ಕೃತಿಗಳಲ್ಲಿ ತಮ್ಮ ಗುರುಗಳಾದ ಚೆನ್ನಬಸವಪಟ್ಟದೇವರ ಕುರಿತು ಸಮಗ್ರ ನೋಟವನ್ನು ಇಲ್ಲಿ ದಾಖಲಿಸಿದ್ದಾರೆ. ಚೆನ್ನಬಸವ ಪಟ್ಟದೇವರು ಒಡನಾಟ-ಬಂಧುತ್ವ ಅವರ ಸೇವೆಗಳನ್ನು ಕಣ್ಣಾರೆ ಕಂಡವರು ಹಲವಾರು ಹಿರಿಯರ ಸಮಕಾಲಿನ ಒಡನಾಟವನ್ನು ಸಮಗ್ರವಾಗಿ ದಾಖಲಿಸಿದ್ದಾರೆ. 

ಇಷ್ಟಲಿಂಗ ಪೂಜಾ ವಿಧಾನ, ಬಸವ ನೈವೆದ್ಯ, ಶರಣ ಸಾಹಿತ್ಯ ದರ್ಪಣ, ಧರ್ಮ ಗುರು ಬಸವಣ್ಣ, ಮತ್ತು ಅಷ್ಟಾವರಣ, ಬಸವ ತತ್ವಗಳಾಚರಣೆ ಮತ್ತು ನಾವು, ಚೆನ್ನಬಸವ ಪಟ್ಟದೇವರು, ಬಸವ ಚಿಂತನ, ಬಸವ ಸಂತತಿ, ಬಸವ ಧರ್ಮ ದರ್ಪಣ, ದಿನಕ್ಕೊಮ್ಮೆ ಶರಣರ ನೆನೆದೇನ, ಬಸವ ಜ್ಯೋತಿ, ಶಿವಶರಣೆಯರ ವಚನಗಳು, ಬಸವ ವಚನ ಸಿಂಚನ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಈ ಕೃತಿಗಳು ತಮ್ಮ ಅನುಭವ ಧರ್ಮದ ತತ್ವದ ಆಧಾರದ ಮೇಲೆ ರಚಿಸಿದ್ದು ಕಂಡುಬರುತ್ತದೆ. ವಚನ ಸಾಹಿತ್ಯ ಸರ್ವಕಾಲಿಕ ಜೀವನ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಧರ್ಮದ ಬೆಳಗನ್ನು ಸಾಹಿತ್ಯದ ಮೂಲಕ ದಾಖಲಿಸಿ ವಚನ ಸಾಹಿತ್ಯಕ್ಕೆ ಪಟ್ಟದ್ದೇವರು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. 

ವಚನ ಸಂಸ್ಕøತಿ ಸಕಲ ಜೀವಾತ್ಮರಿಗೆ ಲೇಸ ಬಯಸುವ ಚಿಂತನೆಗಳು ಅದರಲ್ಲಿ ಅಡಗಿವೆ. ಜನ ಸಾಮಾನ್ಯರ ವ್ಯಕ್ತಿಯ ವಿಕಾಸಕ್ಕೆ ಈ ಕೃತಿಗಳು ದಾರಿ ದೀಪವಾಗಿವೆ. 1984 ರಿಂದಲೇ ಪುಸ್ತಕ ಪ್ರಕಟಣೆಗೆ ತೊಡಗಿದ ಬಸವಲಿಂಗ ಪಟ್ಟದೇವರು 13 ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದು ಅವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. 

ಆಕರ ಗ್ರಂಥಗಳು:
1.    ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದೇವರು-ಡಾ.ಗುರುಲಿಂಗಪ್ಪಾ ಧಬಾಲೆ
2.    ಕಲ್ಯಾಣ ದೀಪ್ತಿ-ಡಾ.ಬಸವಲಿಂಗ ಪಟ್ಟದೇವರ ಅಭಿನಂದನಾ ಗ್ರಂಥ
3.    ಬಸವ ತತ್ವದ ನಿಜಾಚರಣೆ-ಡಾ.ಬಸವಲಿಂಗ ಪಟ್ಟದೇವರು.
4.    ಬಸವ ಸಂತತಿ-ಡಾ.ಬಸವಲಿಂಗ ಪಟ್ಟದೇವರು

-ಸಂಜೀವಕುಮಾರ ಶಿವಪುತ್ರಪ್ಪಾ ನಡುಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x