ಡಾ||ಕ್ಲೀನ್, ವಾಷ್‍ರೂಮ್ ಟು ವಾರ್ಡ್‍ರೋಬ್

ಲಾಂಡ್ರಿ, ಡ್ರೈಕ್ಲೀನಿಂಗ್ ಈಗ ನಿಮ್ಮ ಬೆರಳ ತುದಿಯಲ್ಲಿ 

ಭಾರತದ ಮೊಟ್ಟ ಮೊದಲ ಆನ್‍ಲೈನ್ ಲಾಂಡ್ರಿ ಬುಕಿಂಗ್ ವ್ಯವಸ್ಥೆಯನ್ನು ಬೆಂಗಳೂರು ಮೂಲದ ಕನ್ನಡಿಗ, ಜರಗನಹಳ್ಳಿ ಕಾಂತರಾಜುರವರು “ಡಾ||ಕ್ಲೀನ್, ವಾಷ್‍ರೂಮ್ ಟು ವಾರ್ಡ್‍ರೋಬ್” ಎಂಬ ಲಾಂಡ್ರಿ ಸರ್ವಿಸಸ್ ಸಂಸ್ಥೆಯನ್ನು ಪ್ರಾರಂಭಿಸಿ ಅಭಿವೃದ್ದಿಪಡಿಸಿದ್ದಾರೆ. ಇದರ ಮೂಲಕ ಗ್ರಾಹಕರು ತಮ್ಮ ದಿನನಿತ್ಯ ಬಳಕೆಯ ಎಲ್ಲಾ ತರಹದ ಬಟ್ಟೆಗಳನ್ನು ಕುಳಿತಲ್ಲಿಯೇ ಕೆಲವೇ ಸೆಕೆಂಡುಗಳಲ್ಲಿ ತಮ್ಮ ಸ್ಮಾರ್ಟ್‍ಫೋನ್‍ಗಳನ್ನು ಬಳಸಿ ಲಾಂಡ್ರಿ ಬುಕ್ ಮಾಡಿ ಸೇವೆಯನ್ನು ತಮಗೆ ಬೇಕಾದ ದಿನ ಮತ್ತು ಸಮಯಕ್ಕೆ ಪಡೆಯಬಹುದಾಗಿದೆ. 

ಇಂದಿನ ಯಾಂತ್ರಿಕ ಬದುಕಿನಲ್ಲಿ ಸಮಯದ ಅಭಾವದಿಂದ ತಮ್ಮ ದೈನಂದಿನ ಅವಶ್ಯಕತೆಯಾದ ಬಟ್ಟೆ ಒಗೆಯಲು ಮತ್ತು ಇಸ್ತ್ರಿ ಮಾಡಿಕೊಳ್ಳಲು ಹೆಣಗುವ  ಬೆಂಗಳೂರಿಗರಿಗೆ ಇದೊಂದು ವರದಾನವಾಗಿದೆ. ಈಗಾಗಲೇ ದಕ್ಷಿಣ ಬೆಂಗಳೂರಿನ ಜೆಪಿನಗರ, ಬನಶಂಕರಿ, ಗಿರಿನಗರ, ರಾಜರಾಜೇಶ್ವರಿನಗರ, ಜಯನಗರ, ಜರಗನಹಳ್ಳಿ ಮತ್ತು ಕನಕಪುರ ರಸ್ತೆಯಲ್ಲಿ ಅಪಾರ ಅಪಾರ್ಟ್‍ಮೆಂಟ್‍ಗಳಿರುವ ಗುಬ್ಬಲಾಳ ಮತ್ತು ರಘುವನಹಳ್ಳಿಯಲ್ಲಿ ಕಂಪನಿಯ 10 ಕಲೆಕ್ಷನ್ ಪಾಯಿಂಟ್‍ಗಳನ್ನು ತೆರೆದು ತನ್ನ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಪ್ರತಿಯೊಂದು ವಾರ್ಡಗಳಲ್ಲಿ ಒಂದೊಂದು ಕಲೆಕ್ಷನ್ ಪಾಯಿಂಟ್‍ಗಳನ್ನು ತೆರೆಯುವ ಕನಸನ್ನು ಸಂಸ್ಥೆಯವರು ಹೊಂದಿದ್ದಾರೆ.

ಜರಗನಹಳ್ಳಿ ಕಾಂತರಾಜು

ಬೆಂಗಳೂರಿನ ಎಲ್ಲಾ ಅಪಾರ್ಟ್‍ಮೆಂಟುಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಅತಿಯಾಗಿದೆ. ಕಾಲೇಜು ವಿಧ್ಯಾರ್ಥಿಗಳು ಮತ್ತು ಪಿಜಿಗಳಲ್ಲಿ ವಾಸಿಸುವವರಿಗೆ ಈ ಸೇವೆಯು ಬಹಳ ಉಪಯುಕ್ತವಾಗಿದೆ. ಮನೆಗಳಲ್ಲಿ ಬಟ್ಟೆ ಓಗೆಯಲು ಬೇಕಾದ ವಾಷಿಂಗ್‍ಮಷಿನ್. ಮ್ಯಾನ್‍ಪವರ್, ವಿದ್ಯುತ್, ನೀರು, ಸೋಪುಪುಡಿ, ಬಟ್ಟೆಗಳನ್ನು ಒಣಗಿಸಲು ಜಾಗ, ಇದಾದ ಮೇಲೆ ಇಸ್ರ್ತಿ ಮಾಡಲು ಹಣ ಮತ್ತು ಅತಿಮುಖ್ಯವಾಗಿ ಈ ಎಲ್ಲಾ ಪ್ರಕ್ರಿಯೆಗೆ ಬೇಕಾದ ಬಹಳಷ್ಟು ಸಮಯ ಎಲ್ಲವೂ ಇದರಿಂದ ಉಳಿತಾಯವಾಗುತ್ತದೆ. ಇವೆಲ್ಲವಕ್ಕೂ ಹೋಲಿಸಿದರೆ ಡಾ||ಕ್ಲೀನ್‍ನ ಸೇವಾದರಗಳು ನಿಮ್ಮ ತಿಂಗಳ ಬಜೆಟ್‍ನಲ್ಲಿ ಅರ್ಧದಷ್ಟು ಉಳಿಸಬಹುದಾಗಿದೆ. ಈ ಎಲ್ಲಾ ಗ್ರಾಹಕನ ಪರಿಸ್ಥಿಯನ್ನು ಬಹು ಸೂಕ್ಷ್ಮವಾಗಿ ಅಧ್ಯಯನ ಮಾಡಿ “ಡಾ||ಕ್ಲೀನ್, ವಾಷ್‍ರೂಮ್ ಟು ವಾರ್ಡ್‍ರೋಬ್” ಲಾಂಡ್ರಿ ಸೇವೆಯನ್ನು ಪ್ರಾರಂಭಿಸಿದ್ದಾಗಿ ಕಾಂತರಾಜು ತಿಳಿಸುತ್ತಾರೆ.  

ಡಾ||ಕ್ಲೀನ್ ಎಕ್ಸ್ಪ್ರೆಸ್ ಸರ್ವಿಸ್:

ಡಾ||ಕ್ಲೀನ್‍ನ ಸೇವೆಯನ್ನು ಪಡೆಯಲು ಸಂಸ್ಥೆಯು ಮೂರು ಸುಲಭ ವಿಧಾನಗಳನ್ನು ಗ್ರಾಹಕರಿಗೆ ನೀಡಿದೆ. ಆಂಡ್ರಾಯ್ಡ್ ಮೂಲದ ಸ್ಮಾರ್ಟ್‍ಪೋನ್‍ನಲ್ಲಿ ಗೂಗಲ್ ಪ್ಲೇ ಸ್ಟೋರ್‍ಗೆ ಹೋಗಿ  “drcleanindia”ಎಂದು ಟೈಪ್ ಮಾಡಿದರೆ ಡಾ||ಕ್ಲೀನ್‍ನ ಆಪ್ ಉಚಿತವಾಗಿ ಡೌನ್‍ಲೋಡ್ ಆಗುತ್ತದೆ. ಅದರ ಸೂಚನೆಯಂತೆ ಕೇವಲ 10ಸೆಕೆಂಡುಗಳಲ್ಲಿ ಲಾಂಡ್ರಿ ಬುಕ್ ಮಾಡಬಹುದಾಗಿದೆ. ಮತ್ತು ಭಾರತದಲ್ಲೇ ಪ್ರಪ್ರಥಮವಾಗಿ 24/7 ಲಾಂಡ್ರಿ ಗ್ರಾಹಕ ಸೇವೆಯನ್ನು ಸಹ ಡಾ||ಕ್ಲೀನ್ ಗ್ರಾಹಕರಿಗೆ ನೀಡಿದೆ. ದಿನದ 24 ಗಂಟೆಗಳೂ ಸಹ 08880077745 ಈ ನಂಬರಿಗೆ ಕರೆಮಾಡಿ ಲಾಂಡ್ರಿ ಬುಕ್ ಮಾಡಬಹುದಾಗಿದೆ. ಇದರಿಂದ ರಾತ್ರಿ ಪಾಳೇಯದಲ್ಲಿ ಕಾರ್ಯನಿರ್ವಹಿಸಿವ ಬಹಳಷ್ಟು ಮಂದಿಗೂ ಇವರ ಸೇವೆ ದೊರೆಯುತ್ತದೆ. ಮತ್ತು www.drcleanindia.com ನಲ್ಲಿ ಲಾಗ್‍ಇನ್ ಆಗಿ ಉಚಿತವಾಗಿ ರಿಜಿಸ್ಟರ್ ಮಾಡಿಕೊಂಡು ಕುಳಿತಲ್ಲೇ ಲಾಂಡ್ರಿ ಬುಕ್ ಮಾಡಬಹುದಾಗಿದೆ. ಇದನ್ನು ಹೊರತು ಪಡಿಸಿ ಸಂಸ್ಥೆಯ ಅಧಿಕೃತ ಕಲೆಕ್ಷನ್ ಪಾಯಿಂಟ್‍ಗಳಲ್ಲೂ ನೇರವಾಗಿ ಹೋಗಿ ಬಟ್ಟೆಗಳನ್ನು ಲಾಂಡ್ರಿಗೆ ನೀಡಬಹುದಾಗಿದೆ. ಗ್ರಾಹಕರು ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಡಾ||ಕ್ಲೀನ್‍ನ ಕಲೆಕ್ಷನ್ ಬಾಯ್ಸ್ ನಿಮ್ಮ ಬಾಗಿಲಿಗೆ ಹಾಜರಾಗುತ್ತಾರೆ. ಅಲ್ಲಿಂದ ಸರಿಯಾಗಿ 24 ಗಂಟೆಯೊಳಗೆ ಗರಿ-ಗರಿಯಾದ ಧರಿಸಲು ಸಿದ್ದವಾದ ನಿಮ್ಮ ಉಡುಪುಗಳು ಪುನಃ ನಿಮ್ಮ ಮನೆ ಬಾಗಿಲಿಗೆ ತಂದು ತಲುಪಿಸಲಾಗುತ್ತದೆ.

ವಿಶಿಷ್ಟವಾದ ಲಾಂಡ್ರಿ ಚೆಸ್ಟ್‍ಗಳು:

ಎಕ್ಸ್‍ಪ್ರೆಸ್ ಸೇವೆಯನ್ನು ಪಡೆಯುವಾಗ ಬಟ್ಟೆಗಳನ್ನು ಕಲೆಕ್ಷನ್ ಬಾಯ್ಸ್‍ಗಳಿಗೆ ನೀಡಲು ಮತ್ತು ಅವರಿಂದ ವಾಪಸು ಪಡೆಯಲು ಮನೆಯಲ್ಲಿ ಯಾರಾದರೂ ಇರಲೇಬೇಕಾಗುತ್ತದೆ. ಬ್ಯುಸಿನೆಸ್‍ನಲ್ಲಿ ಮತ್ತು ಕಂಪನಿಯ ಡೇ ಅಂಡ್ ನೈಟ್ ಶಿಫ್ಟ್‍ಗಳಲ್ಲಿ ಸದಾ ಬ್ಯುಸಿಯಾಗಿರುವವರಿಗೂ ಸಹ ಪರಿಹಾರ ಇಲ್ಲಿದೆ. ಇದಕ್ಕಾಗಿ ಡಾ||ಕ್ಲೀನ್ ಸಂಸ್ಥೆಯು ಸುಂದರವಾದ ಲಾಂಡ್ರಿ ಚೆಸ್ಟ್‍ಗಳನ್ನು ಸಿದ್ದಪಡಿಸಿದೆ, ಅವುಗಳನ್ನು ಗ್ರಾಹಕರ ಮನೆಯ ಹೊರಗೆ ವಾಲ್‍ಮೌಂಟ್ ಮಾಡಲಾಗುತ್ತದೆ. ಅದರ ಒಂದು ಕೀ ಗ್ರಾಹಕರ ಬಳಿ ಮತ್ತೊಂದು ಸಂಸ್ಥೆಯಲ್ಲಿರುತ್ತದೆ. ಇದರಲ್ಲಿ ಗ್ರಾಹಕರು ಲಾಂಡ್ರಿಗೆ ನೀಡಬೇಕಾದ ಬಟ್ಟೆಗಳನ್ನು ತುಂಬಿ  ಬೀಗಹಾಕಿ ಗ್ರಾಹಕ ಸೇವಾ ಕೇಂದ್ರಕ್ಕೆ ಒಂದು ಕರೆಮಾಡಿ ತಿಳಿಸಿದರೆ ಸಾಕು, 24 ಗಂಟೆಗಳಲ್ಲಿ ಲಾಂಡ್ರಿ ಚೆಸ್ಟ್‍ನಲ್ಲಿ ಬಟ್ಟೆಗಳು ಧರಿಸಲು ಸಿದ್ದವಾಗಿರುತ್ತದೆ. ಇದು ಡಾ||ಕ್ಲೀನ್ ಸಂಸ್ಥೆಯ ವಿಶಿಷ್ಟ ಸೇವೆಯಾಗಿದೆ ಎಂದು ಡಾ||ಕ್ಲೀನ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಮತಿ ವೀಣಾ ವೆಂಕಣ್ಣ ತಿಳಿಸುತ್ತಾರೆ.

ದೋಬಿ ಅಂಗಡಿಗಳು ಮತ್ತು ವ್ಯಾಪಾರಸ್ಥರಿಗೆ ವರದಾನ:

ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ದೋಬಿ ಅಂಗಡಿಯವರು ಮತ್ತು ಜನರಲ್ ಸ್ಟೋರ್ಸ್, ಮೋಬೈಲ್ ಕರೆನ್ಸಿ ಅಂಗಡಿ, ಹಾಲು ಮತ್ತು ತರಕಾರಿ ಅಂಗಡಿಗಳು, ಸಲೂನ್‍ಗಳು, ಬ್ಯೂಟಿ ಪಾರ್ಲರ್‍ಗಳು, ಬೇಕರಿ-ಕಾಂಡಿಮೆಂಟ್ಸ್‍ಗಳು ಹಾಗೂ ಇನ್ನಿತರೆ ದಿನಬಳಕೆ ವಸ್ತುಗಳ ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಂಗಡಿಗಳನ್ನೇ ಡಾ||ಕ್ಲೀನ್ ಕಂಪನಿಯ ಕಲೆಕ್ಷನ್ ಪಾಯಿಂಟ್‍ಗಳಾಗಿ ಪರಿವರ್ತನೆ ಮಾಡಿ ಅವರ ದಿನದ ಸಂಪಾದನೆಯನ್ನು ದುಪ್ಪಟ್ಟು ಮಾಡುವ ಕಾರ್ಯವೂ ಸಹ ಈ ಸಂಸ್ಥೆಯಡಿ ಮಾಡಲಾಗುತ್ತಿದೆ. ಇದರಿಂದ ಪ್ರಸಕ್ತ  ಅಂಗಡಿ ವ್ಯಾಪಾರ ನಡೆಸುತ್ತಿರುವವರಿಗೂ ತಂತ್ರಜ್ಞಾನದೊಂದಿಗೆ ಮುನ್ನಡೆಯಲು ಹಾಗೂ ಕಾಲಮಾನಕ್ಕೆ ತಕ್ಕಂತೆ ವ್ಯವಹರಿಸಲು ಅನುಕೂಲವಾಗುತ್ತದೆ ಮತ್ತು ಇದರಿಂದ ಅವರ ವ್ಯಾಪಾರವೂ ವೃದ್ದಿಸುತ್ತದೆ. ಈಗಾಗಲೇ ಅಂಗಡಿಗಳನ್ನು ಸಂಸ್ಥೆಯ ಅಧೀಕೃತ ಕಲೆಕ್ಷನ್ ಪಾಯಿಂಟ್‍ಗಳಾಗಿ ಮಾರ್ಪಾಡುಮಾಡುವ ಕಾರ್ಯ ನಡೆಯುತ್ತಿದೆ ಇದಕ್ಕಾಗಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಸಹ ಹೊರಡಿಸಲಾಗುತ್ತದೆ ದಯಮಾಡಿ ಎಲ್ಲರೂ ಇದರ ಪ್ರಯೋಜನವನ್ನು ಪಡೆಯಬೇಕು ಎನ್ನುತ್ತಾರೆ ಕಲೆಕ್ಷನ್ ಪಾಯಿಂಟ್ ಮ್ಯಾನೇಜರ್ ಶ್ರೀನಿವಾಸ ಗೌಡ.

ಎಕ್ಸ್ಕ್ಲೂಸಿವ್ ಗಾರ್ಮೇಂಟ್ಸ್ಗಳು ಮತ್ತು ಷೂಗಳು:

ಎಕ್ಸ್‍ಕ್ಲೂಸಿವ್ ಗಾರ್ಮೇಂಟ್ಸ್ಗಳು ಅಂದರೆ, ಬೆಡ್‍ಶೀಟ್, ಬ್ಲಾಂಕೆಟ್ಸ್, ಕರ್ಟನ್ಸ್, ಕಾರ್ಪೆಟ್ಸ್ ಮತ್ತು ಷೂಗಳನ್ನು ಸಹ ಸ್ವಚ್ಛಗೊಳಿಸಲು ನಮ್ಮ ಸಂಸ್ಥೆಯು ನುರಿತ ತಜ್ಞರನ್ನು ಹೊಂದಿದೆ. ಇದರಿಂದ ಮನೆಗಳಲ್ಲಿ ಒಗೆಯಲು ಕಷ್ಟವಾಗುವಂತಹ ಮತ್ತು ಅನುಕೂಲತೆಗಳಿಲ್ಲದ ದೊಡ್ಡ-ದೊಡ್ಡ ಬಟ್ಟೆಗಳನ್ನು ಗ್ರಾಹಕರು ಇಲ್ಲಿ ನೀಡಬಹುದಾಗಿದೆ.

ಪ್ರತಿದಿನಕ್ಕೆ ಐದು ಸಾವಿರ ಬಟ್ಟೆಗಳನ್ನು ಸಿದ್ದಗೊಳಿಸುವ ಸಂಪೂರ್ಣ ತಂತ್ರಜ್ಞಾನಭರಿತ ವಾಷಿಂಗ್‍ಯುನಿಟ್‍ನ್ನು ಡಾ||ಕ್ಲೀನ್ ಹೊಂದಿದೆ. ಗ್ರಾಹಕರ ಅವಶ್ಯಕತೆ ಮತ್ತು ಬೇಡಿಕೆಗನುಗುಣವಾಗಿ ಇದರ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲಾಗುತ್ತದೆ.   ಈ ಎಲ್ಲಾ ಸೇವೆಯನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಸಂಸ್ಥೆಯಿಂದ ಈಗಾಗಲೇ ಸಾಕಷ್ಟು ನಿರುದ್ಯೋಗಿಗಳಿಗೆ ಕೆಲಸ ನೀಡಿರುವುದು ಬಹಳ ತೃಪ್ತಿ ತಂದಿದೆ ಎನ್ನುತ್ತಾರೆ ಸಂಸ್ಥೆಯ ಮಾಲೀಕರಾದ ಜರಗನಹಳ್ಳಿ ಕಾಂತರಾಜು. 

ಡಾ||ಕ್ಲೀನ್, ವಾಷ್‍ರೂಮ್ ಟು ವಾರ್ಡ್‍ರೋಬ್
ನಂ.8/9, 80ಅಡಿ ಬಿ.ಡಿ.ಎ ರಸ್ತೆ, ಬನಶಂಕರಿ 6ನೇ ಹಂತ
ರಘುವನಹಳ್ಳಿ, ಕನಕಪುರ ರಸ್ತೆ, ಬೆಂಗಳೂರು-560078
+91 99026 66492 / 99809 00860 / ಇಮೇಲ್: admin@drcleanindia.com


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x