ಸಂಪಾದಕೀಯ

ದ್ವಿತೀಯ ಸಂಚಿಕೆ ನಿಮ್ಮ ಮಡಿಲಿಗೆ….

 

ಸಹೃದಯಿಗಳೇ,

ಪಂಜುವಿನ ದ್ವಿತೀಯ ಸಂಚಿಕೆಯನ್ನು ನಿಮ್ಮ ಮಡಿಲಿಗೆ ಹಾಕುವ ಮೊದಲು ಪಂಜುವಿನ ಮೊದಲ ಸಂಚಿಕೆಗೆ ನೀವು ತೋರಿದ ಪ್ರೀತಿ ಪ್ರೋತ್ಸಾಹ ಸಹಕಾರಕ್ಕೆ ನಾನು ತುಂಬು ಹೃದಯದ ವಂದನೆಗಳನ್ನು ಸಲ್ಲಿಸಬೇಕು. ನಿಮ್ಮ ಪ್ರೀತಿ ಪಂಜುವಿನ ಮೇಲೆ ಹೀಗೆಯೇ ಇರಲಿ.

ಒಮ್ಮೆ ಅಂತರ್ಜಾಲ ತಾಣವೊಂದರಲ್ಲಿ ಲೇಖನವೊಂದನ್ನು ಬರೆದಿದ್ದಾಗ ಆತ್ಮೀಯರೊಬ್ಬರು ಕರೆ ಮಾಡಿ "ನೀವು ಬರೆದಿರೋದನ್ನು ಓದುಗರು ಓದ್ತಾ ಇರ್ತಾರೆ. ಸುಮ್ಮಸುಮ್ಮನೆ ಏನೇನೋ ಬರೆಯಲು ಹೋಗಬೇಡಿ." ಎಂದು ಎಚ್ಚರಿಸಿದ್ದರು. ಅಂತರ್ಜಾಲ ತಾಣದಲ್ಲಿ ಬರೆಯುವ ಪ್ರಕಟಿಸುವ ಸ್ವಾತಂತ್ರ್ಯವಿದೆಯೆಂದು ನಮ್ಮಿಚ್ಚೆಯಂತೆ ಬರೆಯುತ್ತಾ ಪ್ರಕಟಿಸುತ್ತಾ ಹೋದರೆ ಬರೆಯುವವರ ಬರೆಯುವ ಬಂಡವಾಳ ಓದುಗರಿಗೆ ತಕ್ಷಣ ಗೊತ್ತಾಗಿಬಿಡುತ್ತದೆ ಎಂದು ಅವರ ಮಾತಿನಿಂದ ನನಗೆ ತಿಳಿದಿತ್ತು. ಪ್ರಕಟಿಸುವ ಸ್ವಾತಂತ್ರ್ಯವನ್ನಷ್ಟೇ ಪಡೆದಿರುವ ಪಂಜುಗೆ ನಮ್ಮ ನಡುವಿನ ಆತ್ಮೀಯ ಬರಹಗಾರರು ಬರೆದು ಕೊಡುವ ಬರಹಗಳೇ ಪಂಜುವಿನ ಸತ್ವ ಬಂಡವಾಳ. ಆ ಸತ್ವಗಳು ನಲ್ಮೆಯ ಓದುಗರಾದ ನಿಮಗೆ ರುಚಿಸಬೇಕಾದರೆ ಹೆಚ್ಚು ಹೆಚ್ಚು ಚಂದದ ಬರಹಗಳನ್ನು ಪಂಜುಗೆ ಬರಬೇಕು. ಆ ಬರೆಯುವ ಕಾರ್ಯ ನಿಮ್ಮಿಂದಲೂ ಸಾಧ್ಯ. ಕಂಪ್ಯೂಟರ್ ನ ಕೀಲಿ ಮಣೆ ಒತ್ತುವ ಮೊದಲು ಹತ್ತು ಬಾರಿ ಯೋಚಿಸಿ ನಮಗೆ ಚಂದದ ಲೇಖನಗಳ ಕಳುಹಿಸಿಕೊಡಿ. ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ ನಾವಿರುತ್ತೇವೆ. 

ಪಂಜುವಿನ ಈ ವಾರದ ಸಂಚಿಕೆಯಲ್ಲಿ ನಲ್ಮೆಯ ಗೆಳೆಯ ಗೆಳತಿಯರ ಚಂದದ ಕತೆ ಕವನ ಲೇಖನ ಇತ್ಯಾದಿಗಳು ಪ್ರಕಟವಾಗುತ್ತಿವೆ. ಜೊತೆಗೆ ಪಂಜು ಮೊದಲ ಬಾರಿಗೆ ಸಂದರ್ಶನಗಳನ್ನೂ ಸಹ ಪ್ರಕಟಿಸುವತ್ತ ಹೆಜ್ಜೆ ಇಟ್ಟು "ಮತ್ತೆ ಮತ್ತೆ ತೇಜಸ್ವಿ" ಎಂಬ ಚಂದದ ಸಾಕ್ಷ್ಯಚಿತ್ರ ನಿರ್ದೇಶಿಸಿರುವ ಶ್ರೀ ಪರಮೇಶ್ವರ್ ರವರ ಸಂದರ್ಶನವನ್ನು ಈ ಸಂಚಿಕೆಯಲ್ಲಿ ಪ್ರಕಟಿಸಿದೆ. ಇನ್ನೂ ಹೊಸ ಹೊಸ ಪ್ರಯೋಗಗಳು ಪಂಜುವಿನಲ್ಲಿ ಬರಲಿ ಎಂಬ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ. ಪಂಜು ಮತ್ತಷ್ಟು ಬೆಳಗಲು ನೀವು ಸಹೃದಯಿಗಳು ಸಹಕರಿಸುತ್ತೀರೆಂದು ನಂಬುತ್ತಾ ಈ ಸಂಚಿಕೆ ಇಗೋ ನಿಮ್ಮ ಮಡಿಲಿಗೆ… 

 

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ

ನಟರಾಜು 🙂

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ದ್ವಿತೀಯ ಸಂಚಿಕೆ ನಿಮ್ಮ ಮಡಿಲಿಗೆ….

  1. "ನೀವು ಬರೆದಿರೋದನ್ನು ಓದುಗರು ಓದ್ತಾ ಇರ್ತಾರೆ. ಸುಮ್ಮಸುಮ್ಮನೆ ಏನೇನೋ ಬರೆಯಲು ಹೋಗಬೇಡಿ."  ಈ ಸಾಲುಗಳು ನಿಮಗೆ ಮಾತ್ರ ಅಲ್ಲ, ಸಾಮಾಜಿಕ ತಾಣ ಉಪಯೋಗಿಸುವ ಎಲ್ಲರು ಇದನ್ನು ಅರ್ಥ ಮಾಡಿಕೊಳ್ಳಬೇಕಾದ ನೀತಿ ಪಾಠ.

  2. ನಿಜ, ತೋಚಿದನ್ನು ಗೀಚುವದಕ್ಕಿಂತ ಉಚಿತವಾದ ಮತ್ತು ಆರೋಗ್ಯಕರ ಬರಹಗಳು ಮಾತ್ರ ಜನರ ಓದಿಗೆ ಸಿಗುವಂತಾಗಬೇಕು ಎನ್ನುವುದು ಸರ್ವಕಾಲಿಕ ಸತ್ಯ. ಇಂತಹ ಸಮಾಜಮುಖಿ ಲೇಖನಗಳ ದನಿ ಹೆಮ್ಮೆಯ ಪಂಜು ಆಗಲಿ…..ಕನ್ನಡ ಸಾಹಿತ್ಯಕ್ಕೆ ಅಮೋಘ ಕೊಡುಗೆನ್ನು ನೀಡಲಿ.. ಶುಭವಾಗಲಿ ಮಿತ್ರ ನಿಮಗೆ ಮತ್ತು ನಮ್ಮನಿಮ್ಮೆಲ್ಲರ ಪ್ರೀತಿಗೆ ಪಂಜುವಿಗೆ……..!!!!!!!

  3. ಗೆಳೆಯ ಪಂಜುವಿನ ಎರಡು ಸಂಚಿಕೆಗಳನ್ನು ಬಿಡುವುಮಾಡಿಕೊಂಡು ಓದಿದೆ. ನಿಜವಾಗಲೂ ಒಳ್ಳೆಯ ಬಹರಗಳನ್ನೆ ಆಯ್ದುಕೊಂಡಿದ್ದಿರಿ. ತಲೆಗೆ ಭಾರ  ಎನಿಸುವದಕ್ಕಿಂತ ಸಾಹಿತ್ಯಿಕ ಬರಹಗಳನ್ನೆ ಹೆಚ್ಚು ಆಯ್ದುಕೊಂಡಿದ್ದಿರಿ. ಕಿಸಗೆ ಕತ್ತರಿ ಹಾಕದೆ ಸಾಹಿತ್ಯ ಬರಹಗಳನ್ನು ಕೊಡುತ್ತಿರುವ ನಿಮ್ಮದು ಶ್ಲಾಘನೀಯವಾದದು.

Leave a Reply

Your email address will not be published. Required fields are marked *