ಧಾರವಾಡದ ರಂಗಾಯಣ ಆವರಣದಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಜನೆವರಿ 29, ರವಿವಾರ ಬೆಳಗ್ಗೆ 10.30ಕ್ಕೆ ಟಿ.ಎಸ್.ಗೊರವರ ಅವರ "ರೊಟ್ಟಿ ಮುಟಗಿ" ಕಾದಂಬರಿ ಲೋಕಾರ್ಪಣೆ.
Related Articles
ಸಂಸ್ಕೃತಿ: ನೇಮಿನಾಥ ತಪಕೀರೆ
ಪುರಾತನ ಇತಿಹಾಸ, ಅನನ್ಯವಾದ ಭೌಗೋಳಿಕ ರಚನೆ, ವೈವಿಧ್ಯಮಯವಾದ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು, ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆಯ ರಾಷ್ಟ್ರಗಳ ಪ್ರಭಾವಗಳು ಇವೆಲ್ಲ ಒಟ್ಟುಗೂಡೆ ಭಾರತೀಯ ಸಂಸ್ಕೃತಿಯನ್ನು ಅನನ್ಯವಾಗಿಸಿವೆ. ಸಿಂಧು ಕಣಿವೆಯ ನಾಗರಿಕತೆ ಅಥವಾ ಅದಕ್ಕೂ ಪೂರ್ವದಲ್ಲಿಯೇ ಆರಂಭಗೊಂಡ ಭಾರತೀಯ ಭವ್ಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಶಾಧಾರಣ ವಿಕಸನವನ್ನು ಕಂಡಿತು. ಸದನಂತರದಲ್ಲಿ ಬೌದ್ಧ, ಜೈನಧರ್ಮಗಳ ಉನ್ನತಿ ಮತ್ತು ಅವನತಿ, ಮುಸ್ಲಿಂ ಆಳ್ವಿಕೆ, ಯುರೋಪಿಯನ್ನರ ವಸಾಹತು ಆಳ್ವಿಕೆ ಈ ಸಂಸ್ಕೃತಿಯ ವಿಕಸನಕ್ಕೆ ಇನ್ನಷ್ಟು ಇಂಬು ನೀಡಿತು. ವೈವಿಧ್ಯಮಯವಾಗಿಸಿತು. […]
ಬದುಕಿನಲ್ಲಿ ಭರವಸೆ ಎಂಬುದು ಪುನರ್ಜನ್ಮದ ಅವಕಾಶವಿದ್ದಂತೆ: ನರಸಿಂಹಮೂರ್ತಿ. ಎಂ.ಎಲ್.
ನಿರೀಕ್ಷೆಗಳು ಹುಸಿಗೊಂಡಾಗ ಭರವಸೆಗಳೊಂದಿಗೆ ಬೆಸೆದುಕೊಂಡು ಮುನ್ನೆಡೆಯಬೇಕು. ಅಂದುಕೊಂಡಿದ್ದೆಲ್ಲ ನಡೆಯಲ್ಲ, ಅಪೇಕ್ಷಿಸಿದ್ದೆಲ್ಲ ದೊರೆಯುವುದಿಲ್ಲ. ಇದು ಹೀಗೆ ಒಂದಂತರಂಗದ ಅಲೆಯಾಗಿ ಮೌನವನ್ನು ಪರಿಚಯಿಸಿ ಹೋಗಿಬಿಡುತ್ತದೆ. ನಿರೀಕ್ಷೆಗಳಲ್ಲಿ ತೇಲಿಮುಳುಗುವಾಗ ಕುತೂಹಲಗಳು ಕನಸ್ಸಿನ ದೋಣಿಯನ್ನು ಅಲುಗಾಡದಂತೆ ಮುನ್ನೆಡಿಸಿದಂತೆ ಸೊಗಸಾದ ಅನುಭವದ ಹಿತವನ್ನು ಒಡ್ಡುತ್ತದೆ. ಅದೇ ನಿರೀಕ್ಷೆಗಳು ಹುಸಿಯಾಗುತ್ತಿದ್ದಂತೆ ಭರವಸೆಯ ಬೆಳಕು ಮೆಲ್ಲನೆ ಸರಿದು ಹೋಗಿ ಕತ್ತಲಾವರಿಸಲು ಆರಂಭಿಸಿ ಅತೀವ ಭಾವೋವೇದನೆಗೆ ಗುರಿ ಮಾಡುತ್ತಾ ಜಗತ್ತೆಲ್ಲ ಶೂನ್ಯವೆಂಬಂತಾಗಿ ಜಿಗುಪ್ಸೆ ಆವರಿಸಿಕೊಳ್ಳುತ್ತದೆ. ಏನೇನು ಹುಚ್ಚು ಮನಸ್ಸಿನ ಮಜಲುಗಳು ವಿವಿಧ ಆಯಾಮಗಳಲ್ಲಿ ಹಂಗಿಸಲು ಆರಂಭಿಸುತ್ತದೆ. ಈ ಪಯಣವೇ […]
ನಿಮ್ಮ ಗಮನಕ್ಕೆ
ದಿನಾಂಕ 30 ಡಿಸೆಂಬರ್ 2014 ರಿಂದ 3 ಜನವರಿ 2015ರ ವರೆಗೆ ಮೈಸೂರಿನ ನಿರಂತನ ಫೌಂಡೇಷನ್ ವತಿಯಿಂದ ರಾಷ್ಟ್ರೀಯ ರಂಗ ಉತ್ಸವವನ್ನು ಆಯೋಜಿಸಲಾಗಿದೆ. ಈ ನಿಮಿತ್ತ ರಂಗಾಸಕ್ತರಿಗೆ ನಿರಂತರ ಫೌಂಡೇಷನ್ ಆಹ್ವಾನ ಕೋರಿದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ನಿರಂತರ ಫೌಂಡೇಷನ್ ಕಾಂತರಾಜ ರಸ್ತೆ ಸರಸ್ವತಿ ಪುರಂ ಮೈಸೂರು ದೂರವಾಣಿ: 0821-2544990 **** ಕನ್ನಡದ ಬರಹಗಳನ್ನು ಹಂಚಿ ಹರಡಿ