ಜಾದವ್ ಪಯೆಂಗ್ ಒಂಟಿಯಾಗಿ ಬೆಳೆಸಿದ ೧೩೬೦ ಎಕೆರೆ ಕಾಡು: ಮಂಜು ಅರ್ಕಾವತಿ

 

 

 

 

 

 

ಜಾದವ್ ಪಯೆಂಗ್ ಒಂಟಿಯಾಗಿ ಬೆಳೆಸಿದ ೧೩೬೦ ಎಕೆರೆ ಕಾಡುಸುಮಾರು ಸಲ ನಾವೇ ಅಂದುಕೊಳ್ತಾ ಇರ್‍ತೀವಿ ನಾನು ಒಬ್ನೆ / ಒಬ್ಳೆ ನಾನೇನು ಮಾಡೋಕು ಆಗಲ್ಲ ಅಂತ. ಆದ್ರೆ ದೊಡ್ಡ ಪ್ರವಾಹ ಶುರುವಾಗೋದು ಮೊದಲ ಹನಿಯಿಂದಲೇ, ದೂರದ ಪ್ರಯಾಣ ಶುರುವಾಗೋದು ಮೊದಲ ಹೆಜ್ಜೆಯಿಂದಲೇ, ಹೀಗೆ ದೊಡ್ಡ, ದೊಡ್ಡದು ಅಂತ ನಾವೇ ಏನೆ ಅಂದು ಕೊಂಡ್ರು ಅದಕ್ಕೆ ಮೂಲ ಒಂದೇ ಒಂದು ಎಂಬುದೇ ಆಗಿರುತ್ತೆ.

ಹೀಗೆ ಎಲೆಮರೆಯ ಕಾಯಿಗಳಂತೆ ನಮ್ಮ ನಡುವೆ ನಮ್ಮ ಅರಿವಿಗೂ ಬರದಂತೆ ಹಲವಾರು ಜನ ಇದ್ದಾರೆ. ಅವರೂ ಸಹ ಜೀವನದಲ್ಲಿ ಏನೋ ಸಾಧನೆ ಮಾಡಬೇಕು ಅಂತ ಹೊರಟಾಗ  ನಾನು ಒಬ್ನೆ / ಒಬ್ಳೆ ಅಂತ ಬೇಸರದಿಂದ ಇರದೇ ಅಂದುಕೊಂಡದನ್ನು ಸಾಧಿಸಿ ತೋರಿಸಿದ್ದಾರೆ. ಅಂತಹವರಲ್ಲಿ ಒಬ್ಬರು ಅಸ್ಸಾಂ ನ ಜಾದವ್ ಪಯೆಂಗ್ ಭಾರತದ ಅರಣ್ಯ ಮನುಷ್ಯ.

ಇದೇನಪ್ಪ ಯಾರೋ ಹೋರಾಟಗಾರರ ಬಗ್ಗೆ ಹೇಳ್ತಾರೆ ಅಂದುಕೊಂದ್ರೆ ಟಾರ್ಜನ್ ತರದ ಕಾಡಿನ ಮನುಷ್ಯನ ಬಗ್ಗೆ ಹೇಳ್ತಾ ಇದಾರೆ ಅಂತ ಅಂದುಕೋಳ್ಳಬೇಡಿ.

ಅದು ಅಸ್ಸಾಂ ನ ಬ್ರಹ್ಮಪುತ್ರಾ ನದಿಯ ದಡದಲ್ಲಿದ್ದ ಮುಲಾಯ್ ಕಥಾನಿ ಕಾಡು, ೧೯೭೯ರ ಒಂದು ದಿನ ಆ ಕಾಡಿನಲ್ಲಿ ೧೬ ವರ್ಷದ ಹುಡುಗ ಒಬ್ಬ ನಡೆದುಕೊಂದು ಹೋಗಬೇಕಾದರೆ ಕೆಲವೇ ದಿನದ ಹಿಂದೆ ಬ್ರಹ್ಮಪುತ್ರಾ ನದಿಯ ಪ್ರವಾಹಕ್ಕೆ ಸಿಲುಕಿ ಹಲವಾರು ಹಾವುಗಳು ನೀರಿನಲ್ಲಿ ಕೊಚ್ಚಿಕೊಂಡು ಬಂದಿದ್ದು, ನದಿಯ ಪ್ರವಾಹ ಇಳಿಮುಖವಾಗಿರುತ್ತದೆ, ಆಗ ಅಲ್ಲಿಗೆ ಬರೋ ಆ ಹುಡುಗನ ಕಣ್ಣಿಗೆ ಅವಿತುಕೊಳ್ಳೊಕೆ ಮರಗಳ ನೆರಳಿಲ್ಲದೇ ಬಿಸಿಲಿಗೆ ಸಿಕ್ಕಿ ಸತ್ತ ಹಾವುಗಳನ್ನು ನೋಡ್ತಾನೆ. ಅಯ್ಯೋ ಸ್ವಲ್ಪ ನೆರಳಾಗಾಲಿ ಅಥವಾ ಅವಿತುಕೊಳ್ಳೋಕೆ ಸಣ್ಣ ಪೊದೆಗಳಾಗಲಿ ಇದ್ದಿದ್ದರೆ ಈ ಹಾವುಗಳು ಹಿಂಗೆ ಸಾಯುತ್ತಿರಲಿಲ್ಲ ಅಂತ ಅಂದು ಕೊಂಡು ಅಲ್ಲಿಂದ ಬರಬೇಕಾದ್ರೆ ದಾರಿಯುದ್ದಕ್ಕೂ ಮರಗಳಿದ್ದರೆ ಹಾವುಗಳು ಸಾಯ್ತಾ ಇರಲಿಲ್ಲ, ಈ ರೀತಿ ಪದೇ ಪದೇ ಯೋಚ್ನೆ ಮಾಡ್ತಾನೆ, ಕಡೆಗೆ ನಾನೇ ಮರಗಳನ್ನು ಬೆಳೆಸ್ತಿನಿ ಸಂತ ಹೊರಡ್ತಾನೆ,  ಅದು ಕಷ್ಟ ಅಂತ ಗೊತ್ತು, ಆದ್ರೂ ಆ ಹಾವುಗಳಿಗೆ ಮರದ ನೆರಳು ಇದ್ದಿದ್ರೆ ಸಾಯ್ತಾ ಇರಲಿಲ್ಲ, ಅಂದು ಕೊಂಡ ಆ ಹುಡುಗ ಮರಗಳನ್ನು ಬೆಳೆಸೋಕೆ ಅಂತ ನಿಂತ, ಬೆಳೆಸಿದ್ದ ಬರೊಬ್ಬರಿ ೧೩೬೦ ಎಕರೆ ದಟ್ಟವಾದ ಕಾಡನ್ನು ಅವರ ಹೆಸರೇ ಜಾದವ್ ಪಯೆಂಗ್.

ಇಂದು ಅವರ ಹೆಸರಿನ ಜೊತೆಗೆ ಒಂದು ಬಿರುದು ಕೂಡಾ ಇದೆ ಅದು ಭಾರತದ ಅರಣ್ಯ ಮನುಷ್ಯಾ  ದಿ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ. ಹಾಗಂತ ಪಯೆಂಗ್ ದಾರಿ ಏನು ಹೂವಿನ ಹಾದಿಯಾಗಿರಲಿಲ್ಲ, ಮೊದಲಿಗೆ ಅರಣ್ಯ ಬೆಳಸ್ತೀನಿ ಅಂತ ಹೋಗಿದ್ಕೆ ಅರಣ್ಯ ಇಲಾಖೆಯವರು ನೋಡು ಅಲ್ಲಿ ಏನೂ ಬೆಳೆಯಲ್ಲ ಬೇಕಾದರೆ ಬಿದಿರಿನ ಸಸಿ ಕೊಡ್ತೇವೆ ಹಾಕು ಅಂದ್ರು, ಬಿದಿರು ಬೆಳೆಸೋಕೆ ಕಷ್ಟ ಆಯ್ತು ಆದ್ರು ಛಲ ಬಿಡದ ವಿಕ್ರಮನಂತೆ ಸಾಹಸ ಮಾಡಿದ ಪಯಾಂಗ್ ಮೊದಲು ಬಿದಿರು ಆಮೇಲೆ ಬೇರೆ ಬೇರೆ ಜಾತಿಯ ಗಿಡಗಳನ್ನು ಹಾಕುತ್ತಾ  ಕಡೆಗೆ ಅಲ್ಲಿ ಈ ರೀತಿ ಕಾಡು ಕೂಡ ಅಂತ ಇಲಾಖೆಗಳೇ ಆಶ್ಚರ್ಯ ಪಡೋ ಅಷ್ಟು ದೊಡ್ಡ ಸಮದ್ದ ಕಾಡು ನಿರ್ಮಾಣವಾಗಿತ್ತು.

ಗಿಡಗಳನ್ನು ಬೆಳೆಸುವ ಜೊತೆಗೆ ತನ್ನ ಊರಿನಲ್ಲಿದ್ದ ಕೆಂಪು ಇರುವೆಗಳನ್ನು ಆ ಕಾಡಿಗೆ ಸಾಗಿಸಿದರು ಯಾಕೆಂದರೆ ಈ ಇರುವೆಗಳು ನೆಲವನ್ನು ಯೋಗ್ಯವನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದನ್ನು ತನ್ನೂರಿನಲ್ಲಿ ನೋಡಿದ್ದರು, ಈ ರೀತಿಯ ಕೆಲವು ಪ್ರಯೋಗಗಳನ್ನು ಮಾಡುವುದು ಶುರುಮಾಡಿದ, ನಿದಾನಕ್ಕೆ ಅಲ್ಲಿ ಕಾಡು ದಟ್ಟವಾಗಿ ಬೆಳೆಯಲಾರಂಭಿಸಿದಾಗ ಹಲವಾರು ಜಾತಿಯ ವಲಸೆ ಹಕ್ಕಿಗಳು ಬರಲಾರಂಬಿಸಿದವು, ಜೊತೆಗೆ ಹತ್ತಾರು ಜಾತಿಯ ಹಾವುಗಳ ಸಂಖ್ಯೆ ವೃದ್ದಿಯಾಗತೊಡಗಿತು, ಜಿಂಕೆಗಳು, ಬಂಗಾಳದ ಹುಲಿಗಳ ಸಂಖ್ಯೆ ಏರಲಾರಂಭಿಸಿದಾಗ ತಾನು ಅಂದುಕೊಂಡದನ್ನು ಸಾಧಿಸಿದ ತೃಪ್ತಿ ಪಯಾಂಗ್‌ಗೆ ಆಗತೊಡಗಿತು. ಅಲ್ಲಿಗೆ ಪೂರ್ತಿ ೩೦ವರ್ಷಗಳ ಕಾಲ ಕಳೆದು ಹೋಗಿತ್ತು.

ಆದರೆ ಸರ್ಕಾರದ ಅರಣ್ಯ ಇಲಾಖೆಗೆ ಪಯಾಂಗ್ ವಿಷಯ ತಲುಪಿದ್ದು ತೀರ ೫ ವರ್ಷಗಳ ೨೦೦೮ರಲ್ಲಿ ಹಿಂದೆ ಅದೂ ಕಾಡಿನಿಂದ ಊರಿಗೆ ದಾಳಿ ಇಟ್ಟಿದ್ದ ಆನೆಗಳಿಂದಾಗಿ ಪಯೆಂಗ್ ಗುಡಿಸಲು ಹೋಯಿತು. ಸುದ್ದಿ ತಿಳಿದು ಹಳ್ಳಿಗೆ ಬಂದ ಇಲಾಖೆಯ ಅಧಿಕಾರಿಗಳಿಗೆ ದಟ್ಟವಾದ ಕಾಡು ನೋಡಿ ಆಶ್ಚರ್ಯ ಆಯಿತು. ಜೊತೆಗೆ ನಮ್ಮ ಹೀರೋ ಪಯೆಂಗ್ ಪರಿಚಯ ಕೂಡ ಆಯಿತು, ಈಗ ಅಸ್ಸಾಂನ ಅರಣ್ಯ ಇಲಾಖೆ ಇನ್ನೂ  ೨೦೦ ಹೆಕ್ಟೇರ್ ಪ್ರದೇಶದ ಅರಣ್ಯವನ್ನು ಬೆಳೆಸುವ ಯೋಜನೆಗೆ ಕೈಜೋಡಿಸಿದೆ.

೨೦೧೨ರಏಪ್ರಿಲ್ ನಲ್ಲಿ ಜವಹರಲಾಲ್ ನೆಹರು  ವಿಶ್ವವಿದ್ಯಾನಿಯಲದಲ್ಲಿ ಅವರು ಕಾಡನ್ನು ಬೆಳೆಸುವಾಗ ಆದ ಅನುಭವಗಳ ಹಂಚಿಕೆ ಕಾರ್ಯಕ್ರಮದಲ್ಲಿ ರಾಜಸ್ತಾನದ ನೀರಿನ ಗಾಂಧಿ ಶ್ರೀ ರಾಜೇಂದ್ರ ಸಿಂಗ್ ಮತ್ತು ವಿಶ್ವವಿದ್ಯಾಲಯದ ಉಕುಲಪತಿಗಳಾದ ಶ್ರೀ ಸುದೀರ್ ಕುಮಾರ್  ಸೊಪೊರಿ ಭಾರತದ ಅರಣ್ಯ ಮನುಷ್ಯ  ಎಂಬ ಬಿರುದನ್ನು ನೀಡಿದ್ದಾರೆ.

ಇನ್ನೂ ಜಾದವ್ ಪಯೆಂಗ್‌ಗೆ ಈಗ ೫೧ ವರ್ಷ ಹೆಂಡತಿ ಬಿನಿತ ಮೂವರು ಮಕ್ಕಳು ೨ ಗಂಡು ೧ ಹೆಣ್ಣು ಅವರ ಕಾರ್ಯಕ್ಕೆ ಆಸರೆಯಾಗಿ ನಿಂತಿದ್ದಾರೆ, ಈಗಲೂ ಅವರು ಇಲ್ಲಿಂದ ಬೇರೆ ಕಡೆ ಹೋಗಿ ಇದೇ ರೀತಿ ಕೆಲಸ ಮಾಡುವ ಯುವಮನಸ್ಸು ಅವರಿಗಿದೆ. ಸದ್ಯ ಅವರು ಸಾಕಿರುವ ಹಸು ಮತ್ತು ಎಮ್ಮೆಗಳೇ ಕುಟುಂಬದ ಆದಾಯ ಮೂಲ ಇವುಗಳಿಂದ ಬರೋ ಹಾಲು ಮಾರಿ ಜೀವನ ಮಾಡುತ್ತಿದ್ದಾರೆ.

ಅರಣ್ಯ ಬೆಳೆಸ್ತೀವಿ ಅಂತ ಬೇರೆ ದೇಶಗಳಿಂದ ನೆರವನ್ನು ತಂದು ಬೇಕು ಬೇಡದ ಮರಗಳನ್ನು ನೆಡುವ ನಮ್ಮ ಇಲಾಖೆಗಳಿಗೆ ಹೋಲಿಸಿದರೆ ಸತ್ತ ಹಾವುಗಳಿಂದ ಜೀವನದ ದಿಕ್ಕನ್ನು ಬದಲಿಸಿಕೊಂಡು ೧೩೬೦ ಎಕರೆ ಕಾಡನ್ನು ಬೆಳೆಸಿದ ನಮ್ಮ ಜಾದವ್ ಪಯೆಂಗ್ ನಿಜವಾದ ಹೀರೋನೆ.

******

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x