ಜಸ್ಟ್ ಮಿಸ್ಸೋ…………: ಗುಂಡುರಾವ್ ದೇಸಾಯಿ


ಇಡೀ ಭೂಮಂಡಲದಲ್ಲಿ ಅತಿ ಪ್ರಾಮಾಣಿಕನಾಗಿ, ಅನ್ಯಾಯ, ಹಿಂಸೆ, ಅಸೂಯೆ, ದ್ವೇಷ, ಮುನಿಸು, ಹೊಗಳಿಕೆ, ತೆಗಳಿಕೆ ಮೊದಲಾದ ರಾಗಗಳತ್ತ ಮುಖವೂ ಮಾಡದೆ ಮರಣವನ್ನಪ್ಪಿದ ಪದ್ದು ಯಮನ ಆಸ್ಥಾನಕ್ಕೆ ಬಂದ. ನಕ್ಕೋತ ಹರಿ ಧ್ಯಾನ ಮಾಡುತ್ತ ಬಂದದ್ದನ್ನು ನೋಡಿ ಯಮನಿಗೆ ಗಾಭರಿ ಮತ್ತು ಆಶ್ಚರ್ಯ ಎರಡು ಆತು. ನನ್ನತ್ರ ಬರೊಷ್ಟಿಗೆ ಕಾಲಿಗೆ ಬಿದ್ದು ‘ನನ್ನನ್ನ ದಯವಿಟ್ಟು ಸ್ವರ್ಗ ಕಳಿಸು ಹಾಂಗೆ ಹಿಂಗೆ ನಿನಗ ಅದೂ ಕೊಡುತಿ ಇದು ಕೊಡಸ್ತಿನಿ, ಭೂಲೋಕಕ್ಕೆ ಹೋದ್ರೆ ನನ್ನ ಬಂಗ್ಲೇಲಿ ಇಳಿಯೊಕೆ ವ್ಯವಸ್ಥ ಮಾಡಸ್ತಿನಿ’ ಅನ್ನೊರೆ ಬಾಳು, ಇನ್ನೂ ಕೆಲವರು ‘ಬಡವ ಮಧ್ಯಮನಾಗಿ ಹುಟ್ಟಿ ಸಾಯೋತನ ಸುಖನ ಅನುಭವಿಸಿಲ್ಲ, ದಯವಿಟ್ಟು ಸ್ವರ್ಗ ಕಳಸು ಅಂತ ಹಲುಬೋರು. ಈ ಪ್ರಾಣಿ ಏನು ಹಲುಬದೆ ಹರಿನಾಮ ಜಪ ಮಾಡ್ತಿದೆ. ಇಂಟರೆಸ್‍ಟಿಂಗ ಕೇಸು’ ಅಂತ ಯಮ ಚಿತ್ರಗುಪ್ಪನಿಗೆ ಬಂದು ಪದ್ದುನ ಕೇಸ್ ಹಿಸ್ಟರಿ ಹೇಳಾಕ ತಿಳಿಸಿದ. ಚಿತ್ರಗುಪ್ಪ ರೆಕಾರ್ಡ ಫೈಲ್ ಒಪನ್ ಮಾಡಿ ಹೌಹಾರಿ

‘’ಪ್ರಭು!’’
“ಏನು ಚಿತ್ರಗುಪ್ತ ಏನಾಯಿತು, ಇವನ ಪಾಪಕರ್ಮಗಳು ಬಹಳಷ್ಟಿವೆಯೆ? ನರಕಕ್ಕೆ ತಳ್ಳುವ ಭಯದಿಂದ ಹೀಗೆ ಹರಿನಾಮ ಸ್ಮರಣೆ ಮಾಡುತ್ತಿರುವನೆ…..?”
“ಅಲ್ಲ ಪ್ರಭು ನಮ್ಮ ಹಂಡ್ರಂಡ ಪಾಯಿಂಟ್ ಶಿಟನಲ್ಲಿ 99.99 ಔಟ ಆಫ್ ತೊಂಡಾನ್ರಿ”
“ಓ ಮೈ ಗಾಡ, ಕೃತ, ತ್ರೇತಾ. ದ್ವಾಪುರಯುಗದಲ್ಲೂ ಇಂಥಾ ಕೇಸ ಕಂಡಿರಲಿಲ್ಲ. ಬಲಿ, ಶಿಬಿ, ಮೊದಲಾದ ರಾಜರು, ವಿಶ್ವಾಮಿತ್ರ ಮೊದಲಾದ ಅನೇಕ ಬ್ರಹ್ಮರ್ಷಿಗಳು ನರವರ್ಸ ನೈಂಟಿ ಆದ್ರು. ಇವನು ಹಿಂಗಾ!”
“ಹೌದು ಪ್ರಭು, ಇವನು ನರಕಕ್ಕೂ ಸ್ವರ್ಗಕ್ಕೂ ಕೂಡಾ ಎಲಿಜಿಬಲ್ ಅಲ್ಲಾ, ಹಿ ಈಜ್ ಕಾಂಪಿಟೇಟರ್ ಟು ಇಂದ್ರಾಸ್ ಚೇರ್”
“ಹಾಂ! ನನ್ನ ಚೇರ್ ಕಬಳಾಸಾಕ ಯಾವನ ಬಂದಾನ?” ಅಂತ ಹೌಹಾರಿ ಬಂದ ದೇವೆಂದ್ರ
“ಈತನೆ, ಲಾರ್ಡ ದೇವೆಂದ್ರ. ಯುವರ್ ಕೌಂಟ ಡೌನ್ ಈಜ್ ಸ್ಟಾರ್ಟ” ಎಂದ ಯಮ
“ನೋ ಇಟ್ಸ್ ಇಂಪಾಸಿಬಲ್, ಆ ಮೂರು ಯುಗಗಳಲ್ಲೂ ಬಿಟ್ಟುಕೊಡದ ಈ ಚೇರನ್ನು ಈ ಹುಲುಮಾನವನಿಗೆ ಬಿಟ್ಟು ಕೊಡಲೇ, ನೋ ಇಂಪಾಸಿಬಲ್ ಇಂಪಾಸಿಬಲ್…”
“ಸಾಕು ಸಾಕು ಎಷ್ಟು ಸರಿ ಅಂತಿರಿ ಇಂಪಾಸಿಬಲ್ ಅಂತ, ನಿಮ್ಮ ಚೇರಿತನ ಎಲಿಜಿಬಿಲಿಟಿ ಬಂದಿರೋದು ಅವನಿಗೆ ತಿಳಿದಿಲ್ಲ ಯಾಮಾರಿಸಿಬಿಡೋಣ” ಎಂದ ಚಿತ್ರಗುಪ್ತ

“ವೆರಿಗುಡ್ ಚಿತ್ರಗುಪ್ತ, ನೀನು ಆಮೇಲೆ ಭೇಟಿಯಾಗು ಸರಪ್ರೈಜ ಗಿಫ್ಟ ಕೊಡ್ತನಿ, ಪ್ರೋಸಿಡ್.. ಹ್ಯಾಂಗ ಹೇಳು”
“ನೀವು ಸುಮ್ನಿರಿ ನಾನು ಕೇಳ್ತೀನಿ” ಎಂದು ಪದ್ದುನತ್ತ ತಿರುಗಿ “ಏನ್ ಕಣಯ್ಯ,ಯು ಆರ್ ಎ ಲಕ್ಕಿಯಸ್ಟ ಪರ್ಸನ್ ಆಫ್ ಆಲ್, ವೇರ್ ಯು ಸಿಚುಯೇಟ್, ಟೆಲ್ಲ ಮಿ”
“ಅಯ್ಯಾ ಸ್ವಲ್ಪು ಕನ್ನಡದಾಗ ಮಾತಾಡಯ್ಯ. ಸತ್ತು ಇಲ್ಲಿ ಬಂದ್ರೂ ಇಂಗ್ಲಿಷ್ ಬಿಡವಲ್ತಲ್ಲ, ಇಲ್ಲೂ ಸುಪ್ರಿಂ ಕೋರ್ಟ ಮಾತೃಭಾಷೆ ಕಡ್ಡಾಯ ಅಲ್ಲ ಅಂತ ಆರ್ಡರ್ ಮಾಡ್ಯಾದ ಏನು?”
“ನೋ! ಇಂಗ್ಲೀಷ್ ನಿಮ್ಮಲ್ಲಿ ಇಂಟ್ರನ್ಯಾಷನಲ್ ಲಾಂಗ್ವೇಜ್ ಹ್ಯಾಂಗೋ ಇಲ್ಲೂ ಹಾಗೆ, ಬೈ ದಿ ಬೈ, ನೀನು ಸ್ವರ್ಗಕ್ಕಿನ ಸ್ವಲ್ಪ ಹೈ ಪೊಜಿಶನ್‍ಗೆ ಎಲಿಜಿಬಲ್ ಇದ್ದಿ, ನಿನ್ನ ಎಲ್ಲಿ ಕಳಸೋಣ, ನಿನಗ ಏನು ವ್ಯವಸ್ಥಾ ಮಾಡೋಣ ಹೇಳು”
“ನಾನು ಆ ಲೆವಲ್‍ಗೆ ಎಲಿಜಿಬಲ್ ಇದ್ದೀನಾ? ವೆರಿ ಗ್ರೇಟ್! ಗ್ರೇಟ್!” ಅಂತಾ ಪದ್ದು ಬೆನ್ನು ತಟಕೊಂಡ
“ನಾನು ಹೇಳಿಲ್ಲಾ, ಈವ ಗಮಾರ ಇದ್ದಾನಂತ. ನಿನ್ನ ಸೀಟಿಗೆ ಎಲಿಜಿಬಲ್ ಇದ್ದಿನಿ ಅನ್ನೊದೆ ಗೊತ್ತೆ ಇಲ್ಲಂತಾ”
“ಒಳ್ಳೆ ಸಮಯ ಯಾಮಾರಸಿಬಿಡು”
“ಏನು ಗುಸು ಗುಸು ಚಿತ್ರಗುಪ್ಪ, ಹು ಈಜ್ ಯುವರ್ ಬಾಸ್, ನಾನೋ? ಇಂದ್ರನೋ?”
“ಏನು ಯಮರಾಯ, ಹಿಂಗ ಕೋಪಿಸಿಕೊಂತಿ, ನಿನಗೆ ಇವತ್ತು ಸೋಮರಸ ಜೊತೆ ಎಲ್ಲನೂ ಸರಬರಾಜ ಮಾಡ್ತೀನಿ, ಪಾಪ ನಿನಗೆ ರೆಸ್ಟೆ ಇಲ್ಲ ಇವತ್ತು ಫುಲ್ ಎಂಜಾಯ್ ಮಾಡು”
“ಓಕೆ ಓಕೆ ದೇವು, ಇವನು ಕೇಸ್ ಏನು ಮಾಡೋಣ, ನಿನಗ ಫಿಟಿಂಗ್ ಇಡೊ ಮಟ್ಟಿಗೆ ಪುಣ್ಯ ಸಂಪಾದಿಸ್ಯಾನ”

“ಅದನ್ನೆಲ್ಲ ಚಿತ್ರಗುಪ್ತ ನೋಡಿಕೊಂತಾನ, ನೀನು ಸುಮ್ನೆ ಇರು”
“ ಆದರೆ ಕೊಡೊ ತೊಳೊ ವಿಷಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ….! ಬೇಡಾ?”
“ಓಕೆ, ಓಕೆ ಕೂಲ್ ಡೌನ್, ಫಸ್ಟ ಯು ಆಂಡ್ ಚಿತ್ರಗುಪ್ತ ಸಾಲೋ ದಿ ಪ್ರಾಬ್ಲಮ”
“ಬೈ ದಿ ಬೈ ಪದ್ದು ಉರ್ಫು ಪದ್ಮನಾಭ, ಒಂದು ಐದು ನಿಮಿಷ ಟೈಮು ಕೊಡ್ತೀವಿ ಕೂತು ಯೋಚನೆ ಮಾಡಿ ಹೇಳು” ಎಂದ ಚಿತ್ರಗುಪ್ತ
ಪದ್ದು ‘ಆಯ್ತು’ ಅಂತ ಕಣ್ಣು ಮುಚ್ಚಿ ಕುಳಿತ, ಅಭ್ಯಾಸ ಬಲ ಹೆಂಡತಿ ಬಯ್ಯಾಕ ಸುರು ಹಚ್ಚಕೊಂಡು ಕೂಡಲೇ ಧ್ಯಾನ ಮಾಡತಾ ಕುಳಿತುಕೊಳ್ಳತಿದ್ದ. ಇಲ್ಲಿ ಆ ನಿರ್ಮಲ,ಪ್ರಶಾಂತ ವಾತಾವರಣ ಅವನಲ್ಲಿ ಏಕಾಗ್ರತೆ ಮೂಡಿಸ್ತು, ಸ್ಥಿತಪ್ರಜ್ಞನಾಗಿ ಧ್ಯಾನಸ್ಥನಾಗಿ ಬಿಟ್ಟ.
ಐದು ನಿಮಿಷ ಆದ ಮೇಲೆ ಚಿತ್ರಗುಪ್ತ ಪದ್ದು “ಏನ್ ಯೋಚನೆ ಮಾಡಿದ್ರಿ” ಅಂತಾ ಎಬ್ಬಿಸಿದ

ರೆಸಪಾನ್ಸೆ ಇಲ್ಲ, ಎಬ್ಬಸಿ ಎಬ್ಬಸಿ ಸಾಕಾಯ್ತು, ಯಮನೂ ಅದ ಪ್ರಯತ್ನ ಮಾಡಿದ, ಗಧ ಜಾಡಸಿದ, ಅಲ್ಲಾಡವಲ್ಲ, “ದೇವು ಹೋಯ್ತು, ಇವ ತಪಸ್ಸಿಗೆ ಕುತಾನನ, ಹರಿನಾಮ ಸ್ಮರಣೆ ಮಾಡಕತಾನ, ನಿನ್ನ ಸೀಟಿಗೆ ಸಂಚಕಾರ ಬಂತು ದೇವು ಬಂತೂ…”
“ಯು ಬ್ಲಾಡಿ ! ಚಿತ್ರಗುಪ್ತ ಎಲ್ಲಾ ಪ್ಲಾನು ಹಾಳುಮಾಡಿದ್ಯೋ, ಯಾಕ ಅವನಿಗೆ ಟೈಮುಕೊಟ್ಟಿ, ನನ್ನ ಟೈಮು ಸುಮಾರ ಮಾಡಕತ್ಯಾನ, ಇದಕ್ಕ ಏನಾರ ಮಾಡು”
“ಇವ ಚಾರಸೋ ಬೀಸ್ ನನ್ಮಗ ಇದ್ದಂಗ ಕಾಣ್ತಾನ, ಏನು ಗೊತ್ತಿಲ್ಲದಾಂಗ ನಮ್ಮ ಭಾಷೆ ತಿಳಕೊಂಡಾನ, ಇರಲಿ ಮಾಡೋಣ, ದೇವು ಸರ್, ನೀವು ಹಿಂದ ಮಂಡತನದಿಂದ ತಪಸ್ಸಿಗೆ ಕುಳಿತವರಿಗೆಲ್ಲ ಮಾಡತಿದ್ರಲ್ಲ ಅವನ್ನೆಲ್ಲ ಪ್ರಯೋಗಸ್ರೀ”
‘ಯೆಸ್, ವಾಯು, ವರುಣ, ಅಗ್ನಿ, ಕಮಾನ್ ಆಂಡ ಅಟ್ಯಾಕ, ಡೆಸ್ಟ್ರಾಯ್ ಹಿಸ್ ಡ್ರೀಮ್”
‘ಎಸ್ ಬಾಸ್’ ಎಂದು ಗಾಳಿ, ಮಳೆ, ಬೆಂಕಿನ ಪ್ರಯೋಗಿಸಿದ್ರೂ, ಆಸಾಮಿ ಜುಮ್ಮೆನ್ನಲಿಲ್ಲ, ಹೆಂಡತಿ ಕಾಟಕ್ಕಿಂತ ಇವು ಪದ್ದುಗ ದೊಡ್ಡವೆನಿಸಲಿಲ್ಲ. ಸ್ವಾರಿ ಮೈ ಬಾಸ್, ವಿ ಆರ್ ಅನ್‍ಎಬಲ್ ಟು ಡಿಸ್ಟ್ರಾಯ್ ಹಿಜ್ ಡ್ರೀಮ್” ಎಂದು ತಲಿತಗ್ಗಸಿಕೊಂಡು ನಿಂತ್ರು,

ಇಂದ್ರ ವಜ್ರಾಯುಧ ಪ್ರಯೋಗಿಸಿದ ಅದು ಕೊರಳಿಗೆ ಹಾರ ಆಯ್ತು, ಬಾಂಬ ದಾಳಿ ಮಾಡಿಸದ ಅವು ಹೂಗಳಾಗಿ ತಲಿಮೇಲೆ ಉದರಿದುವು, ದೇವೆಂದ್ರಗ ನಡುಕ ಸ್ಟಾರ್ಟ ಆಯ್ತು, ಏನ್ ಮಾಡ್ಲಿ “ ಹಾಂ ಎಸ್…ಎಸ್.. ಐ ಫೌಂಡ್ ಐಡಿಯಾ. ಕಮಾನ, ಮೇನೆಕೆ, ಅಪ್ಸರಾ, ಊರ್ವಶಿ,ರಂಭಾ,ತಿಲೊತ್ತಮೆ. ಕಮಾನ್ ಆಂಡ್ ಡ್ಯಾನ್ಸ, ಡಿಸ್ಟರ್ಬ ಹಿಸ್ ಮೈಂಡ್” ಎಂದ
ಎಲ್ಲರೂ ನಾಟ್ಯ ಮಾಡಿದ್ರು, ಮೈ ಸೋಕಿದ್ರು ಪದ್ದು ಜುಮ್ಮೆನ್ನಲಿಲ್ಲ, ದೇವೆಂದ್ರ ಥಂಡಾ ಹೊಡದಾ ‘ಅಂತಾ ವಿಶ್ವಾಮಿತ್ರ ಮೊದಲಾದ ಋಷಿಗಳ ಬೋಲ್ಡ ಆಗಿದ್ರು ಈ ಮುಂಡೆ ಮಗಾ ನನ್ನ ಕುರ್ಚಿಗೆ ದಾಳಿ ತರಂಗ ಕಾಣ್ತಾ, ಏನ ಮಾಡ್ಲಿ, ಇಷ್ಟು ದಿನ ಅನುಭವಸಿದ ಈ ಕುರ್ಚಿ ಸುಖ ಇವನಿಗೆ ಬಿಟ್ಟುಕೊಡಬೇಕಾಗತ್ತಲ್ಲ!’ ಅಂತ ಕೈ ಕೈ ಹಿಸಿಕೊಳ್ಳಕತಿದ, ಬ್ರಹ್ಮ, ವಿಷ್ಣು, ಮಹೇಶ್ವರನ ಹತ್ತಿರ ಹೋಗಿ ರಿಕ್ವೆಸ್ತ ಮಾಡಿಕೊಂಡ, ‘ನಾವು ಭಕ್ತರಾಧಿನ, ನೋಚಾನ್ಸ್ ಅವನು ಕೇಳಿದ್ದನ್ನ ಅಸ್ತು ಅನ್ನಲೇ ಬೇಕು’ ಅಂದ್ರು. ‘ಏನು ಮಾಡಿಲಿ ಸುಸೈಡ ಮಾಡಿಕೊಲ್ಲದಷ್ಟ ಬಾಕಿ ಉಳದಾದ’ ಅಂತ ಅವಲತ್ತು ಕೊಂಡ.
ಎಲ್ಲರೂ ಹೆಲ್ಪಲೆಸ್ ಆಗಿದ್ರು, ಬಾಲ್ ಈಜ್ ಇನ ಹಿಜ್ ಗ್ರೌಂಡ, ಕುಟಿಲೋಪಾಯಗಳನ್ನ ಹುಡುಕಾಕತಿದೆ, ಚಿತ್ರಗುಪ್ತನಿಗೆ ಅವನ ಕೇಸನ ರೀ ಸ್ಟಡಿ ಮಾಡಕ ಹೇಳಿದ.
ಹರಿ ಪ್ರತ್ಯಕ್ಷನಾಗಿ “ವತ್ಸಾ ನಿನ್ನ ಭಕ್ತಿಗೆ ಮೆಚ್ಚಿದೆ, ಯು ಆರ್ ಸೆಂಟ್ ಪರ್ಸೆಂಟ ಎಲಿಜಿಬಲ್ ಟು ಇಂದ್ರಾಸ್ ಸಿಟ್, ಪ್ಲೀಜ್ ಟೆಲ ಮಿ ವಾಟ್ ಯುವ ವಾಂಟ್”
ಮನತುಂಬಿ ಸ್ತುತಿಸಿದ ಪದ್ದು “ಭ್ರಹ್ಮ ಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ, ಮತ್ಯಾವ ಪದವಿಯನೊಲ್ಲೆನಯ್ಯ, ನಿನ್ನ ದರ್ಶನ ಸುಖ ಸಾಕಯ್ಯ, ಹೆಂಡತಿಯ ಕಾಟದಿಂದ ಮುಕ್ತಿಯ ಕೊಡಿಸಯ್ಯ ಧ್ಯಾನಕ್ಕೆ ಕುಳಿತಾಗ ಮೈಸೋಕಿಸಿದ ಕನ್ನಿಕೆಯರ ಸಂಗದಲ್ಲಿ ಇಲ್ಲೆ ಇರಿಸಯ್ಯ, ಇ..ರಿ..ಸ..ಯ್ಯಾ. ಭವದ ಕಡಲಿನ ಜಂಜಡ ಬೇಡವಯ್ಯ. ಸಾಕಯ್ಯ ಕರುಣಿಸಯ್ಯಾ” ಎಂದು ಅಂಗಲಾಚಿದ
“ಓ ಪೂರ್ ಫೆಲೊ. ಅಸ್ತೂ” ಅಂದು ಅದೃಶ್ಯನಾದ

ಇವು ಬಾಯಿ ಬಿಡುತ್ತಿದ್ದಂತೆ “ಜಸ್ಟ ಮಿಸ್ಸೋ, ಜಸ್ಟ್ ಮಿಸ್ಸೋ” ಅಂತ ದೇವೇಂದ್ರ ಕೇಕೆ ಹಾಕಾಕತಿದ
“ನಾನು ಹೇಳಲಿಲ್ಲ ಇವ ಗಮಾರ ಅಂತ, ಗಮಾರ ಅಂತ” ಚಿತ್ರಗುಪ್ತ ಫಯಲ್ ಡಬ್ಬಾ ಹಾಕಿ ಕುಣಿಯಾಕತಿದ
“ನನಗ ರಾತ್ರಿಗೆ ವರ್ಕಔಟ್ ಆತೊ ವರ್ಕಔಟ ಆತು” ಅಂತ ಯಮ ಹೆಗರಾಡಕತಿದ
ದೇವೆಂದ್ರ ‘ಯಾ ಹೂ’ ಅಂತ ಹಾರಿ “ಅಲ್ಲ ಮೂಢ, ಪೆದ್ದ ಪದ್ದು, ಹರಿ ಇಂದ್ರ ಪದವಿನ ಕೇಳಿದ್ರ ಒಲ್ಲೆಂದು ರಂಬೆ ಊರ್ವಶಿನ ಬೇಡಿದೆಲ್ಲ ನಿನ್ನ ಬೆಪ್ಪತನಕ್ಕ ನಗಬೇಕೋ ಅಳಬೇಕು. ಇಂದ್ರ ಪದವಿ ಸಿಕ್ಕಿದ್ರ ಎಲ್ಲ ನಿನಗ ದಕ್ಕತಿತ್ತಿಲ್ಲೋ?”
“ಅಯ್ಯಾ ದೇವೆಂದ್ರ, ನೀನು ಸುಮ್ಮನಿರತಿದ್ದೆಯಾ, ಒಬ್ಬರಿಗಾದ್ರೂ ನಕ್ಕೋತ ಚೇರ್ ಬಿಟ್ಟುಕೊಟ್ಟಿಯಾ, ಭೂಲೋಕದ ರಾಜಕಾರಣಿಗಳಾಂಗ ಅಂಟಿಕೊಂಡ ಕೂತಿರತಿಯಾ. ಒಂದು ಲೆಕ್ಕಕ್ಕ ನಮ್ಮ ಭೂಲೋಕದವರನ್ನ ಸರಸಬಹುದು, ನಿನ್ನ ಸರಸಾಕಾಗತದನು? ಏನಾರ ಕಿತಾಪತಿ ಮಾಡಿ ಕೀಳುಕೊಂತಿದ್ದೆ, ನಾನು ಯಾರತ್ರೂ ವೈರತ್ವ ಕಟ್ಟಿಕೊಂಡವಲ್ಲ, ಹೆಂಡತಿ ಬಲದಿಂದಲೇ ಇಲ್ಲಿತನ ಬಂದಾವ, ಆಕಿ ವರ್ತನೆಗೆ ಬೆಸತ್ತು ಜಿಗುಪ್ಸೆ ವೈರಾಗ್ಯ ಹೊಂದಿ ಬಸವಣ್ಣ ಸಪ್ತ ಸೂತ್ರಗಳಿಗೆ ಜೋತು ಬಿದ್ದಾವ, ಅಲ್ಲಂತ್ರೂ ಸುಖ ಪಡಾಕ ಆಗಲಿಲ್ಲ. ಇಲ್ಲೇರ ಸ್ವರ್ಗದಾಗ ಹಾಯಾಗಿ ಇರತಿನಿ ಟಾಟಾ ಬರ್ಲಾ” ಅಂತ ಪಕ್ಕದಲ್ಲಿ ಸೇವೆಗಾಗಿ ಸಿದ್ಧವಾಗಿದ್ದ ರಂಬೆಯ ಕೊರಳಿಗೆ ಕೈ ಹಾಕಿದ.

“ಥತ್ತೆರಿಕೆ ನಿಮಗ ಹೊತ್ತು ಗೊತ್ತು ಇಲ್ಲನ್ರಿ ಅಲ್ಲಿ ಮುಲ್ಲಾ ಕೂಗಾಕತನ, ಕಸ ಯಾರ ಬಳಿಬೇಕು, ಮುಸುರಿ ಯಾರ ತಿಕ್ಕಬೇಕು? ದೊಡ್ಡದಾಗಿ ಕೈ ಹಾಕ ಬಂದ್ರು ಎದ್ದೇಳಿ” ಎಂದು ದಬ್ಬಿದ್ಲು ಪಮ್ಮಿ,
ಕಣ್ತೆರದ, ಅದ ಹೆಂಡತಿ, ಅದೇ ಹಾಳು ಮನಿ ಇತ್ತು, ಬೆಳಗ್ಗೆ ಬಿದ್ದ ಕನಸು ನನಸಗತವಾ ಅಂತ ಪೂರ್ಣಗೊಳಿಸಲು ಕ್ಷಣಾರ್ಧದಾಗ ಹೊದಿಕೆ ಎಳೆದು ಮಲಕೊಂಡ, ಪಮ್ಮಿ ಪಕ್ದಲ್ಲಿದ್ದ ತಂಬಿಗೆ ನೀರು ಸುರದ್ಲು, ‘ಅದೇಂಗ ನನಸಾಗ ಬಿಡ್ತನಿ’ ಎಂದು. ಅವನ ಪಾಲಿಗೆ ಯಮ ಪಮ್ಮಿನ ಆಗಿದ್ಲು.
-ಗುಂಡುರಾವ್ ದೇಸಾಯಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x