ಕಥಾಲೋಕ

ಚೊಕ್ಕ ಕತೆಗಳು: ಮಾಧವ ಡೋಂಗ್ರೆ

1.ಸಂಸಾರ

ಆತ ಸ್ಥಿತಪ್ರಜ್ಞ. ಆಕೆ ಚಂಚಲೆ. ಆದರೂ ಅವರದು ಬಿಡಲಾರದ ಅನುಬಂಧ. 
ಆಕೆ ಆತನನ್ನು ಖುಶಿಪಡಿಸಲು ದಿನವೂ ಆತನಲ್ಲಿ ಬಂದು ಅವನಲ್ಲಿ ಸೇರುತ್ತಾಳೆ.
ಆದರೆ ಕೆಲವೊಮ್ಮೆ ನಿತ್ರಾಣಳಾಗಿ ನಡುದಾರಿಯಲ್ಲೆ ಬಿದ್ದುಹೋಗುತ್ತಾಳೆ.
ಅವನಾದರೋ ಇದ್ಯಾವುದರ ಪರಿವೆ ಇಲ್ಲದೆ ನಿಶ್ಚಲನಾಗಿದ್ದು ತನ್ನ ತಪಸ್ಸನ್ನಾಚರಿಸುತ್ತಾನೆ.
ಇನ್ನೊಂದು ಆಯಾಮದಲ್ಲಿ ಆತ ಆಕೆಗಾಗಿ ಕ್ಷಣಕ್ಷಣವೂ ಹಾತೊರೆಯುತ್ತಿರುತ್ತಾನೆ.
ಆಕೆಯ ಬರುವಿಕೆ ಗೊತ್ತಿದ್ದರೂ ಸುಮ್ಮನೆ ಮುನಿಸಿಕೊಳ್ಳುತ್ತಾನೆ.
ಆದರೆ ಆಕೆ ಬಂದರೂ, ಬರದಿದ್ದರೂ ಅವರಿಬ್ಬರ ಮಕ್ಕಳನ್ನು ಜೊಪಾನವಾಗಿ ನೋಡಿಕೊಂಡು, ರಾತ್ರಿಯಾದಂತೆ ಮಕ್ಕಳನ್ನು ಮಲಗಿಸಿ ಅವಳಿಗೊಸ್ಕರ ಕಾಯತೊಡಗುತ್ತಾನೆ.

ಆತನ ಹೆಸರು ಸಮುದ್ರ. ಆಕೆಯ ಹೆಸರು ನದಿ.
ಇದು ಇವರ ಸಂಸಾರದ ಕಥೆ.

2.ಪ್ರಣಯ

ಅವರಿಬ್ಬರೂ ಅಮರಪ್ರೇಮಿಗಳು. 
ಆತ ಪ್ರತಿಕ್ಷಣವೂ ಆಕೆಯನ್ನು ಕರೆಯುತ್ತಿರುತ್ತಾನೆ. 
ಪ್ರತಿಬಾರಿ ಕರೆದಾಗಲೂ ಆಕೆ ಬೇರೆ ಬೇರೆ ರೀತಿಯಲ್ಲಿ ಅಲಂಕರಿಸಿಕೊಂಡು ಬರುತ್ತಾಳೆ.
ಆಕೆಯ ಅಲಂಕಾರ ಇಷ್ಟವಾದರೆ ಆಕೆಯನ್ನು ಬರಸೆಳೆಯುತ್ತಾನೆ,
ಇಲ್ಲದಿದ್ದರೆ ಆಕೆಯನ್ನು ಕಿತ್ತು ಎಸೆಯುತ್ತಾನೆ.ಇದರಿಂದ ಸ್ವಲ್ಪವೂ ಬೇಸರಿಸದ ಆಕೆ ಮತ್ತೆ ಹೊಸರೀತಿಯಲ್ಲಿ ಅಲಂಕರಿಸಿಕೊಂಡು ಬರುತ್ತಾಳೆ.

ಇಷ್ಟಾದರೂ ಅವರಿಬ್ಬರು ಇನ್ನೂ ಅವಿವಾಹಿತರು.
ಆತ ಕವಿ, ಆಕೆ ಕವಿತೆ.

3.ಬೀರು

ಅವರಿಬ್ಬರದೂ ಹಾಲುಜೇನಿನ ಸಂಸಾರ.
ಆತ ಇಂಗ್ಲಿಷ್ ಪ್ರಾಧ್ಯಾಪಕ. ಆಕೆ ಕನ್ನಡ ಪಂಡಿತೆ.
ಅದೊಂದು ದಿನ ಆಕೆ ಆತನಲ್ಲಿಅದೆನೋ ತರಲು ಹೇಳುತ್ತಾಳೆ, ಆತ ಕೂಡಲೇ ತಂದುಕೊಡುತ್ತಾನೆ.
ಒಡನೆಯೇ ಆಕೆ ಆತನನ್ನು ವಾಚಾಮಗೋಚರವಾಗಿ ಬಯ್ದು ತವರಿಗೆ ಹೊರಟುಹೋಗುತ್ತಾಳೆ.
ಆತ ಶೂನ್ಯಭಾವದಿಂದ ತಲೆತಗ್ಗಿಸಿ ನಿಂತುಕೊಳ್ಳುತ್ತಾನೆ.

ತರಲು ಹೇಳಿದ್ದು-ಬೀರು.
ಆಕೆ ಹೇಳಿದ್ದು-ಕನ್ನಡದ ಬೀರು
ಆತ ತಂದಿದ್ದು-Beerರು

ಧನ್ಯವಾದಗಳು,
ಮಾಧವ ಡೋಂಗ್ರೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಚೊಕ್ಕ ಕತೆಗಳು: ಮಾಧವ ಡೋಂಗ್ರೆ

Leave a Reply

Your email address will not be published. Required fields are marked *