ಚುಟುಕಗಳು: ಶ್ರೀನಿಧಿ ಟಿ.ಕೆ., ವಿನೋದ್ ಕುಮಾರ್

1.     'ಮತ್ತೆ ಹೆಣ್ಣು' ಏನಿದು ದನಿಯಲ್ಲಿ ಸೋಲು?
      ಯಾವ ಅರ್ಥದಲ್ಲಿ ನಾ ಗ೦ಡಾಗಿದ್ದರೆ ಮೇಲು?
      ನೀರವತೆ ಮೆರೆದಿದೆ ಇಲ್ಲಿ ಗೊ೦ದಲ ಎಲ್ಲರಲಿ
      ಬ೦ದಾನೇ ನನ್ನಪ್ಪ ನನ್ನಲ್ಲಿ ಪ್ರೀತಿ ತೋರುತಲಿ?

2.     ಅಣ್ಣನೊಡನೆ ನನಗೂ ಇ೦ದಿನಿ೦ದ ಶಾಲೆ
      ಹೆತ್ತವರು ಇತ್ತಿಹರು ಪ್ರತಿದಿನ ಮುತ್ತಿನ ಮಾಲೆ!
      ಎಲ್ಲದರಲೂ ನನಗೆ ಸಿಕ್ಕಿದೆ ಅಣ್ಣನ ಸಮಪಾಲು
      ಆಗಲಿ ಈ ಸುಖ ಎಲ್ಲ ಹೆಣ್ಣುಮಕ್ಕಳ ಪಾಲು!!

3.     ಬಾಗಿಲ ಬಡಿತ…ಅಮ್ಮನ ದನಿ ಅತ್ತ ಕಡೆಯಿ೦ದ
      ಜೇಬಲಿ ಚಾಕಲೇಟಿಟ್ಟು ಇಳಿಸಿದ ತನ್ನ ಮಡಿಯಿ೦ದ
       'ನಡೆದುದ  ಯಾರಿಗಾದರೂ ಬಾಯಿ ಬಿಟ್ಟೀಯೆ ಜೋಕೆ'
      ಎ೦ದವನ ಮಾತು ನೋಟಗಳ ಒರಟುತನ ಏಕೆ?

4.     ವಿದ್ಯೆಗೆ ಅಧಿದೇವತೆಯೇ ಶಾರದೆಯ೦ತೆ
      ಹೀಗಿದ್ದರೂ ಹೆಣ್ಣಿಗೆ ಕಲಿಸಲೇಕೆ ಸಲ್ಲದ ಚಿ೦ತೆ?

5.     ಶಾಲೆಗಳಲಿ ಕಲಿವ ಬಾಲಕಿಯರ ಸ೦ಖ್ಯೆ ಹೆಚ್ಚಲಿ
      ಅವರ ಜೀವನದ ಶೋಷಣೆಯ ಕದಗಳು ಮುಚ್ಚಲಿ!

6.     ಹೆತ್ತ  ಅಮ್ಮನೆಡೆಗೆ ತೋರಿದ  ನಿಷ್ಕಾಮ ಪ್ರೀತಿ
      ಮಡದಿಗೂ ಅ೦ತೆಯೇ ತು೦ಬಿ ಕೊಡುವಾ ರೀತಿ
      ಅವಳೇ ಹೆತ್ತದ್ದು ಹೆಣ್ಣೆ೦ದೊಡನೆ ಇದೇಕೆ ಭೀತಿ?
      ಮಗಳು ಮಗನಿಗೆ ಕಮ್ಮಿ ಇಲ್ಲ ಯಾವುದೇ ರೀತಿ!!

7.     ಕಾಲಕಾಲಕೆ ಸಿಕ್ಕರೆ ಪ್ರಾಣರಕ್ಷಕ ಲಸಿಕೆ
      ಮಕ್ಕಳಲಿ ಕಾಣಬಹುದು ಎ೦ದೂ ಲವಲವಿಕೆ!!
-ತಲಕಾಡು ಶ್ರೀನಿಧಿ

1)
ನಿಮ್ಮ ಮುದ್ದಿನ ಮುಗ್ಧ
ಮಲ್ಲಿಗೆ ಮೊಗ್ಗುಗಳು
ಆಗಬಹುದು ಇತರರಿಗೆ
ಆಟದ ವಸ್ತುಗಳು
ಕಾಪಿಟ್ಟುಕೊಳ್ಳಿ !

2)

ತಿನ್ನಲೊಲ್ಲದ ಮಗುವಿಗೆ ತಿನ್ನಿಸುವಿರಿ
ಚಂದ ಮಾಮನ ತೋರಿ
ವಿದ್ಯೆ ಹಿಡಿಸದ ಮಕ್ಕಳಿಗೆ ಕಲಿಸಿ
ತುಸು ಪ್ರೇರಣೆ ಲೇಪಿಸಿ

3)
ಬಲು ಜಾಣ
ನನ್ನ ಕಂದ
ನಾ  ಹೇಳುವುದಕೆಲ್ಲ
ಕಿವಿಗೊಡುವುದಿಲ್ಲ
ನನ್ನ ನಡುವಳಿಕೆಯ
ಗಮನಿಸದೇ ಇರುವುದಿಲ್ಲ

4)
ಟಾ ಟಾ ಹೇಳಿ
ಶಾಲೆಗೆ ಕಳುಹಿಸಿದರಷ್ಟೇ
ಸಾಲದು
ರಣಹದ್ದುಗಳಿಗೆ
ಸಿಕ್ಕದಂತೆ
ನಿಮ್ಮ ಗುಬ್ಬಿ ಮರಿಗಳು
ಮರಳುವವರೆಗೂ
ಗಮನಿಸಬೇಕು

5)
ಶ್ !
ನೀಡಬೇಡಿ
ಪೊಳ್ಳು ಭರವಸೆ
ಕೇಳಿಸಿಕೊಳ್ಳುತ್ತಿದ್ದಾರೆ
ನಮ್ಮನಿಮ್ಮ ಮಕ್ಕಳು

6)
ಜೊತೆಯಲ್ಲಿ
ಆಡುತ್ತಿರುವವ
ನನ್ನ ಬಾಲ್ಯದ
ಗತ ವೈಭವ !

7)
ಬಾಲಕಾರ್ಮಿಕನಲಿ
ಬಾಲ್ಯ ಕಾಣೆಯಾಗಿಹುದು
ಪುಡಿಗಾಸಿರುವುದು ಜೇಬಲ್ಲಿ
ಭ್ರಮೆಯಲ್ಲಿಹನು ದೊಡ್ಡವನಾದೆನೆಂದು

8)
ನಾವೆಂದಿಗೂ ಇರುವ
ಮಕ್ಕಳ ಜೊತೆ
ಅವರ ಆಟಿಕೆಗಳಂತೆ
ಅವರ ಹೊದಿಕೆಗಳಂತೆ
-ವಿನೋದ್ ಕುಮಾರ್ ಬೆಂಗಳೂರು

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
Shiela
Shiela
10 years ago

ಶ್ರೀನಿಧಿ ಸರ್,  ವಿನೋದ್ ಕುಮಾರ್  ಸರ್,

 

ತುಂಬಾ ಇಷ್ಟವಾಯಿತು ಇಬ್ಬರದೂ ಚುಟುಕುಗಳು. ಚಿಕ್ಕ ಚಿಕ್ಕ ಶಬ್ದಗಳು ಹಿರಿದಾದ ಅರ್ಥಗಳು! (Y) 

Vinod Kumar Bangalore
10 years ago
Reply to  Shiela

ಬಹಳ ಧನ್ಯವಾದಗಳು !

Guruprasad Kurtkoti
10 years ago

ವಿನೋದ್ ಹಾಗೂ ಶ್ರೀನಿಧಿ ಅವರೆ, ಚಿಣ್ಣರಿಗಾಗಿ ನೀವು ಬರೆದ ಚುಟುಕುಗಳು ಇಷ್ಟವಾದವು!

Vinod Kumar Bangalore
10 years ago

ಬಹಳ ಧನ್ಯವಾದಗಳು ಗುರುಪ್ರಸಾದ್  🙂

Roopa Satish
Roopa Satish
10 years ago

Vinod & Srinidhi, 

Ibbara chutukugaLoo ishtavaadavu, arthapoorna….. 

Vinod Kumar Bangalore
10 years ago
Reply to  Roopa Satish

 ಬಹಳ ಧನ್ಯವಾದಗಳು  ರೂಪ 🙂

amardeep.p.s.
amardeep.p.s.
10 years ago

vinod and srinidhi ji… chutukugalu tumbaa chennagive….ishtavaaytu…

Vinod Kumar Bangalore
10 years ago
Reply to  amardeep.p.s.

ಬಹಳ ಧನ್ಯವಾದಗಳು ಅಮರ್ ದೀಪ್ !

Shanthakumari
Shanthakumari
10 years ago

ಶ್ರೀನಿಧಿ ಮತ್ತು ವಿನೋದ್ ಕುಮಾರ್ ಇಬ್ಬರ ಚುಟುಕಗಳು ಅರ್ಥಗರ್ಭಿತವಾಗಿವೆ.

9
0
Would love your thoughts, please comment.x
()
x