೧. ನವ ಪ್ರೇಮಿಗಳ ಪಜೀತಿ
ಪ್ರಶ್ನೆ: ಉತ್ತರ ಗೊತ್ತಿದ್ದರು ಇಬ್ಬರೂ ಹೇಳ್ಲಿಲ್ಲ
ಉತ್ತರ: ಪ್ರಶ್ನೆಯನ್ನು ಒಬ್ಬರಿಗೊಬ್ಬರು ಕೇಳಿ ಕೊಳ್ಳಲೆ ಇಲ್ಲಾ ..
೨. ಬದುಕಿನ ಹಾದಿ
ಯೌವನದ ಹಾದಿ ಒಂದು ಪಾಚಿ ರಸ್ತೆ
ಹಿಡಿತ ತಪ್ಪಿ ಜಾರಿ ಬಿದ್ದ ಜೋಡಿಗಳೆಷ್ಟೋ
ಗೃಹಸ್ಥನ ಹಾದಿ ಒಂದು ಸುವ್ಯವಸ್ಥೆ
ಹಿಡಿದ ಕೈ ತಪ್ಪದ ಹಾಗೆ ನೋಡಿಕೊಳ್ಳಬೇಕು ಆದಷ್ಟು…
೩. ಲೇಬಲಿಂಗ್ (ಹಣೆಬರಹಕ್ಕೆ ಹೊಣೆ ಯಾರು)
ಲೈಫ ಬಾಯ್, ಬರಿ ಕೈ ತೊಳೆದರೆ
ಲಕ್ಸ್ , ಕತ್ರಿನಾಳಿಗೆ ಸ್ಟಾರ್ ಪಟ್ಟ ತಂದು ಕೊಟ್ಟಿತು
ಕರ್ಮ ಚರ್ಮ ಬೇರೆ ಬೇರೆ ಯಾದರೂ
ಅವೆರಡು ಸೇರಿದ್ದು ಒಂದೇ ಚರಂಡಿಯ ಮೋರಿಯಲ್ಲಿ…
೪. ಬಾಡಿದ ಒಲವು
ಬಿಸಿಲು ಬಾಡಿತ್ತು ಸೂರ್ಯನನ್ನು
ಮರೆಮಾಚಿದಾಗ ಚಲಿಸುವ ಮೋಡಾ
ಒಲವೂ ಬಾಡಿದೆ ನೀನು ಮರೆಯಾದಾಗ
ಚೆಲುವೆ ಒಮ್ಮೆ ನನ್ನ ನೋಡಾ..
೫. ನನಗೂ ಆಸೆ ಇದೆ ಕೋರಿಕೆ ಈಡೇರಿಸಲು
ನನ್ನ ಬೈಕ್ ಕಾಯುತ್ತಿದೆ ಹಿಂಬದಿ ಸೀಟಿಗಾಗಿ
ನನ್ನ ಗೆಳೆಯ ಕಾಯುತ್ತಿದ್ದಾನೆ ನನ್ನ ಮದುವೆ ಬೂಂದಿ ಸ್ವೀಟಿಗಾಗಿ…
೬. ಅರ್ಥವಾದವರಿಗೆ ನಾನು ಬಂಗಾರ
ಅವರಿವರು ಎಂದ್ರು ನಿನ್ನದು ಅರ್ಥವಾಗದ ಕ್ಯಾರೆಕ್ಟರ್
ಅವಳೆಂದಳು ಅರ್ಥವಾದರೆ ನಿನ್ನದು 24 ಕ್ಯಾರೆಟ್..
೭. ಬೆಲೆ
ನಾನು ಬೆರಳಲ್ಲಿ ಧರಿಸುವ ಬಂಗಾರವಲ್ಲ
ಬದಲಿಗೆ ನನ್ನ ಬ್ಯಾಂಕ್ ನಲ್ಲಿ ಅಡವಿಟ್ಟರು ಬೆಲೆಬಾಳುವ ಬಂಗಾರ..
೮. ಒಟ್ಟಿನಲ್ಲಿ ನಾನು ಹಾಳಾದೆ
ಸ್ವಚ್ಛಂದವಾಗಿ ಹಾರಾಡುತ್ತಿದ್ದೆ ಬಾನಿನಲ್ಲಿ
ಪ್ರೀತಿಯ ಬಲೆ ಬಿಸಿ ಬಂಧಿಸಿ ಬಿಟ್ಟಳು ಫೋನಿನಲ್ಲಿ..
೯. ವಾದ
ನಾನು ತುಂಬಾ ಸೀದಾ ಸಾದಾ
ಅದೇ ಇಂದು ನಮ್ಮಿಬ್ಬರ ಮದ್ಯೆ
ನಡೆಯುತ್ತಿರುವ ವಾದಾ…
೧೦. ಹಣಕಾಸಿನ ಖಾತೆ
ನನ್ನ ಹೆಂಡತಿ ದಿನಾಲು ದುಡ್ಡಿನ ವಿಚಾರದಲ್ಲಿ
ತೆಗೆಯುತ್ತಿದ್ದಳು ಖ್ಯಾತೆ
ಈಗ ದಿನಾಲು ಬಡ್ಡಿಯ ವಸೂಲಿ ಮಾಡುತ್ತಿದ್ದಾಳೆ
ಕೊಟ್ಟಾಕ್ಷಣ ಹಣಕಾಸಿನ ಖಾತೆ…
೧೧. ಆಂಟಿ ಅಂಕಲ್
ಈ ಸಂಬಂಧಗಳಿಗೆ ಬೆಲೆ ಕಡಿಮೆ ಆಗಿದೆ
ಕಾರಣಾ ಸಂಬಂಧಗಳೆ ಕಡಿಮೆ ಆಗಿದೆ
ಬರಿ ಆಂಟಿ ಅಂಕಲ್ ..
೧೨. ಮುಗಿದ ಅಧ್ಯಾಯ
ಎಷ್ಟು ಗೊರಕೆ ಹೊಡೆಯುತ್ತಿ ನೀನು ಎಂದಳು ನಮ್ಮಾಕೆ
ಮುಂಚೆ ಯಿಂದಲೂ ನನ್ನ ಸ್ವಭಾವವದು ಎಂದೆನು ಕೇಳಿದಕೆ
ಅದರ ಬೆನ್ನಲ್ಲೇ ಎಷ್ಟು ಜನರ ನಿದ್ದೆ ಹಾಳುಮಾಡಿದಿಯಾ ಎಂದು ಕೇಳಬೇಕೆ
ನಾನೆಂದೆ ಮುಗಿದ ಅಧ್ಯಾಯವದು ಬೀಡು ಅದೆಲ್ಲಾ ಈಗ್ಯಾಕೆ….
೧೩. ಕಾಪಿ-ಪೇಸ್ಟ್
ಸಂಯೋಜನೆ ಹೊಸತಾದರು
ಪದಗಳನ್ನು ಮಾಡಿದ್ದು ಕಾಪಿ-ಪೇಸ್ಟ್
ಅವಳನ್ನು ನೋಡಲು ಹೋದಾಗ ಅವಳು
ಕಾಫೀನೆ ಮಾಡಿದ್ದು ಆದರೆ ಅದು ಬ್ರು ಇನ್ಸ್ಟಂಟ್…
–ಮಾಂತೇಶ್ ಗೂಳಪ್ಪ ಅಕ್ಕೂರ