೧)
ನಿನ್ನಷ್ಟು ಸ್ವಾರ್ಥಿಯಲ್ಲ
ನೀ ಮುಡಿದ ಮಲ್ಲಿಗೆ!
ಸುವಾಸನೆ ಚಲ್ಲುತಿದೆ
ನನ್ನೆಡೆಗೆ ಮೆಲ್ಲಗೆ!!
೨)
ಮೇಷ್ಟು ಮಾತು!
ಮರೆತುಬಿಡು ಎಂದು ಹೇಳಿ
ಹೋದವಳಿಗೇನು ಗೊತ್ತು?
ನನಗೆ ನೆನಪಿನ ಶಕ್ತಿ ಜಾಸ್ತಿ ಇದೆ
ಎಂದ ನಮ್ಮ ಮೇಷ್ಟ್ರ ಮಾತು!!
೩)
ಸಾಂತ್ವನ!
ಜೈಲಿಂದ ಬಿಡುಗಡೆಯಾದ
ಕಳ್ಳ ರಾಜಕಾರಣಿಗೆ
ಊರಿನ ಜನರಿಂದ ಅದ್ಧೂರಿ
ಸ್ವಾಗತ ಸನ್ಮಾನ!
ದೇಶಕ್ಕಾಗಿ ದುಡಿದು ಮಡಿದ
ವೀರಯೋಧನ ಮನೆಯವರಿಗೆ
ಸಿಗಲಿಲ್ಲ ಅದೇ ರಾಜಕಾರಣಿಯಿಂದ
ಚೂರು ಸಾಂತ್ವನ:-P
೪)
ಸೈನಿಕ-
ಕೋಟಿ ಜನಗಳ ರಕ್ಷಣೆಯ
ದಿಟ್ಟ ನಾಯಕ:-O
ರಾಜಕೀಯ ನಾಯಕ-
ಭ್ರಷ್ಟ ಆಡಳಿತದಿ ಹೆಸರಾದ
ಈತ ದೇಶಕ್ಕೆ ಮಾರಕ:-)
೫)
ಬೆಂಡೆತ್ತುವಳು.
ದೂರದ ಊರಿಂದ ಕೈಬೀಸಿ
ಕರೆಯಬೇಡ ಗೆಳತಿ
ಕದ್ದು ನೋಡಿ ಬೆಂಡತ್ತುವಳು
ನನ್ನ ಹೆಂಡತಿ!!
೬)
ಜೋಗಿತ್ತಿ .
ಮನೆ ಮನೆಗೂ ಹೋಗಿ
ಜೋಳಿಗೆ ಹಿಡಿದು ಬೇಡುತಿದ್ದ
ಜೋಗಿತ್ತಿ/
ದವಸ ಧಾನ್ಯಗಳ ಮೂಟೆಯನಿಟ್ಟಿದ್ದಳು
ಪಡಸಾಲಿಯಲಿ ಒತ್ತಿ ಒತ್ತಿ//
೭)
ಮರ್ಯಾದೆ!
ತುಂಡು ಬಟ್ಟೆ ತೊಟ್ಟವಳು
ಕೋಟಿ ಕೋಟಿ ಇದ್ದವಳು!
ಸಂಪೂರ್ಣ ಬಟ್ಟೆ ತೊಟ್ಟವಳು
ಏನು ಇಲ್ಲದ ಸಾಮಾನ್ಯ
ಬಡವನ ಮಗಳು!!
೮)
ನಾಟಕೀಯವಿ ಜೀವನ!
ಇರುವುದನ್ನ ಅನುಭವಿಸಿದರೆ
ಗಳಿಸಿದ್ದಕ್ಕೂ ಸಾರ್ಥಕ
ಅಲ್ಲಿಯವರೆಗೂ ಬಿಡುವುದಿಲ್ಲ
ಸಾವೇ ಒಂದು ಮಾರಕ
ಭೂಮಿಯಿಂದ ಬಾನಿನ ಕಡೆಗೆ
ನೀನೆ ಒಂಟಿ ನಾವಿಕ
ಬದುಕೆ ಒಂದು ರೋಚಕ
ಹಲವು ತಿರುವುಗಳಿರುವ ನಾಟಕ:-P
೯)
ಕಾಲದ ಮಾತು!
ಜನ ಹೇಳ್ತಾರೆ ಒಳ್ಳೇ ಕಾಲ
ಯಾವಾಗ ಬರುತ್ತೆ ಅಂತ
ಕಾಲ ಹೇಳುತ್ತೆ ಮೊದಲು
ನೀನು ಒಳ್ಳೆವ್ನಾಗು ಅಂತ!!!
೧೦)
ಪ್ರಚಾರ!
ಗುಡಿಗೆ ಕಟ್ಟಿದ ವಿದ್ಯುತ್ ದೀಪ
ಅಲ್ಲಲ್ಲಿ ಕತ್ತಲನ್ನು ದೂಡುತಿತ್ತು
ಕಾರಣ?
ವಿದ್ಯುತ್ ದೀಪವ ಕಾಣಿಕೆ ಕೊಟ್ಟವನ
ಹೆಸರು ರಾರಾಜಿಸುತಿತ್ತು!!
೧೧)
ಕಿಚ್ಚು!
ಮದ್ಯದಂಗಡಿ ಚಹಾದಂಗಡಿಯಲ್ಲಿರದ
ಜಾತಿ ಧರ್ಮದ ಕಿಚ್ಚು!
ಗುಡಿ ಗುಂಡಾರಗಳಲ್ಲಿ
ಉರಿದಿದ್ದೆ ಹೆಚ್ಚು!!
೧೨)
ಕನ್ನಡವೇ ಉಸಿರೆಂದು
ಗಟ್ಟಿಯಾಗಿ ಹೇಳು
ಹಸಿರಾದೀತು ನಿನ್ನ ಬಾಳು:) 🙂
೧೩)
ಮೇಷ್ಟ್ರ ಕಲಿಸದೆ ಇರೋ ಪಾಠ
ಪ್ರೀತಿ / ಪ್ರೇಮ / ಪ್ರಣಯದಾಟ..
೧೪)
ಬಂಧನ .
ಜೈಲು, ಕಂಬಿಯಿಂದ ಬಂಧನ!
ಪ್ರೀತಿ ನೆನಪುಗಳಿಂದ ಬಂಧನ!!
೧೫)
ತೃಪ್ತ -ಅತೃಪ್ತ
ಸಾಕೆಂದವ ಸಾಹುಕಾರ
ಬೇಕೆಂದವ ಭಿಕಾರಿ!!!
–ಮಂಜುನಾಥ ಹನಮಂತಪ್ಪ ವರಗಾ
(ಗಜೇಂದ್ರಗಡ)
*****
ಪರಿಸ್ಥಿತಿಯ ವಿಡಂಬನೆ ಸ್ವಲ್ಪ ವಿಪರೀತವೇ ಆಯಿತೇನೋ ಅನಿಸಿತು "ಜೋಗಿತಿ"ಯಲ್ಲಿ. ಉಳಿದೆಲ್ಲಾ ಕವನಗಳು ಇಷ್ಟವಾದವು ಮಂಜುನಾಥರೆ 🙂