ಕನಸಿನಲ್ಲಿ ನಾನು ತುಂಬಾ
ಉದ್ದ ಬೆಳೆದೆನು!
ಚುಕ್ಕಿ ಚಂದ್ರರೆಲ್ಲ ನನ್ನ
ಕೈಯ್ಯ ಹತ್ತಿರ!
ಚಂದಮಾಮ ಕೆನ್ನೆ ಸವರಿ
ಮುತ್ತು ಕೊಟ್ಟನು
ಚುಕ್ಕಿ ತಾರೆ ನನ್ನ ಜೊತೆ
ಒಳ್ಳೆ ಗೆಳೆಯರಾದರು
ಅರ್ಧ ಚಂದ್ರನ ಮೇಲೆ ನಾನು
ಜಾರುಬಂಡಿ ಆಡಿದೆ
ಚುಕ್ಕಿ ತಾರೆಗಳ ಜೊತೆ
ತುಂಬಾ ಮಾತನಾಡಿದೆ
ಅಲ್ಲೂ ಒಂದು ಊರು ಇತ್ತು
ಅಲ್ಲಿ ಜಾತ್ರೆ ನಡೀತಿತ್ತು
ಚಂದಮಾಮ ಕೈಯ್ಯ ಹಿಡಿದ
ನಾನು ಊರು ಸುತ್ತಿದೆ
ಕಡಲೆ ಮಿಟಾಯಿ ಕೊಬ್ಬರಿ ಮಿಟಾಯಿ
ಬೆಂಡು ಬತ್ತಾಸು ಜಿಲೇಬಿ
ಚಂದಮಾಮ ತಿನ್ನಲು
ನನಗೆ ಎಲ್ಲ ಕೊಡಿಸಿದ
ತಿಂದು ನಾನು ನೀರು ಕುಡಿದು
ಊರು ಅಲೆದು ಕುಣಿದು ನಲಿದು
ಧಣಿವಾಗಿ ಮಲಗಿಬಿಟ್ಟೆ
ಚಂದಮಾಮನ ಮಡಿಲಿನಲ್ಲಿಯೇ
ಪುಟ್ಟ ಹೇಳು ಶಾಲೆಗೇ ಹೊತ್ತಾಯಿತು
ಅಮ್ಮನ ಕೂಗು ಕಿವಿಗೆ ಬಿದ್ದು
ಎದ್ದು ಕುಳಿತು ಕಣ್ಣನುಜ್ಜಿ
ಸುತ್ತ ನೋಡಿದೆ
ಕನಸಿನಿಂದ ಕಳಚಿ ಬಿದ್ದು
ಮನೆಯಲ್ಲಿಯೇ ನಾನಿದ್ದೆ!!
ಈ ಕನಸು….ಚಂದಮಾಮ….ಜಾತ್ರೆ….
ಕವನ ಚೆನ್ನಾಗಿದೆ….
ಚುಕ್ಕಿ ಚಂದ್ರಮನ ತರಲೋಕದಲ್ಲಿನ ಜಾತ್ರೆ ತುಂಬಾ ಸುಂದರವಾಗಿದೆ ನವೀನಣ್ಣ.
Kavana tumba chennagide. Nanna maganoo heege yaochisa bahudeno annistu. Muddaada makkala lokakke karedu kondu hogi matte manege marali bandante aythu. 🙂
Keep up the good work.
Kusuma
Chenagidhe brtr chuki chandrana kavana
nice..
[…] ಶಿಶುಗೀತೆ. ಪಂಜು ಲಿಂಕ್ ಇಲ್ಲಿದೆ) https://www.panjumagazine.com/?p=3438 Share this:TwitterFacebookGoogleLike this:Like […]