ಚಾತುರ್ಮಾಸ: ಉಮೇಶ ಕ. ಪಾಟೀಲ

Umesh K Patil

ಆಷಾಢಮಾಸದಿಂದ ನಾಲ್ಕು ತಿಂಗಳುಗಳ ಕಾಲ ನಡೆಯುವ ಒಂದು ವ್ರತ ಆಚರಣೆಯಾಗಿದೆ. ಆಷಾಢ ಶುಕ್ಲ ಪೂರ್ಣಿಮೆಯಿಂದ ಕಾರ್ತಿಕ ಶುಕ್ಲ ಪೂರ್ಣಿಮೆಯ ವರೆಗೆ ನಾಲ್ಕು ತಿಂಗಳ ಸಮಯವನ್ನು ‘ಚಾತುರ್ಮಾಸ’ ಎಂದು ಪರಿಗಣಿಸಲ್ಪಟಿದೆ. ಚಾತುರ್ಮಾಸ ಸಮೀಪಿಸದೊಡನೆ ಪೂಜ್ಯ ಮುನಿಗಳು, ಆರ್ಯಿಕೆಯರು, ತ್ಯಾಗಿಗಳು, ಬ್ರಹ್ಮಚಾರಿಗಳು ಮೊದಲಾದ ತಾವು ಚಾತುರ್ಮಾಸಕ್ಕಾಗಿ ನಿಶ್ಚಿಯಿಸಿದ ಗ್ರಾಮ, ನಗರಗಳನ್ನು ಆಶ್ರಯಿಸುತ್ತಾರೆ. ಈ ವ್ರತವನ್ನು ಆಷಾಢ ಶುಕ್ಲ ಏಕಾದಶಿ, ದ್ವಾದಸೀ, ಹುಣ್ಣಿಮೆ, ಕರ್ಕಾಟಕ ಸಂಕ್ರಮಣ, ಇವುಗಳಲ್ಲೊಂದು ದಿವಸ ಈ ವ್ರತವನ್ನು ಪ್ರಾರಂಭಿಸುತ್ತಾರೆ. ಈ ವ್ರತ ಆಚರಣೆಯನ್ನು ಪ್ರಾರಂಭ ಕಾಲ ಭಿನ್ನವಾಗಿದ್ದರು ವ್ರತಸಮಾಪ್ತಿಯ ಕಾಲ ಮಾತ್ರ ಕಾರ್ತಿಕ ಶುಕ್ಲ ದ್ವಾದಶೀಯೇ. ಚಾತುರ್ಮಾಸವನ್ನು ಜೈನ, ವೈಷ್ಣವ, ಶೈವ, ಬೌದ್ಧರಲ್ಲಿಯು ಆಚರಣೆಯಲ್ಲಿರುವದನ್ನು ಕಾಣುತ್ತವೆ. ಮೇಲಿನ ನಾಲ್ಕು ಧರ್ಮಗಳಲ್ಲಿ ಈ ವ್ರತಾಆಚರಣೆ ಭಿನ್ನವಾಗಿರುವುದು ತಿಳಿದು ಬರುತ್ತದೆ. ನಾನು ಇಲ್ಲಿ ಜೈನಧರ್ಮದಲ್ಲಿ ಚಾತುರ್ಮಾಸದ ಆಚರಣೆಯ ಬಗೆಗೆ ಚರ್ಚಿಸುತ್ತೇನೆ.

 ಜೈನಧರ್ಮದಲ್ಲಿ ಪೂಜ್ಯ ಮುನಿಗಳು, ಆರ್ಯಿಕೆಯರು, ತ್ಯಾಗಿಗಳು, ಬ್ರಹ್ಮಚಾರಿಗಳು ಮೊದಲಾದ ತಾವು ಚಾತುರ್ಮಾಸಕ್ಕಾಗಿ ನಿಶ್ಚಿಯಿಸಿದ ಗ್ರಾಮ ನಗರಗಳನ್ನು ಆಶ್ರಯಿಸಿದ ನಂತರ ಶ್ರಾವಕ ಮತ್ತು ಶ್ರಾವಕಿಯರಿಗು ವ್ರತವನ್ನು ಮುನಿಗಳಾದವರು ನೀಡುತ್ತಾರೆ. ಹೊಸದಾಗಿ ವ್ರತವನ್ನು ಹಿಡಿಯುವರು ಗುರ್ವಸ್ತ, ಶುಕ್ರಾಸ್ತ ಮತ್ತು ಸೂತಕಕಾಲದಲ್ಲಿ ಈ ವ್ರತವನ್ನು ಪ್ರಾರಂಭಿಸುವುದಿಲ್ಲ. ಇವರು ತಮ್ಮ ಶಕ್ತಾನುಸಾರವಾಗಿ ವ್ರತವನ್ನನು ಆಚರಿಸುತ್ತಾರೆ. ಈ ಸಮಯವನ್ನು ಜಪ, ತಪ, ಸಂಯಮ, ಸ್ವಾಧ್ಯಾಯ, ಪಠಣಗಳಿಂದ ಕಳೆಯುತ್ತಾರೆ. ಅದರ ಜೊತೆಗೆ ಪ್ರವಚನವನ್ನು ಹೇಳುತ್ತಾರೆ. ವಿಶೇಷ ಶಕ್ತಿಧಾರಕಾರದ ಮುನಿಗಳು ಚಾತುರ್ಮಾಸ ಯೋಗವನ್ನು ಧರಿಸುತ್ತಾರೆ. ಹಾಗೆ ವಿಶೇಷ ಶಾರೀರಿಕ ಶಕ್ತಿಯಿಲ್ಲದವರು ಮುನಿಗಳು ಮೊದಲಾದವರು ಯಥಾಶಕ್ತಿ ಯೋಗಭ್ಯಾಸವನ್ನು ಮಾಡುವವರಾಗಿ ಯೋಗತ್ರಯದಿಂದ ಮೋಕ್ಷಸಾಧನೆಯನ್ನು ಆಸಕ್ತರಾಗುತ್ತಾರೆ. ಈ ಸಮಯದಲ್ಲಿ ಚಾರಣ ಋದ್ದಿಧಾರಿಗಳಾದ ಮುನಿಗಳು ಮಾತ್ರ ಗಮನಾ ಗಮನವನ್ನು ಮಾಡಬಲ್ಲರು, ಎಕೆಂದರೆ ಚಾರಣ ಋದ್ಧಿಯ ಪ್ರಭಾವದಿಂದ ಅವರಿಗೆ ಗಮನಾಗಮನದಿಂದ ಪ್ರಾಣಿಹಿಂಸೆಯಾಗುವ ಭಯವಿರುವದಿಲ್ಲ ಆದರೂ ಅವರ ಈ ಗಮನಾಗಮನವು ಒಂದು ನಿಯಮಸ್ಥಾನದ ಸ್ಥಿತಿಯಲ್ಲಿ ಮಾತ್ರ ಇರುತ್ತದೆ. 

ಚಾತುರ್ಮಾಸದ ಕಾಲದಲ್ಲಿ ಮಳೆಯಿರುವುದರಿಂದ ಅನಂತಾನಂತ ಜೀವರಾಶಿಗಳು ಉತ್ಪನ್ನವಾಗುತ್ತವೆ. ಗಮನಾಗಮನದಿಂದಾ ಆ ಜೀವರಾಶಿಗಳ ಘಾತವು ಅವಶ್ಯವಾಗಿ ಸಂಭವಿಸುತ್ತದೆ. ಈ ಕಾರಣದಿಂದ ಚಾತುರ್ಮಾಸದಲ್ಲಿ ತ್ಯಾಗಿ ವ್ರತಿಕರು ಒಂದೇ ಶ್ಥಾನದಲ್ಲಿರಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. 
ಚಾತುರ್ಮಾಸ ಕಾಲ ಮಳೆಗಾಲ. ಆಗ ಅನೇಕ ಜೀವಜಂತುಗಳು ಹಾದಿ ಬೀದಿಗಳಲ್ಲಿ ಹೆಚ್ಚಾಗಿ ಸಂಚರಿಸುವುದರಿಂದ ಅವು ಕಾಲಿಗೆ ಸಿಕ್ಕು ಸಾಯಬಾರದೆಂಬ ಉದ್ದೇಶದಿಂದ ಈ ಕಾಲದಲ್ಲಿ ಸಂಚಾರವನ್ನು ನಿಲ್ಲಿಸಿ ಒಂದೆಡೆ ತಂಗುತ್ತಾರೆ. ಮಳೆಗಾಲ ಇರುವÀ ದೆಸೆಯಿಂದ ವ್ಯಾಪಾರವು ಮಂದವಾಗುತ್ತದೆ. ಹಾಗೂ ಇತರ ಕಾರ್ಯಭಾರಗಳು ಕಡಿಮೆಯಾಗುತ್ತವೆ ಇಂತಹ ಚಾತುರ್ಮಾಸದ ಸುಸಮಯದಲ್ಲಿ ಶ್ರಾವಕರು ತಮ್ಮ ಶುಭಾಶುಭ ಅಭಿಲಾಷೆಗಳನುಸಾರವಾಗಿ ತಮ್ಮ ಪ್ರಯೋಜನವನ್ನು ಸಾಧಿಸಿಕೊಳ್ಳಬಲ್ಲರು. ಭವಿಷ್ಯದಲ್ಲಿ ಉತ್ತಮ ಯೋಗ್ಯತೆಯನ್ನು ಗಳಿಸಬಲ್ಲರೂ ಪುಣ್ಯಶಾಲಿಗಳೂ ಸಂಸಾರದ ಅಸ್ಥಿರತೆಯನ್ನು ಯಥಾರ್ಥವಾಗಿ ತಿಳಿದಿರುವವರೂ ಗೃಹಶ್ರಮಲ್ಲಿರುತ್ತಿದ್ದರೂ ‘ನೀರಿನ ಮೇಲಿನ ಕಮಲ’ದಂತೆ ಅನಾಶಕ್ತಿಯಿಂದ ಕಾಲಯಾಪನೆ ಮಾಡುತ್ತಿರುವವರು ಆದ ಭವ್ಯಾತ್ಮರು, ಈ ಪುಣ್ಯಸಮಯವನ್ನು ಆತ್ಮಕಲ್ಯಾದ ಕಾರ್ಯದಲ್ಲಿ ಪ್ರವೃತರಾಗುತ್ತಾರೆ. ಸಾಧು ಸಂಸರ್ಗವನ್ನು ಪಡೆಯುವ ಸಾಧನವನ್ನು ಒದಗಿಸಿಕೊಳ್ಳುತ್ತಾರೆ. ಪರಂತು ಸಂಸಾರದಲ್ಲಿ ಆಸಕ್ತರೂ ವಿಷಯಭೋಗಗಳೇ ಸುಖದ ಪರಾಕಾಷ್ಠತೆಯೆಂದು ಭ್ರಮಿಸಿರುವವರೂ ಅಥವಾ ಕಷಾಯಪುಷ್ಟಯೇ ತಮ್ಮ ಲಕ್ಷ್ಯವೆಂದು ತಿಳಿಯುವವರೂ ಆದ ಮೂರ್ಖ ಜನರು ಈ ಸಮಯವನ್ನು ಅಮೋದಪ್ರಮೋದಗಳಿಂದ ಕಳೆಯುತ್ತಾರೆ.

ಇಂದು ಪ್ರತಿಮಾಧಾರಿಗಳಾದ ಮುನಿಗಳು ಒಂದೇ ಕಡೆಯಲ್ಲಿದ್ದು ಚಾತುರ್ಮಾಸವನ್ನು ಕಳೆಯುವದರಿಂದ ಧರ್ಮಾನುರಾಗಿಗಳಾದ ಗೃಹಸ್ಥರ ಸೌಭಾಗ್ಯವು. ಸಂಸಾರದಲ್ಲಿ ಸಾಧುಸಂಸರ್ಗವು ಸಿಗುವುದೇ ದುರ್ಲಭವು. ಚಾತುರ್ಮಾಸದ ದಿನಗಳಲ್ಲಿ ತ್ಯಾಗೀವ್ರತಿಕರು ಒಂದು ಸ್ಥಾನದಲ್ಲಿರುವುದರಿಂದಲೇ ಸತ್ಸಂಗತಿಯು ದೊರೆಯುವುದು. ಆದುದರಿಂದ ಧರ್ಮಬಂಧುಗಳು ಆಚಾರ್ಯರು ಮುನಿಗಳು ಆರ್ಯಿಕೆಯರು ತ್ಯಾಗಿಗಳು ಮೊದಲಾದವರು ಚಾತುರ್ಮಾಸ ನಿಯಮವನ್ನು ಕೈಕೊಂಡಿರುವಲ್ಲಿಗೆ ಹೋಗಿ, ಅವರ ವೈಯಾವೃತ್ಯವನ್ನು ಮಾಡಿ ಪುಣ್ಯಭಾಗಿಗಳಾಗಬೇಕು ಹಾಗೂ ಅವರ ಪುಣ್ಯಮಯ ಉಪದೇಶವನ್ನು ಕೇಳಿ ಆತ್ಮಕಲ್ಯಾಣ ಪಥದಲ್ಲಿ ಮುನ್ನಡೆಯುವವಯಾರಾಗಬೇಕು. 

ಪ್ರತಿಯೋರ್ವ ಜೈನಗೃಹಸ್ಥನೂ ಈ ಮಹತ್ವಪೂರ್ಣ ಚಾತುರ್ಮಾಸದಲ್ಲಿ ಶಕ್ತಾನುಸಾರವಾಗಿ ನಿಯಮಗಳನ್ನು ಕೈಕೊಳ್ಳಬೇಕು. ಶ್ರಾವಕರಿಗೆ ವಿಧೇಯವಾಗಿರುವ ದೇವಪೂಜಾ, ಗುರುಪಾಸ್ತಿ, ಸ್ವಾಧ್ಯಾಯ, ಸಂಯಮ, ತಪ, ದಾನಗಳೆಂಬ ಆವಶ್ಯಕ ಕ್ರಿಯೆಗಳಲ್ಲಿ,  ಮುಖ್ಯವಾಧ ದೇವದರ್ಶನ ದೇವಪೂಜೆಗಳ ಪರಿಪಾಠಿಯೂ ಇಂದು ನಮ್ಮ ಸಮಾಜದಲ್ಲಿ ಪ್ರಾಯಃ ಲುಪ್ತವಾದಂತಿದೆ. ಆದಕಾರಣ ಪ್ರತಿಯೋರ್ವ ಗೃಹಸ್ಥನು ಪ್ರತಿದಿನ ದೇವದರ್ಶನ ಹಾಗೂ ಶಾಸ್ತ್ರಸ್ವಾಧ್ಯಾಯದ ನಿಯಮವನ್ನು ಅವಶ್ಯವಾಗಿ ಕೈಕೊಳ್ಳಬೇಕು. ಇದರಿಂದ ಆತ್ಮಕಲ್ಯಾಣದೊಡನೆ ಜೈನಸಂಸ್ಕøತಿಯ ಮತ್ತು ಜೈನತ್ವದ ರಕ್ಷಣೆಯಾಗುದು  ಮಾತ್ರವಲ್ಲದೆ ಮುಂದಿನ ಪೀಳಿಗೆಗೂ ಮಾರ್ಗದರ್ಶನವಾಗುವದು. 

ಪೂಜ್ಯ ತ್ಯಾಗಿಗಳ ಸಂಘದಲ್ಲಿ ಯೋಗ್ಯ ವಿದ್ವಾಂಸರ ಮೂಲಕ ಆಗಮ ಗ್ರಂಥಗಳ ಹಾಗೂ ಆಚಾರಗ್ರಂಥಗಳ ಪಠನ-ಪಾಠನ ನಿರಂತರನಡೆಯುವಂತೆ ಗೃಹಸ್ಥರು ವ್ಯವಸ್ಥೆಯನ್ನು ಮಾಡಬೇಕು. ಇದರಿಂದ ಧರ್ಮಪ್ರಭಾವಣೆಯಾಗುವದು ಮಾತ್ರವಲ್ಲದೆ, ತ್ಯಾಗಿಗಳ ಜ್ಞಾನತಪಸ್ಸಂಯಮಾದಿ ಗುಣಗಳು ಸ್ಥಿರತೆಯನ್ನೂ ವೃದ್ಧಿಯನ್ನೂ ಹೊಂದುತ್ತವೆ. ಇಂದು ಜೈನಧರ್ಮದ ಪರಂಪರಾಪ್ರವೃತ್ತಿಯು ಗುಣಭೂಷಣರಾದ ತ್ಯಾಗಿಗಳನ್ನವಲಂಬಿಸಿರುತ್ತದೆ. ಇದೇ ಆಶಯವನ್ನು ಮುಂದಿಟ್ಟು ಪಂಡಿತಪ್ರವರ ಶ್ರೀ ಆಶಾಧರರು ತಮ್ಮ ‘ಸಾಗಾರ ಧರ್ಮಾಮೃತ’ ಗ್ರಂಥದಲ್ಲಿ ಹೀಗೆ ನಿರೂಪಿಸಿದಾರೆ. 

    “ಜಿನಧರ್ಮಂ ಜಗದಗ್ಬಂಧುಮನುಬದ್ಧುಮತಪತ್ಯವತ್|
    ಯತೀನ್ ಜಿನಯಿತುಂ ಯಸ್ಯೇತ್ತತೋತ್ಕರ್ಷಯಿತುಂ ಗುಣೈಃ||”

ಗೃಹಸ್ಥನು ತನ್ನ ವಂಶಪರಂಪರೆಯ ಹಾಗೂ ದೇವಪೂಜಾ ಪಾತ್ರ ದಾನಾದಿ ಧರ್ಮಕಾರ್ಯಗಳ ಪ್ರವೃತ್ತಿಗಾಗಿ ಸತ್ಪುತ್ರನನ್ನು ಪಡೆಯಲು ಯತ್ನಿಸುವಂತೆ, ಲೋಕಕ್ಕೆ ಬಂಧುವಿನಂತೆ ಹಿತವನ್ನುಂಟುಮಾಡುವ ಜೀನಧರ್ಮವು ಪರಂಪರೆಯಿಂದ ಪ್ರವರ್ತಿಸುವಂತೆ, ಈ ಕಾಲದಲ್ಲಿ ನವೀನ ಯತಿಗಳುಂಟಾಗುವಂತೆಯೂ ಆ ಯತಿಗಳ ಜ್ಞಾನತಪಸ್ಸಂಯಮಾದಿ ಉತ್ತಮ ಗುಣಗಳು ಉತ್ಕರ್ಷತೆಯನ್ನು ಪಡೆಯುವಂತೆಯೂ ಯತ್ನಿಸಬೇಕು. 
ವ್ರತಗಳ ಆಚರನೆಯಿಂದ ನಾವು ಮರೆತುಹೋದ ಕರ್ತವ್ಯವನ್ನು ತಿರುಗಿ ನೋಡುವಂತೆ ಈ ಪರ್ವಗಳು ಸಹಾಯಕವಾಗಿವೆ.
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Ramesh
Ramesh
7 years ago

nimma lekana tumba channagi bandide. 

Ramesh
Ramesh
7 years ago
Reply to  Ramesh

thank you sir

Preeti Trd
Preeti Trd
7 years ago

nic …..sir

Adinath Patil
Adinath Patil
7 years ago

Nice…..

 

4
0
Would love your thoughts, please comment.x
()
x