ನಾ ಬರೆವ ಮುನ್ನ ಎದೆಯಲಿ
ಕವಿತೆಯಾಗಿ ಹೊಮ್ಮಿದೆ ನೀನು,
ಅದನು ಹಾಳೆಗಿಳಿಸುವ ಮುನ್ನ
ನನಗೇ ಅರಿವಿರಲಿಲ್ಲ, ನನ್ನೊಳಗಿನ ನೀನು..!
ನನ್ನ-ನಿನ್ನ ಆಂತರಿಕ ಸಂಘರ್ಷದ
ಚಂಚಲತೆಯ ಭಯದಲಿ ಕರಗುತಿರುವೆ ನಾನು,
ಕಾಣದೇ ಅಂತರ್ಮುಖಿಯಾಗಿ ಕಾಡುವ
ನಿನಗೆ ನಾ ತಿಳಿಸಲಿ ಏನನು..?
ಬರೆಯುವುದೇನನು? ಪದಗಳೇ ಇರದ
ಭಾವನೆಗಳ, ಕಾಗದದಿ ಬಣ್ಣದ ಶಾಹಿಯಲಿ..
ಬರಿಯ ವರ್ಣ ಮಿಶ್ರಿತ ಅಸ್ಪಷ್ಟ
ಮನದ ಪುಟದಲಿ ನಿನ್ನ ನೆನಪುಗಳಿಗೆ ಮಿತಿಯಿರಲಿ…
ಬರೆಬರೆದು ದಣಿಯವು ಕರಗಳು,
ಅವಕ್ಕೂ ಕಂಡಂತೆಣಿಸುತ್ತಿದೆ ನಿನ್ನ ಆ ಮುಗ್ದ ಕಂಗಳು.
ನಿನ್ನ ಕೇಳಲೊಲ್ಲೆ,ನೋಡಲೊಲ್ಲೆನೆಂಬ
ಮನವು ಮತ್ತೆ ನಿನ್ನೇ ನೆನೆಯಲು ಕಾರಣವು "ಅಸ್ಪಷ್ಟ ನಾನು"..!
ನಿನ್ನದೇ ಯೊಚನೆಗಳ ಗೆಲ್ಲುವ ಯೋಜನೆಯಲಿ
ಪದೇಪದೇ ಸೋಲೇ ನನಗಿಲ್ಲಿ..
ನಾನೇ ಮರೆತು ಸುಮ್ಮನಾಗುತಿರಲು,
ನೀನೇಕೆ ಬಂದೆ ಅಲ್ಲಿ,,ಆ ಸಿಹಿ ನಗುವ ಚೆಲ್ಲಿ..?
ಬೇಡೆನಗೆ ನೀನು..ಅಗೋಚರ,ಅನಾಮಿಕ,
ಅಸ್ಪಷ್ಟ ನೀನು..ಇದೇ ನಿನ್ನ ಕೊನೆಯ
ನೆನಪೆಂದು ನಿರ್ಧರಿಸಿ, ಸಮಾಧಾನಿಸಲು,
ಎಲ್ಲೆಯ ಮೀರಿ ಬಂದೆಯೇನು..ಮತ್ತೆ ಕಂಡೆ ನನ್ನೊಳಗೆ ಅದೇ ನೀನು…!!
-ರಾಣಿ.ಪಿ.ವಿ
ವಾ ಎಂತಹ ಅಧ್ಬುತ ಕವನ ತುಂಬಾ ಓಳ್ಳೆಯದು
ಸುಂದರ, ಸುಲಲಿತ, ಸುಮಧುರ…………. ಈ ಚಂಚಲ ಕಾವ್ಯಧಾರೆ……!!!!!!!!!!!!
"ಮತ್ತೆ ಕಂಡೆ ನನ್ನೊಳಗೆ ಅದೇ ನೀನು…!! " ಎನ್ನುವಲ್ಲಿ ಕವಿಯತ್ರಿಯು ಕಾವ್ಯವನ್ನು ಗೆಲ್ಲಿಸಿದ್ದಾರೆ.
ಉತ್ತಮ ಕಾವ್ಯ ಓದಿಸಿದ್ದಕ್ಕಾಗಿ ಧನ್ಯವಾದಗಳು.
Nice one with very simple words…good!!
ತುಂಬಾ ಸುಂದರ…..ಬರವಣಿಗೆ….ಯಾಕೋ ತುಂಬಾ…ಟಚ್ ಆಯ್ತು ..
prothsahakkagi ananta ananta Danyavadagalu…………………:) 🙂
such a nyc poem rani…all d best fo ua future writings:)
really nice one rani… keep it up.