ಅವನು ಕರ್ಣ. ಆತ ಕುಂತಿಯ ಮೊದಲ ಮಗ. ಪಾಂಡವರ ಹಿರಿಯಣ್ಣ. ಪರಶುರಾಮರ ಮೆಚ್ಚಿನ ಶಿಷ್ಯ. ದುರ್ಯೋಧನನ ಆಪ್ತಮಿತ್ರ. ಅರ್ಜುನನ ಪರಮಶತ್ರು. ಅವನು, ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ ಉಂಟುಮಾಡುವ ಸುನಾಮಿ. ಭೀಮನ ಪಾಲಿಗೊಂದು ಅಸೂಯೆ. ಕರ್ಣನೆಂದರೆ ಅಷ್ಟೇ ಅಲ್ಲ. ಮಹಾಭಾರತದ ಮಹಾನ್ ಗ್ರಂಥದಲ್ಲಿ ತನ್ನವರಿಂದಲೆ ಆತಾಷೆ, ಅವಮಾನ, ಕಿಳಿರಿಮೇಗಳ ಚಕ್ರಯೋಹದೊಳಗೆ ಸಿಲುಕಿ ಬಳಲಿ ಬೆಂದ ಆತಭಾಗ್ಯದಾತ.
ಆತ, ದ್ರೌಪದಿಯಂಥ ದ್ರೌಪದಿಯ ಎದೆಯಲ್ಲೂ ಆಸೆಯ ತರಂಗ ಎಬ್ಬಿಸಿದ ಸುಂದರಾಂಗ. ಧಾನಶೋರ, ಅಂಗರಾಜ, ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ, ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ ನತದೃಷ್ಟ ಮತ್ತು ಮಹಾಭಾರತದ ದುರಂತ ನಾಯಕ!
ಕುಂತಿ ಪಡೆದ ಐದು ವರಗಳಲ್ಲಿ ವರದ ಶಕ್ತಿ ತಿಳಿಯಲೆಂದು ಮಂತ್ರ ಉಚ್ವರಿಸಿದಾಗ ಸೂರ್ಯದೇವನ ಸಮಾಗಮನದಿಂದ ಹುಟ್ಟಿದವನು ಕರ್ಣ. ಸೂರ್ಯ ಪುತ್ರನಾಗಿದ್ದರಿಂದ ಸೂರ್ಯದೇವ ಮಗನೆಂಬ ಮಮತೆಯಿಂದ ಅವನು ಕವಚ ಕುಂಡಲಗಳೊಂದಿಗೇ ಜನಿಸುವಂತೆ ನೋಡಿಕೊಂಡ. ಮುಂದೆ, ಅಪವಾದಕ್ಕೆ ಹೆದರಿದ ಕುಂತಿ, ಆಗ ತಾನೆ ಹುಟ್ಟಿದ ಮಗುವನ್ನು ನದಿಯಲ್ಲಿ ತೇಲಿ ಬಿಡುವುದು, ಹಾಗೆ ತೇಲಿ ಹೋದ ಮಗು ರಾಧಾ-ಅದಿರಥ ಎಂಬ ಬೆಸ್ತ ದಂಪತಿಗೆ ಸಿಗುವುದು; ಅವರಿಬ್ಬರೂ ಈತನನ್ನು ಸಾಕುವುದು ಮತ್ತು ಅದೇ ಕಾರಣಕ್ಕೆ ಸೂತಪುತ್ರ ಎಂಬ ಹೀಯಾಳಿಕೆಯಂಥ ಮಾತಿಗೆ ಕರ್ಣ ಪದೇಪದೇ ಈಡಾಗುವುದು… ಈ ಕಥೆ ಎಲ್ಲರಿಗೂ ಗೊತ್ತು
ಆದರೆ ನಾನಿಲ್ಲಿ ಹೇಳಬಯಸುತಿರುವುದು ಕೌರವೇಶ ದುರ್ಯೋಧನ ಮತ್ತು ರಾಧೆಯನ ಸ್ನೇಹ ಸಂಬಂಧದ ಬಗ್ಗೆ. ದುರ್ಯೋಧನ ಕುರು ಸಾಮ್ರಾಜ್ಯದ ಚಕ್ರವರ್ತಿಯಾಗಿದ್ದರು ಜಗ ನಿಂದನೆಗೆ ಒಳಗಾದ ಸೂತಪುತ್ರ ಕರ್ಣನನ್ನು ತನ್ನ ಸ್ನೇಹಿತನನ್ನಾಗಿ ಪಡೆದದ್ದು. ಮತ್ತು ಅವನು ಪಾಂಡವರ ಜೊತೆ ಶಕ್ತಿ ಪ್ರದರ್ಶನದಲ್ಲಿ ರಾಜ್ಯವಿಲ್ಲದವನೆಂಬ ಕಾರಣಕ್ಕೆ ಒಳಗಾದಾಗ ಕೌರವೇಶ ತನ್ನ ಅಂಗ ರಾಜ್ಯದ ರಾಜನನ್ನಾಗಿ ಮಾಡುತ್ತಾನೆ ಮತ್ತು ಕುರು ಸೇನೆಯ ಸೈನ್ಯಾಧಿಕಾರಿಯನ್ನಾಗಿಯೋ ಮಾಡುತ್ತಾನೆ.
ಒಮ್ಮೆ ಕರ್ಣ ದುರ್ಯೋಧನನ ಪತ್ನಿ ಭಾನುಮತಿ ಜೊತೆ ಪಗಡೆಯಾಡುವ ಸಂಧರ್ಭದಲ್ಲಿ ಆಕೆಯನ್ನು ಹಿಡಿಯಲು ಹೋಗುತ್ತಾನೆ. ಆಕಸ್ಮಿಕವಾಗಿ ಆಕೆಯ ಮುತ್ತಿನ ಸರ ಕಿತ್ತು ಮಣಿಗಳೆಲ್ಲಾ ಚೆಲ್ಲಾಪಿಲ್ಲಿಯಾಗುತ್ತವೆ. ಆ ವೇಳೆ ಅಲ್ಲಿಗೆ ದುರ್ಯೋಧನ ಬರುತ್ತಾನೆ. ಬಂದವನು ಒಂದು ಸ್ವಲ್ಪವೂ ಅನುಮಾನಿಸದೆ ನಾನು ಮಣಿಗಳನ್ನು ಆಯ್ದು ಕೊಡಲೇ ಎಂದು ಪ್ರಶ್ನಿಸುತ್ತಾನೆ. ಆಗ ಕರ್ಣ, ಧುರ್ಯೋಧನನಿಗೆ ರಾಜ ನನ್ನನ್ನು ಕ್ಷಮಿಸು ಎಂದು ಕೇಳುತ್ತಾನೆ, ಕರ್ಣ ನನಗೆ ನಿನ್ನಲ್ಲಿ ನಂಬಿಕೆಯಿದೆ ಎಂದು ದುರ್ಯೋಧನನೇ ಸಮಾಧಾನಿಸುತ್ತಾನೆ. ಅಷ್ಟರಮಟ್ಟಿಗೆ ದುರ್ಯೋಧನನಿಗೆ ತನ್ನ ಗೆಳೆಯನ್ನಲ್ಲಿ ನಂಬಿಕೆ ವಿಶ್ವಾಸವಿರುತ್ತದೆ.
ದುರ್ಯೋಧನ ಎಂದರೇ ಕೇವಲ ಕುರುಸಾರ್ವಭೌಮ, ಧೃತರಾಷ್ಟ್ರನ ಪುತ್ರ, ಹಠಮಾರಿ, ಕ್ರೂರಿ, ಇದೇನೂ ಆಗಿರಲಿಲ್ಲ ಕರ್ಣನ ಪಾಲಿಗೆ ಆತ ಜೀವದ ಗೆಳೆಯ, ಅಂತರಂಗದ ಉಸಿರು, ಅಣ್ಣನಂಥ ಆತ್ಮ ಬಂಧು, ಇಡೀ ಜಗತ್ತೇ ಕರ್ಣನನ್ನು ಸೂತಪುತ್ರ, ಬೆಸ್ತ ಎಂದು ಹಂಗಿಸಿದ ಕ್ಷಣದಲ್ಲಿ ಅಂಗರಾಜ್ಯದ ಕಿರೀಟ ತೊಡಿಸಿದ ಧೀರ ದುರ್ಯೋಧನ . ಅಂಥ ಗೆಳೆಯನಿಗೆ ಯುದ್ದ ಗೆದ್ದು ಕೊಡಬೇಕು. ಆ ಮೂಲಕ ಅವನ ಋಣದಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತನಾಗಬೇಕು ಎಂಬ ಆಸೆ ಕರ್ಣನಿಗಿತ್ತು.
'ಯುದ್ಧರಂಗದಲ್ಲಿ ಕರ್ಣ' ಎಂಬ ಮಾತು ಕೇಳಿಯೇ ಪಾಂಡವರಿಗೆ ಪುಕಪುಕ ಶುರು ವಾಗುತ್ತದೆ. ಕೃಷ್ಣನಂಥ ಕೃಷ್ಣನೂ ಒಂದರೆಕ್ಷಣ ಕಂಗಾಲಾಗುತ್ತಾನೆ. ಕುರುಕ್ಷೇತ್ರ ಯುದ್ಧ ಆರಂಭವಾದಾಗ ಕರ್ಣನಿಗೆ ಕೃಷ್ಣ ಆತನ ಜನ್ಮರಹಸ್ಯವನ್ನು ತಿಳಿಸಿ, ನೀನು ಪಾಂಡವರಿಗೆಲ್ಲ ಹಿರಿಯ, ನೀನು ಬಂದು ಪಾಂಡವರ ಜೊತೆ ಸೇರು ಎಂದು ಹೇಳುತ್ತಾನೆ. ಆಗ ಕರ್ಣ ನಾನು ದುರ್ಯೋಧನನನ್ನು ಬಿಟ್ಟು ಪಾಂಡವರ ಜೊತೆ ಹೋಗುವುದಿಲ್ಲ ಎನ್ನುತ್ತಾನೆ.ಇದಕ್ಕೆ ಕಾರಣವೇನು ಎಂದು ಕೃಷ್ಣ ಕೇಳಿದಾಗ, ತಾನು ದ್ರೌಪದಿ ಸ್ವಯಂವರದಲ್ಲಿ ಬಿಲ್ಲನ್ನು ಎತ್ತಲು ಬಂದಾಗ ತನ್ನನ್ನು ಸೂತ ಪುತ್ರ ಎಂಬ ಕಾರಣಕ್ಕೆ ಬಿಲ್ಲನ್ನೇರಿಸಲು ನಿರಾಕರಿಸಿದರು. ಆ ಸಮಯದಲ್ಲಿ ನನ್ನನ್ನು ಅಂಗ ದೇಶದ ರಾಜನನ್ನಾಗಿ ಮಾಡಿ ಸ್ಥಾನಮಾನ ಕಲ್ಪಿಸಿದವನು ದುರ್ಯೋಧನ ನಾನು ರಾಜನಿಗೆ ನಿಷ್ಠನಾಗಿದ್ದೇನೆ. ಹೀಗಾಗಿ ನಾನು ಪಾಂಟವರ ಜೊತೆ ಸೇರಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ ಕರ್ಣ. ಹೀಗೆ ಕರ್ಣನಿಗೆ ಹತ್ತು – ಹಲವು ಸಂದರ್ಭದಲ್ಲಿ ದುರ್ಯೋಧನ ಬೆಂಬಲವಾಗಿ ನಿಲ್ಲುತ್ತಾನೆ. ಮಹಾಭಾರತ ಯುದ್ದದಲ್ಲಿ ಯಾವ ಆಮೀಷಗಳಿಗೆ ಬಲಿಯಾಗದೇ ದುರ್ಯೋಧನನ ಪರವಾಗಿ ಯುದ್ಧಮಾಡುವುದಾಗಿ ಹೇಳುತ್ತಾನೆ. ಕೊನೆಗೆ ಕರ್ಣ ಅವನಿಗೊಂದು ಮಾತು ಕೊಡುತ್ತಾನೆ. ಯುದ್ದದಲ್ಲಿ ಸೈನಿಕರನ್ನಷ್ಟೇ ಕೊಲ್ಲುತ್ತೇನೆ, ಪಾಂಡವರನ್ನು ಮುಟ್ಟುವುದಿಲ್ಲ ಹೇಳುತ್ತಾನೆ. ನಂತರ ಕೃಷ್ಣ ಕರ್ಣನ ಬಳಿಗೆ ಕುಂತಿಯನ್ನು ಕಳುಹಿಸುತ್ತಾನೆ.
ಕರ್ಣನ ಬಳಿ ಬಂದ ಕುಂತಿ ತನ್ನ ಜೊತೆಗೆ ಬಾ ಎಂದು ಕರೆಯತ್ತಾಳೆ. ಅದಕ್ಕುತ್ತರಿಸಿದ ಕರ್ಣ, ಇಂದೇನೋ ನಾನು ನಿನ್ನ ಮಗ ಎಂದು ನನಗೆ ಗೊತ್ತಾಯಿತು.ಆದರೆ ಇದ್ಯಾವುದೂ ಗೊತ್ತಿಲ್ಲದ ದಿನಗಳಲ್ಲಿ ನನ್ನನ್ನು ಕೌರವ ಸಲಹಿದ್ದಾನೆ. ಸ್ನೇಹಹಸ್ತ ಚಾಚಿದ್ದಾನೆ. ಅವನು ನನ್ನ ಕುಲ ನೋಡಲಿಲ್ಲ. ಅವನನ್ನು ನಾನು ಬಿಟ್ಟು ಬರುವುದಿಲ್ಲ ಎನ್ನುತ್ತಾನೆ. ಕುಂತಿ ಕೊನೆಗೆ ಕರ್ಣನಿಗೆ, "ಒಮ್ಮೆತೊಟ್ಟ ಬಾಣವನ್ನು ಮರಳಿ ತೊಡದಿರು, ನನ್ನ ಐವರು ಮಕ್ಕಳನ್ನು ಕಾಪಾಡು" ಎಂದು ಕೇಳಿಕೊಳ್ಳುತ್ತಾಳೆ. ಕೊನಗೆ ಕೌರವರ ಪರವಾಗಿ ಕರ್ಣ ಯುದ್ಧ ಮಾಡಿದರೂ ಕುಂತಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೆ. ಇಲ್ಲಿ ಮಗನಿಗೆ ತಾಯಿಯೇ ರಂಣರಂಗಸಲ್ಲಿ ಸಾವಿನ ದವಡೆಗೆ ನೂಕಿಬಿಡುತ್ತಾಳೆ. ಈ ವಿಷಯ ದುರ್ಯೋಧನನಿಗೆ ತಿಳಿದರೂ ಕರ್ಣನನ್ನು ಆತ ಅಪಮಾನಿಸುವುದಿಲ್ಲ. ಅವರಿಬ್ಬರ ಸ್ನೇಹ ಮತ್ತಷ್ಟು ಗಾಢವಾಗುತ್ತದೆ. ಹೀಗೆ ಮಹಾಭಾರತದಲ್ಲಿನ ಅವರಿಬ್ಬರ ಸ್ನೇಹ ಎಂದೆಂದಿಗೂ ಅಮರವಾಗಿದೆ.
ಇಂತಹ ಸ್ನೇಹಿತರು ಜಗತ್ತಿನಲ್ಲಿ ಮತ್ತಾರು ಇಲ್ಲವೆನಿಸಿಬೀಡುತ್ತದೆ. ನೀವು ಅಮೃತವರ್ಷಿಣಿ ಚಲನಚಿತ್ರ ನೋಡಿರಬಹುದು . ಅಲ್ಲಿ ಈ ಪ್ರಸಂಗದ ಉಲ್ಲೇಖ ಇದೆ. ಅಮೃತವರ್ಷಿಣಿಯಲ್ಲಿ ನಾಯಕಿ ಸುಹಾಸಿನಿಗೆ ಮದುವೆಯಾಗಿದ್ದರು ಅವಳ ಗಂಡನ ಸ್ನೇಹಿತನಾಗಿ ಮನೆಗೆ ಬಂದು ಸುಹಾಸಿನಿಯನ್ನು ಮನದಲ್ಲೆ ಪ್ರೀತಿಸುತ್ತಾನೆ ಖಳನಾಯನಂತಾದ ರಮೇಶ್ ಅರವಿಂದ್. ಇದು ನಾಯಕನಿಗೆ ತಿಳಿದಾಗ ಅವನು ರಮೇಶ್ ಬಳಿ ಬಂದು "ನಾನು ದುರ್ಯೋಧನನಾಗುತ್ತೇನೆ, ನೀನು ಕರ್ಣನಾಗಬಲ್ಲೆಯಾ?" ಎಂದು ಕೇಳುವ ಮಾತು ಸದಾ ಸ್ನೇಹವೆಂಬ ಶಬ್ದಕೇಳಿದಾಗ ಬಂದು ಕಣ್ ಮುಂದೆ ನಿಲ್ಲುವ ದೃಷ್ಯ. ನಿಜ ಇಂದು ಸ್ನೇಹವೆಂಬದು ವ್ಯವಹಾರದ ವಸ್ತುವಾಗಿದೆ. ಇಬಬರು ತುಂಬಾ ಒಳ್ಳೆಯ ಗೆಳೆಯರಾಗಿದ್ದು ಒಬ್ಬನ ಲೇಖನಿಯನ್ನು ಮತ್ತೊಬ್ಬ ಕಿತ್ತುಕೊಂಡರೆ ಜಗಳವಾಡಿಯಾದರು ವಾಪಸ್ ಕಿತ್ತುಕೊಳ್ಳುತ್ತಾರೆ ಅಷ್ಟರಲ್ಲೇ ಗೊತ್ತಾಗಿಬಿಡುತ್ತದೆ ಅವರಿಬ್ಬರ ಸ್ನೇಹಸಂಭಂದ ಎಷ್ಟಿದೆ ಎಂದು.
ಕರ್ಣನಂತ ಒಬ್ಬ ಸ್ನೇಹಿತ ಇದ್ದರೆ ಸಾಕು. ಬದುಕು ಸುಂದರ ಸ್ವರ್ಗ. ಕೋಟಿ ಜನುಮಗಳ ಪುಣ್ಯ ಇಂತಹ ಸ್ನೇಹಿತ.ನನಗೂ ಒಬ್ಬ ಇದ್ದನೆ ಅದೆಷ್ಟು ಜನುಮಗಳ ಪುಣ್ಯವೇನೊ ತಿಳಿಯದು ಅವನು ನನಗೆ ಸಿಕ್ಕಿದ್ದು…,
-ಸಿದ್ದುಯಾದವ್ ಚಿರಿಬಿ…,