ಅದ್ಭುತವಾದ ವಿಜಯವನ್ನು ಸಾಧಿಸಿದವರೆಲ್ಲ ಉನ್ನತ ಸ್ಥಾನದಿಂದ ಬಂದವರಲ್ಲ…! ತೀರಾ ಕೆಳಮಟ್ಟದಿಂದಾನೇ ಬಂದಿರುವವರು….! ಕಷ್ಟದ ಅರಿವಿದ್ದರೆ, ಜಯದ ರುಚಿ ಬೇಕು ಎನಿಸುವುದು. ಒಮ್ಮೆ ಕೆಲವು ಸಾಧಕರ ಬಗ್ಗೆ ತಿಳಿದುಕೊಂಡರೆ, ನಾವು ಎಲ್ಲಿದ್ದೇವೆ? ಎನ್ನುವಂತಹದ್ದು ಅರಿವಾಗುತ್ತದೆ. ಇಂದು ಜಗತ್ತಿನಾದ್ಯಂತ ಅತಿ ಹೆಚ್ಚು ಜನರು ಇಷ್ಟ ಪಡುವ ಆಟ ಫುಟ್ಬಾಲ್. ಸದ್ಯದ ಯುವಕರಿಗೆ ಫುಟ್ಬಾಲ್ ಅಲ್ಲಿ ಇಷ್ಟವಾಗುವ ಆಟಗಾರ "ಲೂಯಿಸ್ ಲಯೋನೆಲ್ ಆ್ಯಂಡ್ರೆಸ್ ಮೆಸ್ಸಿ" ಲೂಯಿಸ್ ರೊನಾಲ್ಡೊ ತರ ಆಕ್ರಮಣಕಾರಿ ಆಟಗಾರನಲ್ಲದಿದ್ದರೂ ಆತ ಜಗತ್ತಿಗೆ ಇಷ್ಟವಾಗುತ್ತಾನೆ….! ಇಷ್ಟರ ಮಟ್ಟಿಗೆ ಈತ ಜನಪ್ರಿಯನಾಗಲು ಕಾರಣ ಆತನ ಸತತವಾದ ಶ್ರಮ, ಪ್ರಯತ್ನ. ಆದರೆ ಆತ ಫುಟ್ಬಾಲ್ ಟ್ರೈನಿಂಗ್ ಪಡೆಯುದಕ್ಕಾಗಿ ಅಂಗಡಿಗಳಿಗೆ ಟೀಯನ್ನು ಸರ್ವ ಮಾಡುತ್ತಿದ್ದ ಎಂದರೆ ನಂಬುತ್ತೀರಾ…?
ಭಾರತ ಸರ್ಕಾರದ ತೆರಿಗೆಯಲ್ಲಿ 5% ತೆರಿಗೆ ಕಟ್ಟುತ್ತಿರುವ ಸಂಸ್ಥೆಯೆಂದರೆ ರಿಲಯನ್ಸ್. ಈ ಕಂಪನಿಯ ನಿರ್ಮಾತ್ರ ಧೀರೂಬಾಯಿ ಅಂಬಾನಿ. ಒಂದು ಕಾಲದಲ್ಲಿ ಪೆಟ್ರೋಲ್ ಬಂಕ್ ಅಲ್ಲಿ, ಪೆಟ್ರೋಲ್ ಹಾಕುತ್ತಿದ್ದ ಹುಡುಗ …!
ಸಿನಿಮಾ ಹೀರೋಗಳ ನಟನೆಯನ್ನು ನೋಡುವ ಸಲುವಾಗಿ, ಸ್ನೇಹಿತರ ಬಳಿ 20 ರೂಪಾಯಿ ಸಾಲ ಕೇಳುತ್ತಿದ್ದವರು ಬಾಲಿವುಡ್ನ ಬಾದಶಾ ಶಾರುಕ್ ಖಾನ್ …!
ಡಿಗ್ರಿ ಕೂಡಾ ಕಂಪ್ಲೀಟ್ ಮಾಡದ "ಬಿಲ್ ಗೇಟ್ಸ" ಇಂದು ಜಗತ್ತಿನ ಶ್ರೀಮಂತ ವ್ಯಕ್ತಿ ..!
ಕೀಬೋರ್ಡ್ ಪ್ಲೇಯರ್ ಆಗಿದ್ದ ಎ ಆರ್ ರೆಹಮಾನ್ ಇಂದು ಭಾರತವೇ ಹೆಮ್ಮೆ ಪಡುವಂತಹ ಸಂಗೀತಲೋಕದ ದಿಗ್ಗಜ…!
ಅಷ್ಟೇ ಯಾಕೇ?
ತನ್ನ ಹೆಂಡತಿ ಹಾಗೂ ಮೂರು ಮಕ್ಕಳಿಗೋಸ್ಕರ ಮೂಲೆಯಲ್ಲಿ ಬಿದ್ದಿದ್ದ ಬಾಕ್ಸಿಂಗ್ ಗ್ಲೌಸ್ನ ಧರಿಸಿ "ವಿಶ್ವ ಬಾಕ್ಸಿಂಗ್ ಚಾಂಪಿಯನ್" ಎನಿಸಿದ ಸಿಂಡರೆಲ್ಲಾ ಮ್ಯಾನ್ , ಜೇಮ್ಸ್ ಬ್ರಾಡೋಕ್ ಜೀವನ ಚರಿತ್ರೆ ನಮಗೆ ಸ್ಪೂರ್ತಿಯಾಗುತ್ತೆ …! ಹೀಗೆ ಸಾಧಕರ ಪಟ್ಟಿ ಮಾಡುತ್ತ ಹೋದರೆ ಪಟ್ಟಿ ಬೆಳೆಯುತ್ತ ಹೋಗುತ್ತೆ ….
ಆದರೆ …..
ಆ ಪಟ್ಟಿಯಲ್ಲಿ ನಿಮ್ಮ ಹೆಸರು ಬರುತ್ತದೋ ಇಲ್ಲವೋ ಎನ್ನುವುದು ನಿಮಗೆ ಬಿಟ್ಟಿದ್ದು…!
ಇನ್ನು ನಿಮ್ಮ ಅಂಗವೈಕಲ್ಯ ನಿಮ್ಮ ಸಾಧನೆಗೆ ಅಡ್ಡಿಯಾಗುತ್ತದೆ ಎಂದು ಭಾವಿಸಿದ್ದೀರಾ? ನಿಜವಾಗಿಯೂ ಇಲ್ಲ!
ಚೆನ್ನೈನಲ್ಲಿ ಜನಿಸಿದ ಸುಧಾಚಂದ್ರನ್ ಗೆ ಅಪಘಾತದಲ್ಲಿ ಬಲಗಾಲು ಕಳೆದುಕೊಂಡರು ಸಹಿತ, ಇವತ್ತಿಗೂ ಕೂಡಾ ಅಂತರಾಷ್ಟ್ರೀಯ ನ್ರತ್ಯಗಾರ್ತಿ…!
ಒಂಬತ್ತನೆಯ ವಯಸ್ಸಿನಲ್ಲಿ ಸ್ಟಾರ್ ಗಾರ್ಡಟ್ಸ್ ಎನ್ನುವ ಕಾಯಿಲೆಗೆ ತುತ್ತಾದ ಮಾರ್ಲ ರುನ್ಯಾನ್ ತನ್ನ ಕಣ್ಣು ಕಳೆದುಕೊಂಡರು ಸಹಿತ ಪ್ಯಾರಾ ಒಲಿಂಪಿಕ್ಸ್ ಅಲ್ಲಿ, ಇವಳ ಸಾಧನೆ ಅಪ್ರತಿಮ. ನಾಲ್ಕು ಚಿನ್ನದ ಪದಕಗಳನ್ನು 1992 ರ ಓಲಿಂಪಿಕ್ನಲ್ಲಿ ಗೆದ್ದ ಈ ಮಹಿಳೆ ಮ್ಯಾರಾಥಾನಲ್ಲಿ, ಹೆಪ್ಲಾಟಾತಾನ್ ವಿಭಾಗದಲ್ಲಿ ಯಾರೂ ಕೂಡಾ ಹತ್ತಿರ ಬಾರದಂತೆ ಇರುವ ಸಾಧನೆ ಮಾಡಿದ್ದಾಳೆ…!
ಮಾನಸಿಕ ಹುಚ್ಚು ಎಂದು ಕರೆದ ಜಗತ್ತಿಗೆ "ವಿನ್ಸೆಂಟ್ ವ್ಯಾನ್ ಗೋಗ್ " ನೀಡಿದ ಕೊಡುಗೆ, ಆತನ ಅದ್ಭುತ ವರ್ಣಚಿತ್ರಗಳು. ಕಿವುಡನಾಗಿದ್ದರು ಸಹ ಸುಶ್ರಾವ್ಯವಾಗಿ ಸಂಗೀತ ಸಂಯೋಜನೆ ಮಾಡುತ್ತಿದ್ದವರು "ಲುಡ್ವಿಗ್ ವ್ವಾನ್ ಬೀತೋವೆನ್ "
"ಸೆರೆಬ್ರಲ್ ಪಾಲ್ಸಿ " ಎನ್ನುವ ಕಾಯಿಲೆಗೆ ತುತ್ತಾದ ಐರಿಷ್ ಲೇಖಕ "ಕ್ರಿಸ್ಟಿಟ್ರಾನ್ "ನ ಮಾತುಗಳು ಇವತ್ತಿಗೂ ಸ್ಪೂರ್ತಿದಾಯಕ. ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಬಳಲುತ್ತಿರುವ ಬ್ರಿಟನ್ನಿನ ಪ್ರಖ್ಯಾತ ಭೌತಶಾಸ್ತ್ರಜ್ಞ "ಸ್ಟೀಫನ್ ಹಾಕಿ೦ಗ್ಸ್" ನ ಜೀವನ ಚರಿತ್ರೆ ನಿಜಕ್ಕೂ ಕಣ್ಣೀರು ತರಿಸುವಂತಹದ್ದು…! ಅಷ್ಟೇ ಯಾಕೇ? ಇತ್ತೀಚೆಗಷ್ಟೇ ಒಂಟಿ ಕಾಲಲ್ಲಿ ಎವರೆಸ್ಟ್ ಶಿಖರ ಹತ್ತಿದ ಅರುಣಿಮಾ ಸಿನಾರ ಸಾಧನೆ ಎಂತಹವರಿಗಾದರೂ ಸಾಧಿಸಬೇಕು ಎನ್ನುವ ಮನೋಭಾವನೆ ತರುವಂತಹದ್ದು …!
"Life without limbs "ಎನ್ನುವ ಸಂಸ್ಥೆಯ ಸ್ಥಾಪಕನಾದ ನಿಕೊಲಾಸ್ ಜೇಮ್ಸನ ಎರಡು ಕೈ, ಎರಡು ಕಾಲು ಇಲ್ಲದಿದ್ದರೂ ಆತನ ಮಾತುಗಳು, ಅಂಗವಿಕಲರ ಜೀವನಕ್ಕೆ ದುಡಿಯುವ ಆತನ ಸಂಸ್ಥೆಯ ಬಗ್ಗೆ ತಿಳಿದುಕೊಂಡರೆ, ನಿಜಕ್ಕೂ ನಮ್ಮ ಹ್ರದಯ ಮರುಗುತ್ತದೆ ..! ಆತನದೇ ಒಂದು ಮಾತು. "No legs No arms No worries " ಇದನ್ನೆಲ್ಲಾ ತಿಳಿದುಕೊಂಡಮೇಲೆ ಎಲ್ಲ ಅಂಗಾಂಗಗಳು ಸರಿ ಇರುವ ನಾವುಗಳು ….ಇದುವರೆಗೆ ಏನನ್ನಾದರೂ ಸಾಧಿಸಿದ್ದೇವಾ?
ಇಲ್ಲ 20 ,30 ವರ್ಷಗಳಿಂದ ಅದೇ ಉದಯಿಸುವ ಸೂರ್ಯ, ಅದೇ ಅಸ್ತಮಿಸುವ ಸೂರ್ಯನನ್ನ ನೋಡಿ ಕಾಲ ಕಳೆದಿದ್ದೇವೆ ಅಷ್ಟೇ! ಏನಾದರೂ ಸಾಧಿಸಬೇಕು ಎನ್ನುವ ಮನಸ್ಸು ಮಾಡಿ, ಆರಂಭಿಸಿದರೆ … ಮೊದಲಿಗೆ ನಿಮ್ಮನ್ನು ಸ್ವಾಗತಿಸಿ, ಬರ ಮಾಡಿಕೊಳ್ಳುವುದು "ಸೋಲು" ಅಷ್ಟೇ ಸಾಕು ನಮಗೆ….. ವಿಫಲನಾದರೆ ಮತ್ತೆ ಎಂದಿಗೂ ಸಹ ಆ ಗಮ್ಯದ ಕಡೆ ತಲೆ ಹಾಕಿ ಮಲಗಲ್ಲ ನಾವು …!
"ಸೋಲು ನಿನ್ನನ್ನು ಸೋಲಿಸುವ ಮುಂಚೆ ,ನಿನ್ನ ಸೋಲನ್ನ ನೀನೇ ಸೋಲಿಸು, ಯಾ ನೀನು ಬಲಹೀನನಾದರೆ ಸೋಲನ್ನ ಮೊದಲೇ ಒಪ್ಪಿಕೋ"
ಈ ಪ್ರಪಂಚವನ್ನು ಅವಲೋಕಿಸುವುದು ನಮ್ಮ ಕರ್ತವ್ಯ. ನಾವು ಅದನ್ನು ಅವಲೋಕನ ಮಾಡದೆ ಇದ್ದರೆ ವಿಜಯಿಯಾಗಲು ಸಾಧ್ಯವಿಲ್ಲ ….! ನಮ್ಮ ನಮ್ಮ ಅಂತಶ್ಚೇತನ ಮನಸ್ಸಲ್ಲಿ ಒಂದು ಪರಿಹಾರವಿದೆ. ಅನೇಕ ಮಹನೀಯರು ಬದುಕಿನಲ್ಲಿ ಪೆಟ್ಟು ತಿಂದು ; ಉತ್ತಮ ಸ್ಥಿತಿಗೆ ತಲುಪುವಂತೆ ಮಾಡಿದ್ದು ಇದೇ ಮನಸ್ಸು! ಏನನ್ನಾದರೂ ಸಾಧಿಸಬೇಕು ಅಂತ ಮನಸ್ಸು ಮಾಡಲು ನಮಗೆ ಅವಶ್ಯವಾಗಿ ಬೇಕಾಗಿರುವುದು ಒಂದು ಹಟ…. ಇಲ್ಲ ಒಂದು ಕಾರಣ ….
ನಮ್ಮನ್ನು ಪ್ರಚೋದಿಸುವ ಒಂದು ಕಾರಣ ನಮ್ಮ ಸುಪ್ತ ಮನಸ್ಸಲ್ಲಿ ಅಡಗಿದೆ. ಅದನ್ನು ನಾವು ಹುಡುಕಿದರೆ ಜಯದ ಪಥ ಸುಲಭ. ಅದು ನಿಮ್ಮನ್ನು ಮಲಗಲು ಬಿಡುವುದಿಲ್ಲ …! ಎಚ್ಚರವಾಗಿದ್ದಾಗಲಂತೂ ಅದರದ್ದೇ ಯೋಚನೆ ..! ಪ್ರತಿಕೂಲ ವಾತವರಣವಿಲ್ಲದಿದ್ದಾಗಲಂತೂ ಅದು ನಿಮ್ಮನ್ನು ಸಾಯಿಸಿ ಬಿಡುತ್ತದೆ ….! ನಿಮಗೆ ಕಿರಿಕಿರಿ ತರುವ ಅಂಶಗಳನ್ನು ಯಾವತ್ತೂ ದ್ವೇಷಿಸ ಬೇಡಿ …! ಅದು ಶಾಲಾ ಸಮಯದ ಶಿಕ್ಷಕನಿದ್ದಂತೆ …! ಉಳಿಪೆಟ್ಟು ನೀಡಿದರು ಸಹ ಅದು ನಿಮ್ಮನ್ನು "ದೈವಶಿಲ್ಪ"ವನ್ನಾಗಿ ಮಾಡಿಸುವುದು .
ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ. Necessity is the mother of invention ಅಂತ. ಅಗತ್ಯತೆ ಎನ್ನುವುದು ನಿಮ್ಮ ಬಾಕಿ ಉಳಿಸಿದ ಕೆಲಸಗಳನ್ನ ತನ್ನಿಂದ ತಾನೇ ಮಾಡಿಸುವುದು. ಅದಕ್ಕಾಗಿ ಮಾನವನಿಗೆ ಒಂದು ಅಗತ್ಯತೆ ಇರಲೇಬೇಕು. ಯಾರೋ ಬಂದು ನಿಮ್ಮನ್ನು ಉದ್ದಾರ ಮಾಡುತ್ತಾರೆ ಎಂದು ಆಶಿಸುವುದು ಮರೀಚಿಕೆಯಿಂದ ಬಾಯಾರಿಕೆ ತೀರಿಸಿಕೊಂಡ ಹಾಗೆ ..! ಸ್ವಾಮಿ ವಿವೇಕಾನಂದರು ಹೇಳುತ್ತಾರೆ "ನಿಮ್ಮ ಭವಿಷ್ಯದ ನಿರ್ಮಾತ್ರರು ನೀವೇ " ಎಂದು. ಈ ಜಗತ್ತು ನೀನು ಕೇಳಲಿ, ಬಿಡಲಿ . ಸಮಸ್ಯೆಗಳನ್ನ ತಂದೊಡ್ಡುತ್ತದೆ. ಅದಕ್ಕ್ಯಾಕೆ ಹಿಂಜರಿಯುತ್ತಿಯಾ? ದು:ಖ ಪಡ್ತೀಯಾ? ಅವನ್ನು ಎದುರಿಸು. ಕಠಿಣ ಸಂದರ್ಭಗಳು ಬಂದರೆ ;ಅದು ನಿಮ್ಮ ಶಾಪ ಅಲ್ಲ. ನಿಮಗೆ ಅದು ದೇವರು ನೀಡಿದ ವರ ಎಂದು ಕೊಂಡರೆ ಸಾಕು. ನಿಮ್ಮ ಬದುಕು ಹಸನಾಗಲಿ.
*****
nice .
ಸಾಧನೆಯ ಬಗ್ಗೆ ಚೆನ್ನಾಗಿ ವಿಶ್ಲೇಷಿಸಿದ್ದೀರಾ.