ಗೃಹ ಪ್ರವೇಶ, ಹುಟ್ಟುಹಬ್ಬ, ಸನ್ಮಾನ ಮತ್ತು ಸಂಗೀತದ ಹೊನಲು: ಅಮರ್ ದೀಪ್ ಪಿ.ಎಸ್.

ನಾನು ಇತ್ತೀಚಿಗೆ ಕಂಡಂಥ ಪ್ರಸಂಗವೊಂದನ್ನು ಹಂಚಿಕೊಳ್ಳಬಯಸುತ್ತೇನೆ . ನಿಜ, ಬೇರೆಲ್ಲೋ ಈ ತರಹ ಭಾವನಾತ್ಮಕ ಕಾರ್ಯಕ್ರಮಗಳು ನಡೆದಿರಬಹುದಾದರೂ ನಾನು ವಯುಕ್ತಿಕವಾಗಿ ಇದನ್ನು ಕಂಡದ್ದು ಮಾತ್ರ ನನಗೆ ಹೊಸ ಅನುಭವ .  ಕೊಪ್ಪಳಕ್ಕೆ ಬಂದ  ನಂತರ ಇತ್ತೀಚಿಗೆ ನಾನು ತಬಲಾ ಕಲಿಯಲು ಸೇರಿಕೊಂಡ ಶ್ರೀ ಗವಿಸಿದ್ದೇಶ್ವರ ಮಠದ ಸಂಗೀತ ಪಾಥಶಾಲೆಯಲ್ಲಿ ಸಂಪರ್ಕಕ್ಕೆ ಬಂದ ಹಿರಿಯ ಸ್ನೇಹಿತರಾದ ಶ್ರೀ ಶ್ರೀನಿವಾಸ ಜೋಷಿ ಇವರು ಶಿಕ್ಷಣ ಇಲಾಖೆಯಲ್ಲಿ ಸೇವೆಯಲ್ಲಿದ್ದು,  ಪ್ರಸ್ತುತ ಕೊಪ್ಪಳ ಜಿಲ್ಲಾ ಸಂಸದರಾದ ಶ್ರೀ ಶಿವರಾಮೇಗೌಡ ಇವರ ಬಳಿ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ . ದಿನಾಂಕ:೧೪-೭-೨೦೧೩ ರಂದು ತಮ್ಮ ಗೃಹ ಪ್ರವೇಶ ಇಟ್ಟುಕೊಂಡಿದ್ದರು . ಅಂದೇ ಅವರ ೫೦ನೇ  ವರ್ಷದ ಹುಟ್ಟುಹಬ್ಬವನ್ನು ಸಹ ಆಚರಿಸಿಕೊಂಡು ಸವಿ ಭೋಜನ ಉಣಬಡಿಸಿದರು. 

ಜೋಷಿಯವರು ತಮ್ಮ ೪೪ ನೇ ವಯಸ್ಸಿನಲ್ಲಿ ತಬಲ ಅಭ್ಯಾಸವನ್ನು ಆರಂಭಿಸಿ ಪ್ರವೃತ್ತಿಯಾಗಿ ಮತ್ತು ಹವ್ಯಾಸವಾಗಿ ತಬಲ ವಾದನವನ್ನು ಸಹ ಮಾಡುತ್ತಾ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಮತ್ತು ಅತ್ತ್ಯಾಪ್ತ ವಲಯದಲ್ಲಿ ತಮ್ಮ ಕಲಾ ಬಳಗದೊಂದಿಗೆ ಪ್ರೋತ್ಸಾಹದಾಯಕ ಹಾಗೂ ಉಚಿತ ಸಂಗೀತ ಸೇವೆಯನ್ನು ನೀಡುತ್ತಿದ್ದಾರೆ. ಮಗನನ್ನೂ ಕೊಳಲು ಕಲಿಯಲು ಅವಕಾಶ ಒದಗಿಸಿದ್ದಾರೆ . ಹಾಗಾಗಿ ಇದೇ ಸಂಧರ್ಭದಲ್ಲಿ ಗೃಹಪ್ರವೇಶಕ್ಕೆಂದು ಬಂದ ಆಹ್ವಾನಿತರಿಗೆ ಒಂದು ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಿದ್ದರು .  ದೇಶದ ಪ್ರಸಿದ್ಧ ಕಲಾವಿದರಾದ ಪಂಡಿತ್  ಶ್ರೀ ಹರಿಪ್ರಸಾದ್ ಚೌರಾಸಿಯಾ  ಅವರ ಶಿಷ್ಯರಾದ ಶ್ರೀ ಸಮೀರ ರಾವ್ ಇವರಿಂದ ಕೊಳಲುವಾದನವನ್ನೂ ಸಹ ಕೇಳುವ ಸದಾವಕಾಶ ನಮಗೆ  ಒದಗಿ ಬಂದಿತು . ಆಹ್ವಾನಿತರಲ್ಲಿ ಬಂಧುಗಳು ಬಹುತೇಕರು ಒಂದಲ್ಲಾ ಒಂದು ಕಲೆಯಲ್ಲಿ ಪ್ರಾವಿಣ್ಯವನ್ನು ಪಡೆದಂಥವರು.  ಕೊಳಲು, ತಬಲ, ಗಾಯನ ,ಹೀಗೆ.   ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ .  ಈ ತರಹ ಕಾರ್ಯಕ್ರಮದಲ್ಲಿ ಬಂಧು–ಬಳಗ, ಆಪ್ತರು ಸ್ನೇಹಿತರು, ಎಲ್ಲರೂ ಉಪಸ್ತಿತರಿರುವುದು ಸಾಮಾನ್ಯ .   

ಆದ್ರೆ ಈ ಸಮಾರಂಭದಲ್ಲಿ ಒಂದು ವಿಶೇಷವೆಂದರೆ, ಆಹ್ವಾನಿತರೆಲ್ಲರೂ ಒಂದಲ್ಲಾ ಒಂದು ಕಲೆಯನ್ನು ಗಾಯನ, ಕೊಳಲು , ಮತ್ತು ತಬಲ ಹೀಗೆ ತಮ್ಮ ಕಲಾ ಸೇವೆಯನ್ನು ಸಲ್ಲಿಸಿದರು .  ಮತ್ತೊಂದು ವಿಶೇಷವೆಂದರೆ,  ಜೋಷಿಯವರು ತಮ್ಮ ಬಾಲ್ಯದ ದಿನಗಳಿಂದಲೂ ತಮಗೆ ನೆರವು ನೀಡಿದ ಅಪ್ಪ್ಯಾಯಮಾನ ತೋರಿದ ಬಂಧುಗಳು, ಹಿತೈಷಿಗಳು, ನೆರೆಯವರು(ಹೊರೆಯವರು ಅಲ್ಲ), ಪಾಠ ಕಲಿಸಿದ ಶಾಲಾ, ಪ್ರೌಢ ಶಾಲಾ ಹಾಗೂ ಕಾಲೇಜ್ ಗುರುಗಳು, ಉಪನ್ಯಾಸಕರು , ಸರ್ಕಾರಿ ಸೇವೆಗೆ ಬಂದ  ಹೊಸದರಲ್ಲಿ ಹಾಗೂ ಇಲ್ಲಿಯವರೆಗೂ ಸಹಕರಿಸಿದ ಸಹುದ್ಯೋಗಿಗಳು, ತಮ್ಮ ಹವ್ಯಾಸವಾದ ತಬಲ ವಾದನಕ್ಕೆ ಸಾಥ್ ನೀಡಿದಂಥ ಸಂಗೀತ ಶಾಲಾ ಗುರುಗಳು, ಕಲಾವಿದರು,ಶಾಲಾ  ಸಹಪಾಠಿಗಳು ಎಲ್ಲರನ್ನೂ ಸಂಗೀತ ಕಾರ್ಯಕ್ರಮದ ಮುನ್ನ ಮೊದಲು ಅವರ ತಾಯಿ ಆದಿಯಾಗಿ ಹೆಣ್ಣು ಕೊಟ್ಟ ಅತ್ತೆಯನ್ನು, ಚಿಕ್ಕಪ್ಪ, ಅಕ್ಕ , ಬಂಧುಗಳೆಲ್ಲರನ್ನು  ಸ್ಮರಿಸಿ ವೇದಿಕೆಯಲ್ಲಿ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಹಿರಿಯರಿಗೆ ಸನ್ಮಾನ ಮಾಡಿ ನಮಸ್ಕರಿಸಿ ಓರಗೆಯವರಿಗೆ  ಅಪ್ಪುಗೆ ಸೂಚಿಸುವುದರ ಮೂಲಕ ಸನ್ಮಾನಿಸಿದರು. ನಂತರ ಸನ್ಮಾನಿತರೆಲ್ಲರೂ ಒತ್ತಾಯಿಸಿ ಅದೇ ವೇದಿಕೆಯಲ್ಲಿ ಶ್ರೀನಿವಾಸ ಜೋಷಿ ದಂಪತಿಗೆ ಅವರ ಜನ್ಮ ದಿನದ ಶುಭಾಶಯಗಳನ್ನು ಹೇಳಿದರಲ್ಲದೆ ಅವರೂ ಸಹ ಜೋಶಿಯವರಿಗೆ ಸನ್ಮಾನ ಮಾಡಿದರು. ಮಧ್ಯೆ ಮಧ್ಯೆ ಜೋಷಿಯವರ ಕಣ್ಣುಗಳು ತೇವಗೊಂಡರೂ ಹನಿಗಳು ತುಳುಕದಂತೆ ಹಾಗೂ ತೋರಿಸಿಕೊಳ್ಳದಂತೆ ನಿಭಾಯಿಸಿದ್ದು ಅವರ ಭಾವನಾತ್ಮಕ ನಡವಳಿಕೆ. ಹಾಗೆ ಸನ್ಮಾನಿತರಲ್ಲೂ ಕಣ್ಣು ಹನಿಗೂಡಿದ್ದವು .     

ಯಾಕೆ ಈ ಕಾರ್ಯಕ್ರಮ ವಿಶೇಷ ಅನ್ನಿಸಿಕೊಳ್ಳುತ್ತೆ ಅಂದರೆ , ಸ್ನೇಹಿತರ ಗೃಹ ಪ್ರವೇಶವಾದರೆ ಹೋಗಿ ಬಂದು ಗೆಳೆಯ ಹೀಗೆ ಇಂಥ ಒಂದು ಉತ್ತಮ ಕಾರ್ಯಕ್ರಮ ಮಾಡಿದರೆ ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ನಮ್ಮದೇ ಬಂಧುಗಳ ಈ ತರಹದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉದಾಹರಣೆ ಸಿಗುವುದಿಲ್ಲ ..ನಮ್ಮ ಮನೆಗಳ ಅತ್ತೆಯಂದಿರು ಸೊಸೆಯಂದಿರು ಅಣ್ಣ ತಮ್ಮಂದಿರು ಅವರ ಹೆಂಡತಿಯರು, ಅಕ್ಕ , ಭಾವ ಚಿಕ್ಕಮ್ಮ ಚಿಕ್ಕಪ್ಪ  ದೊಡ್ಡಪ್ಪ , ದೊಡ್ಡಮ್ಮ  ಅಜ್ಜ ಅಜ್ಜಿ  ಮಾಮ ಇವುಗಳ ಸಂಭಂಧ ಸೂಚಕ ಪದಗಳು ಜಸ್ಟ್ ಆಂಟಿ ಅಂಕಲ್ ಗಳಲ್ಲಿ ಹುದುಗಿಹೋಗಿವೆ. ಬಂಧಗಳನ್ನು ಬೆಸೆದುಕೊಳ್ಳಬೇಕಾದ ಸಂಧರ್ಭಗಳನ್ನು ಸದುಪಯೋಗಪಡಿಸಿಕೊಳ್ಳುವ ಬದಲು ಈರ್ಷೆ ಸಾಧಿಸಲು ಅಥವಾ ಕುಟುಕು ಮಾತನಾಡಲು ಬಳಸಿಕೊಳ್ಳುವ ಚಾಳಿಯಿಂದ ಹೊರಬರಬೇಕಿದೆ. 

ಅಲ್ಲದೇ  ತೋರಿಕೆಗೆ ಹಲ್ಕಿರಿದು ನುಲಿದು ಸೆರಗು ತಿರುವುತ್ತಲೋ ಜುಬ್ಬಾ ಸುಕ್ಕು  ಬೀಳದಂತೆ ಎಚ್ಚರಿಕೆ ವಹಿಸಿ  ಫೋಟೋದಲ್ಲಿ ಮಾತ್ರ ನಮ್ಮ ಹಾಜರಿಯನ್ನು ಹಾಕಿ ಚೆಂದದ ಅಡಿಗೆ ಮಾಡಿಸಿದ್ದನ್ನು ಗಡದ್ದಾಗಿ ತಿಂದುಂಡು ಕೊನೆಗೆ ಎಲೆ ಅಡಿಕೆ ಸಿಗಲಿಲ್ಲ ವೆಂಬುದನ್ನೇ ರಸವತ್ತಾಗಿ ಮಂದಿ ಮುಂದೆ ಕಥೆ ಹೇಳುವ ನಮ್ಮಗಳ ಮನಸ್ಥಿತಿಯನ್ನೂ ಇನ್ನಾದರೂ ಬದಲಿ ಮಾಡಿಕೊಳ್ಳಬೇಕಾಗಿದೆ.  ಎಲ್ಲೋ ಇರುವ ವ್ಯಕ್ತಿಗಳನ್ನು ಅವರ ಬಗ್ಗೆ ನಾಲ್ಕು ಸಾಲುಗಳನ್ನು ಇನ್ನ್ಯಾರೋ ಬರೆದುದನ್ನು ಓದಿ ಖುಷಿ ಪಟ್ಟು  ಒಂದು ಲೈಕ್  ಒತ್ತಿ,  ಅಭಿನಂದನೆ ಹೇಳಿ ನಮ್ಮಲ್ಲೇ ನಾವು ಹೌದಲ್ವಾ ?  ಎಂದು ಅಚ್ಚರಿಪಡುವ ನಾವು ನಮ್ಮಲ್ಲೂ ಜೋಷಿಯವರ ಕಾರ್ಯಕ್ರಮದ ಈ ವೈಶಿಷ್ಟ್ಯ ರೂಢಿಸಿ ಕೊಳ್ಳುವುದು ಈಗಿನ ಒಂಟಿ ಕುಟುಂಬದ ಪದ್ಧತಿಗೆ ಅಗತ್ಯ ಅನ್ನಿಸುತ್ತೆ. ಗೃಹ ಪ್ರವೇಶವನ್ನು ಸಾಮಾನ್ಯವಾಗಿ  ಎಲ್ಲರೂ ಮಾಡಿಕೊಳ್ಳುತ್ತಾರೆ, ಹುಟ್ಟುಹಬ್ಬವನ್ನು ಸಹ. ಆದರೆ, ಸಮಾರಂಭದ ಸಂಧರ್ಭಗಳನ್ನು ಈ  ರೀತಿಯಾಗಿಯೂ ಆಚರಿಸುವ ವಿಧಾನ ವಿಶಿಷ್ಟ ಅನ್ನಿಸಿಕೊಳ್ಳುವುದು  ಹೀಗೆ ಅಲ್ಲವೇ ? 

ಜೋಷಿ ಅವರಿಗೆ ಒಮ್ಮೆ ಹಾರೈಸಿಬಿಡಿ –  ಶ್ರೀ ಶ್ರೀನಿವಾಸ ಜೋಷಿ, ಕೊಪ್ಪಳ ಸಂಸದರ ಆಪ್ತ ಸಹಾಯಕರು, ಕೇರಾಫ್  ಜಿಲ್ಲಾ ಪಂಚಾಯತಿ ಕಚೇರಿ , ಕೊಪ್ಪಳ – ಮೊ. ಸಂ. 9449974877.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
kotresh
kotresh
10 years ago

ನಿಜಕ್ಕೂ ಅದ್ಭುತ ಅಮರ್ . ನಿನ್ನ ಕವಿತೆಗಳಲ್ಲಿನ ಸೂಕ್ಶ್ಮ್ಸತೆ ಯನ್ನು ಅರಿತಿದ್ದ ನನಗೆ ಲೇಖನ ಇಸ್ಟವಾಯ್ತು.  ಬರವಣೀಗೆ ಮಂದುವರೆಯಲಿ

mahantesh
10 years ago

He is my Aptamitra. I was also there. I enjoyed your article.thank you.

sharada.m
sharada.m
10 years ago

ಒಳ್ಳೆಯ  ಕಾರ್ಯಕ್ರಮ

prashasti
10 years ago

ಒಳ್ಳೆಯ ನಿರೂಪಣೆ 🙂

Vasudev Joshi
Vasudev Joshi
10 years ago

I collected the details of the programme from my brothers and sisters who have participated. Unfortunately I could not participate as, I had to attend an official conference (All India Managers) at Pune on the same day. 
I feel very sorry to say that I am eldest brother of Srinivas Joshi (sons of his Doddappa).
I sincerely appreciate  the narration of the programme and Sri Amardeep is successful in communicating the matter very effectively and very impressively.
I shall be happy to receive this type of article and Magzine like PANJU-as thy name itself ignates the fire of thought in every reader.
VASUDEV N JOSHI
LIC OF INDIA
MYSORE.

amardeep.p.s.
amardeep.p.s.
10 years ago
Reply to  Vasudev Joshi

ThanQ vasudev sir.. for your appreciation….

Arun Kumar
Arun Kumar
10 years ago

Exellent lines by amardeep I feel as if I attended the function, drastic changes in amardeep as I seen amardeep for the last 10 years very good God bless him.

Habeeb
Habeeb
10 years ago

Dear Deep… very thoughtful narration and also the satirical tone reg. losing our culture is very very good. keep it up… congrats…  By the way wishes to Mr. Joshi for grand success…

8
0
Would love your thoughts, please comment.x
()
x