ಮನೆಯಲ್ಲೇ ಇರಿ
ಬಂಧಿಯಾಗಿಬಿಡಿ.. ಚಂದದಿ,
ಇಪ್ಪತ್ತೊಂದು ದಿನ ವ್ರತದಂದದಿ..
ಮನೆಯೊಳಗೆ ಮನಸೊಳಗೆ….
ನಿಮಗಾಗಿ, ನಮಗಾಗಿ, ಭಾರತಕ್ಕಾಗಿ
ಮನೆಯಲ್ಲೇ ಇರಿ, ಮುದದಿ…
ಇದ್ದು ಮಹಾನ್ ಆಗಿರಿ.. ಭಾರತೀಯರೇ
ಅಂದು ಗಾಂಧಿ ಕರೆಗೆ ಬ್ರಿಟಿಷರ
ಅಟ್ಟಲು ಮನೆ ಬಿಟ್ಟಿರಿ…
ಇಂದು ಮಾರಿ ಕರೊನಾ ಅಟ್ಟಲು
ದಯಮಾಡಿ ಮನೆಯಲ್ಲೇ ಇರಿ…
ಇದ್ದು ಬಿಡಿ ಮನೆಯಲ್ಲೇ ವಿನಂತಿಸುವೆ…
ವಿಷಕ್ರಿಮಿಯ ಮೆಟ್ಟಲು.
ತುಸುದಿನ ನಿಮ್ಮ ಮನೆಗಳಲ್ಲಿ ನೀವೇ
ರಾಜರಾಗಿರಿ, ಆಳಿರಿ, ಆಡಿರಿ, ಓದಿರಿ..
ತೊಳೆಯಿರಿ, ತೆರೆಯಿರಿ ಮನವ
ಹೊಸ ಆಲೋಚನೆಗೆ….
ಆವಿಷ್ಕಾರಕೆ, ಸಾತ್ವಿಕ ಸಂಯಮಕೆ…
ನಿಮ್ಮೊಳಗೆ ನೀವಿರಲು ಒಂದು
ಅವಕಾಶವೆನ್ನಿರಿ ಸುವಿಚಾರಿಗಳಾಗಿರಿ…
ಜೀವ ಉಳಿಯೇ ಜೀವನವೆನ್ನಿರಿ..
ಮಾರಿ ಕೊಂಡಿ ಕತ್ತರಿಸಿರಿ…
ನೀವೂ ಉಳಿದೂ, ದೇಶ ಉಳಿಸಿರಿ,
ಮನೆಯಲ್ಲೇ ಉಳಿದು, ಮಿಥ್ಯಗಳ ಅಳಿದು….
–ಸರೋಜ ಪ್ರಶಾಂತಸ್ವಾಮಿ
ಕೊರೋನಾ ವೈರಸ್ ತಡೆಗಟ್ಟಲು ಪ್ರಬಲ ಅಸ್ತ್ರರೀ ಜನತಾ ಕರ್ಪ್ಯೂ,
ಸಮಾಜದಲ್ಲಿಅಂತರ ಕಾಯಲು ಪ್ರಮುಖ ಸೂತ್ರರೀ ಜನತಾಕರ್ಪ್ಯೂ ।।1।।
ಅಂಗಡಿ ಹೋಟೆಲ್, ಮಾಲ್, ಸಿನಿಮಾಗಳು ಮುಚ್ಚಿಹೋಗ್ಯಾವರೀ ಜನತಾಕರ್ಪ್ಯೂ,
ರೈಲು ಬಸ್ಸು ವಿಮಾನಗಳೆಲ್ಲ ಪೂರ್ತಿ ಬಂದಾಗ್ಯಾವರೀ ಜನತಾಕರ್ಪ್ಯೂ ।।2।।
ಮದುವೆ ಮುಂಜಿ ಪರೀಕ್ಷೆ ಜಾತ್ರೆಗಳೆಲ್ಲ ಮುಂದೋಗ್ಯಾವರೀ ಜನತಾಕರ್ಪ್ಯೂ,
ಪಾರ್ಕು ರಸ್ತೆ ಬೀದಿ ಕಛೇರಿಗಳೆಲ್ಲ ನಿಶ್ಯಬ್ದ ಗೊಂಡೊಗ್ಯಾವರೀ ಜನತಾಕರ್ಪ್ಯೂ ।।3।।
ನಾನೆಂದು ಮೆರೆಯೊ ರಾಷ್ಟ್ರಗಳೆಲ್ಲವು ಗಡಗಡ ನಡುಗ್ಯಾವರೀ ಜನತಾಕರ್ಪ್ಯೂ,
ಹೇಗೆಂದು ತಿಳಿಯಲಿ ಶೋಂಕಿತರನ್ನ ಎಲ್ಲರು ನಮ್ಮವರರೀ ಜನತಾಕರ್ಪ್ಯೂ।।4।।
ಮನೆಯಲ್ಲೇ ಇದ್ರೆ ರೋಗದಿಂದ ತಪ್ಪಿಸಿ ಕೊಳ್ಳಬಹುದಲ್ಲರೀ ಜನತಾಕರ್ಪ್ಯೂ ,
ಮಾನವ ಸರಪಳಿ ಕತ್ತರಿಸಿ ಬಾಳಿ ‘ವೀರ’ನ ಕಿವಿಮಾತುರೀ ಜನತಾಕರ್ಪ್ಯೂ ।।5।।
–ಶ್ರೀ ಈರಪ್ಪ ಬಿಜಲಿ
ಇಡೀ ವಿಶ್ವವನ್ನೇ ನಡುಗಿಸಿದ ಕರೋನ…
ಹಾಕುತ್ತಿದೆ ಸಾವಿನ ಕೇಕೆಯನ್ನ….
ಜನ ಜೀವನವನ್ನು ಬಂಧನದಲ್ಲಿರಿಸಿದ ಕರೋನ….
ಅಟ್ಟ ಹಾಸದಿ ಭಾರಿಸುತ್ತಿದೆ ಮರಣ ಮೃಂದಂಗವನ್ನ….
ಎಲ್ಲೆಡೆ ಅಘೋಷಿತ 144 ಸೆಕ್ಷನ್ ಜಾರಿಗೊಳಿಸಿದ ಕರೋನ…
ಅವ್ಯವಸ್ಥೆಗೊಳಿಸಿದೆ ಮನುಜ ಜೀವನವನ್ನ….
ವಿಜ್ಞಾನಕ್ಕೆ, ಆಧುನಿಕತೆಗೆ ಸವಾಲೊಡ್ಡಿ ಮೆರೆಯುತ್ತಿರುವ ಕರೋನ…
ತಲ್ಲಣಗೊಳಿಸುತ್ತಿದೆ ಇಡೀ ಜಗತ್ತನ್ನ…..
ದೇಗುಲ, ಚಿಂತ್ರಮಂದಿರ, ಬಸ್ ಸ್ಟ್ಯಾಂಡ್, ಅಂಗಡಿ ಮುಂಗಟ್ಟುಗಳನ್ನು
ನಿರ್ಜನ ಪ್ರದೇಶವನ್ನಾಗಿ ಮಾರ್ಪಡಿಸುತ್ತಿರುವ ಕರೋನ….
ತಂದೊಡ್ಡುತ್ತಿದೆ ಜಗದಲ್ಲಿ ಆರ್ಥಿಕ ಮುಗ್ಗಟ್ಟನ್ನ….
ದೂರದ ಚೀನಾದಲ್ಲಿ ಜನಸಿ ಇಡೀ ವಿಶ್ವವನ್ನೇ ಆವರಿಸಿದ ಕರೋನ…
ಸಾಬೀತು ಪಡಿಸುತುತ್ತಿದೆ ವಸುಧೈವ ಕುಟುಂಬಕಂ ಎಂಬ ಮಾತನ್ನ….
ಹಸ್ತಲಾಘವ ಮಾಡಲು ಹಿಂಜರಿಯುವ ಜನರನ್ನ
ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮಾಡುತ್ತಿರುವ ಕರೋನ….
ಸಾವಿನ ಭಯದ ಅಸಲು ರುಚಿಯನ್ನು ತೋರಿಸಿ, ಜರ್ಜರಿತರನ್ನಾಗಿಸುತ್ತಿದೆ ಜನರನ್ನ…..
ಇಡೀ ವಿಶ್ವವನ್ನೇ ನಡುಗಿಸಿದ ಕರೋನ…
ಹಾಕುತ್ತಿದೆ ಸಾವಿನ ಕೇಕೆಯನ್ನ….
-ವಿದ್ಯಾಶ್ರೀ ಎಂ.
ಯಾಗದ ಕುದುರೆ ? (ಕರೋನಾ)
ಕರೋನಾ ಕೋವಿಡ್ – 19
ಜಾಗತಿಕ ಸೊಂಕು
ಕೊಸರಿ ಓಡುತ್ತಿದೆ
ಆವ ಅಂಕುಶಕು ಸಿಗದೆ //1//
ಕಲ್ಲೆದೆಗಳು ನಡುಗ್ಯಾವು
ನಾಖ ಬಂದಿಗೆ ಕರೆ ಕೊಟ್ಟಾವು
ರುದ್ರ ನರ್ತನ ಕಣ್ಣ ತುಂಬಿ ಕೊಂಡಾವು
ಮಮ್ಮಲ ಮರುಗ್ಯಾವು. //2//
ಕರೋನಾ ಯಾಗದ ಕುದುರೆ ?
ಕಟ್ಟುವರಾರು ?
ಮುಟ್ಟುವವರಾರು ?
ಹೋರಾಟ ಒಂದೇ ಅವನೊಡನೆ. //3//
ಕತ್ತಿ ಮಸಿಯುವ ದೇಶ ನಲಿಗ್ಯಾವು
ಅಗೋ ಹೆಣಗಳ ರಾಶಿ ಮಲಗ್ಯಾವ
ಕಣ್ಣಿರಾಕುವರಿಲ್ಲಾ
ಕರ್ಮ ಮಾಡುವರಿಲ್ಲಾ
ಧರ್ಮ ಹುಡುಕುವರೆಲ್ಲೋ ? //4//
ಅಸ್ತ್ರಗಳೆಲ್ಲ ಜಂಗು ಹಿಡಿದಾವು
ಪರಿಣಿತರೆಲ್ಲ ಪರದಾಡ್ಯಾವು
ನಾಯಕರ ಮನವಿ ಜನತೆಗೆ
ಹಯ (ಕರೋನಾ) ಗತಿ ಕಡಿಮೆಯಾದಿತು
ಬದುಕು ತಳ ಹದಿಗೆ ಬಂದಿತು. //5//
ಉಸುಲಿಗೆ ಉಳ್ಳಾಡಿ
ನೋಟಕ್ಕೆ ನಳ್ಳಾಡಿ
ಬಿಡ ಬೇಡಿ ಜೀವ ಪರದಾಡಿ
ಇರುವಿರೆಲ್ಲೋ ಇರಿ ಅಲ್ಲೇ
ಇದೊಂದೇ ಸರಿ ದಾರಿ //6//
ಜಗತ್ತು ನಿರಾಯುದ ಆಗ್ಯಾದ
ಹಯ (ಕರೋನಾ) ಶಕ್ತಿ ಮೇಲಾದ
ಬಾಗಿಲ ಹಾಕಿ ಗಡಿಗಳ ಮುಚ್ಚಿ
ಶರಣು ಶರಣೆಂದು ತಲೆ ಬಾಗ್ಯಾದ. // 7//
–ಪರಶುರಾಮ್.ಎಸ್. ನಾಗೂರ್
ಕರೋನಾ ಹೆಮ್ಮಾರಿ
ಜಗತ್ತಿಗೆ ಕರೋನಾ ಭೀತಿ ಆವರಿಸಿದೆ
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿ
ಕರೋನಾ ಮಹಾ ಮಾರಿ ಮಾಯವಾಗಲಿ //1//
ಭಯ ಭೀತಿಯನ್ನ ಬಿಡೋಣ
ಕುಟುಂಬದೊಂದಿಗೆ ಮನೆಯಲ್ಲಿರೋಣ
ಸಾಂಕ್ರಾಮಿಕ ರೋಗ ತಡೆಯೋಣ. //2//
ಸೂರ್ಯ ನಮಸ್ಕಾರ, ವ್ಯಾಯಾಮ ಮಾಡೋಣ
ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳೋಣ
ಕ್ರೂರಿ ಕರೋನಾ ಮಟ್ಟ ಹಾಕೋಣ. //3//
ಜನತೆಯನ್ನ ಬೆಚ್ಚಿ ಬಿಳಿಸಿದೆ
ರಕ್ತ ಹಿರುತ್ತಿರುವ ಮಹಾ ಕ್ರೂರಿ
ಕರುನಾಡಲ್ಲಿ ಹಾಕಿದೆ ರಣಕೇಕೆ. //4//
ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಕರೋನಾ
ಬಲಿಷ್ಠ ಭಾರತ ಕಟ್ಟಲು ನೆರವಾಗಿ
ಮನೆಯಲ್ಲೇ ಇರಿ ಮನೆಯಲ್ಲೇ ಇರಿ. //5//
ಮನೆಯಲ್ಲಿ ಇರುವುದೊಂದೆ ಇದಕೆ ಮದ್ದು
ಹೊರಗೆ ತಿರುಗಾಡಿದರೆ ತಗಲುವುದು ಭೀಮಾರಿ
ಎಲ್ಲರೂ ಸಂಕಲ್ಪ ಮಾಡಿ ಓಡಿಸುವುದೇ ಸರಿದಾರಿ. /6/
-ವೀರಭದ್ರಪ್ಪ ಕಟಗೇರಿ.
ಕರೊನ ಮಾರಿ
ಕೊರೊನ ಎಂಬ ಮಾರಿ ಹುಟ್ಟಿ
ಜಗಕೆ ಚದುರಿದೆ
ಜನರು ಗುಂಪುಗೂಡಿ ಬೇಗ
ಸೋಂಕು ಹರಡಿದೆ
ಏನೆ ಮುಟ್ಟಿ ಕೈಯ ತೊಳೆಯೆ
ಮರೆಯಬಾರದು
ಮೊದಲೆ ಕಣ್ಣು ಮೂಗು ಬಾಯಿ
ಮುಟ್ಟಬಾರದು
ಮನೆಯ ಒಳಗೆ ಇದ್ದು ಬಿಡುವ
ರೋಗಬಾರದು
ಹೊರಗೆ ಹೋಗಿ ರೋಗತಂದು
ಹಂಚಬಾರದು
ತುತ್ತು ಬೇಡೊ ಜನರಿಗಿಂದು
ಕುತ್ತು ಬಂದಿದೆ
ತಿನ್ನೊ ಅನ್ನಕೂನು ಬರದ
ಸಮಯ ಕಾದಿದೆ.
ಕೂಲಿ ಜನರ ಬದುಕು ನೋಡಿ
ಪಾಠ ಕಲಿಯಿರಿ
ಬುದ್ಧಿ ಬಳಸಿ ಜೀವ ಉಳಿಸಿ
ಬದುಕಿ ಬದುಕಿಸಿ
ದೇವರಂತೆ ಸೇವೆ ಮಾಡು
ತಿಹರು ನೋಡಿರಿ
ಅರ್ಥ ಮಾಡಿಕೊಳ್ಳದೇನೆ
ಕಾಡ ಬೇಡಿರಿ
ಮನುಜ ಜನ್ಮ ದೊಡ್ಡದಣ್ಣ
ಅರಿತು ಬಾಳುವ
ಬದುಕಿ ಬದುಕ ಕಟ್ಟಲು ಅವ
ಕಾಶ ನೀಡುವ
-ವೈಶಾಲಿ ಜಿ. ಆರ್