ಕೆಲ ಸುದ್ದಿಗಳು ಟಿವಿಯಲ್ಲಿ ಬಂದಾಗ ಒಮ್ಮೊಮ್ಮೆ ನಾವು ಹೀಗೆ ಮಾತಾಡಿಕೊಳ್ಳುವುದುಂಟು.
ಇದು ಆ ಕ್ಷಣದಲ್ಲಿ ಬರುವ ತಕ್ಷಣದ ಪ್ರತಿಕ್ರಿಯೆ. ಕೇವಲ ಹಾಸ್ಯದ ದೃಷ್ಟಿಯಿಂದಷ್ಟೇ ಈ "ಕೊಂಕು" ಬರಹ.
ಯಾವುದೇ ಕೊಂಕನ್ನು ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದಾಗಿ ವಿನಂತಿಸಿಕೊಳ್ಳುತ್ತಾ…
ಸುದ್ದಿ: ಕೇವಲ ಜನಸೇವೆ ಸಾಕು, ನನಗೆ ಅಧಿಕಾರ ಬೇಡ- ಯೆಡ್ಡಿ
ಕೊಂಕು: ಸುಮ್ನಿರಿ ಸಾರ್, ಜನರಿಗೆ ಆಸೆ ತೋರಿಸಬೇಡಿ!!
ಸುದ್ದಿ: ಲಾರಿ ಮಗುಚಿ, ತುಂಬಿದ್ದ ನ್ಯೂಸ್ ಪೇಪರ್ ಗಳೆಲ್ಲ ಚೆಲ್ಲಾಪಿಲ್ಲಿ
ಕೊಂಕು: ನಾಳೆ ಈ ಸುದ್ದಿ ಜನಗಳಿಗೆ ಹೇಗೆ ತಲುಪುತ್ತೆ ಸರ್ ?!
ಸುದ್ದಿ: ಉಗ್ರ ಕಸಬ್ ನನ್ನು ನೇಣಿಗೆ ಹಾಕಲು ವಿಳಂಬ ಮಾಡಿದ ಸರ್ಕಾರ
ಕೊಂಕು: ಕಸವನ್ನು ವಿಲೇವಾರಿ ಮಾಡೋದೇ ನಮ್ಮಲ್ಲಿ ಬಹಳ ಲೇಟು.
ಇನ್ನು "ಕಸ-ಬ್ ವಿಲೇವಾರಿ" ಏನು ಮಹಾ ಬಿಡಿ!!
ಸುದ್ದಿ: ಮತ್ತೆ ಸಿಎಂ ಆದ್ರೆ, 48 ಗಂಟೆಗಳಲ್ಲಿ ನೇತ್ರಾವತಿ ಹರಿಸುತ್ತೇನೆ: ಮಾಜಿ ಸಿಎಂ
ಕೊಂಕು: ಖಂಡಿತ ಸ್ವಾಮಿ, 48 ಗಂಟೆ ಯಾಕೆ ? ಬಿಟ್ಟರೆ, ಬರೇ ಒಂದೇ ಗಂಟೆಯಲ್ಲಿ ನೇತ್ರಾವತಿ ಹರಿಸುತ್ತೀರಾ..ಜನಗಳ ಕಣ್ಣಿಂದ!!
ಸುದ್ದಿ: ಯಡ್ಡಿಯವರ ಅರೆಸ್ಟ್ ವಾರಂಟ್ ಸಂತೋಷ ತಂದಿಲ್ಲ: ಕುಮಾರಸ್ವಾಮಿ
ಕೊಂಕು: ಪಾಪ, ಇನ್ನೇನೇನು ಕೇಳ್ಕೊಂಡಿದ್ರೋ. ನಿರಾಶೆಯಾಗಿದೆ!!
ಸುದ್ದಿ: ಯಡಿಯೂರಪ್ಪ ಋಣ ತೀರಿಸಲು ರಾಜೀನಾಮೆ ನೀಡಿರುವೆ: ಶೋಭಾ ಕರಂದ್ಲಾಜೆ
ಕೊಂಕು: ಮೊನ್ನೆ ಚುನಾವಣೆಯಲ್ಲಿ ಗೆದ್ದಾಗ, ಅದೇನೋ….ಜನಗಳ ಋಣ ಅಂತ ಹೇಳಿದ್ರಲ್ವ ?!
ಸುದ್ದಿ: ಖ್ಯಾತ ಚಿತ್ರನಟಿ ಪೂಜಾಗಾಂಧಿಯ ಮದುವೆ ನಿಶ್ಚಿತಾರ್ಥದಲ್ಲೇ ಅಂತ್ಯ.
ಕೊಂಕು: ಪರವಾಗಿಲ್ಲ ಸ್ವಾಮಿ, ನಿಶ್ಚಿತಾರ್ಥವಾದರೂ ಆಯ್ತಲ್ಲ, ಖುಷಿಪಡಿ.
ಆಕೆಯ ಮೊದಲನೇ ಚಿತ್ರದಲ್ಲಿ ನಾಯಕನಿಗೆ ಆ ಯೋಗವೂ ಇಲ್ಲ!!
-ಸಂತೋಷ್ ಕುಮಾರ್ ಎಲ್ ಎಮ್
🙂 ಚೆನ್ನಾಗಿದೆ ಸರ್. ಧನ್ಯವಾದಗಳು
Thank u DIvya madam:)
ಚೆನ್ನಾಗಿದೆ ಚೆನ್ನಾಗಿದೆ. ಸೂಪರ್ ಪಂಚ್. 🙂
Thank u Ganesh Sir:)
ಇದೇನು ಸಂತೋಷ್ ಎಲ್ಲಿಟ್ಟಿದ್ರಿ ಈ ಸರಕು.. ಸಕತ್ತಾಗಿದೆ.. ಶೋಬಕ್ಕ ಮತ್ತು ಪೂಜಾಗಾಂದಿ ಕೊಂಕು ತುಂಬಾ ಹಿಡಿಸಿತು..
ಧನ್ಯವಾದಗಳು ಕೃಷ್ಣಮೂರ್ತಿ ಸರ್, ಕಚಗುಳಿ ಇಡುವುದರಲ್ಲಿ ನೀವು ಪರಿಣಿತರು. ಹೊಸ ಪ್ರಯೋಗವಾದ್ದರಿಂದ ಹೇಗಿದೆಯೋ ಎಂಬ ಕುತೂಹಲವಿತ್ತು. ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿತು:)
ಚೆನ್ನಾಗಿದೆ ಸಂತೋಷ್….
Thank u Sumathi:)
ಹ್ಹ ಹ್ಹ .. ಚೆನ್ನಾಗಿದೆ 🙂
Thank u Anitha 🙂
ಉತ್ತಮ ಸಂಗ್ರಹ….ಚೆನ್ನಾಗಿದೆ….ಕಚಗುಳಿ ಗ್ಯಾರಂಟಿ….
Thank u Siddaram sir 🙂
very nice bhai… 🙂
Thank u Rukmini sister 🙂
Santhu anna chenagidhe nimma hosa syliya baravannige estavaythu
Shubhavagali
Thanks Brother 🙂
ನಿಮ್ಮ ಹಾಸ್ಯ ಪ್ರಜ್ನೆ ತುಂಬಾ ಮೊನಚಾಗಿದೆ; ಹೀಗೇನೇ ಬರೆಯುತ್ತಿರಿ.
ಶುಭವಾಗಲಿ.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್ 🙂
;())))
ನಿಮ್ಮ ಹಾಸ್ಯ ಪ್ರಜ್ನೆ ತುಂಬಾ ಮೊನಚಾಗಿದೆ;
ಹೀಗೇನೇ ಬರೆಯುತ್ತಿರಿ.
+1
ಶುಭವಾಗಲಿ
\|/
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು Venkatesh ಸರ್ 🙂