ಕಥಾಲೋಕ

ಕಿರುಗತೆಗಳು: ಪುನೀತ್‌ ಕುಮಾರ್‌

ಸ್ವಯಂ ಮೌಲ್ಯಮಾಪನ

ಒಮ್ಮೆ ಒಬ್ಬ ಹುಡುಗ, ಒಂದು ಅಂಗಡಿಯ ಫೋನ್ನಿಂದ ಯಾರಿಗೋ ಕರೆ ಮಾಡಿ “ಅಮ್ಮ, ದಯಮಾಡಿ ನನಗೆ ಒಂದು ಕೆಲಸ ಕೊಡಿ” ಎಂದು ಕೇಳಿಕೊಳ್ಳುತ್ತಿದ್ದನು. ಅಲ್ಲೇ ಪಕ್ಕದಲ್ಲೇ ಇದ್ದ ಅಂಗಡಿಯವ ಇವನ ಮೃದು ದನಿಯ ಮಾತುಗಳನ್ನು ಕೇಳಲು ಆರಂಭಿಸಿದ.
ಹುಡುಗ ಮುಂದುವರೆಯುತ್ತಾ ” ಅಮ್ಮ, ನಾನು ತುಂಬ ಬಡವ, ಮನೆಯಲ್ಲಿ ಹಣಕ್ಕಾಗಿ ತೊಂದರೆ ಇದೆ, ದಯವಿಟ್ಟು ಬೇಡ ಎನ್ನಬೇಡಿ ” ಎಂದು ಬೇಡಿಕೊಳ್ಳಲಾರಂಭಿಸಿದ.
ಆದರೆ ಆ ಕಡೆಯಿಂದ ಬೇಡ ಆಗಲೇ ನಮ್ಮಲ್ಲಿ ಒಬ್ಬ ಹುಡುಗ ಕೆಲಸದಲ್ಲಿದ್ದಾನೆ. ಅವನ ಕೆಲಸ ನಮಗೆ ಇಷ್ಟವಾಗಿದೆ ಎಂದು ಪ್ರತ್ಯುತ್ತರ ಬಂತು.
ಹುಡುಗ ಮತ್ತೆ ಗೋಗರೆಯುತ್ತಾ “ಅಮ್ಮ ಈಗ ಇರುವ ಹುಡುಗನಿಗಿಂತ ಕಡಿಮೆ ಸಂಬಳ ಕೊಡಿ, ಬೇಕಾದರೆ ಅವನಿಗಿಂತ ಹೆಚ್ಚು ಅವಧಿಯವರೆಗೆ ಕೆಲಸ ಮಾಡುತ್ತೇನೆ ” ಎಂದನು.
ಆದರೆ ಆ ಕಡೆಯಿಂದ “ನೋಡು, ಈಗಿರುವ ಹುಡುಗನು ಚೆನ್ನಾಗಿ ಕೆಲಸ ಮಾಡುತ್ತಿದ್ದಾನೆ. ಅವನಿಂದ ನಮಗೆ ಸಂತಸವಿದೆ, ನೆಮ್ಮದಿಯಿದೆ ನೀನು ಬೇರೆಡೆ ಕೆಲಸ ಹುಡಿಕಿಕೋ.” ಎಂದು ಹೇಳಿ ಫೋನ್ ಕಟ್ ಮಾಡುತ್ತಾರೆ.

ಇವನು ಫೋನ್ ಇಟ್ಟು ಅಂಗಡಿಯವನ ಬಳಿ ಬಂದು ಫೋನ್ ಕರೆಗೆ ದುಡ್ಡು ಎಷ್ಟಾಯಿತು ಎಂದು ಕೇಳುತ್ತಾನೆ. ಆಗ ಅಂಗಡಿಯವ ʼಪರವಾಗಿಲ್ಲ, ಇನ್ನೊಮ್ಮೆ ಕೊಡುʼ ಎನ್ನುತ್ತಾನೆ. ಹುಡುಗ ʼಇಲ್ಲ ಇಲ್ಲ ನನ್ನ ಬಳಿ ಹಣವಿದೆʼ ಎಂದಾಗ ಅಂಗಡಿಯವ ನಾಲ್ಕು ರೂಪಾಯಿ ಎನುತ್ತಾನೆ. ಆಗ ಹುಡುಗ ಅವನ ಬಳಿಯಿದ್ದ ಚಿಲ್ಲರೆ ಎಲ್ಲಾ ಸೇರಿಸಿ ಅವನಿಗೆ ನಾಲ್ಕು ರುಪಾಯಿ ಕೊಟ್ಟು ಹೊರಡುತ್ತಾನೆ.  
ಆದರೆ ಅಂಗಡಿಯವ ಆ ಹುಡುಗನ ಪರಿಸ್ಥಿತಿ ನೋಡಿ, ಅವನ ಬಳಿ ಬಂದು “ನಾನು ನಿನಗೆ ಕೆಲಸ ಹುಡುಕಿಕೊಡುವೆ” ಎಂದು ಹೇಳುತ್ತಾನೆ. ಅದಕ್ಕೆ ಹುಡುಗ ಬೇಡ ಬೇಡ ನನಗೆ ಕೆಲಸವಿದೆ ಎನುತ್ತಾನೆ ಆಗ ಅಂಗಡಿಯವ ಆಶ್ಚರ್ಯಕರವಾಗಿ
“ಹೇ ಹುಡುಗ, ಈಗ ತಾನೇ ಯಾರಿಗೋ ಫೋನ್ ಮಾಡಿ ಕೆಲಸಕ್ಕಾಗಿ ಅಂಗಲಾಚುತ್ತಿದ್ದೆ, ಆದರೆ ಈಗ ಕೆಲಸವಿದೆ ಎನ್ನುತ್ತಿದ್ದೀಯಲ್ಲಾ ??” ಎಂದು ಪ್ರಶ್ನಿಸುತ್ತಾನೆ.
ಆಗ ಹುಡುಗ ಅಯ್ಯಾ, ನಾನು ಫೋನ ಕರೆ ಮಾಡಿದ್ದು ನಾನು ಕೆಲಸ ಮಾಡುವ ಮನೆಯ ಮಾಲೀಕರಿಗೆ. ಆದರೆ ಅವರಿಗೆ ತಿಳಿಯದ ರೀತಿಯಲ್ಲಿ ನಾನು ಮಾತನಾಡಿದೆ. ಏಕೆಂದರೆ ನನ್ನ ಕೆಲಸದ ಬಗ್ಗೆ ಬೇರೆಯವರಿಂದ ತಿಳಿಯುವ ಬದಲು ಸ್ವತಃ ನಾನು ಕೆಲಸ ಮಾಡುವ ಮಾಲೀಕರಿಂದಲೇ ತಿಳಿಯಬೇಕೆಂದು ಈ ರೀತಿ ಒಂದು ಪ್ರಯತ್ನ ಮಾಡಿದೆ. ಇದರಿಂದ ನನ್ನ ಸಾಮರ್ಥ್ಯ ಮತ್ತು ಅವರಿಗೆ ನನ್ನ ಮೇಲೆ ಇರುವ ನಂಬಿಕೆ ತಿಳಿಯಿತು. ನಾನು ಇದರಿಂದ ಖುಷಿಯಾಗಿದ್ದೇನೆ” ಎಂದನು. ಅಂಗಡಿಯವ ಈ ಹುಡುಗನ ಮಾತುಗಳನ್ನು ಕೇಳಿ ಚಕಿತಗೊಂಡು ” ‘ಭೇಷ್ ಹುಡುಗ ಭೇಷ್ ‘, ನಿನ್ನ ಸ್ವಯಂ ಮೌಲ್ಯಮಾಪನ ಮೆಚ್ಚುವಂತದ್ದು. ನಿನ್ನ ಈ ಪ್ರಯತ್ನ ನನಗೆ ಸಂತೋಷವನ್ನುಂಟು ಮಾಡಿದೆ. ಎಂದು ಮೆಚ್ಚುಗೆ ವ್ಯಕ್ತಪಡಿಸಿದನು.

“ಹುಡುಗನ ಸ್ವಯಂ ಮೌಲ್ಯಮಾಪನ ಇಲ್ಲಿ ಗಮನಿಸುವಂತದ್ದು, ತನ್ನ ಕೆಲಸದ ಬಗ್ಗೆ ತಿಳಿಯುವ ಸಲುವಾಗಿ ಕೈಗೊಂಡ ಒಂದು ಪ್ರಯತ್ನ ಅವನಿಗೆ ಸಂತೃಪ್ತಿ ನೀಡಿದೆ. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆಯಿದ್ದರೆ ಕೆಲಸವೇ ನಿಮಗೆ ಬೆಲೆ ಕೊಡುತ್ತದೆ “


ಭಾವನೆ
ಒಂದು ಕುಟುಂಬದಲ್ಲಿ ಗಂಡ ಹೆಂಡತಿ, ಗಂಡ ಒಬ್ಬ ವಿಜ್ಞಾನಿ, ಸಂಶೋಧನೆಯಲ್ಲಿ ಯಾವಾಗಲೂ ಮುಳುಗಿರುತ್ತಾನೆ. ಹೆಂಡತಿ ಗೃಹಿಣಿ.

ಒಮ್ಮೆ ಹೆಂಡತಿ ಅಡುಗೆ ಮನೆಯಲ್ಲಿ ಈರುಳ್ಳಿ ಯನ್ನು ಕತ್ತರಿಸುವಾಗ ಕಣ್ಣೀರು ಬರುತ್ತಿರುತ್ತದೆ, ಗಂಡ ಅಡುಗೆ ಮನೆಗೆ ಬರುತ್ತಾನೆ.
ಅವಳು ಅಳುತ್ತಿರುವುದನ್ನು ಕಂಡು ಒಮ್ಮೆಲೇ ಓಡಿ ಹೋಗಿ ಅವನ ಸಂಶೋಧನಾಲಯಿಂದ ಒಂದು ಗಾಜಿನ ಸೀಸೆ ತಂದು ಅದರಲ್ಲಿ ಅವಳ ಕಣ್ಣೀರನ್ನು ಹಿಡಿದು ಮತ್ತೆ ಸಂಶೋಧನಾಲಯಕ್ಕೆ ತೆರಳುತ್ತಾನೆ.

ಕೆಲವು ಸಮಯದ ಬಳಿಕ ಅವನು ಕೆಲವು ಪ್ರಯೋಗ ನಡೆಸಿದ ಫಲಿತಾಂಶದೊಂದಿಗೆ ಹೆಂಡತಿ ಬಳಿ ಬಂದು ನೋಡು ನಿನ್ನ ಕಣ್ಣ ನೀರು ಈ ಥರದ ಅಂಶಗಳಿಂದ ಕೂಡಿದ್ದು, ಎಷ್ಟರ ಮಟ್ಟಿಗೆ ನಿನಗೆ ದುಃಖ ಆಗಿದೆ ಎಂದು ವಿವರಿಸುತ್ತಾನೆ.
ಆದರೆ ಹೆಂಡತಿ, ಇದ್ದನ್ನು ಕೇಳಿ ನಕ್ಕು ತನ್ನ ಮುಂದಿನ ಕೆಲಸ ಮಾಡಲು ಹೋಗುತ್ತಾಳೆ.

ಮತ್ತೊಂದು ದಿನ ಹೆಂಡತಿಗೆ ಕರೆಯೊಂದು ಬರುತ್ತದೆ, ಅವರ ಅಪ್ಪ ಸಾವನಪ್ಪಿದ್ದಾರೆ ಎಂದು ಸುದ್ದಿ ತಿಳಿಯುತ್ತದೆ. ಅವಳು ತುಂಬಾ ದುಃಖದಲ್ಲಿ ಮುಳುಗುತ್ತಾಳೆ. ಅವಳು ಜೋರಾಗಿ ಅಳುತ್ತಿರುವುದನ್ನು ಕಂಡು ಗಂಡ ಅಲ್ಲಿಗೆ ಬರುತ್ತಾನೆ. ವಿಷಯ ಏನೆಂದು ಕೇಳುತ್ತಾನೆ. ನಂತರ ಅವನ ಸಂಶೋಧನಾಲಯಿಂದ ಒಂದು ಗಾಜಿನ ಸೀಸೆ ತಂದು ಅದರಲ್ಲಿ ಅವಳ ಕಣ್ ನೀರನ್ನು ಹಿಡಿದು ಮತ್ತೆ ಸಂಶೋಧನಾಲಯಕ್ಕೆ ತೆರಳುತ್ತಾನೆ.

ಕೆಲವು ಸಮಯದ ಬಳಿಕ ಅವನು ಕೆಲವು ಪ್ರಯೋಗ ನಡೆಸಿದ ಫಲಿತಾಂಶದೊಂದಿಗೆ ಹೆಂಡತಿ ಬಳಿ ಬಂದು ನೋಡು ನಿನ್ನ ಕಣ್ಣ ನೀರು ಈ ಥರದ ಅಂಶಗಳಿಂದ ಕೂಡಿದು, ಅವತ್ತು ಈರುಳ್ಳಿ ಕತ್ತರಿಸುವಾಗ ಆದ ದುಃಖದ ಪ್ರಮಾಣ ಮತ್ತು ಇವತ್ತು ಆಗಿರುವ ದುಃಖದ ಪ್ರಮಾಣ ಒಂದೇ ಎನ್ನುತ್ತಾನೆ.

ಇದನ್ನು ಕೇಳಿದ ಹೆಂಡತಿಯ ದುಃಖ ನೂರ್ಮಡಿಯಾಗಿ ನನ್ನ ಗಂಡನಿಗೆ ಭಾವನೆಯೇ ಇಲ್ಲವೆಂದು ಕೋಪಗೊಂಡು ಇಂಥ ಸಮಯದಲ್ಲಿ ಎಂಥ ಕಠೋರವಾಗಿ ಮಾತನಾಡುತ್ತಿದ್ದಾನೆ ಎಂದು ಅವನ ಕೆನ್ನೆಗೆ ಬಾರಿಸಿ ಅಲ್ಲಿಂದ ನಡೆಯುತ್ತಾಳೆ.

ಮನುಷ್ಯ ತನ್ನ ವೃತಿಯಿಂದ ಅಥವಾ ಮತ್ತೊಂದರಿಂದ ಭಾವನೆಗಳಿಗೆ ನೋವಂಟು ಮಾಡುತ್ತಿದ್ದಾನೆ, ತನ್ನ ಕ್ಷೇತ್ರದಲ್ಲಿ ಎಷ್ಟೇ ಸಾಧನೆ ಮಾಡಿದರು ಭಾವನೆಗಳಿಗೆ ಬೆಲೆ ಕೊಡಬೇಕು ಭಾವನೆಗಳೇ ಇಲ್ಲದ ಬದುಕು ವ್ಯರ್ಥ.

ಪುನೀತ್‌ ಕುಮಾರ್‌


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *