ಕಿರುಗತೆಗಳು: ಜಯಂತ್ ದೇಸಾಯಿ

ಬಣ್ಣದ ಬಾರಿಗೆ( ಬಣ್ಣದ ಪೊರಕೆ)

ಬಾರಿಗೆಮ್ಮೋ ಬಾರಿಗೆ 30 ರೂಪಾಯಿಗೆ ಜೊತಿ ಬಾರಿಗೆ ಸ್ವಲ್ಪವೇ ಅವ ನೋಡ್ರೆಮ್ಮೋ ಅಂತ ಕೂಗುತ್ತಾ ಹಳ್ಳಿಯ ಸಂದಿಸಂದಿಯ ಒಳಗೆ ನುಗ್ಗಿ ಹೋಗುತ್ತಿದ್ದ ಶರಣಪ್ಪ ನ ದ್ವನಿ ಕೇಳಿ ನಿರ್ಮಲ ನುಡಿದಳು ಹೇ ನಿಂದ್ರಪ್ಪ ನಿಂದ್ರು ಹೆಂಗ್ ಕೊಟ್ಟಿ ಅಂದಿ, 30 ರೂಪಾಯಿಗೆ ಅಂದ್ರ ಭಾಳಾ ಫೀರೆ ಆತು ಕಡಿಮೆ ಮಾಡು, ನೋಡಿದ್ರ ನಾಕು ಕಡ್ಡಿ ಇಲ್ಲ ಇದ್ರಾಗ,

ಅವ್ವ ಹಂಗನ್ನ ಬ್ಯಾಡ ಗಿರಿ ಗಿರಿ ಹಾಕಿ ಎಳೆದು ಎಳೆದು ತೀಡಿ ನೆಲಕ್ಕೆ ಬಡಿದು ಬಡಿದು ಹೊಂದಿಸಿ ಬಿಗಿ ಮಾಡಿ ಬಿಗಿದರೆ ಹೊಟ್ಟು ಹಾರಿ ಅರ್ಧ ಜೀವ ಹೋಗ್ತದ ಮೈ ಸೋತದ ಅಂತದ್ರಾಗ ಚೊಲೋ ಕಡ್ಡಿ ಸೇರಿಸಿ ಕಟ್ಟಿ ಊರೂರು ತಿರುಬೋಕಿ ಹಂಗ ಅಡ್ಡಾಡಿ ಮಾರಬೇಕು ಅಂದ್ರ ಮೈಯಾಗ ಉಸುರು ಇರಂಗಿಲ್ಲ ರಟ್ಟೆ ನಾಗ ಬಲ ಇರಾಂಗಿಲ್ಲ ಅವ್ವ, ಹೋಗ್ಲಿ ಅದೇಟು ಬೇಕು ಹೇಳಿ ಕಮ್ಮಿ ಮಾಡ್ತೀನಿ ಅಂತ ಹುಲುಬಿದ ಶರಣಪ್ಪ ಮಗನನ್ನು ಪಕ್ಕಕೆ ಕೂಡಿಸಿ ತಲೆ ಮೇಲಿನ ಕಸ ಪೊರಕೆಯ ಹೊರೆ ಕೆಳಗ ಇರಿಸಿದ….

ಬ್ಯಾಡ ಬಿಡಪ್ಪ ಪಟ್ಟಣದಾಗ ಚಂದ ದೊಡ್ಡ ಮುಲ್ಲಾ ಭಾರಿಗೆ ತರ್ತಾರ ಇವ್ರು, ಇದು ಬ್ಯಾಡ ಎದುಕ್ಕ ತಗೊಂಡಿ ಅಂದ್ರ ಕಷ್ಟ ನಂಗ, ಕಮ್ಮಿ ಮಾಡೋ ಹಂಗಿದ್ರ ಒಂದು ಜತಿ ಕೊಟ್ಟು ಹೋಗು ಇಲ್ಲಂದ್ರ ಬ್ಯಾಡ…. ಅಂತ ನುಡಿದ ನಿರ್ಮಲ ಇನ್ನೇನು ಮನೆ ಒಳಗಡೆ ಹೋಗಬೇಕು…

ನಿಲ್ಲವ್ವ ಅವ್ವ ಅಷ್ಟೆ ಮಾಡು 20 ರೂಪಾಯಿಗೆ ಜೊತಿ ಮಾಡಿಕೋ ಇದಕ್ಕಿಂತ ಕಡಿಮೆ ಅಗಕಿಲ್ಲ ಯವ, ಜೊತಿಗಿ ಸಣ್ಣ ಕೂಸು ಕೊಟ್ಟು ಮ್ಯಾಲೆ ಹ್ವಾದಳು ಇವಳಮ್ಮ, ಇವ್ನ ಸಾಕಿ ಸಲುಹಿ ನೊಡತಿನೋ ಇಲ್ಲೋ ಗೊತ್ತಿಲ್ಲ ಎರಡು ಹೊತ್ತಿನ ಎರಡು ತುತ್ತು ತುಂಬೋ ಹೊಟ್ಟಿಗೆ ಆದ್ರ ಸಾಕ ಅಗ್ಯಾದ ನನ್ನವ, ಸಾಕ್ ಆಗ್ಯದ, ಇನ್ನೊಂದು ಜತಿ ಈಗಲೇ ತಗೊಂಡು ಬಿಡು ತಾಯಿ ನಾ ಮತ್ತ ಈ ಊರಾಗ ಬರೋದು ಮುಂದಿನ ದಸೂರಿ ಗೆ, ಹೆಂಗು ಕಮ್ಮಿ ಮಾಡಿನು ನೋಡು ಅಂತ ಹಣೆ ಬೆವರು ಒರಿಸಿ ಹೆಗಲಿಗೆ ಇಳಿ ಬಿಟ್ಟ ರುಮಾಲಿನ ಅಂಚಿನ ಕೊನೆಗೆ ಕೈ ಒರೆಸಿ ಎರಡು ಕಟ್ಟು ಬಾರಿಗೆ ತೆಗೆದು ನೆಲಕ್ಕೆ ಇನ್ನೊಮ್ಮೆ ಬಡಿದು ಅದರ ಗಟ್ಟಿ ತೋರಿಸಿದ ಶರಣಪ್ಪ

ಅಲ್ಲೋ ಶಿವನ ಒಂದು ಜತಿ ಬೇಕು ಅಂದ್ರ ಮುದುಕ ಎರಡು ಅಂತ್ಯಲ್ಲ, ಹಂಗಾರ ಬ್ಯಾಡ ಹೋಗು ಇದ್ರಾಗ ಏನಿಲ್ಲ, ಮಾರ್ಕೆಟ್ ನಗ ಬಣ್ಣ ಬಣ್ಣದ ಬಾರಿಗೆ ಚಂದ ಸಿಗುತ್ತಾ ಅಂತ ಸಿಡಿಮಿಡಿಗೊಂಡ ಹೇಳಿದಳು ನಿರ್ಮಲ…

ಅವ್ವ ಒಮ್ಮೆ ಬಳಿದು ನೋಡು ಎರಡು ಬೆರಳು ನಡುಕ ಕಟ್ಟು ಸಿಗಿಸಿ ಗಟ್ಟಿ ಮಾಡಿ ಬಳಿದ್ರ ಹುದುಗಿದ್ದ ಮಣ್ಣು ಸತೇ ಎದ್ದು ಹೊರಗ ಬಂದು ಚಂದ ಮುಂದ ಹೋಗ್ತಾದ ತಗೊರವ್ವ ನಮ್ಮ ಕಷ್ಟ ನಮಗ, ಅಂದ ಶರಣಪ್ಪ ಒಂದು ಕಟ್ಟು ಆಕೀ ಕೈಗೆ ಕೊಟ್ಟು ದುಡ್ಡಿಗೆ ಕಾಯುತ್ತ ನಿಂತ

ಒಳಗೂಗಿ ದುಡ್ಡು ತಂದ ಇವಳು, ಇಷ್ಟು ಕಷ್ಟ ಪಡೋ ಬದ್ಲು ಎಲ್ಲಯರ ಅಂಗ್ಡ್ಯಾಗ ಕೆಲ್ಸ ಮಾಡಿದ್ರ ನೆರಳು ಆಗ್ತದ ರೊಕ್ಕ ನು ಆಗ್ತದ ಅಲ್ಲ ಅಂತ ಅಂದ್ಲು ನಿರ್ಮಲ ದುಡ್ಡು ಕೊಡುತ್ತಾ

ಏನ್ ಮಾಡ್ಬೇಕು ತಾಯಿ ಕುಲ ವೃತ್ತಿ ಬಿಡಾಕ ಮನಸು ಇಲ್ಲ ನಮ್ಮಪ್ಪ ಈದ್ರಾಗ ಮಡಿದ ನನ್ನ ಕೈಗೆ ಕೊಟ್ಟು ಹ್ವಾದ ಇವಳು ಹ್ವಾದಳು, ನಮ್ಮ ಜೀವನ ಇನ್ನೊಬ್ಬರಿಗೆ ಬ್ಯಾಡ ತಾಯಿ ಬ್ಯಾಡ, ನಮ್ಮಪ್ಪ ಶಿವ ಅದು ಯಾವಾಗ ನಮ್ಮ ಜೀವನದಾಗ ಬಣ್ಣ ತುಂಬಿ ನಮ್ಮ ಬಾರಿಗೆ ನು ಬಣ್ಣದ ಬಾರಿಗೆ ಮಾಡಿ ನಮ್ಮ ಬದುಕು ಬಣ್ಣದ ಬದುಕು ಮಾಡುತ್ತಾನೂ ಏನೋ ಅವನಿಗೆ ಬಿಟ್ಟಿದ್ದು ಇನ್ನು ನಾನು ಬರ್ತಿನವ್ವ ಅಂತ ಮತ್ತ ಬಿಡಿಸಿದ ಎಲ್ಲ ಬಾರಿಗೆ ಗಂಟು ಒಟ್ಟು ಸೇರಿಸಿ, ದೊಡ್ಡ ಹೊರೆ ತಲೆಮೇಲೆ ಹೇರಿಕೊಂಡು ಮಗನ ಬೆರಳು ಹಿಡಿದು ನಿಧಾನ ನಡೆದುಕೊಂಡು ಬಾರಿಗೆಮ್ಮೊ ಬಾರಿಗೆ ಅಂತ ಕೂಗುತ್ತಾ ಹೊರಟ..


ಬೈತುಲ್ಲಾ_ಮಾಲ್

ಅವತ್ತು ಸುಮ್ಮನೆ ಮೊಬೈಲ್ ಹಿಡಿದು ಕೂತ್ತಿದ್ದೆ, ಮೆಸ್ಸೆಂಜರ್ ಅಲ್ಲಿ ಒಂದು ಮೆಸೇಜ್ ಬ್ಲಿಂಕ್ ಆಯಿತು, ಓಪನ್ ಮಾಡಿ ನೋಡ್ತೀನಿ ಯಾರದೋ xbhui ಹೆಸರಿನ ಮೆಸೇಜ್ ಹೈ ಅಣ್ಣ, ಸಾಮಾನ್ಯವಾಗಿ ನನ್ನ ಮೆಸ್ಸೆಂಜರ್ ತುಂಬಾ ಮೊದಲು ಇರುವ ಶಬ್ಧ ಹೈ ಅಣ್ಣ ಅಂತಾನೆ ಜಾಸ್ತಿ, ನೋಡಿದೆ ಪ್ರೊಫೈಲ್ ಹೋಗಿ ನೋಡಿದೆ ಏನು ಇಲ್ಲದ ಫೇಕ್ ಐಡಿ ಆದ್ರೆ ನಾನು ಯಾವ ಮಾಯೆಯಲ್ಲಿ ಫ್ರೆಂಡ್ ಆಗಿದ್ದೆ ಗುರುತೇ ಆಗ್ಲಿಲ್ಲ, ಇರ್ಲಿ ಯಾರೂ ಇರಬಹುದು ಅಣ್ಣ ಅಂದು ಮಮತೆ ಬೆಸೆದಿರುವ ಇವ್ರಿಗೆ ರಿಪ್ಲೈ ಮಾಡೋಣ ಅಂತ, ಹೇಳಿ ಅಂದೆ
ಹೇಗಿದ್ದೀರಿ ಅಣ್ಣ ಮತ್ತೊಂದು ಬಂತು, ನಾನು ಚೆನ್ನಾಗಿ ಇದ್ದೇನೆ ನೀವು?!, ಹೂಂ ಅಣ್ಣ ನಿಮ್ಮ ಹಾರೈಕೆ ಇಂದ ಚೆನ್ನಾಗಿದ್ದೇನೆ ತಲೆ ಎಲ್ಲ ಅಯೋಮಯ ಹೆಸರು ಗೊತ್ತಿಲ್ಲ ಐಡಿ ಸರಿ ಇಲ್ಲ ನನ್ನ ಬಗ್ಗೆ ಎಲ್ಲ ಗೊತ್ತಿದ್ದೂ ಎಷ್ಟೊಂದು ಆತ್ಮೀಯತೆ ಇಂದ ಕೇಳುತ್ತಿದ್ದಾರೆ, ಇರಲಿ…ಹೇಗೆ ನಡೀತಿದೆ ಜೀವನ ಕೇಳಿದೆ, ಹೂಂ ಅಣ್ಣ ಎಲ್ಲ ನಿಮ್ಮ ದಯೆ, ಮತ್ತೆ ನನಗೆ ಆಶ್ಚರ್ಯ ಕೇಳಬೇಕು ಅವರು ಯಾರೂ ಅಂತ ಆದ್ರೆ ಬೇಡ ಅವ್ರಿಗೆ ಹೇಳಬೇಕು ಅನ್ನಿಸಿದರೆ ಹೇಳೆ ಹೇಳುತ್ತಾರೆ ಅಂತ ಸುಮ್ಮನೆ ಇದ್ದೆ… ನಾ ಏನನ್ನು ಕೆಳುತಿರಲಿಲ್ಲ, ಅವ್ರೇ ಎಲ್ಲವನ್ನೂ ಹೇಳುತ್ತಿದ್ದರು ನನಗೆ ತಿಳಿದ ಸಮಾಧಾನ, ಹಿತ ನುಡಿ,ಜೀವನಾನುಭವ, ಲೌಕಿಕ ನುಡಿ ಹೇಳುತ್ತಿದ್ದೆ ಪ್ರತಿ ಸರ್ತಿ ಸರಿ ಅಣ್ಣ ಅಂತ ಹೋದವರು ಮತ್ತೆ ಯಾವತ್ತೂ ಬರುತ್ತಾರೆ ಗೊತ್ತಿಲ್ಲ….

ಹೀಗೆ ಸುಮಾರು ತಿಂಗಳಿಂದ ನಮ್ಮ ಮಾತುಕತೆ ನಡೆಯುತಿತ್ತು ನನ್ನ ಬಗ್ಗೆ ಎಲ್ಲ ತಿಳಿದ ಅವರು ಅವರ್ಯಾರು ಅಂತ ಹೇಳಿರಲಿಲ್ಲ,ಮತ್ತೆ ಬ್ಲಿಂಕ್ ಆಯಿತು ಹೈ ಅಣ್ಣ, ಈ ಸರ್ತಿ ಕೇಳಲೇಬೇಕು ಅಂತ ಹುಮ್ಮಸು ಇಂದ ಮೆಸೇಜ್ ಟೈಪ್ ಮಾಡಿದೆ ನೀವು ಯಾರೂ… ಅಳಸಿ ಹಾಕಿದೆ, ನಾನು ಗೊತ್ತಾ ನಿಮಗೆ ನಿಜಕ್ಕೂ…. ಮತ್ತೆ ಅಳಿಸಿ ಹಾಕಿದೆ, ನೀವು ಗಂಡ ಹೆಣ್ಣ…… ಮತ್ತೆ ಧೈರ್ಯ ಸಾಲದೆ ಆಳ್ಸಿದೆ… ಅಷ್ಟು ಹೊತ್ತು ಟೈಪ್ ಮಾಡುತಿದ್ದ ನಾನು ಮತ್ತೆ ಸುಮ್ಮನೆ ಆಗಿದ್ದು ನೋಡಿ ಅವ್ರೇ ಹೇಳಿದರು ಏನಣ್ಣ ಏನು ಹೇಳಬೇಕು ಅಂತ ಅಂದವರು ಸುಮ್ಮನೆ ಆಗಿ ಬಿಟ್ಟಿರಿ, ನಾನಂದೆ ಏನಿಲ್ಲ ಏನೋ ಹೇಳಬೇಕು ಅನ್ಸಿತ್ತು ಬೇಡ ಅಂತ ಬಿಟ್ಟೆ..
ನನಗೆ ಗೊತ್ತಣ್ಣ ನೀವು ಯಾರು ನನಗೆ ಗೊತ್ತಿಲ್ವ ನನ್ನ ಮುದ್ದು ಅಣ್ಣ ನೀವು, ನಾನು ಯಾರು ಅಂತ ಕೇಳಬೇಕು ಅಂತ ಟೈಪ್ ಮಾಡಿ ಮತ್ತೆ ಯಾಕೋ ನಿಲ್ಲಿಸಿದಿರಿ ಹವ್ದಿಲ್ಲೋ ಅಂದ್ರು…

ನನಗೆ ಪರಮ ಆಶ್ಚರ್ಯ ಅದು ಹೇಗೆ,ಇರಲಿ ಹೇ ಹೇ ಇಲ್ಲ ಹಾಗೇನೂ ಇಲ್ಲ ಸುಮ್ನೆ ತಿಂಡಿ ಆಯಿತಾ ಅಂತ ಕೇಳಬೇಕು ಅನ್ನಿಸಿದವ್ನು ಸಂಜೆ ಹೊತ್ತು ಊಟ ಕೇಳಬೇಕು ಅಂತ ಸುಮ್ನೆ ತೆಗೆದೆ ಅಂದೆ.. ಇರಲಿ ಬಿಡಿ ಎಷ್ಟಿದ್ರು ನೀವು ನನ್ನ ಮುದ್ದು ಅಲ್ವಾ ಸೋಲು ಒಪ್ಪಿಕೊಳ್ಳೋದಿಲ್ಲ ಅಂತ ಹೇಳಿ ಆಫ್ಲೈನ್ ಆದ್ರೂ

ನಿಜಕ್ಕೂ ರಾತ್ರಿ ಎಲ್ಲ ತಲೆ ಕೆರೆದುಕೊಂಡು ಒದ್ದಾಡಿ ಬಿಟ್ಟೆ ನನ್ನ ಮುದ್ದು ಅಣ್ಣ ಒಂದೇ ಶಬ್ಧ ತಲೆ ಲೀ ಹುಳ ಹೊಕ್ಕ ಹಾಗೆ ಓಡಾಡಿ ಬಿಟ್ಟಿತು, ಯಾರೂ ಇವರು ನಂಗೇಕೆ ಇಷ್ಟೊಂದು ಆತ್ಮೀಯರು ಆಗಿದ್ದಾರೆ,ನನ್ನ ಬಗ್ಗೆ ಎಲ್ಲ ಹೇಗೆ ಗೊತ್ತು, ಅಣ್ಣ ಅಂತಾರೆ, ನನ್ನ ಮನದಲಿ ಇರೋದು ಎಲ್ಲಾ ಹೇಳಿದ್ರು ಥೂ ಕಡೆಗೂ ಧೈರ್ಯ ಬರ್ಲಿಲ್ಲ ನಂಗೆ ನೀವು ಯಾರು ಅಂತ ಕೇಳೋಕೆ, ಕೇಳಿದ್ರೆ ಏನು ಅಂದು ಕೊಂಡಾರೋ, ಯಪ್ಪಾ ಇವರು ಸಹವಾಸ ಬೇಡ ಸುಮ್ನೆ ತಲೆ ನೋವು ಅಂತ ನಿರ್ಧರಿಸಿ ಮಲಗಿದೆ….

ಸುಮಾರು ದಿನ ಇಂದ ಪತ್ತೆ ಇಲ್ಲ, ಅಯ್ಯೋ ನಿಜ ಅಂತ ಹೇಳಬೇಕಿತ್ತು ನಾನು, ಸುಖಾ ಸುಮ್ಮನೆ ಅನುಮಾನ ಮಾಡಿದೆ ಈಗ ಅವ್ರು ಮೆಸೇಜ್ ಮಾಡ್ತಿಲ್ಲ, ಯಾಕಾದ್ರೂ ಹಿಂಗೆ ಮಾಡಿದನೋ ಶಿವನೇ ಹಣೆ ಚಚ್ಚಿಕೊಂಡ ಸುಮ್ಮನೆ ಇದ್ದೆ, ಆವಾಗಾವಾಗ ಅವರು ಮೆಸೇಜ್ ಬಂತ ಇಣಿಕಿ ನೋಡೋದು ಪ್ರೊಫೈಲ್ ಚೆಕ್ ಮಾಡೋದು ಏನಾದ್ರೂ ಅಪ್ಡೇಟ್ ಆಗಿದೆಯಾ ಅಂತ..ನಿರಾಶೆ…….

ಅವರನ್ನು ಮರೆತು ಒಂದು ತಿಂಗಳು ಮೇಲಾಗಿತ್ತು ಯಾವದೂ ಕೆಲ್ಸದ ನಿಮ್ಮಿತ ಒಂದು ಓಣಿಯಲ್ಲಿ ಹೋಗುತ್ತಿದ್ದೆ, ಹಿಂದೆ ಇಂದ ಯಾರೋ ಹೈ ಅಣ್ಣ ಅಂತ ಕರೆದಂತೆ ಆಯಿತು….ಕಿವಿ ನಿಮಿರಿ, ಕತ್ತು ನಿಧಾನಕ್ಕೆ ಹಿಂದೆ ವಾಲಿತು, ಕಂಡದ್ದು ಬೈತುಲ್ಲ ಮಾಲ್………

ನೆನಪಿನ ಪುಟದಲ್ಲಿ ತಲೆ ಓಡುತ್ತಾ ಯಾರನ್ನೋ ಹುಡುಕುವ ಹಾಗೆ ಅವಸರವಾಗಿ ಹುಡುಕಾಡಿ ಕೊನೆಗೆ ಸೋಲಲು
ಜೋಪಡಿಯ ಮುಂದೆ ಅರೆ ಮುಚ್ಚಿದ ಮುಖದಲ್ಲಿ ಊನ ಗೊಂಡ ಕಾಲು ಮಡಚಿ ಕುಳಿತಿದ್ದ ಒಬ್ಬಳು.

ಓಡಿದೆ ಓಡಿದೆ ಓಡಿ ಹೋಗಿ ಅವಳ ಮುಂದೆ ನಿಂತೆ….
ನೀರವ ನಿಶಬ್ಧ….. ಸಾವರಿಸಿಕೊಂಡು ಝುಬಿನಿ ಬೇಟಿ ಅರಿವಿಲ್ಲದೆ ತುಟಿ ನಡುಗುತ್ತ ಉಲಿದೆ……

ಅಣ್ಣಾ ಮುದ್ದು ಅಣ್ಣ ಕುಂಟು ಕಾಲಲ್ಲಿ ಸಾವರಸಿ ಮೇಲೆದ್ದು ನನ್ನ ಕೈ ಹಿಡಿದ ತನ್ನ ಎರಡು ಕೈಯಲ್ಲಿ ಒತ್ತಿ ಹಿಡಿದು ಕಾಣದ ಆನಂದಬಾಷ್ಪ ಸುರಿಸಿ ಕುಧಾ ಜರೂರ್ ಹೈನ ಅಣ್ಣ ಅಲ್ಲಾ ಕೀ ಕಸಂ ನೀನು ಗುರುತು ಹಿಡಿದು ಬರುತ್ತೀಯ ಅಂತ ಮಾಡಿರಲಿಲ್ಲ ಅಂತ ಅಂದಳು

ನಿಶ್ಯಬ್ದ…..! ಕಣ್ಣಲ್ಲಿ ನೀರು ಕೊಡಿ ಹರಿದು ಹೋಗುತ್ತಿತ್ತು ನನಗೆ, ಹೆಂಗಿದ್ಯ ತಂಗ್ಯವ್ವ…ಎಷ್ಟು ವರ್ಷ ಆಗಿತ್ತು ನಿನ್ನ ನೋಡಿ…ನನ್ನ ತೋಳು ತೆಕ್ಕೆಯಲ್ಲಿ ತಲೆ ಇಟ್ಟು ಬಾಲ್ಯದ ಎಲ್ಲ ಕುರುಹ ನೆನಪಿಗೆ ಬರುವಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು, ನಾನು ನನಗೆ ಗೊತ್ತಿಲ್ಲದೆ ಅವಳ ತಲೆ ಸವರುತ್ತಾ ನಿಂತು ಬಿಟ್ಟೆ….

(ಚಿಕ್ಕ ವಯಸ್ಸಿನಿಂದ ಬೇರ್ಪಟ್ಟ ಅಣ್ಣ ಹಾಗೂ ತಂಗಿಯ ಸಮಾಗಮ ಆಯಿತು, ಇದ್ದ ಊರಲ್ಲೇ ಇದ್ದು ಎಲ್ಲಿ ಇದ್ದಳು ಅನ್ನೋದು ಬದುಕಿನ ಬವಣೆಯಲ್ಲಿ ತಿಳಿಯಲೇ ಇಲ್ಲ)

ಒಳಗಿಂದ ಕ್ಷೀಣ ದ್ವನಿ ಜಯ್ಯು ಬೇಟಾ……..ನಿಧಾನಕ್ಕೆ ಕೇಳಿತು….ಬಂಗರವ್ವ ನೀನಿನ್ನೂ ಬದುಕಿದೆಯಾ…ಅತ್ತ ಕಣ್ಣು ಒರಸಿ ಅವಳ ಜೊತೆ ಕರೆದುಕೊಂಡು ಜೋಪಡಿಯ ಒಳಗೆ ಕಾಲಿಟ್ಟೆ…

-ಜಯಂತ್ ದೇಸಾಯಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x