ಅವತ್ತು ನಾನು ನಮ್ಮ ಹೊಲಕ್ಕೆ ನೀರಿಡುತ್ತಿದ್ದೆ. ಆ ನೀರಿಡುವ ಸಮಯದಲ್ಲಿ ಹುಳು ಹುಪ್ಪಟೆಗಳು ನೀರಿನಲ್ಲಿ ತೇಲುತ್ತವೆ. ಅಂತಹ ಹುಳುಗಳನ್ನು ತಿನ್ನಲೆಂದು ಒಂದಷ್ಟು ಹಕ್ಕಿ ಪಕ್ಷಿಗಳು ಬರುತ್ತವೆ. ತನ್ನ ಬೆಳಗಿನ ಉಪಹಾರಕ್ಕೆಂದು ಹಾಗೆ ಬಂದ 'ಕಿಂಗ್ ಫಿಷರ್' ನನ್ನ ಮೊಬೈಲ್ ನಲ್ಲಿ ಹೀಗೆ ಸೆರೆಯಾಯ್ತು. ಮೊದಲಿಗೆ ಸ್ವಲ್ಪ ದೂರದಲ್ಲಿ ನಿಂತು ಕ್ಲಿಕ್ಕಿಸಿದೆ. ಆಮೇಲೆ ನಿಧಾನವಾಗಿ ಸದ್ದಾಗದಂತೆ ಹೆಜ್ಜೆಯೂರಿ ಸ್ವಲ್ಪ ಹತ್ತಿರಕ್ಕೆ ಹೋದೆ. ಒಂದೊಂದು ಫೋಟೋಗಳನ್ನ ಕ್ಲಿಕ್ಕಿಸುತ್ತ ಒಂದೊಂದು ಹೆಜ್ಜೆ ಹತ್ತಿರಕ್ಕೆ ಹೋದೆ. ಗೊತ್ತಾದರೆ ಹಾರಿ ಹೋಗಬಹುದೆಂದು ತುಂಬಾ ಎಚ್ಚರವಹಿಸಿದೆ. ಆದರೂ ಅದರ ಕಣ್ಣಿಗೆ ನಾನು ಬಿದ್ದೆ! ಈಗ ಅದು ಹಾರಿ ಹೋಗಬಹುದೆಂದುಕೊಂಡೆ. ಇಲ್ಲ ಅದು ಕೂತಲ್ಲೇ ಕೂತಿತ್ತು. ನನ್ನ ನೋಡಿ ಭಯ ಪಡಲಿಲ್ಲ. ಬಹುಶಃ ಅದಕ್ಕೂ ಗೊತ್ತಾಗಿರಬೇಕು 'ಇವನ ಕೈಯಲ್ಲಿ ಬಂದೂಕವಿಲ್ಲ, ಅನ್ನದಾತ ಆದ ಇವನು ನನ್ನ ಕೊಲ್ಲಲಾರ' ಎಂಬ ನಂಬಿಕೆಯ ಮೇಲೆ ಸುಮ್ಮನೇ ಕುಳಿತು 'ಎಷ್ಟು ಬೇಕಾದರೂ ತೆಕ್ಕೋ' ಅಂತ ಫೋಟೋಗೆ ಹಲವು ಕೋನಗಳಲ್ಲಿ ಫೋಸು ಕೊಡ್ತು. ನಾನೂ ಸಹ ಅದರ ನಂಬಿಕೆಯನ್ನು ಸುಳ್ಳಾಗಿಸದೆ ಸುಮ್ಮನೆ ಫೋಟೋಗಳನ್ನ ಕ್ಲಿಕ್ಕಿಸಿಕೊಂಡೆ.
ಫೋಟೋ ಕ್ಲಿಕ್ಕಿಸಿದ್ದು :
ಫೆಬ್ರವರಿ 13, 2015 | 09:32 am
~ ನವೀನ್ ಮಧುಗಿರಿ