ಕಾವ್ಯಧಾರೆ: ಸಿಪಿಲೆನಂದಿನಿ, ಎಸ್ ಕಲಾಲ್, ಕು.ಸ.ಮಧುಸೂದನ್ ರಂಗೇನಹಳ್ಳಿ

ಅವನು ಕಾಡುಗಳ್ಳರಲ್ಲಿ ಬಬ್ಬನು 
ಮಳೆತಂಪಿಗೆ ನಳ-ನಳಸುತ್ತ
ಚಿಗುರೊಡೆಯುತ್ತಿದೆ
ವನರಾಶಿ ತುಂಬಿದೆ ಶಿಖೆಯಾದ್ರಿಗಳು

ಅವನ ಮೈತುಂಬಿದ 
ಹಸಿರು ಎಲೆಗಳ ಉಡುಪುಲಿ 
ಎಂತಹ ಸುವಾಸನೆ 
ಮಣ್ಣಿನ ಬೇರಿನೊಳಗೂ 
ಸೂಸುವ ತಾಜಾತನ
ಅವನ ಎದೆಯೊಳಗೆ ಜೀವನಿರೋದಕ 

ಮೌನಕವಿದ ರುದ್ರ ತೊರೆಯಂತಹ ಮುಖ
ಸಿಡಿಲಿನಂತಹ ಬಾಹುಗಳಲ್ಲಿ
ಬಂದಿಯಾಗುವ ಸಾರಂಗ,
ಚಿತ್ತಾಕರ್ಷಕ ಗುಂಡಿಗೆ 
ದಮನಿಯ ಮೇಲೆ ಚಿನ್ನದಕಾಂತಿ ಹುಲಿಪಟ್ಟೆ 
ನಡುವಲ್ಲಿ ನೀಲಿ ವರ್ಣದ ಗುಂಡುಗಳ ಬತ್ತಳಿಕೆ

ಕಂಗಳ ಹಂಚಿನಲಿ 
ಬೆಳ್ಳಿಮುಗಿಲ ಹೊಳಯುವ ಚಿತ್ತಾರ
ಹಾಲ್ದಿಂಗಳ ಬೆಳಕ ನೆರಳಿನಲಿ ನೆಡೆವಾಗ 
ಕಣಿವೆಗಳಲಿ ಕಂಪನ 
ಕಾನನದೆದೆಯ ಆಳದೊಳಗೆ
ಹೊಳೆಯ ಮರಳು ಸೋಸುವನು

ಅರಣ್ಯ ಸಿಬ್ಬಂದಿ ಜೊತೆ ಕೈಮಿಲಾಯಿಸಿ
ಕತ್ತರಿಸುವನು ಯಾವದೇ ಭಯವಿಲ್ಲದೆ
ಶ್ರೀಗಂಧ, ರಕ್ತ ಚಂದನಗಳ 
ಸುಗಂದನೆಯ ಸಸ್ಯಸಂಜೀವಿನಿಗಳಿಗೆ
ತರಗಲೆ ಮುಚ್ಚಿಬಿಡುವನು ಓಮ್ಮೆನೆ
ಅವನು ಕಾಡುಗಳ್ಳರಲ್ಲಿ ಬಬ್ಬನು..

ಇಂಪಾದ ಹಕ್ಕಿಗಳೇ ನಿಬ್ಬೆರಗಾಗುವಂತೆ
ಅನುಕರಿಸುತ್ತಾನೆ 
ಅಬ್ಬಬ್ಬಾ..
ಇವನಲ್ಲಿ ಅದೆಂತಹ ಜಪಿಸುವ ಪಕ್ಷಿ ಪ್ರೇಮ
ಎಂತಹ ಅಶ್ಚರ್ಯ..
ಹಕ್ಕಿಗಳ ಉಳಿವಿಗಾಗಿ
ಗನ್ ಬಿಟ್ಟಿದ್ದಾನಂತೆ
ಕ್ಯಾಮೆರ ಕೈಯಲಿ ಹಿಡಿದವನಂತೆ
ಹಸಿರು ಸಾಮ್ರಾಜ್ಯಕೆ
ಈಗ ಅವನೇ ಚಕ್ರವರ್ತಿ

ಸುಯ್ಯುವ ತಂಗಾಳಿ
ಓಂಕರಿಸುವ ಹಸಿರು ದುಂಬಿಗಳ
ಮನದೊಳಗಿನ ಧ್ಯಾನಕೆ ಪರಿಮಳ ತೋಯ್ದಂತೆ 
ಒಲವಿನ ಇಬ್ಬನಿ ಸೋನೆಯ ಅಂತಕರಣ
ಕಾಡು ಪ್ರಾಣಿಗಳ ಸಂಗಡ

ನೀರವತೆಯುಸಿರು
ಕೊಂಚ ಸಪ್ಪಳವಾದರೆ 
ವಿಷತುಂಬಿದ ಜಂತುಗಳ
ಮರಣಹೋಮ
ಅಳಕ್ಕಿಯುವ ಶಬ್ಬದ ಸರಮಾಲೆ
ಕೂಂಬಿಂಗ್ 
ವಿಕರ್ಶಕ  ಸಂಘರ್ಷಗಳು 
ದಾಳಿಗೆ ಪ್ರತಿದಾಳಿ
ಮುಗಿಲಿನವರೆಗೂ ದಳವಾಯಿಗಳು

ಹೆಚ್ಚೇನು ಹೆದರದ ಎದೆಯ
ಇಬ್ಬನಿ ಮುಸುಕಿನೊಳಗಡೆ ಸಂಚು
ದೂರದ ಗುರಿಗೆ ಗುಂಡಿಗೆ ಹಾರಿತ್ತು
ಹಸಿರು ನೆತ್ತರ ಕೈ ಹರ್ಷದಲಿ
ಕೆಂಪು ರಕ್ತದ ಮಡಿವು ತುಂಬಿದ
ಕ್ರೌರ್ಯದೆದೆಯ ಪ್ರಾಣ
ಹಸಿರು ಚಕ್ರವರ್ತಿಯ ಹತೈ
ಆದರೂ ಕಾಡು ದೋಚುವುದು ನಿಂತಂತೆಇಲ್ಲ      
ಖಾಲಿತನ 
ಅದೇ  ಜೋರು ಮಳೆ ಸಪ್ಪಳ
ಕಾವಳದೊಳಗೆ ಸೂರ್ಯೋದಯ  
 -ಸಿಪಿಲೆನಂದಿನಿ

 

 

 



*ಸಾಧಿಸು ಮನವೇ*

ಬೆಳಗುವ ದೀಪವು ಆರಿದರೇನು
ಕವಿದ ಕತ್ತಲು ಶಾಶ್ವತವೇನು
ಅರಳುವ ಪುಷ್ಪವು ಬಾಡಿದರೇನು
ಬಳ್ಳಿಯು ಮೊಗ್ಗನು ಅರಳಿಸದೇನು
ಇಂದಿನ ಸೋಲಿಗೆ ಅಳುವದೇಕೆ
ಸಾಧಿಸು ಮನವೇ ನಾಳೆಯು ನಿನ್ನದೇ..

ಆ ಕಡೆದ ಕಲ್ಲು ನೋವನುಂಡು
ಪೂಜಿಸೋ ಶಿಲ್ಪವು ತಾನಾಗುವದು
ನೇಗಿಲ ಉಳುಮೆಯ ಸಹಿಸಿಕೊಂಡು
ಧರೆಯು ಅನ್ನವ ತಾ ನೀಡುವುದು
ಇರಳು ಮಡಿದರೆ ಬೆಳಕಿನ ಜನನ
ಈ ಸತ್ಯವ ಅರಿತರೆ ಬದುಕಿದು ಪಾವನ
ಪ್ರತಿ ಕಷ್ಟದ ಹಿಂದೆ ಸುಖವಿದೆ ಮನವೇ
ನೀ ಸಾಧಿಸು ಸಾಧಿಸು ಓ ನನ್ನ ಮನವೇ..

ಕೈ ರೇಖೆಯ ನಂಬಿ ಕೈಕಟ್ಟಬೇಡ
ಕೈಯಿಲ್ಲದ ಸಾಧಕರಿರುವರು
ಹಣೆಯಬರಹವೆಂದು ಜರಿಯಬೇಡ
ತಮ್ಮ ಬದುಕಿನ ಬರಹ ತಾಬರೆದಿಹರು
ನೀರು ತಾನೇ ಹರಿದರೆ ನದಿಯು
ಜಡದಿ ನಿಂತರೆ ಹೊಲಸು ಮೊರಿಯು
ಅಂಜದೆ ಅಳುಕದೆ ಮುನ್ನಡೆ ಮನವೇ
ನಾಳಿನ ಜಗಕೆ ಸಾಧಕ ನಿನೇ..

ಸಾವಿರ ತಿರುವು ನೂರು ದಾರಿಯು
ಏಳು- ಬೀಳಿನ ಬದುಕಿನ ಪಯಣ
ನೋವು -ನಲಿವು ಮಾವು-ಬೇವು
ತಿಂದರೆ ತಾನೇ ಸುಖವಿದು ಜೀವನ
ಬೆಳಗುವ ದೀಪಕೆ ಕತ್ತಲು ಕವಿಯದು
ಸಾಧಿಸೋ ಹೃದಯಕೆ ಸೋಲು ಬಾರದು
ಸಾಧಿಸು ಸಾಧಿಸು ನನ್ನ ಮನವೇ
ನೀ ಸಾಧಿಸಿ ತೋರಿಸು ಓ ನನ್ನ ಮನವೇ…

-ಎಸ್ ಕಲಾಲ್

 

 

 

 


ನಂಬಿಕೆಯಿಂದ ಬರೆಯುತ್ತೇನೆ

ಯಾರೋ ಒಬ್ಬ ಹಸಿದವನಿಗೆ
ಊಟ ಹಾಕುವುದಕ್ಕಿಂತ
ಕವಿತೆ ಬರೆಯೋದೇ ಬಹಳ ಮುಖ್ಯ
ಅಂತ ನನಗನ್ನಿಸುವುದಿಲ್ಲ
ಯಾಕೆಂದರೆ
ಹಸಿದವನ್ಯಾವತ್ತೂ ಕವಿತೆ ಓದಲಾರ
ಊಟ ಮಾಡಿದವನಿಗೊ ಕವಿತೆಯೆಂದರೆ ತಿರಸ್ಕಾರ
ಆದರೆ  ಹಸಿದ ಹಲವರಿಗೆ
ಯಾವತ್ತಾದರು ಒಂದು ದಿನ
ಹೊಟ್ಟೆ ತುಂಬ ಅನ್ನ
ಸಿಗುವ ದಾರಿಯನ್ನ 
ಎಂದಾದರದು
ತೋರಬಹುದೆಂಬ ನಂಬಿಕೆಯಿಂದ
ನಾನು ಬರೆಯುತ್ತಿರುತ್ತೇನೆ!

-ಕು.ಸ.ಮಧುಸೂದನ್ ರಂಗೇನಹಳ್ಳಿ

 

 

 



.

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x