ಕಲ್ಲೆದೆಯ ಮೇಲೆ ಪ್ರೀತಿ ಕೊನರಿಸಿ
ಕಲ್ಲೆದೆಯ ಮೇಲೆ
ಪ್ರೀತಿ ಕೊನರಿಸಿ ಹೋದ
ಅವಳು
ತಿರುಗಿ ನೋಡಿದ್ದು
ಕಂಕುಳಲ್ಲಿ ಮಗು ಎತ್ತುಕೊಂಡು.
ನೆನಪ ಮರೆಯಲು
ಕುಡಿತದ ಬೆನ್ನೇರಲು
ನಯಾ ಪೈಸಾ ಕಾಸಿರಲಿಲ್ಲ
ದಿನಂಪ್ರತಿ ಸುಡುತ್ತಾ ಹೋದ
ಅವಳ ನೆನಪಿಗೆ
ಮುಲಾಮು ಹಚ್ಚಲು ಆಗಲಿಲ್ಲ
ನೈಜತೆಯ ಹುಡುಕುತ್ತಾ ಹೋದೆ
ಅವಳ ಪ್ರೀತಿಯ ಮೇಲೆ
ಜಾತಿ ಎಂಬ ಬೆಂಕಿ ಉರಿದ ಹೊಗೆಯ
ನಿಶಾನೆ ಇತ್ತು !!
ಅವಾಗ್ಗಾಗಲೇ ನೆತ್ತಿಗೇರಿದ್ದ ಪ್ರೀತಿಗೆ
ಬೆಂಕಿ ಆರಿಸುವ ನೀರಾಗಲು
ಧೈರ್ಯಕ್ಕೆ ಕಣ್ಣು ಕಾಣುತ್ತಿರಲಿಲ್ಲ
ಸೋಲಲೇ ಬೇಕಾಗಿತ್ತು
ಮನುಷ್ಯನಾಗಲು
ಮದುವೆಯಾದೆ.ಇನ್ನೊರ್ವಳ ಜೊತೆ
ನಜ್ಜಾಗಿದ್ದ ಪ್ರೀತಿಗೂ ಕರೆಯೋಲೆ ಕೊಟ್ಟೆ!
ಈಗ, ಅವಳಿಗೆ ನಾನ್ಯಾರೋ
ನನಗೆ ಅವಳ್ಯಾರೋ
ಬದುಕು ಬಂಡಿ ಸಾಗುತ್ತಿದೆ
ಸುಸೂತ್ರವಾಗಿ.
ನನ್ನ ತೋಳ್ತೆಕ್ಕೆಯಲು ಮಗುವಿದೆ.
-ಬಿದಲೋಟಿ ರಂಗನಾಥ್
☆☆ಹನಿ ಕವಿತೆಗಳು☆☆
*ಹೆಣ್ಣು*
ಓ ಹೆಣ್ಣೇ…
ನೀ ಜಗದ ಕಣ್ಣು
ಜಗಕೆ ನೀ ಹೊನ್ನು
ಜಗವು ಅರಿಯದು ಹೆಣ್ಣಿನ ಮನ
ಜಗವು ಕೈಗೊಂಡಿದೆ ಭ್ರೂಣ ಪತ್ತೆ
ಪರೀಕ್ಷೆ, ಹೆಣ್ಣೆಂಬ ಅರಿತರೆ ಪಾಪಿಗಳು
ಮುನ್ನುಗ್ಗುವರು ಭ್ರೂಣ ಹತ್ಯೆಗೆ||
~ ~
*ಕೆನ್ನೆ ಮೇಲಿನ ಕುಳಿ*
ಓ ಹುಡುಗಿ…
ನಿನ್ನ ಕೆನ್ನೆ ಮೇಲೆ ಮೂಡುವ ಕುಳಿಗೆ
ಮನ ಸೊತು ಮಂಗನಂತಾಗಿದೆ ಒಂದು ಗಳಿಗೆ
ನೀ ಕೋಪಗೊಂಡರೆ ಕಾಣದು ಆ ಕುಳಿ
ಎನ್ನ ಮನ ಹವಿಯಾಗುವುದು ಗಾಳಿಗೆ
ಮತ್ತೇರಿದ ಆ ಸುಂದರ ಗಳಿಗೆ||
~ ~
*ಅರಣ್ಯ ಮಾತೆ*
ಕಾಣೆಯಾಗಿದೆ ಭೂ ಮೇಲೆ
ಗಿಡ ಮರ….
ಮನುಷ್ಯ ಕೈಚಳಕದಿಂದ ಆಗಿದೆ
ಮರಣ ಹೋಮ ಗಿಡ ಮರ….
ಅರಣ್ಯ ಮಾತೆ ರುದ್ರ ಅವತಾರ
ತಾಳಿದರೆ ಭೂ ಮಂಡಲ ಹರಹರ…
ಅರಿತು ನಡೆದರೆ ಜೀವಿಸಲು
ವಾತಾವರಣ ಸಹಕಾರ||
~~ ~~
*ನನ್ನವಳು*
ಸುಂದರವಾದ ಉದ್ಯಾನವನ
ಸಾವಿರಾರು ಹೂಗಳ ರಾಶಿ
ಒಂದೇ ಒಂದು ಹೂ ಹಿಡಿಸಲಿಲ್ಲ
ನನ್ನವಳೇ ಒಂದು ಹೂವಾಗಿದ್ದಳು
ರಾಶಿ ಹೂವುಗಳ ಸಾಲಿನಲ್ಲಿ
ಮನವು ಮತ್ತೊಂದು ಹೂ ಬಯಸಲಿಲ್ಲ
ಅವಳೇ ನನ್ನ ಸರ್ವಸ್ವಿ||
←☆☆☆→
-ಯಲ್ಲಪ್ಪ ಎಮ್ ಮರ್ಚೇಡ್
ಕಾಂತಾರ ನೀಪದ ನೀರವತೆ !
ನೆಲದ ಮಣ್ಣಿನ ಗಂಪು
ನೀಪ ಉಸಿರಿನ ತಂಪು
ಮಳೀ ಹೂವಲ್ಲಿ
ಚೇತನದಿ ಮೆಲ್ಲು ಸೊಂಪು
ಚಿನ್ನ ಮುಗಿಲಲ್ಲಿ
ನರಗಂಪು ತೇವದಲ್ಲಿ
ಬೇಲಿ ನೆರಳ ತಂಪಲ್ಲಿ
ಮಹಾ ಕಿರಣದಿ ಚಂಪು
ಕಾಂತಾರ ಕ್ಷಿತಿಜದಿ
ಸೊನ್ನಗೇದಗೆ ಹೂ ಗಿಡದ ನರ್ತನ
ನವಿರ ಹುಲ್ಲುಗಾವಲ
ಒಲವ ಚೇತನ
ಮರಳ ತೀರದಿ
ತೂಗುವ ತೆರೆಗಳ ಮಂಜಿನ
ಕೆಂಮುಗಿಲ ಕಿರಣಗಳ
ಸೊನ್ನ ಸಂದ್ಯಾದಿ
ನಲಿವ ಒಲವ ನರ್ತನ
ಧರೆಯ ನೀರ್ಗಲ್ಲು
ಕೊನೆ ಕೆಂಕಿರಣದ ಮಿಂಚನ
ಕುಟಿರ ಹಕ್ಕಿಯ
ಸುಮಧುರ ಗಾನ
ನೀಲಾ ಕೊಳದ ತಿರುವಿನ
ಮರದ ಸಿಂಚನ-ಪಾನ
ಸುಂದರ ಜೊಂಪಿನ
ದವನದಿ ಅಪೂರ್ವಗಗನ
-ಸಿಪಿಲೆನಂದಿನಿ