ಮುಂಗಾರು ಮಳೆ ಶುರುವಾಗುವ ಅಮೃತ ಕ್ಷಣ. ಎಂತವರನ್ನೂ ಕನಸಿನ ಲೋಕಕ್ಕೆ ಕೊಂಡ್ಯೊಯುವ ಒಂದು ಅದ್ಭುತ ಘಳಿಗೆ. ಪರಸ್ಪರ ಅಪ್ಪಿಕೊಳ್ಳುವ ತಂಗಾಳಿಯ ತಂಪಿನೊಂದಿಗೆ, ಚಿಗುರುವ ಕನಸಿನೊಂದಿಗೆ ವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಇತರರು ಸುಮಾರು ವೇಷ-ಭೂಷಣದೊಂದಿಗೆ ಅಂಗಳವನ್ನು ಅಲಂಕರಿಸುವರು. ಮೊದ-ಮೊದಲು ಮೌನದಲ್ಲಿ, ಕಣ್ಣಿನ ಸಲಿಗೆಯಲ್ಲಿ ಪರಿಚಯವಾಗವ ಅನಾಮಿಕರು.
ರಿಪ್ರಸೇಂಟ್ ಮಾಡಲು ಹೊರಟ ಮಾಕ್ರ್ಸಕಾರ್ಡ್ ಹೊತ್ತ ಪ್ಲ್ಯಾಸ್ಟಿಕ ಕವರ್‍ಗಳ ಕಾರಬಾರು, ಮಾರುಕಟ್ಟೆಯಲ್ಲಿ ಸೇಲ್ ಆಗದೆ ಉಳಿದ ಮಾರ್ಡನ್ ಟಾಪ್‍ಗಳು, ರಂಬೆ, ಊರ್ವಶಿ, ಮೇನಕೆಯರ ನಾಟ್ಯದ ಜಲಕನ್ನು ಉಂಟು ಮಾಡುವ ವರ್ತನೆಗಳು, ದೇಹದ ಸಂರಚನೆ ತಿಳಿಸೋ ಜೀನ್ಸ-ಟೀಶರ್ಟಗಳು, ಕಲ್ಪನೆಯ ಸೌಂದರ್ಯಕ್ಕೆ ತಳ್ಳುವ ಕಣ್ಣ ಕುಕ್ಕಿಸುವ ವಿವಿಧ ಲಗ್ಗೀನ್ಸಗಳು, ವೆಲ್‍ಗೆ ಗುಡ್-ಬಾಯ್ ಹೇಳಿ ಸ್ಲಿವೆಲ್ಸ್ ತೋಳನ್ನು ಬಿಸಿಲಿನಿಂದ ರಕ್ಷಿಸಿಸುವ ಕಲರ್ ಕಲರ್ ಶ್ರಗ್ಗಳು, ಚೂಡಿದಾರದಿಂದ ಜೀನ್ಸಗೆ ಶಿಪ್ಟ್ ಆದ ಗ್ಯಾಂಗ್‍ಗಳು.
ಸೊಂಟದ ಮೇಲೆ ನಿಲ್ಲದ ಹುಡುಗರ ಲೊವೆಷ್ಟ ಪ್ಯಾಂಟ್‍ಗಳು, ಫ್ಯಾಷನ್ ಎನ್ನುವ ಗುಂಡಿ ಬಿಚ್ಚಿದ ಶರ್ಟ್‍ಗಳು, ಧೃಡಮನಸ್ಸನ್ನು ಜೀತಕ್ಕಿಟ್ಟು ದೇವರಿಗೆ ಮೊರೆ ಹೋಗುವ ತಂತ್ರ-ಮಂತ್ರ ದಾರಗಳು, ಪುರಸೊತ್ತು ಸಿಗದೆ ಹಂಗೆ ಬಿಟ್ಟ ದೇವದಾಸ ಗಡ್ಡಗಳು, ಹಗ್ಗದ ಹುರಿಯಂತಿರುವ ಹನಿಸಿಂಗನ ಬೆಲ್ಟ್‍ಗಳು, ಬ್ರ್ಯಾಂಡೆಡ್ ಮುಖ ಹಾಕಿದ ಮಾದರಿಗಳು, ಸಿಕ್ಸ ಪ್ಯಾಕ್- ಜೀರೋ ಸೈಜ್ ಮೆಂಟೈನ್ ಮಾಡೋ ಆಂಟಿ-ಅಂಕಲ್‍ಗಳು, ಬಿಕಾಬಿಟ್ಟಿ ಡ್ರೆಸ್ ಸೆನ್ಸ್ ಗಳು.
ಮುಂಗುರುಳು ಸರಿಸುವ ನೆಪದಲ್ಲಿ ಕೈ ಸವರುವ ಬ್ರೈಸ್ಲೇಟ್-ಬಳೆಗಳು, ಸೂರ್ಯನನ್ನು ನಾಚಿಸುವ ಮೇಕಪ್ ಲಿಪ್‍ಸ್ಟಿಕ್‍ಗಳು, ವರ್ಣಬೇಧವಿಲ್ಲದೆ ರಾರಾಜಿಸುವ ಕಣ್ಣ ಕಾಡಿಗೆಗಳು, ಬಣ್ಣದಿಂದ ಮುಚ್ಚಿಕೊಂಡ ಕೈ-ಕಾಲು ಬೆರಳುಗಳು, ತಲೆ ಕೆಡಿಸುವ ಹೇರ್ ಸ್ಟೈಲ್‍ಗಳು, ಕಾಮನಬಿಲ್ಲನ್ನೂ ನಾಚಿಸುವ ಪಾರ್ಲರ್ಸ್ ಕೊಟ್ಟ ಬಳುವಳಿ ಹುಬ್ಬುಗಳು.
ಸಾಧನೆಯ ಪಾಲಿನಲ್ಲಿ ನಮ್ಮದೊಂದು ಪರೋಕ್ಷ ಸಹಾಯವೆನ್ನುವ ಹೈ ಹೀಲ್ಸ್‍ಗಳು, ಶೋಗೆ ಶೂಗಳು, ಹೆಸರಿಲ್ಲದೆ ಪರಿಮಳ ಬೀರುವ ಪರಪ್ಯೂಮ್‍ಗಳು, ಜವಾಬ್ದಾರಿ ಹೆಚ್ಚಿಸುವ ಸಮಯದ ಮಹತ್ವ ತಿಳಿಸೊ ವಿಭಿನ್ನ ವಾಚ್‍ಗಳು, ಒಗ್ಗದ ಕಾಲಗಳಿಗೆ ಬಳಸುವ ಛÀತ್ರಿಗಳು, ರಾಜಾರೋಷವಾಗಿ ಯಾವ ಅಡೆತಡೆಯಿಲ್ಲದೆ ಒಂದಿಷ್ಟು ಕಣ್ಣು ಕುಕ್ಕಿಸುವ ಗಾಗಲ್‍ಗಳು, ಸ್ಮಾರ್ಟ್‍ಫೋನ್‍ಗಳು ಜೊತೆಗೆ ಕಾಡುವ ಕಾಡಿಸುವ ನಂಬರ್‍ಗಳು, ಸದಾ ಕಿವಿಯನ್ನು ದತ್ತು ಪಡೆದಿರುವ ಇಯರ್‍ಪೋನ್‍ಗಳು, ಬುಕ್ಸ-ಪೆನ್ನುಗಳೆಂಬ ಘೋಜಿಗೆ ಸಿಲುಕಿದ ಬ್ಯಾಗಗಳು, ಕೈ ತುತ್ತೂ ಕೊಡುವ ಸ್ಪೂನ್ ಟೀಫಿನ್ ಬಾಕ್ಸ-ವಾಟರ ಬೊಟಲ್‍ಗಳು.
ಹುಡುಗರ ಹೃದಯ ಬಡಿತಕ್ಕೆ ಲಗ್ಗೆ ಇಡುವ ಅರ್ಥವಿಲ್ಲದ ನಗೆ ಹೊಗೆಗಳು, ಬೇಧ-ಭಾವವಿಲ್ಲದ ಪ್ರೇಂಡಶೀಪ್‍ಗಳು, ಕ್ಯಾಂಟೀನ್ ಟೀಗಳು, ಹುಡುಗಿಯರ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸುವ ಹುಡುಗರ ನೋಟ-ಸೆಳೆತಗಳು, ಗತಕಾಲದ ನೆನಪನ್ನು ಮರೆಸಿದ ಸಂದರ್ಭಗಳು, ಕೆಲವು ನಾಚಿಕೆಗಳು, ಅತಿಯಾದ ಸಲಿಗೆಗಳು, ಎಡವಿದ ಹಳೆಯ ಲವ್‍ಸ್ಟೋರಿಗಳು, ಒಂದಿಷ್ಟು ಮನಸ್ಸನ್ನು ಘಾಸಿ ಮಾಡೋ ಬಾಂಧವ್ಯಗಳು.
ಸ್ಪೂರ್ತಿಯಾದ ಕೆಲವು ಪುಸ್ತಕದ ಮಾದರಿಗಳು, ಕನಸನ್ನು ಹೊತ್ತುಕೊಂಡ ಬಂದ ಹೆಜ್ಜೆಗಳು, ಪ್ರವೇಶಕ್ಕೆ ಬರುವ ಮುನ್ನ ಕಾಡುವ ಭಯಗಳು, ಹೊಸ ಹುರುಪಿನೊಂದಿಗಿನ ಆಸೆ ಆಕಾಂಕ್ಷೆಗಳು, ಸವಿ-ಸವಿ ನೆನಪುಗಳು, ಕಲ್ಪನೆಗೆ ಸಿಲುಕಿದ ವಿದ್ಯಾಲಯದ ನೆರಳಿನ ಛಾಯೆಗಳು, ನಾವೇ ಶ್ರೇಷ್ಠರು ಎಂದು ಮಾದರಿಯಾಗಲು ಹೊರಟ ಶಿಕ್ಷಕ ವೃಂದವು, ದಾರಿದ್ರ್ಯವನ್ನು ಹೊರ ಓಡಿಸಿದ ಹೊಸ ತೀರ್ಮಾನಗಳು.
ಹ ಹಾ ಹ..
ಗಳು ಗಳು
ತುಂಬಾ ಇವೆ ಈ ಕಾಂಪಸ್ನಲ್ಲಿ…
ಕಾಲೇಜು ಜೀವನ ಸುಂದರ ಹೂಬನ…