(ಇಡೀ ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆ ಮಂಡ್ಯ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಭೇಟಿ ಕೊಟ್ಟು, ಅನ್ನದಾತನ ಸಾವಿಗೆ ಕಾರಣಗಳೇನು? ಸಾವಿನ ನಂತರ ರೈತನ ಕುಟುಂಬ ಸದಸ್ಯರು ಬದುಕಲು ಯಾವ ರೀತಿ ಪಾಡು ಪಡುತ್ತಿದ್ದಾರೆ? ಆ ಕುಟುಂಬಗಳಿಗೆ ಸರ್ಕಾರಗಳು ಮತ್ತು ಸಮಾಜ ಯಾವ ರೀತಿ ಸ್ಪಂದಿಸಿವೆ? ಮಾಧ್ಯಮಗಳ ಸ್ಪಂದನೆ ಯಾವ ರೀತಿಯಿದೆ? ಇತ್ಯಾದಿ ಕುರಿತಂತೆ ಉತ್ತರ ಕಂಡುಕೊಳ್ಳಲು ಯತ್ನಿಸಲಾಗಿದೆ). ಒಕ್ಕಲಾ ಕೇರ್ಯಾಗ ಮಳೀರಾಯ ಮಕ್ಕಳ ಮಾರ್ಯಾರ ಮಳೀರಾಯ! ಒಕ್ಕಲಾ ಕೇರ್ಯಾಗ ಮಕ್ಕಳ ಮಾರಿ […]
“ಬದನವಾಳು” ಎಂದೊಡನೆ ಹಳೆಯ ಮೈಸೂರಿಗರ ಮನಸ್ಸಿಗೆ ಬರುವುದು, ಗಾಂಧೀ ರಚನಾತ್ಮಕ ಕಾರ್ಯಕ್ರಮದಡಿಯಲ್ಲಿ 88 ವರ್ಷಗಳ ಕೆಳಗೆ, ಅಂದರೆ 1927ರಲ್ಲಿ, ಅಲ್ಲಿ ಸ್ಥಾಪಿಸಲ್ಪಟ್ಟ, “ನೂಲುವ ಪ್ರಾಂತ್ಯ” ಮತ್ತು “ಖಾದಿ ಗ್ರಾಮೋದ್ಯೋಗ ಕ್ಷೇತ್ರ.” ಮೈಸೂರು-ಚಾಮರಾಜನಗರ ರೈಲು ಮಾರ್ಗದಲ್ಲಿರುವ ಈ ಗಾಂಧೀಕ್ಷೇತ್ರವು, ನಂಜನಗೂಡಿನಿಂದ 9 ಕಿ.ಮೀ. ಮತ್ತು ಮೈಸೂರಿನಿಂದ 34 ಕಿ.ಮೀ. ದೂರದಲ್ಲಿದೆ; “ತಗಡೂರು” ಎಂಬ ಇದರ “ಅವಳಿ” ಗಾಂಧೀಕ್ಷೇತ್ರದಿಂದ 9 ಕಿ.ಮೀ. ದೂರದಲ್ಲಿದೆ. “ಮೈಸೂರು ಗಾಂಧೀ” ಎಂದೇ ಪ್ರಸಿದ್ಧರಾಗಿದ್ದ ತಗಡೂರು ರಾಮಚಂದ್ರ ರಾವ್ ಮತ್ತು ಅಗರಂ ರಂಗಯ್ಯ (ಸಾಧ್ವೀ […]
"ಇನ್ನೊಂದ್ ಹೆಜ್ಜೆ ಮುಂದಿಟ್ರೆ ತಲೆ ಒಡಿತೀನಿ" ದೊಣ್ಣೆ ಹಿಡಿದ ವಲ್ಸಮ್ಮನ ಎಚ್ಚರಿಕೆ ನಾಲ್ಕು ಗೋಡೆಗಳ ಒಳಗಿಂದ ಹೊರಗೆ ಕೇಳಿಸುತ್ತಿದೆ. ಗಂಡನೆನೆಸಿಕೊಂಡವ ಇನ್ನೂ ಗುರುಗುಟ್ಟುತ್ತಲೇ ಇದ್ದಾನೆ. ಕುಡಿದ ಬಾಯಿಂದ ಅಸ್ಪಷ್ಟವಾಗಿ ಕೆಟ್ಟ ಪದಗಳು ವಾಸನೆಯೊಂದಿಗೆ ಉರುಳುತ್ತಿವೆ. 6 ವರ್ಷದ ಮಗ ವಿನಿತ್ ಮೂಲೆಯಲ್ಲಿ ನಿಂತುಕೊಂಡು ಅಪ್ಪನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದಾನೆ. ಆದರೆ ವರ್ಗೀಸ್ ಗೆ ಇದ್ಯಾವುದರ ಪರಿವೆಯೂ ಇಲ್ಲ. ಅವನಿಗೆ ಒಂದು ಬಾರಿ ಹೆಂಡತಿಯ ಮೇಲೆ ಕೈ ಮಾಡುವ ಆಸೆ. ಆದರೆ ಅವಳನ್ನು ಸಮೀಪಿಸಲು ಹೆದರಿಕೆ. ಎಲ್ಲಿ ದೊಣ್ಣೆಯ ಹೊಡೆತ […]