Related Articles
ಎರಡು ಕವಿತೆಗಳು: ಪ್ರಮೋದ್ ಬಿ.ಸಿ., ಅಕುವ
ನನ್ನ ಹಾಡಿನ ಪಲ್ಲವಿ ಸ್ನೇಹದ ಸವಿನೆನಪಿನ ಇಂಪಾದ ಸ್ವರ ನೀನು, ಬಯಸಿರುವೆ ನಿನ್ನ ವಾಣಿಯ ಮಾಯೆಯನು; ನನ್ನ ರಹಸ್ಯ ಹೊತ್ತಿಗೆಯ ಸಾರಾಂಶ ನೀನು, ಲೇಖನಿಯು ಕಾತರಿಸಿದೆ ಮೊದಲ ಅಕ್ಷರವನು; ಇಳಿಸಂಜೆಯ ಮಧುರವಾದ ಕಲ್ಪನೆ ನೀನು, ಕಾದಿರುವೆ ನಿನ್ನ ಒಲವಿನ ಆಗಮನವನು; ಮುಂಬರುವ ಕ್ಷಣದಲ್ಲಿ ನಿನ್ನ ಕಾಣುವೆನು, ಕಬಳಿಸಿರುವ ಪುಟ್ಟ ಹೃದಯದ ಕೋಣೆಯಲಿ; ಬರೆಯುವೆ ನನ್ನ ಜೀವಾಳದ ಸುಮಧುರ ಹಾಡನು ಆಗುವೆಯಾ ಆ ಹಾಡಿನ ಚರಣಕ್ಕೆ ಪಲ್ಲವಿ ನೀನು. – ಬಿ. ಸಿ. ಪ್ರಮೋದ. […]
ಪಂಜು ಕಾವ್ಯಧಾರೆ: ಸಿರಿ, ಅರುಣ್ ಕುಮಾರ್ ಹೆಚ್ ಎಸ್, ಎಸ್.ಜಿ.ಶಿವಶಂಕರ್
ಬದುಕುವುದು ಕೆಲವೇ ದಿನ ಎಂದ ಮೇಲೆ…. ಬದುಕುವುದು ಇನ್ನು ಕೆಲವೇ ದಿನ ಎನ್ನುವ ಸತ್ಯ ತಿಳಿದ ಮೇಲೆ….. ನೀನು ದೂರವಾದ ದಿನಗಳ ಲೆಕ್ಕ ಹಾಕುತ್ತ ಕಣ್ಣೀರು ಹಾಕುವುದಿಲ್ಲ ಕೊನೆಯ ಭೇಟಿಯಲ್ಲಿ ನೀನಾಡಿದ ಮಾತುಗಳನ್ನು ಮೆಲಕು ಹಾಕುತ್ತ ಮನಸ್ಸನ್ನು ರಾಡಿಯಾಗಿಸಿಕೊಳ್ಳುವುದಿಲ್ಲ ನೀನು ಕೊನೆಯದಾಗಿ ಕಳಿಸಿದ ಸಂದೇಶವನ್ನು ಪುನಃ ಪುನಃ ಓದುತ್ತ ನಿನ್ನ ದ್ವೇಷಕ್ಕೆ ಹೊಸ ಅರ್ಥ ಹುಡುಕುವುದಿಲ್ಲ ಯಾಕೆಂದರೆ, ನಾನು ಬದುಕ ಬೇಕಿದೆ ನಿನ್ನ ಧೂರ್ತ, ಕುತಿತ್ಸ ಮಾತುಗಳನ್ನು ಮರೆತು ಬರೀ ನನ್ನೊಳಗಿನ ಮಾತನ್ನಷ್ಟೇ ಕೇಳಬೇಕಿದೆ ನನ್ನೆದೆಯೊಳಗಿನ ಪ್ರೀತಿಯನ್ನು […]
ಕಾವ್ಯಧಾರೆ: ಬಿದಲೋಟಿ ರಂಗನಾಥ್, ಶ್ರೀಶೈಲ ಮಗದುಮ್, ಶ್ರೀಮಂತ ಯನಗುಂಟಿ, ಎಸ್ ಕಲಾಲ್
ಸುಡುವ ಕನ್ನಡಮ್ಮನ ಪಾದಗಳು ಸುಡುಬಿಸಿಲ ನಡುಮಧ್ಯಾಹ್ನ ನನ್ನವ್ವಳ ಅಂಗಾಲುಗಳು ಚುರ್ರುಗುಟ್ಟಿ ಬೊಬ್ಬೆ ಎದ್ದಿವೆ ಮೈಲಿದೂರಗಳ ಕ್ರಮಿಸಿ ಛತ್ರಿಯಿಲ್ಲ ಚಪ್ಪಲಿಯಿಲ್ಲ ಹೆಗಲ ಮೇಲೆ ಕೂರಿಸಿಕೊಳ್ಳುವವರು ಮೊದಲೇ ಬಚ್ಚಿಕ್ಕಿಕೊಳ್ಳುತ್ತಿದ್ದಾರೆ ಕಣ್ತಪ್ಪಿ ಕೂರಿಸಿಕೊಂಡವವನನ್ನು ಹುಚ್ಚ ದಡ್ಡನೆಂದು ಜರಿಯುತ್ತಿದ್ದಾರೆ 'ಅಮ್ಮ' ಎನ್ನುವ ನಾಲಗೆಗಳು 'ಮಮ್ಮಿ' ಅನ್ನುತ್ತಿದ್ದಾವೆ ಬರಿಗಾಲಲಿ ನಡೆದೋಗುತಿರುವ ತಾಯಿಗೆ ನೀರಡಿಕೆಯಾದರು ಗುಟುಕು ನೀರು ಕೊಡುವವರಿಲ್ಲ ಮರದಡಿಯ ಮರಳ ಚಿಲುಮೆ ಉಕ್ಕುತ್ತಿಲ್ಲ ! ಬೆವರ ಹನಿಗಳು ತಂಬಿಗೆ ಲೆಕ್ಕದಲ್ಲಿ ಸೋರುತ್ತಿವೆ ಒರೆಸುವ ಕೈಗಳು ಗಾಯವಿಲ್ಲದೆಯೂ ಬ್ಯಾಂಡೀಜ್ ಕಟ್ಟಿಕೊಂಡಿದ್ದಾರೆ ! ಉಸಿರೆತ್ತಿದರೆ ಕನ್ನಡಮ್ಮನ ಮಡಿಲ […]