ಕಾಬೂಲಿನ ಕಥೆ: ನಟರಾಜ್ ಕಾನುಗೋಡು

ಇದು ನಾನು ಯೂರೋಪಿನ “1tv” ಕಾಬೂಲ್ ಬ್ರಾಂಚಿನಲ್ಲಿ ಕೆಲಸ ಮಾಡುವಾಗಿನ ಘಟನೆ. ನನಗೆ ಕಾಬೂಲ್ ತುಂಬಾ ಅಮೇರಿಕಾ ಹಾಗೂ ಯುರೋಪ್ ಸೈನಿಕರು ಎಲ್ಲೆಲ್ಲೂ ಕಾಣುತ್ತಿದ್ದರು. ಅಗ ನಾನು ಕಬೂಲಿಗೆ ಬಂದ ಹೊಸತು. ನನಗೆ ಏಕೋ ತಾಲಿಬಾನ್ ಮುಖ್ಯಸ್ಥನನ್ನು ಖುದ್ಧಾಗಿ ಭೆಟ್ಟಿಯಾಗುವ ಮನಸ್ಸಾಯಿತು. ನಾನು ಕೆಲಸ ಮಾಡುತ್ತಿರುವ ಚಾನೆಲ್ ಮುಖ್ಯಸ್ಥರನ್ನು ಕೇಳಿದೆ. ನಿರಾಶಾದಾಯಕ ಉತ್ತರ ದೊರೆಯಿತು. ಮತ್ತು ನನಗೆ ಅವರನ್ನು ಭೆಟ್ಟಿ ಆಗಲು ಅವಕಾಶ ನಿರಾಕರಿಸಲಾಯಿತು. ಕಾರಣ ಒಮ್ಮೆ ಅಲ್ಲಿಗೆ ಅವರ ಸಂದರ್ಶನಕ್ಕೆಂದು ಹೋದ ಯೂರೋಪಿನ ಒಬ್ಬ ವರದಿಗಾರ ವಾಪಾಸ್ ಬಂದಿರಲಿಲ್ಲ. ಆತನನ್ನು ಅಲ್ಲಿಯೇ ಕೊಲೆ ಮಾಡಲಾಗಿತ್ತು. ಆದರೆ ನಾನು ನನ್ನ ಹಟವನ್ನು ಬಿಡದೆ ಇದ್ದಾಗ, ನಿಮ್ಮ ಭಾರತದ ಎಂಬೆಸಿ ಒಪ್ಪಿಕೊಂಡರೆ ನಿಮ್ಮನ್ನು ಅಲ್ಲಿಗೆ ಹೋಗಲು ಬಿಡಬಹುದು ಎಂಬ ಉತ್ತರ ದೊರೆಯಿತು. ಅಷ್ಟೇ ಅಲ್ಲದೆ ನೀವು ನಿಮ್ಮ ಡೆತ್ ನೋಟನ್ನು ಬರೆದು ಕೊಟ್ಟು ಹೋಗಬೇಕು ಎಂಬ ಉತ್ತರ ದೊರೆಯಿತು. ಅದಕ್ಕೆ ನಾನು ನಿರಾಶನಾಗಲಿಲ್ಲ. ಕಾರಣ ಮೊದಲೇ ಈ ದೇಶಕ್ಕೆ ಬರುವಾಗ ತಾಲಿಬಾನ್ ಹಾಗೂ ಅಲ್ಖೈದಾದೇಶಕ್ಕೆ ಯಾಕೆ ಹೋಗುತ್ತೀರ? ಎಂದು ಹಲಾವಾರು ಜನ ಕೇಳಿದ್ದರು. ಅಂಥದ್ದೇನಿದೆ?! ಎಂದು ತಿಳಿಯುವ ಕುತೂಹಲ ನನ್ನದು. ಗೊತ್ತಿತ್ತು ಇದು ನಾನು ಮಾಡುತ್ತಿರುವುದು ದುಃಸ್ಸಾಹಸ ಎಂದು. ಆದರೆ ನನ್ನ ತಾತ್ವಿಕ ಮನಸ್ಸು ಏಕೋ ಅವರನ್ನೊಮ್ಮೆ ಖುದ್ದು ಭೆಟ್ಟಿಯಾಗಲು ಬಯಸಿತ್ತು. ಸಾವು ಯಾವಾಗಾ ಎಲ್ಲಿ ಬೇಕಾದರೂ ಬರಬಹುದು. ಅದಕ್ಕೆ ಏಕೆ ಚಿಂತಿಸಬೇಕು? ಆದರೆ ಅವರು ಇಡೀ ಪ್ರಪಂಚದ ದೃಷ್ಟಿಯಲ್ಲಿ ಭಯೋತ್ಪಾದಕರು ಎಂಬ ಹಣೆಪಟ್ಟಿ ಕಟ್ಟಿಕೊಂಡವರು ಹಾಗಾದರೆ ಅವರಿಗೆ ಒಂದು ವಯ್ಯಕ್ತಿಕ ಬದುಕು ಇರುವುದೇ ಇಲ್ಲವೇ?! ಅವರು ಆ ರೀತಿ ಭಯೋತ್ಪಾದಕರಾಗಿ ಜೀವಮಾನವಿಡೀ ಹೊರಜಗತ್ತಿನ ಕಣ್ಣು ತಪ್ಪಿಸಿ ಸಾಧಿಸುವುದಾದರೂ ಏನನ್ನು?! ಎಂಬ ನನ್ನ ಮೂಲಭೂತ ಕುತೂಹಲವೇ ಅವರನ್ನು ಸಂದರ್ಶನ ಮಾಡಲು ನನ್ನನ್ನು ಪ್ರೇರೇಪಿಸಿತ್ತು.

ಸರಿ ತಡ ಮಾಡಲಿಲ್ಲ. ನಮ್ಮ ಚಾನೆಲ್ ನಲ್ಲಿ ಹೇಳಿದಂತೆ ಭಾರತದ ಧೂತವಾಸಕ್ಕೆ ಭೇಟಿನೀಡಿ ನನ್ನ ಪರಿಚಯ ಮಾಡಿಕೊಂಡು, ನನ್ನ ಆಶಯ ವ್ಯಕ್ತಪಡಿಸಿದೆ. ಅದಕ್ಕೆ ಮೊದಲು ಅಲ್ಲಿಯ ಅಧಿಕಾರಿಗಳೂ ಸಹ ಸಮ್ಮತಿಸಲಿಲ್ಲ. ಆದರೆ ನಾನು ಅವರಿಗೂ ಸಹ ಒಂದು ವೇಳೆ ನಾನು ಸತ್ತರೆ ನನ್ನದೇ ಜವಾಬ್ಧಾರಿ ಎಂದು ಹೇಳಿದಮೇಲೆ, ಮನಸ್ಸಿಲ್ಲದ ಮನಸ್ಸಿಂದಾ ಒಪ್ಪಿಕೊಂಡರು. ತಮ್ಮ ಸಾಹಾಯ ಏನಾದರೂ ಬೇಕಾದರೆ ಅವರ ಕಡೆಯಿಂದಾ ಸೆಕ್ಯುರಿಟಿ ಗಾರ್ಡ್ ಬೇಕಾದರೆ ತಿಳಿಸಿ ಎಂದು ಕೇಳಿದರು ಈಗಾಗಲೇ ನಮ್ಮ ಚಾನೆಲ್ನವರು ನನಗೆ ಸಾಕಷ್ಟು ಭದ್ರತೆ ಕೊಟ್ಟಿದ್ದರು. ನನ್ನ ಜೊತೆಯಲ್ಲಿ ಯಾವಾಗಲೂ ೨ ಜನ ಸಶಸ್ತ್ರ ಬಂಧೂಕುಧಾರಿಗಳನ್ನು ಬ್ಯುಲೆಟ್ ಪ್ರೂಫ್ ಕಾರ್ ಹಾಗೂ ಜಾಕೆಟ್ಗಳನ್ನೂ ಸಹ ಕೊಡುತ್ತಿದ್ದರು. ಅದು ನನಗೆ ಸಾಕು ಎಂದೇ. ಅದಕ್ಕೆ ಅವರು ಸಮ್ಮತಿಸಿ ಒಂದು ವೇಳೆ ನೀವು ಸತ್ತರೆ ಇಡೀ ಇಂಡಿಯಾ ದಲ್ಲಿ ಸುದ್ಧಿ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಹೊರಹೊಮ್ಮುತ್ತದೆ. ಅದಕ್ಕೆ ನಾವು ಉತ್ತರ ಕೊಡಬೇಕಾಗುತ್ತದೆ. ಆ ಕಾರಣದಿಂದಾ ನಿಮಗೆ ನಾವು ಭದ್ರತೆ ಒದಗಿಸುವುದು ನಮ್ಮ ಕರ್ತವ್ಯ ಎಂದು ನಾನು ಬೇಡವೆಂದರೂ ಕೇಳದೆ ನಾನು ಅಲ್ಲಿಗೆ ಹೋಗುವ ದಿನಾಂಕವನ್ನು ತಮಗೆ ತಿಳಿಸಬೇಕು ಆದಿನ ನಾವು ನಿಮ್ಮ ಭದ್ರತೆಗೆ ಆಫ್ಘಾನ್ ಸರಕಾರದ ವತಿಯಿಂದ ಭದ್ರತೆ ಒದಗಿಸುತ್ತೇವೆ ಎಂದು ಹೇಳಿದರು. ಹೊರಬಂದ ನಾನು ನನ್ನ ಚಾನೆಲ್ ನವರಿಗೆ ನಮ್ಮ ದೇಶದ ಎಂಬಸಿಯಿಂದಾ ತಂದ ಪತ್ರ ತೋರಿಸಿದೆ. ನಂತರ ತಾಲಿಬಾನ ಮುಖ್ಯ ಕೇಂದ್ರಕ್ಕೆ ನಾನು ಸಂದರ್ಶನಕ್ಕಾಗಿ ಬರುವ ವಿಚಾರವನ್ನು ರವಾನಿಸಿದೆ. ಅಲ್ಲಿಂದಾ ೧೦ ದಿನಗಳ ನಂತರ ಉತ್ತರ ಬಂತು. ಒಂದು ನಿರ್ದಿಷ್ಟ ಜಾಗದಲ್ಲಿ, ನಿರ್ದಿಷ್ಟ ವೇಳೆಯಲ್ಲಿ, ವೇಳೆಯಲ್ಲಿ ಇರುವಂತೆ ಆ ಪತ್ರದಲ್ಲಿ ಸೂಚಿಸಲಾಗಿತ್ತು ಆದಿನ ನಾನು ನನ್ನ ಸಶಸ್ತ್ರ ಪಡೆಗಳೊಂದಿಗೆ ಒಬ್ಬ ಕ್ಯಾಮೆರಾ ಮ್ಯಾನ್ ಹಾಗೂ ಒಬ್ಬ ತರ್ಜುಮೆಗಾರ, ನನ್ನ ಡ್ರೈವರ್ ಜೊತೆಗೂಡಿ ಅವರು ಸೂಚಿಸಿದ ಜಾಗಕ್ಕೆ ಹೋಗಿ ನಿಂತೇ. ಅದು ದುರ್ಗಮವಾದ ಗುಡ್ಡಗಾಡು ಪ್ರದೇಶ. ಅವರು ಹೇಳಿದ ಸಮಯದಲ್ಲಿ ಒಂದು ದೊಡ್ಡ ವ್ಯಾನ್ ದೂರದಿಂದ ಬರುತ್ತಿರುವುದು ಕಾಣಿಸಿತು. ಸ್ವಲ್ಪ ದೂರದಲ್ಲಿ ನಿಲ್ಲಿಸಿ ಅದರಿಂದಾ ೫ ಜನ ಸಶಸ್ತ್ರ ಬಂಧೂಕುಧಾರಿಗಳು ಇಳಿದರು.

ನೋಡಲು ಭಯಂಕರವಾಗಿ ಇದ್ದರು. ಉದ್ದುದ್ದ ನೀಳವಾದ ಗಡ್ಡ ಬಿಟ್ಟಿದ್ದರು. ನಮ್ಮ ಬಳಿಗೆ ಬಂದವರು ಇಲ್ಲಿ ನಟರಾಜ್ ಯಾರು ಎಂದು ಕೇಳಿದರು. ನಮ್ಮ ಅನುವಾದಕ ನನ್ನನ್ನು ತೋರಿಸಿ ನಂತರ ಅವರು ಮೊದಲು ಮಾಡಿದ ಕೆಲಸ ನಮ್ಮ ಗಾರ್ಡ್ಗಳ ಬಳಿ ಇದ್ದ ಎ.ಕೆ.47 ಬಂಧೂಕಿನಲ್ಲಿದ್ದ ಮ್ಯಾಗಜಿನ್ಗಳನ್ನೂ ತೆಗೆದುಕೊಂಡರು. ನನ್ನನ್ನು ಅಮೂಲಾಗ್ರವಾಗಿ ಪರಿಶೀಲಿಸಿದರು. ನನ್ನಬಳಿ ಇದ್ದ ಮೊಬೈಲ್ ಹಾಗೂ ವಾಚ್ ಸಹ ಬಿಡದೆ ಅದನ್ನೂ ಸಹ ತೆಗೆದುಕೊಂಡರು. ನಂತರ ನಮ್ಮ ಅನುವಾದಕನಿಗೆ ಕೇಳಿದರು ಆತನಿಗೆ ಕ್ಯಾಮೆರಾದಲ್ಲಿ ರಿಕಾರ್ಡ್ ಮಾಡಲು ಬರ್ತ್ತದೆಯೇ?ಎಂದು. ಅದಕ್ಕೆ ನಮ್ಮ ಅನುವಾದಕ ಕ್ಯಾಮೆರಾ ಮ್ಯಾನ್ ಇದ್ದಾರೆ ಎಂದು ಹೇಳಿದರೂ, ಅವರು ಕೇಳದೆ ನನ್ನ ಬಳಿ ಕೇಳಬೇಕಾಗಿ ಹೇಳಿದರು. ಆತ ನನ್ನ ಬಳಿ ಕೇಳಿದ.ನನಗೆ ಕ್ಯಾಮೆರಾ ಹ್ಯಾಂಡಲ್ ಮಾಡಲು ಬರುತ್ತದೆ ಎಂದೇ. ಅವರು ಕ್ಯಾಮೆರಾ ತೆಗೆದುಕೊಂಡು ಅದನ್ನು ಓಪನ್ ಮಾಡಿ ಪರಿಶೀಲಿಸಿ ಕೊನೆಗೆ ನನ್ನನ್ನು ಒಬ್ಬನೇ ಬರುವಂತೆ ತಿಳಿಸಿದರು. ಆಗ ನಾನು ಅನುವಾದಕ ಬೇಕು ಎಂದು ನನಗೆ ಗೊತ್ತಿರುವ ಅವರ ಹರುಕು ಮುರುಕು ಭಾಷೆಯಲ್ಲಿ ಕೇಳಿಕೊಂಡಾಗ ಅದಕ್ಕೆ ಸಮ್ಮತಿಸಿ, ನಾನು ಹಾಗೂ ಅನುವಾದಕ ಇಬ್ಬರನ್ನೇ ಅವರ ವ್ಯಾನ್ ನಲ್ಲಿ ಕುಳಿತುಕೊಳ್ಳಲು ಹೇಳಿದರು. ಕುಳಿತೆವು ವ್ಯಾನ್ ಹೊರೆಟಿತು. ಹೆಚ್ಚು ಕಡಿಮೆ ಸುಮಾರು ೨೫ ಕಿಲೋಮೀಟರ್ ವರೆಗೆ ಕಡಿದಾದ ಗುಡ್ಡಗಾಡು ಪ್ರದೇಶದಲ್ಲಿ ಸಾಗಿ ಕೊನೆಗೆ ಒಂದು ದೊಡ್ಡ ಗುಡ್ಡದ ಹತ್ತಿರ ಒಂದು ದೊಡ್ಡದಾದ ಸುರಂಗ ಮಾರ್ಗದೊಳಕ್ಕೆ ಹೊರಟಿತು. ಆ ಸುರಂಗದಲ್ಲಿ ಸುಮಾರು ೨ ಕಿಲೋಮೀಟರ್ ಚಲಿಸಿ. ನಿಲ್ಲಿಸಲಾಯಿತು. ನಮಗೆ ಇಳಿಯುವಂತೆ ಸೂಚನೆ ಸಿಕ್ಕಿತು. ನಾನು ಕ್ಯಾಮೆರಾ ತೆಗೆದುಕೊಂಡು ಅನುವಾದಕನ ಜೊತೆ ಇಳಿದೆ. ಅಲ್ಲಿಂದಾ ಸುಮಾರು ಅರ್ಧ ಕಿಲೋಮೀಟರ್ ಆ ಸುರಂಗದೊಳಕ್ಕೆ ನಡೆದೇ ಹೋಗಬೇಕು.

ಮನಸ್ಸು ಏಕೋ ಸ್ವಲ್ಪ ಅಳುಕಿದಂತಾಯಿತು ಏಕೆಂದರೆ ಅಲ್ಲಿಯ ವಾತಾವರಣ ಹಾಗಿತ್ತು. ಆದರೂ ಮನಸ್ಸು ಹೇಳುತ್ತಿತ್ತು ಹೆಚ್ಚೂ ಅಂದರೆ ಏನಾಗುತ್ತದೆ?! ನನ್ನನ್ನು ಕೊಲ್ಲುತ್ತಾರೆ ಅದಕ್ಕೆ ತಯಾರಾಗಿ ಬಂದಮೇಲೆ ಅಳುಕು ಯಾಕೆ? ಎಂದು ಗಟ್ಟಿ ಮನಸ್ಸು ಮಾಡಿಕೊಂಡೆ. ಸ್ವಲ್ಪ ದೂರ ನಡೆದುಕೊಂಡು ಹೋದ ನಮಗೆ ನಮ್ಮ ಕಣ್ಣುಗಳನ್ನೇ ನಂಬಲು ಸಾಧ್ಯವಾಗಲಿಲ್ಲ. ಅದು ಒಂದು ವಿಶಾಲವಾದ ವರಾಂಡಾ. ಅದು ಸುಸಜ್ಜಿತವಾಗಿ ಸುಂದರವಾಗಿ ಅಲಂಕರಿಸಲ್ಪಟ್ಟಿದೆ. ರತ್ನಗಂಬಳಿ ಹಾಕಲಾಗಿದೆ. ನಮ್ಮ ಯಾವುದೇ ಪಂಚತಾರ ಹೋಟೆಲ್ ಗಳಲ್ಲಿಯ ಐಷಾರಮಿ ಅಲಂಕಾರಕ್ಕೂ ಕಡಿಮೆ ಇಲ್ಲದಂತೆ. ಒಂದು ದೊಡ್ಡ ಹಾಲ್. ಅಲ್ಲಿ ಹಲವಾರು ಬೆಲೆಬಾಳುವ ಪೀಟೋಪಕರಣಗಳು. ತುಂಬಾ ಸುಂದರ ಪೇಂಟಿಂಗ್ ಗಳು ಹಾಗೂ ಬಗೆ ಬಗೆಯ ಹೂದಾನಿಗಳು ಅಲ್ಲಲ್ಲಿ ಕಾರಂಜಿ ಹಾಗೂ ವಾಟರ್ ಫಾಲ್ ನಿರ್ಮಿಸಲಾಗಿದೆ. ಮರಳುಗಾಡಿನಲ್ಲಿ ಮರೀಚೆಕೆಯ ಅನುಭವವಾಯಿತು. ಆ ದೊಡ್ಡ ಹಾಲಿನಲ್ಲಿ ಒಂದು ಸಿಂಹಾಸನದಂಥ ಕುರ್ಚಿಯಲ್ಲಿ ಕುಳಿತಿದ್ದ. ಮುಖ್ಯಸ್ತ ಸುತ್ತಲೂ ಎ.ಕೆ.47 ಹಿಡಿದು ನಿಂತಿರುವ ಸುಮಾರು ಜನರು ಆತನಿಂದಾ ದೂರದಲ್ಲಿ ಇದ್ದ ಒಂದು ಕುರ್ಚಿಯಲ್ಲಿ ನನ್ನನ್ನು ಕುಳಿತುಕೊಳ್ಳುವಂತೆ ಸಂಜ್ಞೆ ಮಾಡಿದ. ಕುಳಿತೆ ಆದರೆ ಅನುವಾದಕ ನಿಂತೇ ಇದ್ದ. ಆತ ಅವರಿಗ ಅವರ ಭಾಷೆಯಲ್ಲಿ ನಮಸ್ಕಾರ ತಿಳಿಸಿದ ನಾನೂ ಸಹ ನಮಸ್ತೆ ಎಂದೇ. ಆತ ಅನುವಾದಕನ ಕಡೆ ತಿರುಗಿ ನಾನು ಏಕೆ ಬಂದಿದ್ದೇನೆ ಎಂದು ಕೇಳು ಎಂದು ತಿಳಿಸಿದ ಅವರ ಭಾಷೆ ಅರ್ಥವಾಗುತ್ತಿತ್ತೆ ವಿನಃ ನನಗೆ ಅವರ ಭಾಷೆಯಲ್ಲಿ ಮಾತಾಡಲು ಆಗಿನ್ನೂ ಬರುತ್ತಿರಲಿಲ್ಲ. ಅದನ್ನು ನನಗೆ ಅನುವಾದಿಸಿದ.

ಅದಕ್ಕೆ ನಾನು “ಹುಟ್ಟುವಾಗ ಯಾರೂ ಕೆಟ್ಟವರಾಗಿರುವುದಿಲ್ಲ.. ಕೆಟ್ಟದ್ದು ಮಾಡಬೇಕು ಎನ್ನುವ ಯೋಚನೆ ಸಹ ಇರುವುದಿಲ್ಲ. ಆದರೆ ಹೀಗೆ ತಾವೇ ಒಂದು ಪಂಗಡ ಕಟ್ಟಿಕೊಂಡು ಸಮಾಜದ  ಮುಖ್ಯ ವಾಹಿನಿಯಿಂದ ದೂರವಾಗಿ ಬದುಕುವ ಉದ್ದೇಶವೇನು. ಇದು ಮಾತನಾಡಬೇಕಾದ ಮುಖ್ಯವಾದ ವಿಷಯ” ಎಂದು ಹೇಳಿದೆ. ಅದನ್ನು ಆತ ಅನುವಾದಿಸಿದ. ಅದಕ್ಕೆ ಆ ಮುಖ್ಯಸ್ಥ ಒಂದೆರಡು ನಿಮಿಷ ಮೌನ ವಹಿಸಿ ನಂತರ “ಈಗ ನಾನು ಆತನನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಏನು ಮಾಡುತ್ತಾನೆ ಅಂತಾ ಕೇಳು” ಎಂದು ಹೇಳಿದ, ಅದನ್ನು ನನ್ನ ಅನುವಾದಕ ಅನುವಾದಿಸುವ ಹೊತ್ತಿಗಾಗಲೇ ಅವನ ದ್ವನಿಯಲ್ಲಿ ಕಂಪನವಿತ್ತು. ಆತನೂ ಹೆದರಿದ್ದ. ಆಗ ನಾನು”ಈ ದೇಶಕ್ಕೆ ಬರುವಾಗಲೇ ನನಗೆ ಬೇಕಾದಷ್ಟು ಜನ ಹೆದರಿಸಿದ್ದರು ಇದು ಕೊಲೆಗಡುಕರ ದೇಶ ಎಂದು ಆದರೆ ಇಲ್ಲೇ ಸಾಯುವುದು ಎಂದು ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಗೂ ಆಗುವುದಿಲ್ಲ. ನಮ್ಮ ದೇಶ ಭಾರತದಲ್ಲಿ ನಮ್ಮ ತಾಯಿಯನ್ನು ನಾವು ದೇವರು ಎಂದು ಹೇಳುತ್ತೇವೆ. ಏಕೆಂದರೆ ಜನ್ಮ ನೀಡುವವಳು ತಾಯಿ ಅದಕ್ಕೆ. ಮತ್ತೆ ಸಾವು ಕೊಡುವವನು ದೇವರು. ಈ ಹುಟ್ಟು ಸಾವು ಎರಡನ್ನೂ ಕೊಡುವವರು ಸ್ವತಃ ದೇವರೇ ಆಗಿರುತ್ತಾರೆ. ನನ್ನ ದೃಷ್ಟಿಯಲ್ಲಿ.ಒಂದು ವೇಳೆ ನನ್ನ ಎದುರಿಗೆ ಕುಳಿತಿರುವ ನೀವೇ ನನಗೆ ಆ ದೇವರು ಕೊಡಬಲ್ಲ ಸಾವನ್ನು ಕೊಡುವುದಾದರೆ,ನಿಮ್ಮನ್ನು ನಾನು ಸ್ವತಃ ದೇವರು ಎಂದು ಭಾವಿಸುತ್ತೇನೆ” ಅಂದೇ. ಅದನ್ನು ಅನುವಾದಿಸಿದ ಅನುವಾದಕನಿಗೆ ಸುಮ್ಮನಿರಲು ಸಂಜ್ಞೆ ಮಾಡಿದ. ಏಕೆಂದರೆ ನಾನು ಸ್ಪಷ್ಟವಾದ ಇಂಗ್ಲಿಷ್ ನಲ್ಲಿ ಅದನ್ನು ಹೇಳಿದ್ದೆ. ನಂತರ ಮತ್ತೆ ೨ ನಿಮಿಷ ಮೌನದ ನಂತರ ಆತನ ಮುಖದಲ್ಲಿ ನಗು ಬಂದಿತ್ತು.ಅಷ್ಟೇ ಅಲ್ಲ ಜೋರಾಗಿ ಗಹಗಹಿಸಿ ನಗಲು ಶುರುಮಾಡಿದ.

ನನಗೆ ಆಶ್ಚರ್ಯ. ನಂತರ ನನ್ನ ಕಡೆ ನೋಡಿ. ನಗುತ್ತ ಭೇಶ್ ನಟರಾಜ್ ಜಿ ಎಂದ. ನಂತರ ಆತ ಸ್ಪಷ್ಟವಾದ ಅಮೇರಿಕನ್ ಇಂಗ್ಲೀಷಿನಲ್ಲಿ ಮಾತಾಡಲು ಶುರುಮಾಡಿದ. ಸುಸ್ಪಷ್ಟವಾಗಿ, ನಿಚ್ಚಳವಾಗಿ. ಆತ ಓದಿದ್ದು ಅಮೆರಿಕಾದ ಪ್ರತಿಷ್ಟಿತ ವಿಶ್ವವಿದ್ಯಾನಿಲಯದಲ್ಲಿ ಎನ್ನುವುದನ್ನು ಆತನೇ ಹೇಳಿದಾಗ ಆಶ್ಚರ್ಯವಾಯಿತು. ನಂತರ ಅನುವಾದಕನ ಅವಶ್ಯಕತೆ ಬೀಳಲೇ ಇಲ್ಲ. ನನ್ನ ಮಾತಿಗೆ ಹಾಗೂ ಧೈರ್ಯಕ್ಕೆ ಮತ್ತು ನನ್ನ ತಾತ್ವಿಕವಾದ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ. ಜೊತೆಗೆ ತನ್ನ ಸಹಾಯಕರ ಬಳಿ ಚಹಾ ತರುವಂತೆ ಹೇಳಿದ. ಇದ್ದಕ್ಕಿದ್ದಂತೆ ನಾನು ಕಂಡು ಕೇಳರಿಯದ ಬಗೆ ಬಗೆಯ ಡ್ರೈ ಫ್ರೂಟ್ಸ್ ಹಣ್ಣುಗಳು ಇತ್ತ್ಯಾದಿ ಜೊತೆಯಲ್ಲಿ ಚಹಾ ಅದಕ್ಕೆ ಬೇಕಾದರೆ ಹಾಕಿಕೊಳ್ಳಲು ಸಕ್ಕರೆ ಮತ್ತು ಹಾಲನ್ನು ಇಡಲಾಗಿತ್ತು. ಅಷ್ಟೇ ಅಲ್ಲದೆ ದೂರದಲ್ಲಿ ಕುಳಿತಿದ್ದ ನನಗೆ ಹತ್ತಿರ ಬಂದು ತನ್ನ ಎದುರಿಗೆ ಕುಳಿತುಕೊಳ್ಳುವಂತೆ ಹೇಳಿದ ಹಾಗೆ ನಾನು ಮಾಡಿದೆ. ಮೊದಲಿನ ಒರಟುತನ ಆತನ ಮುಖದಲ್ಲಿ ಇರಲಿಲ್ಲ. ಹಸನ್ಮುಖಿಯಾಗಿದ್ದ ಅದೂ ಅಲ್ಲದೇ ಇನ್ನೊಂದು ಆಶ್ಚರ್ಯಕರವಾದ ಸಂಗತಿ ಹೇಳಿದ ನಾನು ಸಂದರ್ಶನಕ್ಕೆ ಬರುತ್ತೇನೆ, ಎಂದು ತಿಳಿಸಿದ ಮೇಲೆ ನನ್ನ ಬಗ್ಗೆ ಎಲ್ಲ ಮಾಹಿತಿ ನನ್ನ ಹಿನ್ನೆಲೆ ಯನ್ನು ಆತ ಕಲೆ ಹಾಕಿದ್ದ ಜೊತೆಗೆ ನಾನೊಬ್ಬ ಕೇವಲ ಟಿ ವಿ ಮಾಧ್ಯಮದವನು ಮಾತ್ರವಲ್ಲದೆ ಒಬ್ಬ ಕಲಾವಿದ ಎನ್ನುವ ಮಾಹಿತಿಯೂ ಸಹ ಆತನ ಬಳಿ ಇತ್ತು. ಅದನ್ನೆಲ್ಲ ಕಲೆ ಹಾಕಲು ತನಗೆ ೧೦ ದಿನಗಳಕಾಲ ಹಿಡಿಯಿತು, ಎಂದು ಹೇಳಿದ. ಅದಕ್ಕಾಗಿಯೇ ನನಗೆ ವಾಪಾಸ್ ಉತ್ತರಿಸಲು ಆತ ೧೦ ದಿನಗಳನ್ನು ತೆಗೆದುಕೊಂಡಿದ್ದಾಗಿ ಹೇಳಿದಾಗ ನನಗೆ ಬಹಳ ಆಶ್ಚರ್ಯವಾಗಿತ್ತು. ನಂತರ ಇಬ್ಬರೂ ಚಹಾ ಕುಡಿದೆವು. ಅವೆಲ್ಲ ಮುಗಿದ ಮೇಲೆ.. ತಮ್ಮ ಕಥೆಯನ್ನು ಹೇಳಲು ಆತ ಪ್ರಾರಂಭಿಸಿದ. ಕ್ಯಾಮೆರಾ ಆನ್ ಮಾಡಲೇ ಎಂದು ಕೇಳಿದೆ.

ಒಪ್ಪಿದ ನಂತರ ಜಾರ್ಜ್ ಭುಶ್ ತಂದೆ ಹಿರಿಯ ಜಾರ್ಜ್ ಭುಶ್ ಅವರಿಗೂ ಹಾಗೂ ಬಿನ್ ಲಾಡೆನ್ ಗ್ರೂಪಿಗೂ ಇದ್ದ ಪಾಲುದಾರಿಕೆ ಅದರಲ್ಲಿ ಜಾರ್ಜ್ ಭುಶ್ ಬಿನ್ ಲಾಡೆನ್ ತಂದೆಗೆ ಎಸಗಿದ ದ್ರೋಹ ಬಿಲಿಯನ್ ಗಟ್ಟಲೆ ವಂಚನೆ, ನಂತರ ಅವರಲ್ಲಿ ಒಡಕು ಮೂಡಿದ್ದು, ಯಾವುದೇ ತಪ್ಪು ಮಾಡದ ಬಿನ್ ಲಾಡೆನ್ ನನ್ನು ಒಬ್ಬ ಭಯೋತ್ಪಾದಕ ಎಂಬ ಹಣೆ ಪಟ್ಟಿ ಕಟ್ಟಿದ್ದು.. ಇವೆಲ್ಲ ಸುಮಾರು ೨ ತಾಸುಗಳ ಕಾಲ ಹೇಳಿದ ನಾವು ಸಹ ಮನುಷ್ಯರು ಆದರೆ ನಿಷ್ಕಾರಣವಾಗಿ ದಬ್ಬಾಳಿಕೆಗೆ ಒಳಗಾಗಿದ್ದೇವೆ, ವಿನಾಕಾರಣ ನಾವು ಯಾರನ್ನೂ ಕೊಲ್ಲುವುದಿಲ್ಲ.. ಕೊಲೆ ಸುಲಿಗೆಗೆ ವಿರೋಧಿಗಳು ನಾವು. ಆದರೆ ನಮ್ಮನ್ನು ಅಮೆರಿಕಾದವರಿಂದಾ ರಕ್ಷಣೆ ಮಾಡಿಕೊಳ್ಳಲು ನಾವು ಅನಿವಾರ್ಯವಾಗಿ ಶಸ್ತ್ರ ಹಿಡಿದಿದ್ದಾಗಿ ಹೇಳಿದ. ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಲು ಅವರು ಇಲ್ಲಿಗೆ ಬಂದಿದ್ದಾರೆ. ಅದಕ್ಕೆ ಅವರು ತಾವು ಭಯೋತ್ಪಾದನೆ ತೊಲಗಿಸುತ್ತೇವೆ ಎಂದು ಕಾರಣ ಕೊಡುತ್ತಿದ್ದಾರೆ ಅಷ್ಟೇ. ಆದರೆ ನಿಜವಾಗಿ ಅವರಿಗೆ ಬೇಕಾಗಿರುವುದು ಇಲ್ಲಿಯ ಯುರೇನಿಯಂ, ತೈಲ ಸಂಪತ್ತು, ಅದಿರು, ಬಂಗಾರ, ಹರಳುಗಳು, ಇಲ್ಲಿ ಹೇರಳವಾಗಿ ಬೆಳೆಯುವ ಗಾಂಜಾ ಅಫೀಮು ಇವುಗಳಿಗಾಗಿ ಅವರು ಇಲ್ಲಿದ್ದಾರೆ. ಮುಗ್ದ ಅಫ್ಘಾನಿ ಜನರನ್ನು ಕೊಲೆ ಮಾಡಿದ್ದಾರೆ. ಎಂದು ಮನದಾಳದ ಮಾತು ಆಡಿದ. ಅದಕ್ಕೆ ನಾನು “ಆದಷ್ಟು ಬೇಗ ನಿಮಗೆ ಶಾಂತಿ ನೆಮ್ಮದಿ ಸಿಗುವಂತಾಗಲೀ,ನೀವು ಸಮಾಜದ ಮುಖ್ಯ ವಾಹಿನಿಗೆ ಬಂದು ನೆಮ್ಮದಿಯಿಂದಾ ಹೆಂಡತಿಮಕ್ಕಳೊಂದಿಗೆ ಜೀವನ ಮಾದುವಂತಾಗಲೀ ಭಾರತ ನಿಮ್ಮ ಮಿತ್ರದೇಶ ಎಂದು ಹೇಳಿದಾಗ ಅವನ ಕಣ್ಣಲ್ಲಿ ನೀರಾಡಿತು. ಒಬ್ಬ ಭಯಂಕರ ಭಯೋತ್ಪಾದಕನ ಕಣ್ಣಲ್ಲಿ ದಳ ದಳ ನೀರು ಬಂದಾಗ ಅಲ್ಲಿಯ ಎಲ್ಲರೂ ಅತ್ತು ಬಿಟ್ಟರು. ನನ್ನ ಕಣ್ಣಿನಲ್ಲಿಯೂ ಅಪ್ರಯತ್ನವಾಗಿ ನೀರಾಡಿತು…

ಅವರ ಬಳಿ ಹೋದ ನಾನು ಸಾಂತ್ವನ ಹೇಳುವಂತೆ ಆತನ ಭುಜದ ಮೇಲೆ ಕೈ ಇಟ್ಟೆ ನನ್ನನ್ನು ಬಲವಾಗಿ ತಬ್ಬಿಕೊಂಡು ಒಬ್ಬ ಅನಾಥ ಹುಡುಗ ತಾಯಿಯನ್ನು ತಬ್ಬಿ ಅಳುವಂತೆ ಅತ್ತು ಬಿಟ್ಟ ಆತ… ಮನಸ್ಸು ಮಮ್ಮಲ ಮರುಗಿತು…ಯಾರೂ ಆಂತರ್ಯದಲ್ಲಿ ಕೆಟ್ಟವರಾಗಿರುವುದಿಲ್ಲ. ಕೇವಲ ಸಂದರ್ಭ, ಪರಿಸ್ಥಿತಿ ಆ ರೀತಿ ಮಾಡಿರುತ್ತದೆ. ಸ್ವಲ್ಪ ಹೊತ್ತಿನ ಮೇಲೆ.. ಸ್ವಲ್ಪ ಸಮಾಧಾನವಾದ.. ನಾನು ಆತನನ್ನು ವಾತ್ಸಲ್ಯದಿಂದ ನೋಡುತ್ತಿದ್ದೆ. ಕೊನೆಯ ಹನಿ ಕಣ್ಣೀರನ್ನು ಒರೆಸಿಕೊಳ್ಳುತ್ತಾ.. ಅಲ್ಲಿಂದ ಎದ್ದು ಹೋಗಿ ಬರುತ್ತಾ.. ಒಂದು ಬಂಗಾರದ ದಾರದಿಂದಾ ಕುಸುರಿ ಕೆಲಸ ಮಾಡಿದ ಶಾಲನ್ನು ತಂದು “ನೀವು ನಿಮ್ಮ ತಾಯಿಯಯನ್ನು ದೇವರು ಎಂದಿದ್ದೀರ ಆ ದೇವರಿಗೆ ನನ್ನ ಕಾಣಿಕೆ” ಎಂದು ಕೊಟ್ಟ. ನನ್ನ ಕಣ್ಣು ಮತ್ತೆ ಹನಿಗೂಡಿತ್ತು. ಯಾವ ಜಾಗಕ್ಕೆ ಬಂದರೆ ಅಲ್ಲಿಂದಾ ವಾಪಾಸು ಬರುವ ಸಾಧ್ಯತೆ ಇಲ್ಲ, ಎಂದುಕೊಂಡು ಬಂದಿದ್ದೇನೋ, ಯಾವ ಜಾಗದಲ್ಲಿ ಮನುಷ್ಯತ್ವವೇ ಇಲ್ಲದ ಜನ ಇರುತ್ತಾರೆ, ಎಂದು ಜನ ಹೇಳಿದ್ದರೋ, ಅಲ್ಲಿ ಇಂಥಹ ಮಹಾನ್ ಒಬ್ಬ ಆದರಣೀಯ ವ್ಯಕ್ತಿಯನ್ನು ನೋಡಿದ ಅನುಭವ. ನಂತರ ನನ್ನನ್ನು ಕರೆದುಕೊಂಡು ಬಂದ ವಾಹನದವರೆಗೂ ಬಂದು ಆತ್ಮೀಯವಾಗಿ ಮತ್ತೊಮ್ಮೆ ಆಲಂಗಿಸಿ ಪ್ರೀತಿಯಿಂದಾ ಬೀಳ್ಕೊಟ್ಟ. ಆತ ಜಗತ್ತೇ ಹೆದರುವಂತೆ ಮಾಡಿದ ಭಯೋತ್ಪಾದಕ ಇವನೇನಾ?! ಎಂಬಂತೆ ವರ್ತಿಸಿದ್ದ.. ಅಥವ ನಾವು ಒಳ್ಳೆಯದಾಗಿದ್ದರೆ ಲೋಕವೇ ಒಳ್ಳೆಯದಾಗಿರುತ್ತದೆ ಎನ್ನುವುದಕ್ಕೆ ಸಾಕ್ಷಿಯೇ?! ಯಾವುದೂ ಅರ್ಥವಾಗಲಿಲ್ಲ..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

I appreciate your braveness!!

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಅಬ್ಬಾ…ಓದುತ್ತಿರುವಾಗಲೇ…ನಾನು ಸಹ ನಿಮ್ಮೊಂದಿಗೆ ಅಪ್ಘನ್ ದೇಶದ ಆ ಕಾಬೂಲಿವಾಲಾನ ಹತ್ತಿರ ಹೋಗಿ ಬಂದಂತೆನಿಸಿತು….ಜೀವ ಹೋಗಿ ಬಂದಂತೆನಸಿತು…ನಟರಾಜ್ ಸರ್…ನಿಮ್ಮ ಕೆಚ್ಚೆದೆ-ಧೈರ್ಯ ಮೆಚ್ಚುವಂಥದ್ದೆ….ಉತ್ತಮ ಲೇಖನ…

Suman Desai
Suman Desai
10 years ago

ಲೇಖನ ಓದಿ ನನಗೆ ಗೊತ್ತಿಲ್ಲದೆನೆ ಕಣ್ಣಿರು ಹೊರಗೆ ಬಂತು…. ನಿಮ್ಮ ಸಾಹಸ ಕಂಡು ಬೆರಗಾಗಿದ್ದೇನೆ. ನೀವು ಭಯೊತ್ಪಾದಕರ ಗಡಿಯಲ್ಲಿ ಪ್ರವೇಶಮಾಡಿದ್ದನ್ನು ಓದುವಾಗ ಅಪ್ರಯತ್ನವಾಗಿ ಮನಸ್ಸು ಹೆದರಿದ ಅನುಭವ ಆಯಿತು.ಅಷ್ಟು ತಲ್ಲಿನವಾಗುವಂತೆ ಇದೆ ಲೇಖನ.  ಭಯಂಕರ ಮುಖವಾಡದ ಹಿಂದಿನ ಮೃದು ಮನಸ್ಸಿನ ಬಗ್ಗೆ ಪರಿಚಯಿಸಿದ್ದೀರಿ, ನಿಮಗೆ ನನ್ನ  ಧನ್ಯವಾದಗಳು. ನಿಮ್ಮ ಅನುಭವಗಳನ್ನು ಓದುವ ಆಸೆ ಇದೆ. ಹೀಗೆ ಬರಿತಿರಿ…..

sharada moleyar
sharada moleyar
10 years ago

ಲೇಖನ ಓದಿ ನನಗೆ ಗೊತ್ತಿಲ್ಲದೆನೆ   ಕಣ್ಣೀರು   ಹೊರಗೆ   ಬಂತು..
ಲೇಖಕರ  ಧೈರ್ಯ   ನೋಡಿ   ಅಭಿಮಾನ  ಉಂಟಾಯಿತು..
ಧೈರ್ಯಂ    ಸರ್ವತ್ರ  ಸಾಧನಂ  ಎಂಬ  ವಾಕ್ಯ  ಸತ್ಯ  ಎಂದು  ಅರಿವಾಯಿತು..

Savious Crasta
Savious Crasta
10 years ago

ನಟರಾಜರವರೇ ನಿಮ್ಮ ಧೈರ್ಯ- ಸಾಹಸದ ಈ ಕಥೆಯು ಓದಿ ನನ್ನ ಮನಸ್ಸು ಬೆರಗಾಯಿತು. ನಿಜವಾಗಿಯು ನಿಮ್ಮ ಸಾಹಸಕ್ಕೆ ಮೆಚ್ಚಲೆ ಬೇಕು.. ಮೇಲಾಗಿ ನಿಮ್ಮ ಮನುಷ್ಯತ್ವದ ಕಡೆಗಿನ ಧೋರಣೆ ಪ್ರಶಂಸನೀಯ. ಕಥೆಯ ಕೊನೆಯ ಎರಡು ಲೈನುಗಳು ನನ್ನ ಹೃದಯದ ತಂತಿಗಳನ್ನು ಬಾರಿಸಿದೆ. ..ಯಾಕೋ ತಿಳಿಯದು ಕಣ್ಣಲ್ಲಿ ಸ್ವಲ್ಪ ಹನಿಗಳೂ ಜಾರಿವೆ..!!

Rajendra B. Shetty
10 years ago

ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ನಾನು ನಂಬಿಕೊಂಡು ಬಂದಿರುವ ತತ್ವ ಸತ್ಯವೆಂದು ನೀವು ಸಾಬೀತು ಮಾಡಿ ತೋರಿಸಿದಿರಿ (ಪ್ರತಿಯೊಬ್ಬನಲ್ಲೂ ಒಳ್ಳೆಯತನ ಮತ್ತು ಕೆಟ್ಟತನ ಇರುತ್ತವೆ. ನಾವು ಅವೆರಡರಲ್ಲಿ ಯಾವುದನ್ನು ತಟ್ಟುತ್ತೇವೆಯೋ ಅದು ನಮಗೆ ಸಿಗುತ್ತದೆ). ನಿಮ್ಮ ಧೈರ್ಯ ಮೆಚ್ಚುವಂತಹದೇ.

Utham Danihalli
10 years ago

Adhutha lekana nimma lekana odhi romanchanavaythu hage kannu odheyayathu nimma dyryakke nana salute
Nimma mundina lekanakagi kayuvanthe madidhe

amardeep.p.s.
amardeep.p.s.
10 years ago

 ಒಂದು ಘಳಿಗೆ  ಅನುಭವ ಸ್ತಬ್ಧವಾಗಿತ್ತು ….

8
0
Would love your thoughts, please comment.x
()
x