ನಮ್ಮ ಜೀವನದಲ್ಲಿ ಕಷ್ಟ ಬಂದಾಗ ಮಾತ್ರ ನಾವುಗಳು ಯಾಕೆ ದೇವರನ್ನ ನೆನಪು ಮಾಡ್ಕೊಂತೀವಿ . ಅದೇ ನಾವು ಸಂತೋಷದಿಂದ ಇದ್ದಾಗ ದೇವರನ್ನ ನೆನಪು ಮಾಡ್ಕೊಳ್ಳೊದೇ ಇಲ್ಲ ಅಲ್ವಾ. ಜೀವನದಲ್ಲಿ ಕಷ್ಟಗಳು ಬಂದಾಗ ನಾವ್ ಯಾಕೆ ತಲೆ ಬಾಗಬೇಕು. ನಾವ್ ಯಾಕೆ ಕಷ್ಟಗಳಿಗೆ ಹೆದರ್ಬೇಕು……? ನಾವ್ ಯಾಕೆ ಕಷ್ಟಗಳಿಗೆ ಅಂಜಬೇಕು…..? ಕಷ್ಟಗಳು ಬಂದಾಗ ನಾವ್ ಯಾಕೆ ಹೆದರಿ ಕೂತ್ಕೋಬೇಕು….? ನಾವ್ ಯಾಕೆ ಅಳ್ಬೇಕು….? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಾಗ ಉತ್ತರ ನಮ್ಮಲ್ಲೇ ಇದೆ ಅಲ್ವ. ನಮ್ಮಲ್ಲೂ ಕೂಡ ಆ ಕಷ್ಟಗಳನ್ನ ಎದರಿಸುವ ಶಕ್ತಿ ಆ ಬುದ್ದಿವಂತಿಕೆ ಇದೆ ಅಲ್ವ. ಸಂಕಟ ಬಂದಾಗ ವೆಂಕಟರಮಣ ಅನ್ನೋರೆ ಜಾಸ್ತಿ ಹೊರತು ಆ ಕಷ್ಟಗಳನ್ನ ನಿಭಾಯಿಸಿ ಒಂದು ಪರಿಹಾರ ಹುಡುಕಿಕೊಳ್ಳೋಕೆ ಯಾರಿಗೂ ಆಗೋಲ್ಲ….
ತಮ್ಮ ತಮ್ಮ ಜೀವನದಲ್ಲಿ ಕಷ್ಟಗಳು ಬಂದ್ರೆ ಸಾಕು ಮೊದಲು ಮಾಡೋ ಕೆಲಸಾನೇ ದೇವರನ್ನ ನೆನೆಯೋದು.ದೇವರೇ ನನಗೆ ಯಾಕೆ ಕಷ್ಟಗಳನ್ನ ಕೊಡ್ತೀಯಾ ನಾನು ನಿನಗೆ ಏನ್ ಮಾಡಿದೀನಿ ಅಂತ ಪಾಪನಾ ನಾನು . ಹೀಗೆ ಅತ್ತರೆ ಕಷ್ಟಗಳಿಗೆ ಪರಿಹಾರ ಸಿಗುತ್ತಾ . ಆ ಕಷ್ಟ ಪರಿಹಾರ ಆಗ್ಲಿಲ್ಲ ಅಂದ್ರೆ ಸಾಕು ದೇವಸ್ತಾನಕ್ಕೆ ಹೋಗಿ ಉರುಳುಸೇವೆ ಉಪವಾಸ ಕೆಲವಂದಿಷ್ಟು ನಿಯಮಗಳನ್ನ ಮಾಡೋಕೆ ಶುರು ಮಾಡ್ತಾರೆ ಹೊರೆತು. ಇನ್ನು ಕೂತು ಯೋಚನೆ ಮಾಡೋ ಅಷ್ಟು ಟೈಮ್ ಇರಲ್ಲ ಅಲ್ವ.
ನಮಗೆ ಬರುವ ಕಷ್ಟವೇ ದೊಡ್ಡದಾ ಅಥವಾ ಒಂದೊಂದು ಹೊತ್ತಿಗೂ ಊಟ ಇಲ್ಲದೇ ನೀರು ಇಲ್ಲದೇ ಅಲೆದಾಡೋ ಅವರ ಕಷ್ಟ ದೊಡ್ಡದಾ ಅನ್ನೋದನ್ನ ಒಂದು ಬಾರಿ ಯೋಚನೆ ಮಾಡಿದ್ರೆ ಸಾಕು. ಆಗ ಗೊತ್ತಾಗುತ್ತೆ ಅವರ ಕಷ್ಟಗಳ ಮದ್ಯ ನಮ್ಮ ಕಷ್ಟ ಯಾವ ಲೆಕ್ಕ ಅಂತ. ಭಗವಂತ ಎಲ್ಲರಿಗೂ ಕಷ್ಟ ಕೊಟ್ಟು ನೋಡ್ತಾನೆ ಆ ಕಷ್ಟನಾ ಯಾರು ನಿಭಾಯಿಸುತ್ತಾರೋ ಅವರಿಗೆ ಒಂದಲ್ಲ ಒಂದು ದಿನ ಆ ಭಗವಂತನೇ ಕೈ ಹಿಡಿಯುತ್ತಾನೆ. ನಾವು ಹೆಂಗೆ ಅಂದ್ರೆ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿಯಲ್ಲಿ ನೀರು ತೊಡೋಕೆ ಹೋಗ್ತಿವಿ. ಅದೇ ಜೀವನ ಕಷ್ಟ ಅಂತ ಬಂದಾಗ ಎಲ್ಲಾನು ನೆನಪಾಗುತ್ತೆ. ಅಳು ಬರುತ್ತೆ ಅಮ್ಮ ಅಪ್ಪ ದೇವರು ಎಲ್ರೂ ನೆನಪು ಮಾಡೋ ಶಕ್ತಿ ಇರೋದೇ ಕಷ್ಟಕ್ಕೆ. ಸುಖಕ್ಕೆ ಬಂದು ಬಳಗ ಅಷ್ಟೇ ಸುಖದಲ್ಲಿ ನೆನಪಾಗೋದು ಆ ದೇವರನ್ನ ನೆನಪಿಲ್ಲದ ಜಾಗದಲ್ಲಿ ಬಿಟ್ಟು ಬಿಡುತ್ತೇವೆ. ಅದ್ಕೆ ಆ ದೇವರು ಆಗಾಗ ಕಷ್ಟನಾ ಕೊಟ್ಟು ನನ್ನನು ನೆನಪು ಮಾಡ್ಕೋ ಅಂತ ಕಷ್ಟಗಳನ್ನ ಕೊಡುತ್ತಾನೆ. ಜೀವನದಲ್ಲಿ ಕಷ್ಟ ಅಂತ ಬರೋದೇ ನಾವು ಆ ಕಷ್ಟನಾ ಎದುರಿಸಿ ದೃಢವಾಗಿ ನಿಲ್ಲಬೇಕು ಅಂತ.
ಬಸವಣ್ಣ ೧೨ನೇ ಶತಮಾನದಲ್ಲಿ ಹೇಳಿದಾರೆ
ಎನ್ನ ಕಾಲೆ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ
ಕೂಡಲಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ನಮ್ಮಲ್ಲೇ ದೇವರು ಇರುವಾಗ ಇನ್ನು ದೇವಸ್ಥಾನಕ್ಕೆ ಹೋಗಿ ಉರುಳುಸೇವೆ ಉಪವಾಸ ಯಾಕೆ ಮಾಡಬೇಕು. ನನ್ನಲ್ಲೇ ಆ ದೇವರು ಇದ್ರೆ ಆ ಕಷ್ಟಗಳಿಗೆ ಉತ್ತರ ನಮ್ಮಲೇ ಇರುತ್ತದೆ ತಾಳ್ಮೆ ಇಂದ ಯೋಚನೆ ಮಾಡಬೇಕು ಅಷ್ಟೇ.
-ದೀಪಾ ಜಿ.ಎಸ್.