ಆಸ್ಪತ್ರೆಯಲ್ಲಿ
ಅಮ್ಮ ಖಾಯಿಲೆಯಾದಾಗ
ತುತ್ತು ತಿನ್ನಿಸಿದ್ದವಳಿಗೆ
ಏಕೋ ತೃಪ್ತಿಯಾಗಲಿಲ್ಲ,
ತನ್ನ ಅಮ್ಮ
ಚಂದ್ರನ ತೋರಿಸಿ
ತಿನಿಸಿದ್ದ ತುತ್ತುಗಳ ನೆನಪಾಗಿ …
ಹತ್ತು ಕಥೆ ಹೇಳು ಎಂದು
ಅಜ್ಜನ ಕೈ ಜಗ್ಗಿದಾಗ,
ಕೈ ಹಿಡಿದು ಹಳ್ಳಿಯೆಲ್ಲ ಹೆಜ್ಜೆ ಹಾಕಿಸಿದ
ಕಣ್ಣ ಮುಂದೆ ನೂರು ಕಥೆಗಳು ಸರಿದಾಡಿದವು…
ಪುಟ್ಟ ಮನೆಯನ್ನು ಹಿಗ್ಗಿಸಲು
ತಾನೆ ಬೆಳೆಸಿದ
ಅಂಗಳದಲ್ಲಿನ ಮರಗಳನ್ನು ಕೆಡವಿದ,
ಅದೊಂದು ದಿನ
ತಣ್ಣನೆಯ ವಾತಾವರಣ ಹುಡುಕುತ್ತ
ಹೊರಟವನು
ಬೇರೆಯವರು ಬೆಳಸಿದ್ದ ಮರಗಿಡಗಳ ಪಾರ್ಕಿನಲ್ಲಿ ಕುಳಿತ…
ಚೆಲುವ ಪೋರ
ಹಿಂಬಾಲಿಸುತ್ತಿದ್ದಾನೆ
ಎಂದು ಖುಷಿ ಪಟ್ಟಿದ್ದ
ಪುಟ್ಟ ಪೋರಿ,
ಶಾಲೆಯಲ್ಲಿ ಟೀಚರ್
'ಭೂಮಿ ಗುಂಡಗಿದೆ'
ಎಂದು ಹೇಳಿದಾಗ ನಿರಾಸೆ ಹೊಂದಿದಳು …
"ಮ್ ಕೆ ತಲಕಟ್ಟು ಮ"
ಎಂದು ಓದಲಾಗದಿದ್ದ ಪುಟಾಣಿಗೆ
ತಾಯಿ ಹೊಡೆದಾಗ
'ಅಮ್ಮ…' ಎಂದು ಚೀರುತ್ತಿತ್ತು…..
ಪ್ರತಿದಿನ
ಅಕ್ಕನ ನಗು ಮುಖ ನೋಡಿ
ಖುಷಿ ಪಡುತಿದ್ದ ಅವಳು
ಇಂದು ಕಣ್ಣಗಲಿಸಿ
ಆಕಾಶ ನೋಡುತಿದ್ದಾಳೆ …
~ ಪೂರ್ಣಿಮಾ ಬಿ.
ಅಪ್ಪ ಬರೋದಿಲ್ಲೇನವ್ವಾ?!
ಕಾಯುತ್ತಲೇ ಇದ್ದೇನೆ…
ಕೆಲಸ ಹುಡುಕಿ ಹೋದ ಅಪ್ಪನ ಬರುವಿಕೆಗೆ
ನನ್ನ ಭವಿಷ್ಯರೂಪಿಸುವ ಕನಸುಗಾರ ಅಪ್ಪಯ್ಯ
ಬಡತನ ಭೂತದ ಬೆಂಕಿಯಲಿ ನೊಂದು-ಕಂಗಾಲಾದಾತ
ಭೂತದ ಝಳ ಸೋಂಕಿಸಬಾರೆದೆನ್ನುವ ಜನುಮದಾತ
ಉಪವಾಸ ಬಿದ್ದರೂ ನನಗೆ ಗೊತ್ತಾಗದಂತಿರುವಾತ
ಮಿರ್ಚಿಭಜಿ ಕಟ್ಟಿಸಿಕೊಂಡು ಬರುವ ಬಾಪ್ಪಾನಿಗಾಗಿ
ನನ್ನ ಹಾಗೆ ಊರಲ್ಲಿ ಅಜ್ಜಯ್ಯ ಕಾಯುತ್ತಿರಬಹುದೇ?
ಅಮಾಯಕ ಅಜ್ಜನಿಗೆ ಸುಳ್ಳು ಹೇಳಿ
ಊರಲ್ಲಿ ಮಾಡಲು ಕೆಲಸವಿಲ್ಲವೆಂಬ ನೆಪ
ಪೇಟೆಜೀವನದ ಆಕರ್ಷಣೆಗೆ ಮರುಳಾಗಿ
ಹೊಲ-ಗದ್ದೆಗಳನು ಹಾಳುಗೆಡವಿ
ಸರಕಾರಿ ಯೋಜನೆಗಳ ಪಾಲಾಗಿಸಿ
ಎತ್ತು-ಎಮ್ಮೆ-ಆಕಳುಗಳನು ಕಟುಕರಿಗೊಪ್ಪಿಸಿ
ಹಳ್ಳಿಯ ವಿಸ್ತಾರದ ಮನೆ ತೊರೆದು
ನವಾಬರ ನಗರಕ್ಕೆ ನಾಳೆಗಳಿಗಾಗಿ ವಲಸೆ
ಮಿಶ್ರತಳಿಯಂತೆ ಮಿಕ್ಸ್ ಮಾತಿನ ಭಾಷಿಗರು
ಪಟ್ಟಣದ ಸ್ಲಮ್‍ದಲ್ಲಿ ಬಾಡಿಗೆ ಗುಡಿಸಲ ವಾಸ
ಇಲ್ಲಿ ಶ್ರಮ ಕಡಿಮೆ ಹೆಚ್ಚು ಕೂಲಿಯಂತೆ
ಮಾನ ಮಾರಿಕೊಂಡರು ಸರಿಯೇ
ಸಂಬಂಧಗಳು ಸತ್ತರೂ ಚಿಂತೆಯಿಲ್ಲ
ಶವವಿಟ್ಟುಕೊಂಡು ದುಡ್ಡು ಗಳಿಸುವರಿಲ್ಲಿ
ಕರುಣೆ-ಅನುಕಂಪ-ಮಾನವತೆ ಮರೆತ ಪದಗಳು!
ವಿಲಿವಿಲಿ ಒದ್ದಾಡುತ್ತಿವೆ ಸತ್ಯ-ಶಾಂತಿ ಇತ್ಯಾದಿಗಳು
ಗುಡಿಸಲಿಗೆ ಬೇಕು ಕಿರೀಟದಂತೆ ಡಿಸ್‍ಅಂಟೆನಾ
ಸೋಲಾರ್-ಎಲ್‍ಇಡಿ ಲ್ಯಾಂಪುಗಳ ಆಧುನಿಕತೆ
ಲ್ಯಾಂಡ್‍ಪೋನ್ ಅವಶ್ಯಕವಿಲ್ಲ
ಕಿರುಚುವ ಮೋಬೈಲ್ ಜೇಬಿನಲ್ಲಿ
ಅಂಗಿ-ಲುಂಗಿಯ ಅಲಂಕಾರ ಶೋಭಿತ ಆಗಿನ ಗ್ರಾಮೀಣ ಅಪ್ಪ
ಟೀಶರ್ಟು-ಜೀನ್ಸ್ ಪ್ಯಾಂಟುಗಳ ಈಗಿನ ನಗರವಾಸಿ ಡ್ಯಾಡಿ
ಹೀಗಿದ್ದರೆ ಮಾತ್ರ ಪಟ್ಟಣದಲ್ಲಿ ಕೆಲಸ ಸಿಗುವದಂತೆ
ಮರಳುವನು ದಿನಾಸಂಜೆ ಸಪ್ಪೆಮುಖದಲ್ಲಿ
ಕೆಲಸ ಖಾಲಿಯಿಲ್ಲವಂತೆ ; ಹಳೆಯ ಸ್ಲೋಗನ್ನು
ಕೊನೆಯಿಲ್ಲದ ನಿರಾಶೆಯಿಲ್ಲದ ನಾಳೆಗಳಿಗಾಗಿ ಹುಡುಕಾಟ
ಇಂದೇಕೋ ಕತ್ತಲಾದರೂ ಅಪ್ಪನ ಸುಳಿವಿಲ್ಲ
ಸರಿಯುತ್ತಿವೆ ಸ್ಕ್ರೋಲಿಂಗ್ ಶಬ್ದಗಳು
ಬ್ರೆಕಿಂಗ್‍ನ್ಯೂಸ್ ಚಾನೆಲ್ಲಿನ ಅಡಿಯಲ್ಲಿ
ನವಾಬರ ನಗರವ ನಡುಗಿಸಿದ ಸ್ಪೋಟ
ಸಂತೆಯಲ್ಲಿ ಶವಗಳ ರಾಶಿ !
ಪೋಲೀಸ ಮಾಮಾನ ಗಾಡಿಯ ಸೈರನ್
ಅವ್ವನ ಹತ್ತಿರ ಪಿಸುಗುಟ್ಟಿದ
ಮುಗಿಲು ಮುಟ್ಟಿದ ಅವ್ವನ ಆಕ್ರಂಧನ
ನಗರದಲ್ಲಿ ಬಾಂಬ್ ಸ್ಪೋಟವಂತೆ
ಲೇ ಹುಡುಗಾ…ನಿಮ್ಮಪ್ಪನ್ನ ಗುರ್ತಿಸ್ತಿಯಾ? ಬಾ ನನ್ಜೊತೆ !
ಅಪ್ಪ ಬರೋದಿಲ್ಲೇನವ್ವಾ?!
ನಿಷ್ಪಾಪಿ ಪೋರನಿಗೆ ಉತ್ತರಿಸುತ್ತಿರಾ ಪಾಪಾಂಧರೆ…?
~ಹಿಪ್ಪರಗಿ ಸಿದ್ದರಾಮ್, ಧಾರವಾಡ
ತುಂಬಾ ಹಿಡಿಸಿದವು.. 🙂
ಧನ್ಯವಾದಗಳು ರುಕ್ಮಿಣಿಯವರೇ….
ಇಷ್ಟವಾದವು….
ಇಷ್ಟವಾದವು….
I think heading is needed to poem written by Poornima..b
child hood experiences are never forgotten.
poem by siddaram elaboratly says how a family without father are suffered.
both r good.
thank u akka….
tumba chennagive
thanks…..
Thanx Sharada Moleyar madam for your kind response….
ALL are good!!
"ಮ್ ಕೆ ತಲಕಟ್ಟು ಮ"
ಎಂದು ಓದಲಾಗದಿದ್ದ ಪುಟಾಣಿಗೆ
ತಾಯಿ ಹೊಡೆದಾಗ
'ಅಮ್ಮ…' ಎಂದು ಚೀರುತ್ತಿತ್ತು…..
ಉತ್ತಮ ಕಲ್ಪನೆ
sir edu nanna swantha anubhava…
naanu nanna amma atra odaesikoluttidda anubhava
2 ಒಳ್ಳೆಯ ಕವನಗಳು
Both are well written poems…………all the best…..
thank u very much
ellavvo chennagide … Poornima avara Hanigala vishaalate manassige naatuttade ..
thank u hussain
2kavanagallu thumba chenagive ebarigu shubhavagali
thank u…
Both are Superb…
Thanx to all…..