ಕನಸುಗಳ ಪೈಪೋಟಿ: ಸುನಿತಾ. ಎಸ್. ಪಾಟೀಲ

“ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡ” ಎಂಬ ಹಿತ ನುಡಿಯಂತೆ ಮನುಷ್ಯನಾದವನು ಜೀವನದಲ್ಲಿ ಹಾಗಿರಬೇಕು ಹೀಗಿರಬೇಕು ಎಂಬ ಕನಸು ಕಾಣುವುದು ಸಹಜ. ಮನುಷ್ಯನಾದವನಿಗೆ ತಿಳುವಳಿಕೆ

ಬಂದಾಗಿನಿಂದ ತನ್ನ ಕನಸುಗಳನ್ನು ಪೂರೈಸಿಕೊಳ್ಳುವುದು ಒಬ್ಬ ಸಾಧಕನ ಸ್ವತ್ತು, ಹೊರತು ಸೋಮಾರಿಯ ಸ್ವತ್ತಲ್ಲ’ ಎಂಬುದನ್ನು ಮೊದಲು ಆತ ಅರಿತಿರಬೇಕು. ಅದನ್ನು ನೆರವೇರಿಸಲು ತನ್ನ ಜೀವನದಲ್ಲಿ

ಹೆಣಗಾಡಬೇಕಾಗುತ್ತದೆ. ಕನಸು ಕಾಣುವುದು ತಪ್ಪಲ್ಲ! ಆದರೆ ಆ ಕನಸನ್ನು ನೆರವೇರಿಸಲು ಅವನು ಒಳ್ಳೆಯ ದಾರಿಯನ್ನು ಹಿಡಿದು ಮುಂದೆ ಸಾಗಬೇಕಾಗುತ್ತದೆ. ಒಂದೆಡೆ ಸಮೃದ್ಧಿ ಎಡೆಗೆ ಹೆಜ್ಜೆಯಿಟ್ಟರೆ

ಮತ್ತೊಂದೆಡೆ ಭ್ರಷ್ಟಾಚಾರ, ಅಪರಾಧ ಮತ್ತು ಹಿಂಸೆ ಎಡೆಗೆ ಹಾಗಾಗಿ ವಿದ್ಯಾರ್ಥಿಯಾದ ಅವನಿಗೆ ಯಾವಾಗಲೂ ತನ್ನ ಗುರಿಯನ್ನು ತಲುಪಲು ಹೋಗುವ ದಾರಿಗಳು ಎರಡಾಗಿರುತ್ತವೆ. ಒಂದು ದಾರಿ

ಸರಳವಾಗಿ, ಸುಗಮವಾಗಿ ಕಷ್ಟಪಡದೆ ತನ್ನ ಗುರಿಯನ್ನು ಮುಟ್ಟಬಹುದು ಇನ್ನೊಂದು ತನ್ನ ಜೀವನದಲ್ಲಿ ನಿಧಾನವಾಗಿ ಅಡೆತಡೆಗಳಿಂದ, ಮುಳ್ಳಿನ ಹಾಸಿಗೆಯಂತೆ ಕಾಣುವಂತಹ ಕಠಿಣವಾದ ದಾರಿ

ಆಗಿರುತ್ತದೆ. ವಿದ್ಯಾರ್ಥಿ ಯಾದವನು ಯಾವಾಗಲೂ ಕಠಿಣವಾದ ದಾರಿಯನ್ನೇ ಆಯ್ಕೆ ಮಾಡಿಕೊಂಡು ತನ್ನ ಮನೋಸ್ಥೈರ್ಯವನ್ನು ಕುಗ್ಗಿಸಿ ಕೊಳ್ಳದೆ ವಿಶ್ವಾಸದಿಂದ ತನ್ನ ಕನಸನ್ನು ಮುಟ್ಟಲು

ಪ್ರಯತ್ನಿಸಬೇಕು. ಆವಾಗ ಆತನ ಯಶಸ್ಸು ಚಿರಕಾಲ ಉಳಿಯಲು ಸಾಧ್ಯ.

ಬೆಳೆಯುತ್ತಿರುವ ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರು ಎರಡು ಕಣ್ಣುಗಳಿದ್ದಂತೆ ವಿದ್ಯಾರ್ಥಿಗಳು ಆ ಎರಡು ಕಣ್ಣುಗಳಲ್ಲಿ ತನ್ನ ಪ್ರತಿಬಿಂಬ ವನ್ನು ಹುಡುಕುತ್ತಿರುತ್ತಾರೆ. ಹಾಗಾಗಿ ಶಿಕ್ಷಕರಾದವರು

ವಿದ್ಯಾರ್ಥಿಗಳಿಗೆ ಪಾಠ ಬೋಧಿಸುವಾಗ ನೀತಿ ಕಥೆಗಳು, ಧಾರ್ಮಿಕ ಕಥೆಗಳು ಹಾಗೂ ಮಹಾನ್ ವ್ಯಕ್ತಿಗಳು ಜೀವನ ಚರಿತ್ರೆ, ಸ್ವಾತಂತ್ರ್ಯ ಹೋರಾಟಗಾರರು ಅಳವಡಿಸಿ ಕೊಂಡಂತಹ ಮೌಲ್ಯಗಳ ಬಗ್ಗೆ

ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ಅವುಗಳನ್ನು ತನ್ನ ಜೀವನದಲ್ಲಿ ಅನುಸರಿಸಿ ಕೊಳ್ಳಲು ಪ್ರೇರೇಪಿಸಬೇಕು. ಹಾಗೆಯೇ ವಿದ್ಯಾರ್ಥಿ ತನ್ನ ಜೀವನದಲ್ಲಿ ಯಾವುದಾದರೂ ದುಶ್ಚಟಗಳಿಗೆ

ಬಲಿಯಾಗದಂತೆ ಶಿಕ್ಷಕರು, ಪಾಲಕರು,ಎಚ್ಚರ ವಹಿಸಬೇಕು. ಅದೇ ರೀತಿಯಾಗಿ ವಿದ್ಯಾರ್ಥಿಯ ಇನ್ನೊಂದು ಕಣ್ಣು ಎಂದರೆ ಪಾಲಕರು. ಅವರು ಸಹ ಮಕ್ಕಳ ಆಸೆ-ಆಕಾಂಕ್ಷೆಗಳನ್ನು ಅರಿತು ತನ್ನ ಕೈಲಾದ

ಮಟ್ಟಿಗೆ ಪ್ರಚೋದನೆ ಕೊಡಬೇಕು ಹಾಗೆ ಮಕ್ಕಳಿಗೆ ತಂದೆ-ತಾಯಿ ಪಡುತ್ತಿರುವ ಕಷ್ಟದ ಮನವರಿಕೆ ಮಕ್ಕಳಿಗೆ ಮಾಡಿಕೊಡಬೇಕು. ಅಪ್ಪನ ಹನಿಹನಿ ಬೆವರಿನ ಹಿಂದೆ ತನ್ನ ಮಕ್ಕಳ ಭವಿಷ್ಯವನ್ನು ರೂಪಿಸಲು

ದೊಡ್ಡ ಕನಸೊಂದನ್ನು ಹಣೆದಿರುತ್ತಾನೆ. ಹಾಗೆ ತಾಯಿಯಾದವಳು ಹಗಲಿರುಳು ಎನ್ನದೆ ಮಕ್ಕಳಿಗೆ ಮಮಕಾರದ ತುತ್ತು ಉಣಬಡಿಸಿ ಜೀವನದಲ್ಲಿ ಎದುರಾಗುವ ಸ್ಪರ್ಧೆಗಳಿಗೆ ಛಲವನ್ನು ತುಂಬುತ್ತಾಳೆ.

ತಾಯಿಯೇ ಮೊದಲ ಗುರುವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸಂಸ್ಕಾರಯುತ ಮೌಲ್ಯಗಳನ್ನು ಪಾಲಕರು ಧಾರೆ ಎರೆಯುತ್ತಾರೆ. ಹಾಗಾಗಿಯೇ ನಮ್ಮ ಪೂರ್ವಜರು ಒಂದು ಮಾತನ್ನು

ಹೇಳುತ್ತಾರೆ “ತಾಯಿ ಇರುವವರೆಗೂ ಹಸಿವು ಗೊತ್ತಾಗಲ್ಲ, ತಂದೆ ಇರುವವರೆಗೂ ಜವಾಬ್ದಾರಿ ಗೊತ್ತಾಗಲ್ಲ” ಅಂತ ಆದರೆ ಅವರು ಮಕ್ಕಳ ಕನಸುಗಳಿಗೆ ಸ್ಪೂರ್ತಿಯ ಸೆಲೆಯನ್ನು ಹೆಣೆಯುತ್ತ ಮಕ್ಕಳ ಬಗ್ಗೆ

ಕನಸಿನ ಲೋಕವನ್ನು ಕಟ್ಟಿಕೊಂಡಿರುತ್ತಾರೆ.

ಈ ಜಗತ್ತಿನ ಅನೇಕ ವಿದ್ವಾಂಸರು, ಇತಿಹಾಸಕಾರರು ಹಾಗೆ ಪ್ರಚಲಿತವಾಗಿ ಸಾಧಿಸುತ್ತಿರುವ ಮಹಾನ್ ವ್ಯಕ್ತಿಗಳ ಜೀವನ ಒಬ್ಬರಂತೆ ಮತ್ತೊಬ್ಬರು ಇರುವುದಿಲ್ಲ. ಎಲ್ಲರೂ ತನ್ನ ತನ್ನ ಕ್ಷೇತ್ರದಲ್ಲಿ ಕಷ್ಟಗಳನ್ನು

ಮೆಟ್ಟಿ ನಿಂತು ತನ್ನ ಒಂದು ಕನಸಿನ ಕೋಟೆಯನ್ನು ಕಟ್ಟಿಕೊಂಡಿರುತ್ತಾರೆ. ಅಲ್ಲಿ ಭರವಸೆಯ ಬೆಳಕನ್ನು ಹಿಡಿದು ಅವರು ಮುಂದೆ ಸಾಗುತ್ತಿರುತ್ತಾರೆ. ಅವರಂತೆ ನಾವು ಸಹ ಏಕೆ ಸಾಧಿಸಲು ಸಾಧ್ಯವಿಲ್ಲ ಎಂದು

ಮೊದಲು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ?

ಇರುವುದು ಎರಡೇ ಕೈ ಎರಡೇ ಕಣ್ಣು ಒಂದೇ ಮಿದುಳು ಹಾಗಾದರೆ ಅವರು ಸಾಧಸಿದ್ದನ್ನು ನಾನು ಸಾಧಿಸಲೇಬೇಕು. ಸಾಧಿಸಿಯೇ ಸಾಧಿಸುವೇನು ಎಂಬ ದೃಢವಾದ ನಂಬಿಕೆ ನಮ್ಮಲ್ಲಿರಬೇಕು. “ಅಬ್ದುಲ್

ಕಲಾಂ ಅವರ ಹೇಳಿಕೆಯಂತೆ ನಾವು ಯಾವಾಗಲೂ ಸಣ್ಣ ಕನಸನ್ನು ಕಾಣುವುದು ಅಪರಾಧ. ಸೂರ್ಯನಂತೆ ಪ್ರಜ್ವಲಿಸಬೇಕಾದರೆ ಮೊದಲು ಸೂರ್ಯನಂತೆ ಸುಡಬೇಕು.” ಅಂದಾಗ ಮಾತ್ರ ನಮ್ಮ ಬೆನ್ನ

ಹಿಂದೆ ನಮ್ಮಕಷ್ಟ, ಪರಿಶ್ರಮದ ಫಲವಾಗಿ ಯಶಸ್ಸನ್ನು ಕಾಣಬಹುದು, ಕನಸನ್ನು ಸಹಕಾರ ಗೊಳಿಸಬಹುದು.

ಈ ಒಂದು ಕನಸಿನ ಪೈಪೋಟಿಯಲ್ಲಿ ಒಬ್ಬ ಬಡ ವಿದ್ಯಾರ್ಥಿಯು ತನ್ನ ಕನಸನ್ನು ಈಡೇರಿಸಿಕೊಳ್ಳಲು ಅವನಿಗೆ ಸ್ಪೂರ್ತಿಯಾದವರೇ ಊರಿನ ಜನರು. ಒಂದು ದಿನ ಒಬ್ಬ ಬಡ ವಿದ್ಯಾರ್ಥಿಯಾದ ಶಿವು ತಾನು

ತನ್ನ ಜೀವನದಲ್ಲಿ ರವಿ ಡಿ ಚೆನ್ನಣ್ಣನವರ್ ಅಂತೆ ದಕ್ಷ ಐಪಿಎಸ್ ಅಧಿಕಾರಿಯಾಗುವ ಕನಸನ್ನು ಕಾಣುತ್ತಾನೆ. ಆ ಕನಸನ್ನು ಮನೆಯಲ್ಲಿ ತಂದೆ ತಾಯಿಗೆ ಊರಿನಲ್ಲಿ ಜನರಿಗೆ ಹೇಳಿದಾಗ ತಂದೆ-ತಾಯಿ

ನಿಲುಕದ ಆಕಾಶಕ್ಕೆ ಆಸೆ ಪಡಬಾರದು ಕೂಸೆ ಎಂದು ಸಮಾಧಾನ ಮಾಡುತ್ತಾರೆ. ಊರಜನ ಅವನನ್ನು ಹೀಯಾಳಿಸುತ್ತಾರೆ, ಅವಮಾನಿಸಿ ನಗಲು ಪ್ರಾರಂಭಿಸಿದರು. ತಿನ್ನಲು ಗತಿಯಿಲ್ಲದ ನೀನು ಐಪಿಎಸ್

ಅಧಿಕಾರಿ ಆಗುತ್ತೀಯಾ? ಎಂದು ಕಿಲಕಿಲನೆ ನಕ್ಕರು. ಆ ನಗು ಆ ವಿದ್ಯಾರ್ಥಿಯ ಜೀವನವೇ ಬದಲಾಯಿಸಿಬಿಟ್ಟಿತು. ಹಗಲೆಲ್ಲ ಸರಕಾರಿ ಶಾಲೆಯಲ್ಲಿ ಕಲಿತು ಬಿಡುವಿನ ಸಮಯದಲ್ಲಿ ಬೇರೆಯವರ ಹೊಲಗಳಲ್ಲಿ

ಕೆಲಸ ಮಾಡಿ ತಾನು ಕಂಡ ಕನಸನ್ನು ಸಹಕಾರ ಗೊಳಿಸಲು ಪ್ರಯತ್ನಿಸುತ್ತಿದ್ದ. ಆತನ ಪ್ರಯತ್ನದ ಫಲನೋ ಏನೋ ಆತ ದಿನೇದಿನೇ ಅಭ್ಯಾಸದಲ್ಲಿ ಆಸಕ್ತಿಯನ್ನು ತೋರುತ್ತಾ ತನ್ನ ಕನಸನ್ನು

ಸಾಕಾರಗೊಳಿಸಲು ಪ್ರಯತ್ನಿಸಿದ. ಅವತನ ಪ್ರಯತ್ನದ ಫಲವಾಗಿ ಮುಂದಿನ ವಿದ್ಯಾಭ್ಯಾಸಕ್ಕೂ ಸರ್ಕಾರವೇ ಸಹಾಯ ಮಾಡುವಂತೆ ಆತನ ಪ್ರತಿಭೆ ಪ್ರದರ್ಶನ ಗೊಳಿಸಿದ. ಆತನಿಗೆ ಹಲವಾರು ಸಂಘ

ಸಂಸ್ಥೆಗಳು ನೆರವಿಗೆ ಬಂದವು. ಆತ ಸಹ ತನ್ನ ಕನಸನ್ನು ಸಹಕಾರ ಗೊಳಿಸಿಕೊಳ್ಳಲು ಹಗಲು-ರಾತ್ರಿ ಎಂಬದೇ ಶ್ರಮವನ್ನು ಪಟ್ಟ. ಆ ಶ್ರಮದ ಪ್ರತಿಫಲ ಈಗ ಆತ ಒಬ್ಬ ಐಪಿಎಸ್ ಅಧಿಕಾರಿಯಾಗಿ ತನ್ನ

ಹಳ್ಳಿಗೆ ಬಂದಾಗ ಅಲ್ಲಿ ಗಿಡದ ಕೆಳಗೆ ಕುಳಿತು ಜೂಜಾಡುವ ಜನರೆಲ್ಲರೂ ಚಕಿತರಾದರು. ಶಿವು ಅವರನ್ನೆಲ್ಲ ಮಾತನಾಡಿಸುತ್ತಾ ನಾನು ನಿಮ್ಮ ನೆಚ್ಚಿನ ಬಡವ ಶಿವು ಎಂದು ಪರಿಚಯ ಮಾಡಿಕೊಂಡು. ನಾನು

ನನ್ನ ಕನಸನ್ನು ಸಾಕಾರಗೊಳಿಸಲು ನೀವೇ ಸ್ಪೂರ್ತಿದಾರರು ಎಂದು ಹೇಳಿಕೊಂಡ ಆವಾಗ ಜನರು ತನ್ನ ತಲೆಯನ್ನು ಕೆಳಗೆ ಹಾಕಿದರು. ತಂದೆ-ತಾಯಿ ಸಂತೋಷಪಟ್ಟರು.ಇದು ಒಬ್ಬ ವಿದ್ಯಾರ್ಥಿಯ ಛಲ

ಅಥವಾ ಕನಸಿನ ಜೊತೆ ಆತನ ಪೈಪೋಟಿ ಎಂದರೂ ತಪ್ಪಾಗದು.

ಹೀಗೆ ಪ್ರತಿಯೊಬ್ಬರೂ ಜೀವನದಲ್ಲಿ ಬರುವ ವತ್ತಡ, ಸನ್ನಿವೇಶ, ಸಂದರ್ಭಗಳಲ್ಲಿ ಕಷ್ಟ, ನಷ್ಟ, ಸೋಲು, ನಿರಾಶೆ ಅಪವಾದಗಳ ಆಘಾತಕ್ಕೆ ಒಳಗಾಗದೆ ಸಮಚಿತ್ತತೆಯಿಂದ ಸಮತೋಲನದಿಂದ ಸ್ವೀಕರಿಸಿ

ಅದನ್ನು ಮೆಟ್ಟಿ ನಿಲ್ಲಬೇಕು. ನುಡಿದಂತೆ ನಡೆಯುವುದು ಅದೆಷ್ಟೇ ಕಷ್ಟ ಬಂದರೂ ತಮ್ಮ ಪ್ರಮಾಣಿಕತೆಯ ಮಾರ್ಗವನ್ನು ಬಿಡದೆ ತನ್ನ ಗುರಿಯನ್ನು ತಲುಪಬೇಕು. ವಿದ್ಯಾರ್ಥಿಗಳು ಯಾವಾಗಲೂ ನಾನೇ

ಗ್ರೇಟ್, ನನ್ನ ಸಮ ಯಾರು ಇಲ್ಲ, ನಾನು ಇತರರಿಗಿಂತ ಉತ್ತಮನೆಂದು ಅಹಂಕಾರ ಭಾವ ತೋರಬಾರದು ಅಂದಾಗ ಮಾತ್ರ ತನ್ನ ಕನಸನ್ನು ಸಹಕಾರ ಗೊಳಿಸಲು ಸಾಧ್ಯ. ಕುವೆಂಪು ಅವರ

ಮಾತಿನಂತೆ “ಏನಾದರೂ ಆಗು ಮೊದಲು ಮಾನವನಾಗು” ಮಾನವೀಯ ಮೌಲ್ಯಗಳು ನಮಗೆ ತನ್ನಿಂದ ತಾನೆ ಪ್ರಶಸ್ತಿ, ಪುರಸ್ಕಾರಗಳು ಒದಗಿ ಬರುವಂತೆ ಮಾಡುತ್ತವೆ. ಹಾಗಾಗಿ ಕನಸುಗಳ ಜೊತೆ

ನಮ್ಮ ಪೈಪೋಟಿ ಸದಾ ಇರಲೇಬೇಕು. ಅಂದಾಗಲೇ ನಮ್ಮನ್ನು ನಾವು ಗುರುತಿಸಿ ಕೊಳ್ಳಲು ಸಾಧ್ಯ ಎಂದು ಹೇಳುತ್ತಾ ನನ್ನ ಬರವಣಿಗೆಗೆ ವಿರಾಮ ಇಡುತ್ತೇನೆ.

ಸುನಿತಾ. ಎಸ್. ಪಾಟೀಲ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x