ಕೃತಿ-ಕದ ತಟ್ಟಿದ ಕನಸು
ಕವಿ- ಭೀಮಪ್ಪ ಮುಗಳಿ
ಪ್ರಕಾಶಕರು-ಸಹಜ ಪ್ರಕಾಶನ
ವಿದೇಶದಲ್ಲಿ ಇದ್ದು ಕನ್ನಡದ ಹಣತೆ ಹಚ್ಚಿ ಮೂರು ಕವನ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಭೀಮಪ್ಪ ಮುಗಳಿಯವರಿಗೆ ಮೊದಲ ಅಭಿನಂದನೆಗಳು ತಿಳಿಸುತ್ತೇನೆ.
ಮೈತುಂಬ ಕೆಲಸ ಹೊಟ್ಟೆ ತುಂಬಾ ಊಟ ಕಣ್ಣು ತುಂಬಾ ನಿದ್ದೆಯಿದ್ದರೆ ಊಹೆಗೆ ಮೀರಿದ್ದ ಕನಸುಗಳು ಮೂಡುತ್ತವೆ. ಆ ಕನಸುಗಳು ಕೆಟ್ಟದ್ದು ಆಗಿದೆಯೋ? ಒಳ್ಳೆಯದು ಆಗಿದೆಯೋ? ಅನ್ನೋದು ಎರೆಡನೇ ವಿಚಾರ ಆದರೆ ಕನಸುಗಳು ಸುತ್ತ ಹೆಣೆದಿರುವ ಕವನ ಸಂಕಲನವೇ.
"ಕದ ತಟ್ಟಿದ ಕನಸು"
ಅತಿ ಸರಳ ಸಾಲುಗಳು ಹಾಗೂ ದೀರ್ಘವಾಗಿ ಅರ್ಥ ನೀಡಬಲ್ಲ ಕವಿ ಇವರು. ಈ ಕವನ ಸಂಕಲನದಲ್ಲಿ ಪ್ರೀತಿಯ ಕನಸುಗಳಲ್ಲಿ ಕೆಲವೊಮ್ಮೆ ತೇಲುತ್ತಾ ಕೆಲವೊಮ್ಮೆ ಈಜುತ್ತಾನೆ ಕೆಲವೊಮ್ಮೆ ತನ್ನನೆ ಸಮರ್ಥಿಸಿಕೊಳ್ಳುತ್ತಾ ಪ್ರೀತಿಯ ಕನಸುಗಳುನ್ನು ಬಿಟ್ಟು ಏನು ಇಲ್ಲವೆಂದು ಸಾಬೀತುಪಡಿಸಿದ್ದನ್ನು ಈ ಕವನ ಸಂಕಲನದಲ್ಲಿ ನೋಡಬಹುದು.
ಏನೆಲ್ಲಾ ಆಸೆ ಈ ಕವಿ ಮಹಾಶಯರಿಗೆ ಎಂದರೆ ಕನಸು ಮರೆಯಬಹುದು.ಆದರೆ ಕವಿಯ ಭಾವದಲ್ಲಿ ಕರಗಿ ಹನಿಯಾಗುದುಂಟೇ? ಭಾವನೆಗಳು ಬಲೆಯ ಬೀಸುತ್ತಾರೆ. ಬೀಸುವು ಭಾವನೆಗಳಿಗೆ ಸಿಲುಕಿದಾಗ ಕಣ್ಮುಂದೆ ಚಿತ್ರಣವಿಲ್ಲಿ ಕಾಣಬಹುದಾಗಿದೆ. ಹಲುವಾರು ಆಶಯ ಹೊತ್ತ ಕವಿತೆಗಳನ್ನು ನೋಡಿದಾಗ ಓದುಗರನ್ನು ಹಿಡಿದಿಡಿವ ಶಕ್ತಿ ಇವರಿಗಿದೆ.
ಆರಡಿ ಮೂರಡಿ ಕವಿತೆಯಲ್ಲಿ
"ಕತ್ತಲ ಸೆರಗಿಗೆ ಭಯದ ಬೇವರ ಸುರಿಸಿ ಹೊರಗೆ ಬಂದೆ". ಈ ಸಾಲು ಮತ್ತು
"ಯಾರೂ ಪುಣ್ಯಾತ್ಮ ಹೊರಗೆ ನೂಕಿದನೋ ಹಿಂದೆ ತಿರುಗಿ ನೋಡುವಷ್ಟರಲ್ಲಿ ಬಾಗಿಲು ಮುಚ್ಚಿತ್ತು"
ಈ ಎರಡು ಸಾಲುಗಳನ್ನು ಗಮನಿಸಿದಾಗ ಕವಿತೆ ಆಶಯವೇ ಬೇರೆ ಇಲ್ಲಿ ಕಾಣುವ ಚಿತ್ರಣವೇ ಬೇರೆ ಎನಿಸುತ್ತದೆ. ಓದುಗರನ್ನು ಚಿಂತನೆಗೆ ಹೆಚ್ಚುವುದು ಕವಿಯ ಕರಾಮತ್ತೇ ಎನ್ನಬಹುದು.
"ಆ ಕಡೆ ಈ ಕಡೆ " ಶಕ್ತಿ " ಯಾರೀತ? "ಕನಸಿನ ಮಜಾ" "ಸುಂದರ ಜೀವನ" ಪುಣ್ಯವಂತಗಿತ್ತಿ ಕೊಟ್ಟ ಚಹಾ" ನೂರ ಒಂದಕ್ಕೆ ತಗಲ ಹಾಕಿದ ಮ್ಯಾಗ" ಈ ಎಲ್ಲ ಕವಿತೆಗಳನ್ನು ನೋಡಿದಾಗ ಓದಲು ಹಾಸ್ಯವೇನಸುತ್ತೆ. ಇಲ್ಲಿ ಕವಿಯು ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಆಡುವ ಮಾತುಗಳಿಗೆ ಭಾವ ಕೊಟ್ಟು ಕಾವ್ಯವನ್ನಾಗಿಸಿದ್ದು ಕವಿಯ ಜಾಣ್ಮೆ ಮೆಚ್ಚಲೆಬೇಕು. ಹಾಸ್ಯದಲ್ಲಿಯೇ ಹಲವಾರು ವಿಷಯಗಳು ಓದುಗನ ಮನದಲ್ಲಿ ಮೊಳಕೆ ಒಡೆದು ಫಲ ಕೊಡುವುದು ವಿಪರ್ಯಾಸವೆಂದರೆ ತಪ್ಪಾಗಲಾರದು.
ಇನ್ನೂ ಕವಿ ಸರ್ವ ಸ್ವತಂತ್ರ ಎಂಬುದನ್ನು ನಿರೂಪಣೆ ಮಾಡಬೇಕಾಗಿದೆ ಬರಿ ಕನಸಿನ ಲೋಕದಲ್ಲಿ ಹಾಗೂ ಪ್ರೇಮದ ಜಾಡಿನಲ್ಲಿ. ಗುರು ಹಿರಿಯರಿಗೆ ಶಿಕ್ಷಕರಿಗೆ ವಂದಿಸುವದು ಬರಿ ಇದರಲ್ಲಿ ಮುಳಗಿದ್ದಾರೆ ಇನ್ನೂ ಸಮಾಜದಲ್ಲಿ ಕಾಡುವುದು ಸಮಕಾಲೀನ ಘಟನೆಗಳಾದ ರಾಜಕೀಯ ವ್ಯವಸ್ಥೆ ಅತ್ಯಾಚಾರ ಲಿಂಗಬೇದ ಜಾತಿಯ ವ್ಯವಸ್ಥೆ ನಿತ್ಯ ದಿನಚರಿಯಲ್ಲಿ ಕಾಡುವು ಹಲವಾರು ಘಟನೆಯ ಬಗ್ಗೆ ಬರೆದೆ ಸಾಹಿತಿ ಸಮಾಜದ ಒಂದು ಅಂಗವೆಂದು ನಿರೂಪಿಸಿ ಮತ್ತಷ್ಟು ಶಬ್ಧಗಳನ್ನು ದುಡಿಸಿಕೊಂಡು ಮುಂಬರುವ ದಿನಗಳಲ್ಲಿ ಆ ಕವಿತೆಗಳನ್ನು ಓದುಗರಿಗೆ ಕಾವ್ಯದ ರಸದೌತಣ ನೀಡಿ ಬಂಡಾಯದ ಕ್ರಾಂತಿಗೆ ಮುನ್ನುಡಿ ಬರೆಯಬೇಕಾಗಿದೆ
-ಪಿ ಕೆ…? ನವಲಗುಂದ
ಅನಂತ ವಂದನೆಗಳು ಮಿತ್ರರ ಸಲಹೆಗೆ
ತುಂಬಾ ಖುಷಿ ಆಯಿತು ಓದುವಾಗ
ತಾವು ಹೇಳಿದ ರೀತಿಯಲಿ ಸಾಗಲು ಪ್ರಯತ್ನ ಮಾಡುವೆನು