“ಕಣ್ತುಂಬ ನಿದ್ದೆಮಾಡಿ, ಸದಾ ಖುಷಿಯಾಗಿರಿ”: ಗೂಳೂರು ಚಂದ್ರು

ಪ್ರಕೃತಿ ಮನುಷ್ಯನಿಗೆ ಎಲ್ಲವನ್ನು ಸಮಾನಾವಾಗಿ ಕೊಟ್ಟಿದೆ.ಆ ಪ್ರಕೃತಿ ಕೊಟ್ಟಿರುವುದನೆಲ್ಲಾ ನಾವು ಸಮನಾಗೇ ಅನುಭವಿಸಬೇಕು,ಸ್ವಲ್ಪ ಹೆಚ್ಚು ಕಡಿಮೆಯಾದರೆ ನಮಗೆ ಆಪತ್ತು.  ಪ್ರಕೃತಿದತ್ತವಾಗಿ ಮನುಷ್ಯನಿಗೆ ಸಿಕ್ಕಿರುವುದರಲ್ಲಿ 'ನಿದ್ದೆ'ಯು ಒಂದು.ಒಬ್ಬ ಮನುಷ್ಯ ಕನಿಷ್ಠ 7ರಿಂದ 8ಗಂಟೆ ನಿದ್ದೆ ಮಾಡಲೇಬೇಕು.  ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ಅವನೆ ಕಾರಣನಾಗುತ್ತಾನೆ.ಈಗಿನ ಬ್ಯುಸಿ ಜೀವನದಲ್ಲಿ ನಿದ್ರೆಯನ್ನು ಕೆಲವರು ಮರೆತೆಬಿಟ್ಟಿದ್ದಾರೆ. ಈಗಿನ ಬಹುತೇಕರು ನಿದ್ದೆ ಮಾಡದೇ ಬಳಲುತ್ತಿದ್ದಾರೆ, ಒಂದಲ್ಲಾ ಒಂದು ಯೋಚನೆ, ಚಿಂತೆ ಅವರನ್ನು ಕಾಡುತ್ತಲೇ ಇರುತ್ತದೆ. ನೀವು ಕೆಲವರನ್ನು ಗಮನಿಸಿರಬೇಕು ಸದಾ ಏನನ್ನೋ ಕಳೆದುಕೊಂಡವರಹಾಗೆ ಇರುತ್ತಾರೆ, ವೈಯುಕ್ತಿಕ ಹಾಗು ಸಾಮಾಜಿಕ ಯೋಚನೆಗಳು, ಚಿಂತೆಗಳು ಅವರ ಮೆದುಳಲ್ಲಿ ಭದ್ರವಾಗಿ ತಳಪಾಯ ಹಾಕಿ ಮನೆಕಟ್ಟಿಬಿಟ್ಟಿರುತ್ತವೆ. ಅವು ಹೋಗುವುದಿಲ್ಲ ಇವರು ಬಿಡುವುದಿಲ್ಲ.

ಒಬ್ಬ ಉದ್ಯೊಗಿಯ ಕೆಲಸದ ಗುಣಮಟ್ಟ ಕುಗುತ್ತಿದೆ ಅಥವಾ ಒಬ್ಬ ವಿದ್ಯಾರ್ಥಿಯ ಪ್ರತಿ ತಿಂಗಳ ಪರೀಕ್ಷೆಯಲ್ಲಿ ಅಂಕ ಕಡಿಮೆ ಇದೆ ಅಂದರೆ ಅದಕ್ಕೆ ನಿದ್ರೆಯು ಕಾರಣವಿರಬಹುದು. ನೀವು ಗಮನಿಸಿರಬಹುದು ಮನೆಯಲ್ಲಿ ಒಳ್ಳೆಯ ಮಂಚ ಅದರ ಮೇಲೊಂದು ಮೃದುವಾದ ಹಾಸಿಗೆಯಿದ್ದರೂ ನಿದ್ದೆ ಮಾಡಿರುವುದಿಲ್ಲ  ಕೇವಲ 15ರಿಂದ 20ನಿಮಿಷ ಪ್ರಯಾಣ ಮಾಡುವ bmಣಛಿ ಬಸ್ಸಿನಲ್ಲಿ ಸೊಗಸಾದ ನಿದ್ದಗೆ ಜಾರಿರುತ್ತಾರೆ, ಅಷ್ಟೇ ಯಾಕೆ ಮಾನ್ಯ ಮುಖ್ಯಮಂತ್ರಿಗಳ ಕಥೆಯು ಗೊತ್ತಲ್ಲವ. ನೀವು ಚಿಂತೆಗಳನ್ನ,ಯೋಚನೆಗಳನ್ನು  ತಲೆತುಂಬ ತುಂಬಿಕೊಂಡಿರುವ ಪರಿಣಾಮ ನಿದ್ದೆ ಎಷ್ಟೇ ದೊರವಿದ್ದರೂ ಕೆಲ ಸಮಯದಲ್ಲಿ ಅಂದರೆ ಬಸ್ಸಲ್ಲಿ ಪ್ರಯಾಣಿಸುವಾಗ,ಮೀಟಿಂಗ್ ಹಾಲಿನಲ್ಲಿ ಕುಳಿತಿರುವಾಗ, ಮಧ್ಯಾಹ್ನದ ಊಟವಾದ ಮೇಲೆ ಕಂಪ್ಯೂಟರಿನ ಮುಂದೆ ಕುಳಿತಾಗ ಯಾಮಾರಿಸಿ ನಿದ್ದೆ ಬಂದು ಬಿಡುತ್ತದೆ. ಯಾಕೆಂದರೆ ಮೆದಳು ಬರೀ ವರ್ತಮಾನದನ್ನು ಮಾತ್ರ ಯೋಚಿಸುತ್ತಿರುತ್ತದೆ. ಹಾಗಾಗಿ ಅದಕ್ಕೆ ಸ್ವಲ್ಪ ರಿಲೀಫ್ ಸಿಕ್ಕಿ ಬೇಗ ನಿದ್ದೆಗೆ  ಜಾರುತ್ತದೆ.ಅದೇ ರಾತ್ರಿ ಭೂತ,ವರ್ತಮಾನ, ಭವಿಷ್ಯದ ಎಲ್ಲಾ ಯೋಚನೆಗಳು ಒಂದೇ ಬಾರಿ ಮೆದುಳಿಗೆ ನುಗ್ಗುವುದರಿಂದ ನಿದ್ರಾದೇವಿ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

ಸಮಸ್ಯೆಗಳು, ಕಷ್ಟಗಳು ಹೆಚ್ಚುತ್ತಿವೆ ಅಂತ ಅವನ್ನು ತಲೆತುಂಬ ತುಂಬಿಕೊಂಡು ಹುಚ್ಚರಾಗಿ ತಿರುಗುವುದಕ್ಕೆ,,, ಮೊದಲು ಸಮಸ್ಯೆಗಳ ಬೇರು ಎಲ್ಲಿದೆ ಎಂದು ಹುಡುಕಬೇಕು, ಹುಡುಕಬೇಕೆಂದರೆ ನಿಮ್ಮ ಮೆದುಳು ಸದಾ ಚಿಛಿಣive ಇರಬೇಕು. ನಿಮ್ಮ ಮೆದುಳೋ  ಬರೀ ಚಿಂತೆಗಳನ್ನೇ ತುಂಬಿಕೊಂಡು ಸತ್ತುಹೋಗಿರುತ್ತದೆ.ಇನ್ನೇಲ್ಲಿ  ಸಮಸ್ಯೆಯ ಬೇರನ್ನು ಹುಡುಕುತ್ತದೆ. ಅದಕ್ಕೆ ಕಣ್ತುಂಬ ನಿದ್ದೆ ಮಾಡಬೇಕು.

ಸಮಸ್ಯೆ ಯಾರಿಗಿಲ್ಲ..?? ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ಒಂದೊಂದು ಸಮಸ್ಯೆಗಳಂಟು.ಆದರೆ ಆ ಸಮಸ್ಯೆ ನಮ್ಮ ಬದುಕನ್ನು ನುಂಗಿಹಾಕಬಾರದು.ಎಂತಹ ಸಮಸ್ಯೆಗಳಿದ್ದರೂ ಧೃತಿಗೆಡದೆ ಒಂದು ಕ್ಷಣ ಧೃಡನಿರ್ದಾರ ಮಾಡಿ ಮನಸಾರೆ ನಿದ್ರೆಮಾಡಿ, ,, ಮೆದುಳಿಗೆ ಹೊಸ ಚೈತನ್ಯ ಬರುತ್ತದೆ. ಜಗತ್ತು ಹೊಸದಾಗಿ ಕಾಣುತ್ತದೆ.ನಿಮ್ಮ ಸಮಸ್ಯೆ ಆಗ ಕಾಲಿನ ಮೇಲಿರುವ ಕಸದಂತೆ  ಕಾಣುತ್ತದೆ.

'ಮನುಷ್ಯನಿಗೆ ಆರೋಗ್ಯವೇ  ಭಾಗ್ಯ 'ಆರೋಗ್ಯವನ್ನು ಹಾಳುಮಾಡಿಕೊಂಡು ನೀವು ಎಷ್ಟೇ ಸಂಪಾದಿಸಿದರೂ ಅದು ಶೂನ್ಯಕ್ಕೆ ಸಮ.ಕಣ್ತುಂಬ ನಿದ್ದೆ ಮಾಡಿ ಹೊಸ ಉಲ್ಲಾಸ,  ಹುಮ್ಮಸ್ಸು ನಿಮ್ಮದಾಗಿಸಿಕೊಳ್ಳಿ ಸದಾ ಖುಷಿಯಾಗಿರಿ.

-ಗೂಳೂರು ಚಂದ್ರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Chaithra
Chaithra
8 years ago

Correct Sir !

1
0
Would love your thoughts, please comment.x
()
x