ಧರೆಯ ಬದುಕೇನದರ ಗುರಿಯೇನು ಫಲವೇನು? ।
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ॥
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ
ನರನು ಸಾಧಿಪುದೇನು? – ಮಂಕುತಿಮ್ಮ ॥ ೨೭ ॥
ಈ ಕಗ್ಗದಲ್ಲಿ ಡಿ.ವಿ.ಜಿ. ಬದುಕಿನ ಗುರಿ ಏನು ನಾವು ಬದುಕುವ ದಿನದ ಬದುಕಿಗೆ ಏನಾದರೂ ಅರ್ಥವಿದೆಯೇ ಎಂಬುದಾಗಿ ಪ್ರಶ್ನಿಸುತ್ತಾರೆ. ಮಾನವನ ಬದುಕಿಗೆ ಗುರಿಯಿರದೆ ಬಹಳಷ್ಟು ಜನ ಬದುಕಿರುತ್ತ ಇರುತ್ತಾರೆ. ದೇವರು ನಮಗೆ ಮಾನವ ಜನ್ಮ ಕೊಟ್ಟಿರುವುದು ವ್ಯರ್ಥ ಮಾಡುವುದಕ್ಕೆ ಅಲ್ಲ. ಎಲ್ಲ ಜನ್ಮಗಳಲ್ಲಿ ಮಾನವ ಜನ್ಮ ಬಹಳ ಶ್ರೇಷ್ಟವಾದುದು ಏಕೆಂದರೆ ಮಾನವನಿಗೆ ಯೋಚುಸುವ ಶಕ್ತಿ ಇದೆ. ಹಾಗಾಗಿಯೇ ದಾಸರು ಹೇಳಿದ್ದು ಮಾನವ ಜನ್ಮ ದೊಡ್ಡದು. ಅದ ಹಾಳು ಮಾಡ ಬೇಡಿರೋ ಹುಚಪ್ಪಗಳಿರ ಎಂದು. ಜೀವನ ದಲ್ಲಿ ಯಾವಾಗಲೂ ಸ್ಪಷ್ಟವಾದ, ನಿಖರವಾದ ಗುರಿ ಇದ್ದಾಗ ಆ ಗುರಿಯನ್ನು ಸಾದಿಸಲು ಹಠ ಛಲ ಇದ್ದು ಗುರಿ ಸಾದಿಸದಾಗ ಜೀವನ ಸಾರ್ಥಕ ವಾಗುತ್ತದೆ. ನಮ್ಮ ಬದುಕು ಯಾಂತ್ರಿಕವಾಗಿ ದೈನಂದಿನ ಕಾರ್ಯಗಳಲ್ಲಿ ಸಮಯ ಕಳೆದು ಹೋಗುತ್ತದೆ. ಬರಿ ಹೊಟ್ಟೆ ಬಟ್ಟೆಯನ್ನು ಹೊರೆಯಲು ಇಡೀ ಆಯುಷ್ಯವನ್ನು ವ್ಯರ್ಥವಾಗಿ ಕಳೆಯುತ್ತೇವೆ. ಇಳಿ ವಯಸ್ಸಿನಲ್ಲಿ ಒಮ್ಮೆ ಹಿಂತಿರುಗಿ ನೋಡಿದಾಗ ಹೇಗೆ ವ್ಯರ್ಥವಾಗಿ ಜೀವನ ಕಳೆದುದಕ್ಕೆ ಬೇಸರ ಉಂಟಾಗುತ್ತದೆ. ದೇವರು ನಮಗೆ ಒಳ್ಳೆಯ ಜೀವನವನ್ನು ನಾವು ಸದುಪಯೋಗದಿನಂದ ಕಳೆಯಲಿಲ್ಲವಲ್ಲ ಎಂದು.
ಭೂಮಿಗೆ ಬಂದು ಯಾವ ಗೊತ್ತು ಗುರಿ ಇಲ್ಲದೆ ಜೀವನವಿಡಿ ಹೊಡೆದಾಟ, ಬಡಿದಾಟ , ಹೊಟ್ಟೆಕಿಚ್ಚು, ದುರ್ಬುದ್ಧಿ ಅಸಹನೆ, ಅಸಹಕಾರ, ಬರಿಗೋಳಾಟದಿಂದ ನಾವು ಕಳೆಯುತ್ತಿರುವ ಜೀವನಕ್ಕೆ ಏನಾದರು ಅರ್ಥವಿದೆಯೇ? ಪ್ರಾಣಿ ಪಕ್ಷಿಗಳ ಹಾಗೆ ಬರಿ ಹೊಟ್ಟೆ ಹೊರೆದುಕೊಳ್ಳುವ ಕಾರ್ಯವೇ ಮುಖ್ಯವೇ ಜೀವನದಲ್ಲಿ
ಏನೂ ಗುರಿಯಿಲ್ಲದೆ ಇರುವುದು ಜೀವನವೇ . ಈ ರೀತಿಯ ಬದುಕು ಯಾವ ಪ್ರಾಣಿ ಪಕ್ಷಿಗಳ ಬದುಕಿಗಿಂತ ಶ್ರೇಷ್ಠ ಮತ್ತು ಉತ್ತಮವಾಗಿದೆ. ಜೀನಾದಲ್ಲಿ ನಿಶ್ಚಿತವಾದ ಗುರಿ ಸಾಡಿಸಲು ಬೇಕಾದ ಛಲ ಮತ್ತು ಪರಿಶ್ರಮ ದಿಂದ ಗುರಿ ಸದಿಸದಾಗ ಉಂಟಾಗುವ ತೃಪ್ತಿ ಮಾನವನ ಜೀವನವನ್ನು ಎತ್ತರಕ್ಕೆ ಕೊಂಡುಹೋಗಬೇಕೆನ್ನುವುದು ಈ ಕಗ್ಗ ದ ಅಂತರಂಗದ ಭಾವರ್ತ.
*****
ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ!
ಭವಿಷವ ಚಿಂತಿಸದೆ ಬದುಕ ನೂಕುತಿರು!
ವಿವರಗಳ ಜೋಡಿಸುವ ಯಜಮಾನ ||
ಬೇರಿಹನು! ಸವೆಸು ನೀಂ ಜನುಮವನು – ಮಂಕುತಿಮ್ಮ!!
ಚಿಂತೆ ಎನ್ನುವುದು ನಮ್ಮನ್ನು ಬೆಂಬಿಡದ ನೆರಳಿನಂತೆ ಇರುತ್ತದೆ. ಜಾಗ್ರತ್ ಪ್ರಪಂಚದಲ್ಲಿ ಮನಸ್ಸು ಯಾವುದಾದರೂ ಒಂದು ವಿಷಯದಲ್ಲಿ ಚಿಂತಿಸುತ್ತಾ ಇರುತ್ತದೆ. ಮನಸ್ಸು ಭಯದಿ0ದ ,ಅಶಾಂತಿಯಿಂದ,ತಳಮಳದಿಂದ ಇರುತ್ತದೆ. ಈ ಪದ್ಯದಲ್ಲಿ ಡಿ. ವಿ.ಜಿ. ನಮಗೆ ಧ್ಯರ್ಯ ವನ್ನು ತುಂಬಿ ಉತ್ತಮವಾದ ಜೀವನವನ್ನು ಹೇಗೆ ನೆಡೆಸಬಹುದೆಂದು ತಿಳಿಸಿಕೊಡುತ್ತಾರೆ.
ಚಿಂತೆಯಿಲ್ಲದ ಮನುಷ್ಯನೇ ಇಲ್ಲ ಹಾಗಾಗಿಯೇ ದಾಸರು ಹೇಳಿದ್ದು ಅನುಗಾಲವು ಚಿಂತೆ ಜೀವಕೆ ಎಂದು, ಧನವಿದ್ದರು ಚಿಂತೆ ಇಲ್ಲದಿದ್ದರೂ ಚಿಂತೆ,ಸತಿ ಇದ್ದರೂ ಚಿಂತೆ ಇಲ್ಲದಿದ್ದರೂ ಚಿಂತೆ,ಸತಿ ಕುರೂಪಿಯಾದರು ಚಿಂತೆ ಕಡು ಚೆಳ್ವೆ ಯಾದರು ಚಿಂತೆ,ಸುತನಿದ್ದರು ಚಿಂತೆ ಸುತ ನಿಲ್ಲದಿದ್ದರೂ ಚಿಂತೆ . ಯಾವಾಗಲೂ ಓಳಿತು ಕೆಡಕುಗಳ ಬಗ್ಗೆ ಚಿಂತುಸುತ್ತ ಜೀವನದಲ್ಲಿ ಸುಖ ನೆಮ್ಮದಿ ಸಂತೋಷಗಳನ್ನು ಕಳೆದು ಕೊಳ್ಳುತ್ತ ಇದ್ದೇವೆ. ನಾವು ಭೂತ ಮತ್ತು ಭವಿಷ್ಯತ್ ಬಗ್ಗೆ ಚಿಂತಿಸತ್ತ ದೇವರು ಕೊಟ್ಟಿರುವ ಈ ಕ್ಷಣ ದ ಸಂತೋಷ ನೆಮ್ಮದಿಯನ್ನು ಕಳೆದುಮೊಳ್ಳುತ್ತಿದ್ದೇವೆ. ಯಾವಾಗಲೂ ಮುಂದೇನೋ ಆಗುತ್ತದೆ ಎಂಬ ಭಯದಲ್ಲಿ ಬದುಕುತ್ತ ಇದ್ದೇವೆ. ನಮಗೆ ಗೊತ್ತಿಲ್ಲ ನಾವೆಲ್ಲ ಇಲ್ಲಿ ಪಾತ್ರಧಾರಿಗಳು ನಮ್ಮನ್ನು ಆಡಿಸುವ ಸೂತ್ರದಾರ ಬೇರೊಬ್ಬನಿದ್ದಾನೆ ಎಂದು.ಯಾವುದು ನಮ್ಮ ಇಚ್ಛೆ ಯಂತೆ ನಡೆಯುವುದಿಲ್ಲ ಎಲ್ಲವು ಅವನ ಇಚ್ಛೆಗೆ ಅನುಗುಣವಾಗಿ ನಡೆಯುತ್ತದೆ. ಎಲ್ಲವನ್ನು ಪರಮಾತ್ಮನಿಗೆ ಬಿಟ್ಟು ಅವನಮೇಲೆ ಎಲ್ಲ ಭಾರವನ್ನು ಬಿಟ್ಟು ಮುಂದೇನು ಎಂದು ಚಿಂತಿಸದೆ ಜೀವನವನ್ನು ನಡೆಸಿದರೆ ನಾವು ಸುಖವಾಗಿ ಸಂತೋಷ ವಾಗಿ ನೆಮ್ಮದಿಯಿಂದ ಇರುತ್ತದೆ ಎಂಬುದು ಈ ಪದ್ಯದ ಭಾವರ್ತ.
*****
ಯಾತ್ರಿಕರು ನಾವು,ದಿವ್ಯಕ್ಷೆತ್ರ ವೀ ಲೋಕ!
ಸತ್ರದಲಿ ನೇಮದಿ0ದರಲಿ ಕೆಡೆಯುಂಟು!!
ರಾತ್ರಿ ಮುರಾಯ್ತು ಹೊರಡೆನೆ ತೆರಳಿ ದೊಡೆ,
ಪಾರು ಪತ್ಯದವ ಮೆಚ್ಚುವನು- ಮ0ಕುತಿಮ್ಮ!!
ಈ ಪದ್ಯದಲ್ಲಿ ಡಿ. ವಿ. ಜಿ. ಈ ಭುವಿ ಯಲ್ಲಿ ಹೇಗೆ ಬದುಕಿ ಬಾಳ ಬೇಕೆಂದು ಬಹಳ ಸುಂದರವಾಗಿ ತಿಳಿಸಿ ಕೊಡುತ್ತಾರೆ. ನಾವು ಭೂಮಿಗೆ ಬಂದಿರುವುದು ತೀರ್ಥಕ್ಷೆತ್ರ ಕ್ಕೆ ಮಾಡಿರುವ ಪಾಪಗಳನ್ನು ತೊಳೆದುಕೊಳ್ಳುವುದಕ್ಕೆ.ಒಬ್ಬ ಸಜ್ಜನ ಯಾತ್ರಿಕ ಹೇಗೆ ನಡೆದುಕೊಳ್ಳುತ್ತಾನೋ ಹಾಗೆ ನೇಮನಿಷ್ಠೆಯಿಂದ ನಡೆದುಕೊಳ್ಳಬೇಕು. ಯಾತ್ರೆಗೆ ಬಂದಾಗ ನಾವು ಯಾವುದೇ ಕಸ್ಟ ನಷ್ಟ ,ಕುಂದುಕೊರತೆ ಏನೇ ಲೋಪ ದೋಷಗಳು ಇದ್ದರು ಅವುಗಳನ್ನು ಸಹಿಸಿಕೊಂಡು ನಾವು ಇಲ್ಲಿರುದು ಒಂದೆರಡು ದಿನ ಹಾಗಾಗಿ ಹೊಂದಿಕೊಂಡು ನಡೆಯುವುದು ಅನಿವಾರ್ಯ.
ಈ ಲೋಕ ಒಂದು ದಿವ್ಯ ವಾದ ಕ್ಷೆತ್ರ ಇಲ್ಲಿಬಂದಿರುವುದು ನಾವು ಯಾತ್ರಿಕರ ಹಾಗೆ ಇಲ್ಲಿಯ ನಿಯಮಗಳನ್ನ ಆಚಾರ ವಿಚಾರಗಳನ್ನು ನೀತಿ ನಿಯಮ ಗಳನ್ನು ಪಾಲಿಸಬೇಕಾಗುತ್ತದೆ. ಎಲ್ಲರಿಗೂ ಬಹಳ ಆಸೆ ಈ ದಿವ್ಯವಾದ ಕ್ಷೆತ್ರ ದಲ್ಲಿ ಬಹಳ ದಿನ ಇರಬೇಕೆಂದು ಆದರೆ ಅದು ಸಾಧ್ಯವಿಲ್ಲ. ನಾವು ಮುಕ್ತಿ ಮಾರ್ಗದ ಕಡೆ ಧರ್ಮದಿ0ದ ನಡೆಯಬೇಕಾಗುತ್ತದೆ. ಕಾಲನ ಕರೆ ಬಂದಾಗ ಸಂತೋಷ ದಿಂದ ನಡೆದಾಗ ದೇವರು ಸಹ ಮೆಚ್ಚುವನು.
*****
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು !
ಬಿದಿಯ ಬಾಯಿಗೆ ಕವಳ ವಾಗದುಳಿಯುವನೆ!
ಎದೆಯನುಕ್ಕಾಗಿಸುತ ಮತಿದೆಯೆ ಪಿಡಿದು ನೀಂ!
ನೆದರು ನೆಲೆ ಬಿದಿಯೊ ಲಿವ ಮಂಕುತಿಮ್ಮ!
ಈ ಪದ್ಯದಲ್ಲಿ ಡಿ ವಿ.ಜಿ. ದೈರ್ಯದ ಮಾತುಗಳನ್ನ ಆಡುತ್ತಾರೆ. ಮಾನವನಿಗೆ ಕಷ್ಟಗಳು ಬಂದಾಗ, ಆತ್ಮವಿಶ್ವಾಸ ಕುಗ್ಗಿದಾಗ, ಮುಂದೇನು ಎಂದು ದರಿಕಾಣದೆ ದ್ರುತಿಗೆಟ್ಟ ಗ,ಕಷ್ಟಗಳು ಒಂದಾದಮೇಲೆ ಬರಸಿಡಿಲಂತೆ ಬಂದಾಗ ಡಿ.ವಿ.ಜಿ.ಧ್ಯರ್ಯ ವನ್ನು ತುಂಬಿ ಹೇಗೆ ನಡೆಯಬೇಕೆಂದು ಹೇಳುತ್ತಾರೆ. ಜೀವನ ಎಂದು ಹೂವಿನ ಹಾಸಿಗೆಯಲ್ಲ ಎಲ್ಲರ ಜೀವನಸಲ್ಲು ಕಸ್ಟ ನಷ್ಟಗಳು,ದುಃಖ ದುಮ್ಮಾನಗಳು ಬಂದಾಗ ದೇವರೇ ನನ ಗೆ ಜೀವನ ಸಾಕಾಗಿದೆ ಎಂದು ದರಿಕಾಣದೆ ನಿಂತಾಗ ಈ ಪದ್ಯ ಧ್ಯರ್ಯ ವನ್ನು ತುಂಬು ತ್ತದೆ.
ಬದುಕು ಒಂದು ಯುದ್ಧವಿದ್ದ0ತೆ ಯಾರು ಸೋಲಬೇಕೆಂದು ಯುದ್ಧ ಮಾಡುವುದಿಲ್ಲ ಎಲ್ಲರೂ ಗೆಲ್ಲಬೇಕೆಂದು ಯುದ್ಧ ಮಾಡುತ್ತಾರೆ.ಜೀವನದಲ್ಲಿ ಸೋತಾಗ ಎದೆಗುಂದ ದೆ ಆತ್ಮವಿಶ್ವಾಸ, ಭಗವಂತನಲ್ಲಿ ವಿಶ್ವಾಸ ಮುಂದೆ ಸಾಗಿದಾಗ ಜಯ ಕಟ್ಟಿಟ್ಟ ಬುತ್ತಿ. ಸಮಸ್ಯೆ ಬಂದಾಗ ಅಂಜಿಕೊಂಡು ಓಡಿದರೆ ವಿಧಿ ನಮ್ಮನ್ನು ಬಿಡುವುದಿಲ್ಲ. ಹಾಗಾಗಿಯೇ ದಾಸರು ಹೇಳಿದ್ದು ಈಸಬೇಕು ಇದ್ದು ಜೈಸಬೇಕು. ಇತಿಹಾಸ ಪುರಾಣ ವನ್ನು ನೋಡಿದಾಗ ಕಷ್ಟಗಳು ಯಾರಿಗೆ ಬಂದಿಲ್ಲ ಹರಿಶಂದ್ರ ಮಹಾರಾಜ ,ನಳ ಮಹಾರಾಜ,ಪಾಂಡವರು, ರಾಮ ಇತ್ಯಾದಿ. ಎಲ್ಲರೂ ಕಷ್ಟಗಳು ಬಂತೆಂದು ಓಡಿಹೋಗದೆ ಧ್ಯರ್ಯದಿಂದ ದೃತಿಗೆಡದೆ ಮುನ್ನಡೆದುದರಿಂದ ಯಶಸನ್ನು ಕಂಡರು.ಜೀವನದಲ್ಲಿ ಯಾವುದೇ ಸಮಸ್ಯೆ ಬಂದಾಗ ಸಮಸ್ಯೆಯ ಬಗ್ಗೆ ಯೋಚುಸದೆ ಪರಿಹಾರದ ಕಡೆಗೆ ಯೋಚಿಸುದರೆ ಪರಿಹಾರ ಖಂಡಿತ ದೊರೆಯುತ್ತದೆ. ದೇವರಲ್ಲಿ ನಂಬಿಕೆ ಶ್ರದ್ದೆ ಇದ್ದು ದೇವರನ್ನು ಕಷ್ಟ ಎದುರಿಸುವ ಶಕ್ತಿ ಕೊಡು ಎಂದು ಬೇಡಿಕೋಳ್ಳೋಣ.
*****
ಹೊಟ್ಟೆಯೊಂದರ ರಗಳೆ ಸಾಲದೆಂದೋನೋ ವಿಧಿ |
ಹೊಟ್ಟೆ ಕಿಚ್ಚಿನ ಕಿಡಿಯ ನಟ್ಟಿಹನು ನರನೋಳ್ ||
ಹೊಟ್ಟೆತುಂಬಿದ ತೋಳ ಮಲಗೀತು|
ನೀಂ ಪರರ ದಿಟ್ಟಿಸುತ ಕರುಬುವೆಯೋ ಮಂಕುತಿಮ್ಮ||
ಮಾನವನಿಗೆ ದೇವರು ಹೊಟ್ಟೆಯನ್ನು ಕೊಟ್ಟು ಅದನ್ನು ಹೊರೆಯಲು ನಾನಾ ವಿಧವಾದ ವೇಶಗಳನ್ನು ಹಾಕಿ ಉದರ ನಿಮಿತ್ತಂ ಬಹುಕೃತ ವೇಶಂ ಎಂದು ಬಗೆಬಗೆಯ ಅವತಾರಗಳನ್ನು ಎತ್ತಿ ಉದರ ಪೋಷಣೆಗೆ ಒಳಗಾಗುತ್ತಾನೆ. ಹಾಗಾಗಿಯೇ ದಾಸರು ಎಲ್ಲರೂ ಮಾಡವುದು ಹೊಟ್ಟೆಗಾಗಿ ಮತ್ತು ತುತ್ತು ಹಿಟ್ಟಿಗಾಗಿ ಎಂದು ಹೇಳಿದ್ದು. ಶರೀರವನ್ನು ಪೋಷಣೆ ಮಾಡಲು ಆಹಾರ ಅತ್ಯವಶ್ಯಕ ಮತ್ತು ಅನಿವಾರ್ಯ. ಆದರೆ ದೇವರ ಲೀಲೇ ಇಂಥ ವಿಚಿತ್ರ. ಹೊಟ್ಟೆಯ ಜೊತೆಗೆ ಹೊಟ್ಟೆಯ ಕಿಚ್ಚನ್ನು ಮನವನಲ್ಲಿ ಇಟ್ಟುಬಿಟ್ಟ. ಹೇಗಾದರು ಹಸಿವನ್ನು ತಣಿಸಿ ಬಿಡಬಹುದು ಆದರೆ ಹೊಟ್ಟೆಕಿಚನ್ನು ತಣಿಸಲು ದೇವರಿಂದಲು ಸಾಧ್ಯವಿಲ್ಲ. ಯಾವಾಗಲು ಅಸಹನೆಯಿಂದ ಅಸಹಾಯಕೆಯಿಂದ ಮನಸಲ್ಲೇ ವಿಷವಾಗಿ ಇಟ್ಟಿಕೊಂಡು ಇನ್ನೊಬ್ಬರನ್ನು ನೋಡಿ ತನ್ನ ಸುಖ ಸಂತೋಷ ಗಳನ್ನು ಬಿಟ್ಟು ಬದುಕಿರುತ್ತಾನೆ. ಜೀವಮಾನವೆಲ್ಲ ಬೇರೆಯವರನ್ನು ನೋಡಿ ಕರುಬುತ್ತ ತನ್ನ ಸುಖ ಸಂತೋಷವನ್ನು ಕಳೆದುಕೊಳ್ಳುತ್ತಾನೆ.
*****
–ಜಗದೀಶ್ ಅಚ್ಚುತರಾವ್