ಓಯಸಿಸ್: ನಿನಾದ (ಭಾಗ 4)

ಇಲ್ಲಿಯವರೆಗೆ

ಇತ್ತ ಟೀಂ ಲೀಡರ್ ಹಂಜ್ಹಾ.. ನಿಗೆ ಮೈ ಪರಚಿ ಕೊಳ್ಳುವಂತೆ ಆಯಿತು. ಒಂದು ದಿನ ಸಮಯ ನೋಡಿ ಹೇಳಿ ಬಿಟ್ಟೆ. ನೋಡು ನಾನು  ಎಲ್ಲಿಯೂ ಸಲ್ಲುವೆ. ಹೀಗಾಗಿ ಮಾತ್ರ ನನ್ನ ಇಲ್ಲಿ ವಾಪಸು ಕರೆದರು. ನಿನಗೆ ನೀನ್ ಹೇಳಿದ್ದು  ನೆನಪಿದೆಯ??? ನೀ ಮಾತ್ರ ಇಲ್ಲೇ ಇರು… ಅಂದಾಗ ಅವನ ಮುಖ ನೋಡಬೇಕಿತ್ತು. ಆಗ ನಿನಾದ ೪ ವರ್ಷದ ಕೆಳಗಿನ ಒಂದು ದಿನದ ಕಹಿ ಘಟನೆ ಹೇಳಿದಳು. ಒಂದು ದಿನ ಶುಕ್ರವಾರ, ಮದ್ಯನ್ನ ಸರಿ ಸುಮಾರು ೨ ಘಂಟೆ ಆವಾ ನಿಶಾಂತ್ ಗೆ ಫೋನ್ ಮಾಡಿ ಆಫೀಸಿಗೆ ಹೋಗು, ಕೆಲವು ಫೈಲ್ ಮೈ ಲ್  ಮಾಡು ಅಂದ. ನಾನು ಯಾವತ್ತು ಸಿನಿಮಾ ನೋದದವಳು ಅಂದು ನಾನು ನಿಶಾಂತ್ ಆಕಾಶ್ ಕನ್ನಡ ಫಿಲಂ ನೋಡ್ತಾ ಇದ್ದೆವು. ನಂಗೆ ತುಂಬ ಸಿಟ್ಟು ಬಂತು ಅಷ್ಟು ಕೆಲಸ ಮಾಡಬೇಕು ಅಂತ ಇದ್ರೆ  ಹೋಗ್ಬೇಕು, ತನ್ನ ಹತ್ರ ಕಾರ್ ಇದೆ ಎಲ್ಲಾ  ಇದೆ. ಆದ್ರೆ ನಿಶಾಂತ್ ಹತ್ರ ಹೋಗೋಕೆ ವ್ಯವಸ್ತೆ ಇಲ್ಲ. ಅಂತ ಗೊತ್ತಿದ್ರೂ ಹೀಗೆ ಮಾಡಿದ,ಅವನಿಗೆ ಮಾತ್ರ ಹೆಂಡತಿ, ಮಕ್ಕಳು… ಉಳಿದೊರೆಲ್ಲ…  ಮಾತು ತಡೆದು ಕೊಂಡಳು ನಿನಾದ… ಜೈನ್… ನೀನು ನಿಜಕ್ಕೂ ಸಮರ್ಥ… ನೋಡು ಇನ್ನು ನಿನ್ನ ನೋಡಿ ದಿನ ದಿನ ಉರಿದು ಕೊಳ್ತಾನೆ, ಈ ಆತ್ಮ ತೃಪ್ತಿ ಒಂದೇ ನಂಗೆ ಸಾಕು. ಅಂದು ಮೇಲೆದ್ದಳು. ಸರಿ ಇವತ್ತು ಏನೋ ಮಾಡಿ ದೀನಿ ಸರಿಯಾಗಿಲ್ಲ ಅಂದ್ರೆ ಸುಮ್ನೆ ಇದ್ದು ಬಿಡು ಬೈಕೊಬೇಡ ಪ್ಲೀಸ್… 

ಚಪಾತಿ ಅಲೂ ಪಲ್ಯ ಕೊಟ್ಟಳು.. ಚೆನಾಗಿದೆ ಅಂದು ತಿಂದ ಆಮೇಲೆ ಸಣ್ಣ ಬೌಲ್ ನಲ್ಲಿ  ಹಯಗ್ರೀವ ತಂದು ಕೊಟ್ಟಳು. ತಿಂದು ನೋಡಿ ಇದು ಹೊಸ ಸ್ವೀಟ್ ಇಷ್ಟ ಆಯಿತು ಯಾವುದರಲ್ಲಿ ಮಾಡಿದೆ ಅಂದ. ಅದೆಲ್ಲ ನಿಂಗೆ ಯಾಕೆ ಇಷ್ಟ ಆಯಿತೋ ಇಲ್ವೋ ಅಷ್ಟೇ.. "ಅಯ್ಯೋ ನಂಗೆ ಸ್ವೀಟ್ ಅಂದ್ರೆ ಪ್ರಾಣ.. ಸರಿ ತಿನ್ನು ಹಾಗಿದ್ರೆ ಅಂದು ನಿನಾದ ಮತ್ತೊಮ್ಮೆ ಬಡಿಸಿದಳು. ನಿಶಾಂತ್ ನೂ ಸರಿ ಮೆದ್ದು ಮೇಲೆದ್ದ. ನಿಂಗೆ ಕುಡಿಯೋಕೆ ಏನು ಮಾಡಿಕೊಡಲಿ ಅಂದು ಕೇಳಿದ ನಿನಾದಳಿಗೆ ಸಿಕ್ಕ ಉತ್ತರ… ನಾ ಮೊದಲ ಬಾರಿ ಬಂದಾಗ ಮಾಡಿಕೊಟ್ಟೆ ಅಲ್ವಾ ಅದೇ ಕೊಡು ಅಂತ ಮೊದಲ ಸಲ ತನ್ನ ಆಯಿಕೆ ಮುಂದೆ ಇಟ್ಟ. ಸರಿ ಅಂದು ಬಾದಾಮಿ ಹಾಲು ಕೊಟ್ಟಳು. ಅದನ್ನು ಕುಡಿದು ಇದು ನೀನು ಊರಿಂದ ತಂದಿದ್ದಾ ? ಅಂತ ಪ್ರಶ್ನೆ.. ಇಲ್ವಲ್ಲ ಇಲ್ಲೇ ಸೂಪರ್ ಮಾರ್ಕೆಟ್ನಲ್ಲಿ ಸಿಗುತ್ತೆ ಅಂದ ನಿನಾದ ಹಿಂದಿನ ದಿನ ಒಡೆದ ಪ್ಯಾಕೆಟ್ ತೋರಿಸಿ ಹೇಳಿದಳು. ನೋಡು ಇದೆ ಅದು… ಮಾಡೋದು ಹ್ಯಾಗೆ ? ಹಾಲು ಬಿಸಿ ಮಾಡು ಈ ಪೌಡರ್ ೨ ಚಮಚ ಹಾಕು ಕಲಕು.. ನಿಂಗೆ ಬದಾಮ್  ಹಾಲು ರೆಡಿ.. ಥ್ಯಾಂಕ್ಸ್ ನಿನಾದ ಇನ್ನು ಅದನ್ನೇ ಮಾಡಿ ಕುಡಿವೆ. ತುಂಬಾ ಇಷ್ಟ ಆಯಿತು. 

ನಿನಾದ ಮತ್ತೆ ಅಡುಗೆ ಮನೆ ಹೊಕ್ಕಾಗ ಹಿಂದೆಯೇ  ಬಂದು, ನಿನಾದ.. ಸ್ವೀಟ್ ಜಾಸ್ತಿ ಇದೆಯಾ..?? ಹೂ ೦ ಇದೆ ಯಾಕೆ ? ಅಂದಳು ಸ್ವಲ್ಪ ಪ್ಯಾಕ್ ಮಾಡಿ ಕೊಡುವೆಯಾ ಅಂದಾಗ ಸರಿ ಒಂದು ಡಬ್ಬ ತೆಗೆದು ಇದ್ರಲ್ಲಿ ಸಾಕಾ ಅಂದಳು.. ಅಯ್ಯೋ ಅಷ್ಟು ಬೇಡ ಸ್ವಲ್ಪ ಸಾಕು ಅಂದರೂ ಕೇಳದೆ ಸ್ವಲ್ಪ ಜಾಸ್ತಿಯೇ ತುಂಬಿ ಕೊಟ್ಟಳು. ಇತ್ತ ನಿಶಾಂತ್ ನೋಡು ಇದು ನಿನ್ನ ತಂಗಿ ಮನೆ ಅಂತ ತಿಳಿದು ಕೊ.. ಅವಳಿಗೊಂದು ಅಣ್ಣ ಇಲ್ಲ ನಿನಗೊಂದು ತಂಗಿ ಇಲ್ಲ.. ಅಂದ.. ಅದೇ ಸಿಕ್ಕ ಅವಕಾಶ ಅಂದು ಲೋ ಜೈನ್ ಇನ್ನು ಈ ತಂಗಿ ಕಾಟ ಅನುಭವಿಸು.. ಇದು ನಿನ್ನ  ಪಿರಿ ಪಿರಿ ತಂಗಿ, ಸೋಮಾರಿ ಬೆಕ್ಕು ಆಯಿತಲ್ಲಾ ಇನ್ನು ಕೈ ಕುಯಿ ಅಂದ್ರೆ ಜಾಗ್ರತೆ ಅಂದು ಗದರಿದಳು. ಅದೆಲ್ಲಾ ಇರಲಿ ಹಿಂದೊಮ್ಮೆ ನೀನು ನನ್ನ ಥೈರಾಯಿಡ್ ಗ್ರಂಥಿಯ ಸ್ಯಾಂಪಲ್ ಬಯಾಪ್ಸಿ ಗೆ ಹೋಗಿದೆ ಅಂದಿದ್ದೆ ಆಮೇಲೆ ಏನೋನೋ ಆಗಿ  ಹೋಗಿ ನನಗೋ ಕೇಳೋಕೆ ಆಗ್ಲೇ ಇಲ್ಲ. ಏನಾಯಿತು ಬಯಾಪ್ಸಿ ರಿಪೋರ್ಟ್? ಓ ಅದಾ ನಿಮಗೆ ಹೇಳಲಿಲ್ಲ… ಅದು ಥೈರಾಯಿಡ್ ಕ್ಯಾನ್ಸರ್ !! ಅದಿಕ್ಕೆ ನಾ ಎರಡನೇ ಬಾರಿ ಊರಿಗೆ ಹೋಗಿ ಇನ್ನೊಂದು ಥೈರಾಯಿಡ್ ಗ್ರಂಥಿಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಸಿ ಹಾಕಿ ಕೊಂಡು  ಬಂದೆ. ಆವಾ ಏನೂ ಆಗಿಲ್ಲದೇ ಇದ್ದ ಹಾಗೆ ಹೇಳಿದ ಆದರೆ ನಿನಾದಳಿಗೆ ಏನು ಕೇಳ್ತಾ ಇಲ್ಲ… ಕೈಯಲ್ಲಿ ಇದ್ದ ಬೌಲ್ ಜಾರಿ ಬಿದ್ದಿದ್ದು ಗೊತ್ತೇ ಆಗ್ಲಿಲ್ಲ. ನಿಂತಲ್ಲೇ ಕೈಕಾಲು ಅಲುಗಾಡದೆ ನಿಂತೇ ಇದ್ದಳು. ಜೈನ್ ಏಯ್ ನಿನಾದ ಎನಿತು ಸದ್ದೇ ಇಲ್ಲ ಅಂದ್ರು  ಮೈಯೆಲ್ಲ ಬೆವರುತ್ತಿತ್ತು. ಹೃದಯ ಹಿಂದೆಂದೂ ಇಷ್ಟು ಜೋರು ಬಡಿದು ಕೊಲ್ಲದಶ್ತು ಜೋರು ಬಡಿದು ಕೊಳ್ಳುತ್ತಾ ಇತ್ತು. ಇತ್ತ ನಿಶಾಂತ್ ಕೂಡ ನಿಶಬ್ದ. 
 ಏಯ್ ನಿಮಗೆ ಏನಾಯಿತು?? ನಾ ಸರಿ ಇದ್ದೀನಿ ನಂಗೆ ಏನೂ ಆಗಿಲ್ಲ ಅಂತ ಕೂಗಿ ಹೇಳಿಕೊಂಡ ಮೇಲೆ ನಿಶಾಂತ್ ಚೇತರಿಸಿಕೊಂಡ. ನಿನಾದ ಗರ ಬಡಿದವಳಂತೆ ಇದ್ದಳು. ನೋಡು ನಿನಾದ ನಾನು ಸರಿ ಇದ್ದೇನೆ ಏನು ಆಗಿಲ್ಲ ನಂಗೆ.. ಆವಾ ಹೇಳ್ತಾನೆ ಇದ್ದ. ನಿನಾದಾಗೆ ಅರಗಿಸಿಕೊಳ್ಳೋಕೆ ಆಗ್ತಾ ಇಲ್ಲ. 

ನೋಡೋಣ  ಒಮ್ಮೆ  ಹೋಗೋಣ.. ಅಂದು ಪಿರಿ ಪಿರಿ ಶುರು ಮಾಡಿದ. ಸರಿ ಹೋಗೋಣ ಅಂದು ಹೊರಗೆ  ಆಯಿತು. ನಿನಾದ ಮಾತ್ರ ಯಾವ ಇಹ ಲೋಕದ ಗೊಡವೆಯಲ್ಲಿ  ಇರಲಿಲ್ಲ. ಬರೀ ಅವಳ ನೆನಪು ಗತ ಕಾಲಕ್ಕೆ ಓಡಿತು. ಅಬ್ಬಾ ಯಾವ ಸಮಯದಲ್ಲಿ ಆವಾ ಸಹಾಯ ಮಾಡಬಲ್ಲ ಅಂತ ಅನ್ನಿಸಿತ್ತೋ… ನಂಗೆ  ಬೇಡ ತೆಗೆದು ಕೊಂಡಿದ್ದ ಹಣ ಹೇಗೂ ಅಕೌಂಟ್ನಲ್ಲೇ  ಇದೆ. ನಾ ಸೈಟ್ ತೊಗಳ್ಳದೀ  ಇದ್ರೂ ಅಡ್ಡಿ ಇಲ್ಲ, ಮನೆ ಕಟ್ಟದೆ ಇದ್ರೂ ಅಡ್ಡಿ ಇಲ್ಲ. ಒಮ್ಮೆ ತೆಗೆದು ಕೊಂಡಿದ್ದಷ್ಟನ್ನು ವಾಪಸು ಮಡಿ ಬಿಡೋಣ ಅಂದು ಮನ  ಸಾರಿ ಸಾರಿ ಬೋರ್ಗರೆದು ಹೇಳುತ್ತಿತ್ತು. ನಿಶಾಂತ್ & ಜೈನ್ ಯಾವುದೊ ಸುಧೀರ್ಗ ಮಾತು ಕತೆಯಲ್ಲಿ ಇದ್ದರು. ನಿನಾದ ಅವರ ಹಿಂದೆ ಹೆಸರಿಗೆ ಇದ್ದಳು. ಮನವೆಲ್ಲಾ ಪ್ರಕ್ಷುಬ್ದ ಸಾಗರ. ತನ್ನದೇ ಜೀವನ ನಶ್ವರ ಇದ್ದಾಗ ಹಿಂದೂ ಮುಂದು ನೋಡದೆ ಕೇಳಿದಷ್ಟು ಮೊಗೆದು ಕೊಟ್ಟ. ಎಂತಹ ಮನಸ್ಸು ಅವನದ್ದು ? ಎಲ್ಲರೂ ನಾನು ನನ್ನದು ಎಂದು ಹಾರಾಡುವ ಸಮಯದಲ್ಲಿ ಕೇವಲ ಒಂದು ವರ್ಷ ಜೊತೆಗೆ ಕೆಲಸ ಮಾಡಿದ ಸಹುದ್ಯೋಗಿಗೆ.. ನಿನಾದಳ ಯೋಚನೆ ತುದಿ ಮೊದಲು ಇಲ್ಲದಂತೆ ಸಾಗಿತ್ತು. ಮೊದಲ ಬಾರಿಗೆ ನೋಡಿದ ಅದೇ ಜೈನ್… ಇವತ್ತು ಇಲ್ಲ ಅವನಿಗೆ ಏನು ಆಗಿಲ್ಲ… ಉಹೂ೦ ಅವನಿಗೆ ಏನು ಆಗಿಲ್ಲ ಸರಿ ಇದ್ದಾನೆ ಅವ…. ಹೀಗೆ ಮೌನವಾಗಿ ಮಾತನಾಡಿಕೊಳ್ಳುತ್ತ ಇದ್ದವಳಿಗೆ.. ನಿನಾದ… ಇನ್ನು ಯೋಚಿಸಿದು ಸಾಕು ಹೊರಡೋಣವಾ ಅಂದು ಹೇಳಿದ ಜೈನ ನ ದ್ವನಿ ವಾಸ್ತವಕ್ಕೆ ಮರಳಿಸಿತು. 

ಇನ್ನು ಹೊರಡುವೆ ನಾನು ಅಂದಾಗ ಜೈನ್ ನಿನಗೆಂದು ಪ್ಯಾಕ್ ಮಾಡಿದ ಸ್ವೀಟ್ ಮನೆಯಲ್ಲಿ ಇದೆ ಅಲ್ವಾ ? ಮನೆಗೆ ಬಂದು ಅದನ್ನು ಕೊಂಡು ಹೋಗು.. ನೋಡು ಇಲ್ಲಿ ವರೆಗೆ ನಾನು ಯಾರಿಗೂ ಹೀಗೆ ಹೇಳಿಲ್ಲ ನಿಂಗೆ.. ಯಾವಾಗ ಈ ಪರಿಸರಕ್ಕೆ ಬರಬೇಕು ಅನ್ನಿಸುತ್ತೊ ಹೇಳು ಯಾವಾಗ ಬೇಕಿದ್ರೂ ಬಾ.. ಕಳೆದ ಸಲ ಬಂದವನಿಗೆ ನನ್ನ ಊರಿಗೆ ಹೋದಂತೆ ಆಯಿತು ಅಂದೇ ಅಲ್ವ..?? ಹೌದು ನಾನೇ ಹೇಳ್ತಾ ಇದ್ದೀನಿ..ಯವಗ ನಿನ್ನೂರಿಗೆ ಹೋಗ್ಬೇಕು ಅನಿಸುತ್ತೋ ಇಲ್ಲಿಗೆ ಬಾ.. ನಿಂಗೆ ನನ್ನ ಮನೆಗೆ ಸದಾ ಸ್ವಾಗತ. ಒಂದು ಮುಗುಳ್ನಗೆ ಅಷ್ಟೇ ಉತ್ತರ. ನಿಶಾಂತ್  "ನೋಡು ಅವಳು ನಿನ್ನ ಆಹ್ವಾನಿಸಿದ ಮೇಲೆ ನನ್ನ ಯಾವ್ ಅಭ್ಯಂತರ ಇಲ್ಲ. ಅವಳಿಗೆ ನೀನು ಬರೋದು ಅಡ್ಡಿ ಇಲ್ಲ ಅಂದ ಮೇಲೆ ನನ್ನ ಕಡೆಯಿಂದ ಸದಾ ಸ್ವಾಗತ. ಇದಕ್ಕೆಲ್ಲಾ ಜೈನ್ ಒಂದೇ ಉತ್ತರ ಕೊಟ್ಟ,  ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. ನಂಗೆ ಬರಬೇಕು ಅನ್ನಿಸಿದಾಗ ತೀರಾ ಒಂಟಿ ಅನ್ನಿಸಿದಾಗ ನಾನು ಬರುವೆ ಅಂದ. ಅಂತೂ ಕೊಟ್ಟ ಸಿಹಿ ತಿಂಡಿ ಹೊತ್ತು ಒಯ್ಯಿದ. ಆವಾ ಮನೆಗೆ ಬರುವಾಗ ಇದ್ದ ಸಂಭ್ರಮ ಹೋಗುವಾಗ ಇರಲೇ ಇಲ್ಲ. ಅವನನ್ನು ವಾಪಾಸು ಬಿಟ್ಟು ಬಂದು ಮನೆಗೆ ಬಂದಾಗ ಯಾಕೋ  ಮನೆಯಲ್ಲಿ ನೀರವ ಮೌನ. ನಿಶಾಂತ್ ಕೂಡ ಮೌನಿಯಾಗಿ ಹೋದ. ನಿನಾದ ಒಂದೇ ಸಮನೆ ನಿಟ್ಟುಸಿರು ಬಿಡುತ್ತಿದ್ದಳು. ಅಷ್ಟೇ ಮಾತಿಲ್ಲ ಕತೆಯಿಲ್ಲ. ಅದರೂ ಮೌನ ಮುರಿದು ನಿಶಾಂತ್ ಒಂದು ಮಾತು.. ಜೈನ ಕೊಟ್ಟ ಹಣ ವಾಪಾಸ್ ಕೊಡೋಣ ಅದು ಬೇಡವೇ ಬೇಡ ಅಂದಳು. ಹೌದು ನಾನು ಅದೇ ಯೋಚಿಸ್ತಾ ಇದ್ದೆ ಅದು ಈಗ ಇಂಡಿಯನ್ ಅಕೌಂಟ್ ನಲ್ಲಿದೆ. ಅವನ ಇಂಡಿಯಾ ಅಕೌಂಟ್ ಕೇಳಿ ಅಲ್ಲಿ ಹಾಕಿ ಬಿಡೋಣ ಅನ್ದ. ಆದರೆ ಈಗ ಸಮಸ್ಯೆ ಇಂಡಿಯಾ ಅಕೌಂಟ್ ನಂಬರ್ ಕೇಳೋದು ಹೇಗೆ ? 

ಮಾರನೆ ದಿನ ಮೊದಲು ನಿನಾದ ಮಾಡಿದ ಕೆಲಸ, ಜೈನ್ ನ ಆಫೀಸ್ ಗೆ ಫೋನ್ ಮಾಡಿ, ನಿನ್ನ ಇಂಡಿಯಾ ಬ್ಯಾಂಕ್ ಅಕೌಂಟ್ ನಂಬರ್ ಎಷ್ಟು ? ಅಂತ ಕೇಳಿದ್ದು. ಆದರೆ ಅವಾ.. ಹೇಯ್ ನಿನಾದ ನನಗೇನು ಆಗೋಲ್ಲ ನೀ ಹೀಗೆ ಮಾಡಿದ್ರೆ ನಂಗೆ ಬೇಜಾರ್ ಆಗುತ್ತೆ. ನಾನು ಎಲ್ಲ ವಿಧದಲ್ಲಿಯೂ ಯೋಚಿಸಿ ನಿರ್ಧರಿಸಿ ಕೊಟ್ಟಿರುವೆ ಇನ್ನು ಹಿಂದೆ ಪಡೆಯುವ ಮಾತು ಇಲ್ಲ. ನಿಶಾಂತ್ ಹೇಳಿದಂತೆ ಒಂದು ವರ್ಷಕ್ಕೆ ಎಲ್ಲ ಮುಗಿಯುತ್ತೆ. ಹಾಗೇ ಆಗ್ಲಿ ನೀ ಸುಮ್ಮನೆ ಇರು ಅಂದು ನಿನಾದಳನ್ನು ಸುಮ್ಮನಾಗಿಸಿದ. ನಿನಾದ ಮತ್ತೆ ನಿಶಾಂತ್ ಜೊತೆ ಕಿರಿ ಪಿರಿ ಶುರು ಮಾಡಿದಳು. 
 

ನಂಗೆ ಬೇಡವೇ ಅನ್ನಿಸ್ತಾ ಇದೆ. ಯಾಕೋ ಅಪಶೃತಿ ನನ್ನ  ಮೂಡ್ತಾ ಇದೆ. ಏನು ಮಾಡೋದು? ಬೇರೆ ಯಾವ ಮೂಲ ಕೂಡಾ ಇಲ್ಲ ಏನು ಮಾಡೋಣ ? ನಂಗೆ ಜಾಗವೂ ಬೇಡ ಮನೆಯೂ ಬೇಡ.  ವಾಪಾಸು ಕೊಡು ಅಷ್ಟೇ… ಸರಿ ಜೈನ್ ಅವನ ಭಾರತದ ಅಕೌಂಟ್ ನಂಬರ್ ಕೊಟ್ಟರೆ ಮಾತ್ರ ಟ್ರಾನ್ಸ್ಫರ್ ಮಾಡಲು ಸಾಧ್ಯ. ಇನ್ನೂ  ನೋಡುವೆ. ನಿಂಗೆ ಬೇಡವೇ ಅಂದು ಇದ್ದರೆ ನೋಡೋಣ ಆವಾ ಒಪ್ಪಿದರೆ ಹಣ ಹಿಂತಿರುಗಿಸೋಣ ಎಂದು ಮನ ಒಲಿಸಿದ. ಎರಡು ಮೂರು ದಿನ ಜೈನ ಗೆ ಫೋನ್ ಮಾಡಿ ಕಿರ್ ಕಿರಿ ಮಾಡಿ ಕೊನೆಯಲ್ಲಿ ಭರತ ವಾಕ್ಯ ನಿನ್ನ ಭಾರತದ ಅಕೌಂಟ್ ನಂಬರ್ ಕೊಡು. ಏಯ್ ನಿನಾದ ನಿಂಗೆ ಏನಾಗಿದೆ? ಇಟ್ಟ ಹೆಜ್ಜೆ ಹಿಂದೆ ತೆಗೆಯೊದು ಬೇಡ ಎಲ್ಲಾ ಒಳ್ಳೆಯದಾಗುತ್ತೆ. ನಂಗೆ ಏನು ಆಗೋಲ್ಲ ನೀ ಹೇಗೆಲ್ಲ ಆಡಬೇಡ. ತೆಪ್ಪಗೆ ಇರು. ನೀ ಏನೇ ಮಾಡಿದರೂ ನಾ ಈಗ ಹಣ ವಾಪಾಸ್ ತೊಗೊಳಲ್ಲ. ಇದೇ  ನನ್ನ ಕೊನೆಯ ನಿರ್ಧಾರ… ಅಂತ ಹೇಳಿದ ಮೇಲೆ ನಿನಾದ ಅನಿವಾರ್ಯವಾಗಿ ತೆಪ್ಪಗೆ ಕುಳಿತುಕೊಳ್ಳಬೇಕಾಯಿತು. 

ಇದಾಗಿ ವಾರ ಕಳೆದಾಗ ಲ್ಯಾಂಡ್ ಲಾರ್ಡ್ ಕಡೆಯಿಂದ ಫೋನ್ ದಾಖಲೆಗಳು ಎಲ್ಲ ಸಿದ್ದವಾಗಿವೆ ಯಾವಾಗ ಬರುವಿರಿ ? ಸರಿ  ನವೆಂಬೆರ್ ತಿಂಗಳ ಕೊನೆಯಲ್ಲಿ ಬರುವೆವು ಎಂದು ತಿಳಿಸಿದ್ದೂ ಆಯಿತು. ಇತ್ತ ಕೊಡಬೇಕಿದ್ದ ಹಣವನ್ನು ಬ್ಯಾಂಕ್ ಟ್ರಾನ್ಸ್ಫರ್  ಮೂಲಕ ಕೊಡುವುದು ಎಂದು ನಿರ್ಧರಿಸಿ ಮೊತ್ತವನ್ನೂ ತಲುಪಿಸಿದ್ದೂ ಆಯಿತು. ಎಲ್ಲ ಮುಗಿದ ಮೇಲೆ ನಿಶಾಂತ್ ನ ಕಚೇರಿಯಲ್ಲಿ ಅವನ ವೀಸಾ ವಿಷಯ ದುತ್ತ ಎದುರು ಬಂತು. ವೀಸಾ ಪ್ರಕ್ರಿಯೆ ಮೊದಲು ಸೆಕ್ಯೂರಿಟಿ ಕ್ಲಿಯರ್ ಎನ್ಸೆ  ಸಿಕ್ಕರೆ ಮಾತ್ರ ವೀಸಾ.. ಇಲ್ಲದಿದ್ದರೆ ಕೆಲಸ ದಿಂದ ಹೊರ ಬೀಳ ಬೇಕು. ನಿಶಾಂತ್ ಗೆ ಸೆಕ್ಯೂರಿಟಿ ಕ್ಲಿಯರ್ ಎನ್ಸೆ ಸಿಗಲಿಲ್ಲ. ಮೂರು ಬಾರಿ ಕಳಿಸಿದರೂ ಹೋದ ಹಾಗೆ ದಾಖಲೆಗಳು  ವಾಪಾಸು ಬಂದವು. ನಿನಾದಳಿಗೆ ಜೀವನದ ದೊಡ್ಡ ಪರ್ವ ಕಾಲ ಇದು. ಯಾಕೆ ಹೇಗಾಯಿತು. ನಿಶಂಗೆ ಯಾವ ಬ್ಯಾಂಕ್ ಗಳಲ್ಲಿ ಸಾಲ ಕ್ರೆಡಿಟ್ ಕಾರ್ಡುಗಳು ಇಲ್ಲ ಆದರೂ ಹೀಗೇಕೆ ಆಯಿತು ಅನ್ನೋದು ಬಗೆಹರಿಸಲಾಗದ ಕಗ್ಗಂಟಾಯಿತು. ಈ ಸಮಯದಲ್ಲಿ ನಿನಾದಳಿಗೆ ಈ ಸಮಸ್ಯೆ ಯಿಂದ ಹೊರ ಬರುವ ದಾರಿ ಹುಡುಕಲು ದಿನದ ೨೪ ಘಂಟೆ ಸಾಲದೇ ಹೊಯಿತು. ಹೀಗಾಗಿ ವಾರಾಂತ್ಯ ಕ್ಕೆ ಜೈನ್  ನ ಕರೆಯುವ  ಗೋಜಿಗೆ  ಹೋಗಲಿಲ್ಲ. 

ಒಂದು ಗುರುವಾರ ಸಂಜೆ ಜೈನ್  ಕರೆ ಮಾಡಿ "ನಿನಾದ ನಾಳೆ ಮಧ್ಯನ್ನ ಎಲ್ಲಾದ್ರೂ ಹೋಗೋ ಯೋಚನೆ ಇದೆಯಾ ? ಅಂತ ಕೇಳಿದ. ಇಲ್ಲ ಎಲ್ಲಿ ಹೋಗೋಲ್ಲ ಯಾಕೆ ? ಅಂದು ಹೇಳಿದಾಗ ನಾನು ನಾಳೆ ನಿಮ್ಮ ಮನೆಗೆ ಬರುವೆ  ಅಂದ. ಬೇಡ ನೀನು ಬರೋದು ಬೇಡ ಅನ್ನೋಕೆ ನಿನಾದಳಿಗೆ ಬಾಯಿ ಇರಲಿಲ್ಲ. ನಿಶಾಂತ್ ಮನೆಗೆ ಬಂದ ಮೇಲೆ ಹೇಳಿದಳು ನಾಳೆ ಜೈನ್  ಮನೆಗೆ ಬರ್ತಾನಂತೆ….  ಅಯ್ಯೋ ರಾಮಾ.. ಹೇಳಿದೆ ಅಂದು ನಿನದಳಿಗೆ ಮರು ಪ್ರಶ್ನೆ. ನಾ ಏನು ಹೇಳಲಿಲ್ಲ ಸರಿ ಅಂದೆ. ನಿನ್ನ ನೋಡಿದ್ರೆ ಒಳ್ಳೆ ರೋಗದಿಂದ ಎದ್ದ ಹಾಗೆ ಇರುವೆ. ಆವಾ ಬಂದವನು ಸುಮ್ಮನೆ ಇರೋಲ್ಲ. ಸಾವಿರ ಪ್ರಶ್ನೆ ಕೇಳುವನು ಏನು ಮಾಡೋದು? ನಿನಾದ "ನಂಗೆ ಏನು ತೋಚುತ್ತಿಲ್ಲ" ಎಂದು ಮೌನದ ಮೊರೆ ಹೊಕ್ಕಳು. ಮುಂದಿನ ಗುರುವಾರ ಹೊರಡುವುದು ಎಂದು ನಿರ್ಧಾರವಾಗಿತ್ತು. ಊರಿಗೆ ಹೋಗುವ, ೮ ತಿಂಗಳ  ಬಳಿಕ ಅಮ್ಮನ ಮಡಿಲು ಸೇರುವ ಯಾವ ತವಕವೂ ಇರಲೇ ಇಲ್ಲ. 

ಜೈನ್ ಸುಮಾರು ೪ ಗಂಟೆಗೆ ಮನೆಗೆ ಬಂದ. ಆಗ ಚಳಿ ವಾತಾವರಣ ಸರಿ ಹೇಗೂ ಹೊರಗೆ ಚಳಿ ಇದೆ, ಅಂದು ನಿನಾದ ಜೈನ್ ಗೆ ಮೊದಲು ಬಾದಾಮಿ ಹಾಲು ಕೊಟ್ಟಳು. ಹ್ಯಾಗಿರುವೆ ? ಅದು ಕೇಳಿ ನಿನಾದ ಸುಮ್ಮನಾದಳು. ನಿಶಾಂತ್ ಅದೇನೋ ಆಫೀಸ್ ಕೆಲಸ ಮಾಡಿಕೊಂಡಿದ್ದ. ೫ ನಿಮಿಷ ಕೊಡು ಜೈನ್ ಮುಗಿಸಿ ಎದ್ದೇಳುವೆ ಅಂತ ಹೇಳಿದ. ಸಾಮಾನ್ಯ ಒಂದು ನಿಮಿಷ ಬಾಯಿ ಮುಚ್ಚಿ ಸುಮ್ಮನೆ ಕೂರದ ನಿನಾದ ಅಂದು ಸುಮಾರು ಹೊತ್ತಾದರೂ ಮಾತನಾಡುವ ಗೋಜಿಗೆ ಹೋಗಲಿಲ್ಲ. ಇತ್ತ ನಿಶಾಂತ್ ಕೆಲಸ ಮುಗಿಸಿ ಸೌಜನ್ಯಕ್ಕಾಗಿ ಮಾತನಾಡಿಸ ತೊಡಗಿದ. ಆವಾ ಮಾತ್ರ ನಿನಾದಳನ್ನೇ ಗುರಿ ಮಾಡಿ ನೋಡಿ "ಏನು ಹುಶರಿಲ್ವಾ ಯಾಕೆ ಹೀಗಾಗಿ ಬಿಟ್ಟೆ" ಅಂದಾಗ ನಿಶಾಂತ್ ನ ಕೆಲಸ ಈ ಸ್ಥಿತಿ ಇದು ಎಂದು ಹೇಳೋಕೆ ಬಾಯಾದರೂ ಎಲ್ಲಿತ್ತು ? ಏನು ಹೇಳದೆ ಮುಖದಲ್ಲಿ ಪೇಲವ ನಗೆ… 

ಇತ್ತ ನಿಶಾಂತ್ ಕೂಡ  ಮೌನವಾಗಿ ಕೂತಿದ್ದು ನೋಡಿ ಅವನಿಗೆ ಇನ್ನಷ್ಟು ಆತಂಕ… ಏನು ಏನಾಗಿದೆ ಇವರಿಬ್ಬರಿಗೆ….??? ಕೇಳಿ ಕೇಳಿ ಕೊನೆಗೆ ಸೋತು ಹೋದ. ಸರಿ ಹೊರಗೆ ಹೋಗೋಣ ಅಂತ ಹೊರಗೆ  ಮನೆ ಹೊರಗಿನ ಗಾರ್ಡನ್ ಗೆ ಹೋದರು. ಅಲ್ಲಿ ಹೋದರೂ ನಿನಾದಳ ವರ್ತನೆಯಲ್ಲಿ ಬದಲಾವಣೆ ಇಲ್ಲ. ನಿಶಾಂತ್  ಸ್ವಲ್ಪ ಚೇತರಿಸಿ ಕೊಂಡರೂ ಮತ್ತೆ ಮೌನಕ್ಕೆ ಮೊರೆ ಹೋಗಿದ್ದು ನೋಡಿ ಆತನಿಗೆ ಸಿಕ್ಕಾಪಟ್ಟೆ ಕಿರಿ ಕಿರಿ ಅನ್ನಿಸಿತು. ಕೊನೆಗೆ ತಡೆಯೋಕೆ ಆಗದೆ ಕೇಳಿದ. ಊರಿಗೆ ಯಾವಾಗ ಹೋಗೋದು ? ನಿನಾದ  ಮುಂದಿನ ಶುಕ್ರವಾರ ಅಂದಷ್ಟೇ ಹೇಳಿ ಸುಮ್ಮನಾದಳು. ಅದು ಮತ್ತಷ್ಟು ಗೊಂದಲಕ್ಕೆ ಈಡು ಮಾಡ್ತು ಅಯ್ಯಾ… ನಿಂಗೆ ಊರಿಗೆ ಹೋಗೋ ಸಂಬ್ರಮವೇ ಇಲ್ವಲ್ಲ…. ಅದೂ ಸುಮ್ನೆ ಹೋಗಿ ಬರೋದು ಅಲ್ಲ. ಜಾಗದ ಒಡತಿ ಆಗೋಕೆ ಹೋಗೋದು… ನೀನ್ಯಾವ ಮನಸ್ಥಿತಿಯವಳು???  ಏನು ಹೇಳೋ ಮನಸ್ಸೇ ಬರದೆ ನಿನಾದ  ಆಕಾಶದ ಕಡೆಗೆ ಶೂನ್ಯ ನಿಟ್ಟಿಸುತ್ತಾ ಕಣ್ಣೀರನ್ನು ತಡೆದು ಕೂತು ಬಿಟ್ಟಳು. ಆಗ ಆತನಿಗೆ ಏನು ಅನ್ನಿಸಿತೋ ?? ಇದೇ ಮೊದಲ ಸಲ ಇವಳು ಹೀಗಿರೋದು ಏನು ಜಗಳಾದ್ದೀರಾ?? ಏನು ಹೇಳೋದು  ಇಲ್ಲ ಏನು ಆಗಿಲ್ಲ ಅಂದ ನಿನಾದ. ಏನೋ..ನೀನು ಏನೇನೋ ಕೇಳ ಬೇಡ. ಅಂದು ಸುಮ್ಮನಾದರೂ ಆತ ಅಷ್ಟು ಸುಲಭದಲ್ಲಿ ಬಿಡುವವನು ಅಲ್ಲ. ಸಿಕ್ಕಪಟ್ಟೆ ಸೂಕ್ಷ್ಮ ಮತಿ. ನಿಶಾಂತ್ ಗೆ  ದು೦ಬಾಲು ಬಿದ್ದ.  ಬಾಯಿ ಬಿಡಲಿಲ್ಲ. ನಿನಾದಳಿಗೆ ಅವನನ್ನು ಅಲ್ಲಿಂದ ಬೇಗ ಕಳುಹಿಸಿ ಬಿಟ್ಟರೆ ಸಾಕಿತ್ತು. ಸರಿ ಹೊರಡೋಣ ನಿಂಗೆ ತಡ ಆಗುತ್ತೆ ಅಂತ ಹೊರಡೋಕೆ ರೆಡಿ ಆದಳು. 

"ನೀನು ಏನು ವಿಷಯ ಅಂತ ಹೇಳದೆ ನಾನು ಹೊರಡೋಲ್ಲ ಇಲ್ಲಿಂದ "ಅಂತ ನಿಷ್ಟುರವಾಗಿ ಹೇಳಿದಾಗ…. ಸೆಕ್ಯೂರಿಟಿ ಕ್ಲಿಯರೆನ್ಸ್ ಸಿಗಲಿಲ್ಲ….. ಇಷ್ಟೇ ಹೇಳಿದ ನಿನಾದಳಿಗೆ  ಮುಂದೆ ಹೇಳೋಕೆ ಶಬ್ದಗಳೇ ಸಿಗಲಿಲ್ಲ… ಬಹುಶಃ ಅವಳು  ಪದಗಳು ಸಿಗದೇ ನಿಶ್ಯಬ್ದ ವಾಗಿದ್ದು ಅದೇ ಮೊದಲು…. ಅವನ ಕಣ್ಣಂಚಿನಲಿ ಹನಿಯೊಂದು ಜಾರಿತ್ತು. ಅಷ್ಟು ಕೇಳಿ ಅವನು ಹೌಹಾರಿದ. ಮುಂದೆ ಉಳಿದ ವಿಶಯ ಎಲ್ಲವನ್ನೂ ನಿಶಾಂತ್  ಹೇಳಿದ ಮೇಲೆ "ಒಂದು ಮಾತು ನಂಗೆ ಹೇಳ್ಬೇಕು ಅಂತ ಅನ್ನಿಸಲಿಲ್ವಾ?? ಈ ಪಾಸ್ಪೋರ್ಟ್ ಒಮ್ಮೆ ಪೋಲಿಸ್ ಸ್ಟೇಷನ್ ಗೆ ಹೋದ್ರೆ ಅಲ್ಲಿಗೆ ಮುಗೀತು ಕತೆ. ಇನ್ನು ಯಾವ ಕಾರಣಕ್ಕೂ ಅಮೇರಿಕ ಲಂಡನ್, ಗೆ ಹೋಗೋ ಹಾಗೆ ಇಲ್ಲ. ನಿನಾದ ಕೂಡಲೇ  " ಅಯ್ಯೋ ಪುಣ್ಯಾತ್ಮ ನಂಗೆ ಅದೆಲ್ಲ ಆಸೆ ಇಲ್ಲ. ನೆಮ್ಮದಿ ಯಿಂದ ಬದುಕಿದ್ರೆ ಅಷ್ಟೇ ಸಾಕು." ಸರಿ ಬಿಡು… ಈಗ ಕೆಲಸ ಹುಡುಕ ಬೇಕು, ಮತ್ತೆ ವಾಪಸು  ಬರೋಕೆ ಮನಸ್ಸು ಒಪ್ಪುತ್ತಾ?? ನಿನಾದಳಿಗೆ ಅವನ ಮಾತು ಕೇಳಿ ಏನು ಹೇಳೋದು… ಏನು ಹೊಳೆಯಲೇ ಇಲ್ಲ ದೇವರೇ ಯಾವಸ್ತಿತಿ ತಂದು ಇಟ್ಟೆ….. ಇನ್ನು ನಿಶಾಂತ್ ಗೂ  ಮರಳಿ ಗೂಡಿಗೆ ಹೋಗೋ ಮನಸ್ಸು ಇರಲಿಲ್ಲ. ನೋಡೋಣ ಒಳ್ಳೆ ಆಫರ್ ಕೊಟ್ಟರೆ ಅಷ್ಟೇ ಬರುವೆ ಮೊದಲಿನಂತೆ ಅಂದ್ರೆ ಬೇಡ ಅಂದು ಮೌನವಹಿಸಿ ಕೂತು ಬಿಟ್ಟ. ಎಲ್ಲ ಹೇಳೋ ಗಲಾಟೆಯಲ್ಲಿ ಒಂದೂವರೆ ತಿಂಗಳಿನಿಂದ ವೇತನ ತಡೆ ಹಿಡಿದಿಡು ಬಾಯಲ್ಲಿ ಬಂದು ಹೋಯಿತು. ಹೇಳಿದ ಮೇಲೆ ಛೆ ಅನ್ನಿಸಿತು. ಆ ಕುಶ್ಗ್ರಮತಿ ೧೦೮ ಪ್ರಶ್ನೆ ಕೇಳೋಕೆ ಶುರು… ಮನೆ ಬಾಡಿಗೆ, ದಿನ ಹೇಗೆ ತೆಗೆದ್ರಿ? ಸಾಲದಕ್ಕೆ ನಂಗೆ ಕೊಡಬೇಕಿರೋ ಮೊತ್ತವನ್ನೂ ಹೇಳಿದ ದಿನದಂದೇ ತಲುಪಿಸಿದ್ದೀರಿ. ನಿನಾದಳ  ಮೇಲೆ ವಾಗ್ದಾಳಿಯೇ ಶುರು ಮಾಡಿ ಬಿಟ್ಟ. "ಇಷ್ಟೆಲ್ಲಾ ಆದರೂ ಒಂದು ಮಾತು ನಂಗೆ ಹೇಳಬೇಕು ಅಂತ ನಿಂಗೆ ಅನ್ನಿಸಲೇ ಇಲ್ಲ ಅಲ್ವಾ?? ನಾಡದ್ದು ಊರಿಗೆ ಹೋಗೋಕೆ ಇದೆ ಅಂತ ಹೇಳಿದೆ ಟಿಕೆಟ್ ಆದರೂ ಮಾಡಿದ್ದೀಯಾ? ಅಂದ. ಅದು ಮೊದಲೇ ಮಾಡಿ ಆಗಿದೆ ಅಂದು ನಿನಾದ ಹೇಳಿದರೂ. ಅವ ನಂಬಲು ತಯಾರಿಲ್ಲ. ಮನೆಗೆ ಬಾ ಎಲ್ಲ ತೋರಿಸುವೆ ಅಂದಮೇಲೆ ಸರಿ ಅಂದು ಸುಮ್ಮನಾದ. ಕೂಡಲೇ,ಊರಿಗೆ ಹೋಗೋವಾಗ ಊರಲ್ಲಿ ಖರ್ಚು ಇರುತ್ತೆ ಏನು ಮಾಡುವೆ ?? ಊರಿಗೆ ಹೋಗೋವಾಗ ಬರಿ ಕೈಯಲ್ಲಿ ಹೋಗುವೆಯ?? ಅಯ್ಯಬ್ಬ.. ನಿನಾದಳಿಗೆ ಸುಸ್ತಾಗಿ ಹೋಯಿತು. 

ಊರಿಗೆ ಹೋದಮೇಲೆ  ಅಮ್ಮ ಇದ್ದಾರೆ, ನಾನು ಕೂಡಿ ಇಟ್ಟಿದ್ದು ಸ್ವಲ್ಪ ಇದೆ ಅದು ಸಾಕು.  ಕೊಡಬೇಕಿದ್ದ ಬಾಕಿ ಹಣವನ್ನು ೯೫ % ಕೊಟ್ಟು ಮುಗಿಸಿದ್ದ ಕಾರಣ ಅಕೌಂಟ್ ನಲ್ಲಿ ಏನೂ ಉಳಿದಿದ್ರಲಿಲ್ಲ. ಆತನಿಗೆ ಏನು ಅನ್ನಿಸ್ತೋ ಗೊತ್ತಿಲ್ಲ. ಸಾಮಾನ್ಯವಾಗಿ ನಾನು ಇಷ್ಟು ಹಣ ಹಿಡ್ಕೊಂಡು ಓಡಾಡೊಲ್ಲ. ಬಹುಶ ದೇವರಿಗೆ ಗೊತ್ತಿತ್ತೋ ಏನೋ ?? ಸದ್ವಿನಿಯೋಗ ಆಗಲಿ ಅಂದು ಪರ್ಸ್ ಇಂದ AED.7000 /- (ಸುಮಾರು ರೂ ೧ ಲಕ್ಷದ ೫ ಸಾವಿನ ಅಂದಿನ ದರದಲ್ಲಿ ) ತೆಗೆದು ನಿನಾದಳ  ಕೈ ಗೆ ಇತ್ತ. ನಿನಾದ  ತೆಗೆದು ಕೊಳ್ಳಲಿಲ್ಲ." ಇನ್ನು ಎಷ್ಟು ಬೇಕು ಹೇಳು ನಾಳೆ ವ್ಯವಸ್ಥೆ ಮಾಡುವೆ " ನಿನಾದ ತೆಗೆದು ಕೊಳ್ಳಲು ನಿರಾಕರಿಸಿದಾಗ ನಿಶಾಂತ್ ಗೆ ಕೈಯಲ್ಲಿ ತುರುಕಿದ ಆದರೆ ಅವನೂ  ಕೂಡ ತೆಗೆದು ಕೊಳ್ಳಲಿಲ್ಲ. ಆತನಿಗೆ ತೀರ ವಿಚಿತ್ರ ಅನ್ನಿಸಿತು. ಕೊನೆಗೆ ಆತನ ಸಮಾಧಾನಕ್ಕೆ ನಿಶಾಂತ್  "ಇಂದು ಶುಕ್ರವಾರ ಕತ್ತಲಾಗೋ ಸಮಯ, ನಿನ್ನ ಮನಸು ದೊಡ್ಡದು. ಎತ್ತಿ ಕೊಡ್ತಾ ಇರುವೆ.. ನಾವು ಸಾಮಾನ್ಯವಾಗಿ ಶುಕ್ರವಾರ ಹಣ ಹೊರಗೆ ಕೊಡೋಲ್ಲ. ಈ ಹಣ ನಿನ್ನ ಬಳಿಯೇ ಇರಲಿ" ಎಂದು ಹೇಳಿದಾಗ ತೆಪ್ಪಗೆ ಕೂತ. ಸರಿ ಮನೆಗೆ ಹೋಗೋಣ ಅಂದು ಅವನೇ ಹೇಳಿದ ಮೇಲೆ ಎದ್ದು ಬಂದರು. ಆತನಿಗೆ ಸಿಹಿ ಅಂದ್ರೆ ತುಂಬಾ ಇಷ್ಟ! ನಿನಾದ ಆತನ ಇಷ್ಟದ ಸೆಮಿಗೆ ಖೀರು ಮಾಡಿಟ್ಟಿದ್ದಳು. ಇನ್ನು ಮಸಾಲೆ ದೋಸೆ ಅಂದ್ರೆ ಪ್ರಾಣ ಎಲ್ಲ  ತಯಾರಿ ಮಾಡಿ ಇಟ್ಟಿದ್ದಳು. ದೋಸೆ ಹೊಯ್ಯೋಕೆ ಹೋದ ಕೂಡ್ಲೇ ನಂಗೆ ಲ್ಯಾಪಿ ಬೇಕು ಅಂದ. ಸರಿ ಅಂದು ನಿಶಾಂತ್  ಕೊಟ್ಟಿದ್ದು ಆಯಿತು. ಏನೋ ಮಾಡುತ್ತಿದ್ದ. ನಿನಾದ  ದೋಸೆ ಹೊಯ್ದು ಬೌಲ್ ನಲ್ಲಿ ಖೀರು ಕೊಟ್ಟಳು. 

ನಿನಾದಳಿಗೆ  ಆಸಮಯದಲ್ಲಿ ಏನು ಸೇರುತ್ತಲೇ ಇರಲಿಲ್ಲ. ಬರಿ ಅನ್ನ ಮಜ್ಜಿಗೆ ಇಷ್ಟೇ.. ಆದರೆ ಆತ ಬಿಡಬೇಕಲ್ಲ ನಿಮಗೆಲ್ಲಿ ದೋಸೆ ಅಂದು ರಗಳೆ ಮಾಡಿ ಇಬ್ಬರನ್ನು ಇಷ್ಟ ಇಲ್ಲದೆ ಇದ್ರೂ ೧ ದೋಸೆ ತಿನ್ನುವಂತೆ ಪಟ್ಟು ಹಿಡಿದ. ನಿನಾದಳ  ಪೇಲವ ಮುಖ ಆತನಿಗೆ ಕಿರಿ ಕಿರಿ ಮಾಡಿತು. ಮೊದಲು ಮನೆಗೆ ಬಂದರೆ ಏನಾದ್ರು ವಿಷಯಕ್ಕೆ ಜಗಳಾಡದೆ ಕಲಿಸೋಳು ಅವಳಲ್ಲ , ಆದರೆ ಇಂದು ನಿನಾದಳ  ಮೌನ ಆತನಿಗೆ ಅಸಹನೀಯ !!!!!! "ಐದು ವರ್ಷದಲ್ಲಿ ಎಂದೂ ಕಾಣದ ಮುಖ ಇಂದು ಕಂಡೆ ನಂಗೆ ಈ ನಿನ್ನ ಮುಖ ಬೇಡ " ಇನ್ನು ಏನೇನೋ ಹೇಳ್ತಾ ಇದ್ದ. ನಿನಾದ  ಮತ್ತೆ ಶೂನ್ಯ ನಿಟ್ಟಿಸುತ್ತಾ ಕೂತಳು. ನಿಶಾಂತ್  ಕಣ್ಣಂಚಿನಲ್ಲಿ ನೀರಿತ್ತು. ನೋಡು ನೀನು ನಿರಾಶನಾಗಬೇಡ, ನಾನಿದೀನಿ ಏನಾದ್ರೂ ಮಾಡುವೆ. ಅಂತ ಭರವಸೆಯ ಮಾತು ಕೊಟ್ಟ. ಅಲ್ಲಿ ಆಗೋಲ್ಲ ಅಂದ್ರೆ ಹೇಳಿ ಬಿಡು ಕೂಡಲೇ..  ನಿನಾದ.. ನೀನು  ಯಾಕೆ ಹೀಗೆ ಇರುವೆ?  ನಿಂಗೆ ನನ್ನ ಮೇಲೆ  ಭರವಸೆ ಇಲ್ವಾ ? ನಾ ಹೇಳ್ತಾ ಇದ್ದೀನಿ ನಿನಾದ…. am with u always… whatever it is till my last breath am with u… ನಂಗೆ ಆ ಮಾತು ಆತನ ಬಾಯಲ್ಲಿ ಕೇಳೋದು ದೊಡ್ಡ ಆಘಾತ…. ಆತ ಒಂದು ವರ್ಷದಿಂದ ಒಬ್ಬ ಥೈರಾಯಿಡ್ ಕ್ಯಾನ್ಸರ್ ರೋಗಿ. ಇದು ಮೊದಲಿನ್ದವೂ ಗೊತ್ತಿತ್ತು.ಸುಮಾರೆಲ್ಲ ಸಮಾಧಾನ ಹೇಳಿಸುಮ್ಮರು ರಾತ್ರಿ ಹನ್ನೊಂದು ಘಂಟೆಗೆ  ಹೊರಟು ನಿಂತ. ಅವನನ್ನು ಕಳುಹಿಸಿ ಕೊಟ್ಟು ಬಂದು, ನಿನಾದ  & ನಿಶಾಂತ್  ದೇವರು ಯಾಕೆ ಇಂತಹ ಒಳ್ಳೆಯೋರಿಗೆ ಕಷ್ಟ ಕೊಡುತ್ತಾನೆ ಅಂತ ಜಿಜ್ಞಾಸೆ ಗೆ ಬಿದ್ದರು. 

ಸ್ವಲ್ಪ ಸಮಯ ಕಳೆದಾಗ ನಾನು ನನ್ನ ರೂಂ ತಲುಪಿದೆ ಅಂತ ಹೇಳೋಕೆ  ಮೊಬೈಲ್ ಗೆ ಕರೆ ಮಾಡಿದ. ಲೈನ್ ಕಟ್ ಮಾಡಿದ ನಿನಾದ  ಏನೋ  ಮೆಸೇಜ್ ಬಂದಿದೆ ಅಂತ ನೋಡಿದಾಗ  ದೊಡ್ಡ ಆಘಾತ 7000/- ನಿನಾದಳ  ಅಕೌಂಟ್ ಗೆ ಅವನ ಅಕೌಂಟ್ ಇಂದ ಬಂದಿತ್ತು. ಹಿಂದಕ್ಕೆ ಕರೆ ಮಾಡಿದ್ರೆ ಆತ ಸ್ವಿಚ್ ಆಫ್!!! ನಿಶಾಂತ್ ಗೆ  ಹೇಳಿದಾಗ ಗರ ಬಡಿದಂತೆ ಆಯಿತು. ಮಾರನೆ ದಿನ ಬೆಳಗ್ಗೆ ಎದ್ದು ಮೊದಲು ಆತನಿಗೆ ಫೋನ್ ಮಾಡಿ "ಇದು ಏನು ಮಾಡಿದ್ದು ನೀನು? ನಿಂಗೆ ತಲೆ ನೆಟ್ಟಗಿದೆ ಅಲ್ವಾ?? ಈಗಲೇ ಅದನ್ನು ವಾಪಾಸು ಮಾಡುತ್ತಿದ್ದೇನೆ. ಬಾಯಿ ಮುಚ್ಚಿ ಸುಮ್ಮನೆ ಇರು". ಆತ ' ನೋಡು ಅವಸರ ಬೇಡ, ಊರಿಗೆ ಹೋಗಿ ಬಂದು ಆಮೇಲೆ ನೋಡೋಣ, ಅಲ್ಲಿವರೆಗೆ ಇರಲಿ. ಊರಿಗೆ ಅಮ್ಮನ ಬಳಿ ಹೋಗೋವಾಗ ಬರಿ ಕೈಯಲ್ಲಿ ಹೇಗೆ ಹೋಗುವೆ?? ಅಮ್ಮನಿಗೆ ಏನಾದ್ರು ತೊಗೊಂಡು ಹೋಗ್ಬೇಕು ಅನ್ನಿಸೋಲ್ವಾ? ನಿಂಗೆ ಅಂದ. " ನಂಗೆ ನಾನು ಹೇಗಿದೀನೋ ಹಾಗೆ ಹೋಗೋದೇ ಇಷ್ಟ. False image ಯಾವತ್ತು ನಾನು ಸೃಷ್ಠಿ ಮಾಡಿಕೊಂಡು ಜೀವನ ಮಾಡೋಳು ನಾನಲ್ಲ" ಅಂದು ನಿಷ್ಟುರವಾಗಿಯೇ ಹೇಳಿ. ನಿನ್ನ ಬೆಂಬಲ ನಂಗೆ ಬೇಕು. ಅದು ನನ್ನ ನಿಶಾಂತ್ ನ  ಕೆಲಸದ ವಿಚಾರದಲ್ಲಿ ಅಷ್ಟೇ. ಇನ್ನು ತೀರ ಪರಿಸ್ಥಿತಿ ಹದ ಗೆಟ್ಟರೆ ನಂಗೆ ನೀನಲ್ಲದೆ ಇನ್ಯಾರೂ ಇಲ್ಲ ಅಂದು ಹೇಳಿ ಲೈನ್ ಕಟ್ ಮಾಡಿದಳು ನಿನಾದ.

(ಮುಂದುವರೆಯುವುದು…)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x