ಓಯಸಿಸ್: ನಿನಾದ (ಭಾಗ 4)

ಅಷ್ಟು ಹೊತ್ತಿಗೆ ನಿಶಾಂತ್ ಕರೆ ಮಾಡಿ ಹೇಳಿದ ತಡೆ  ಹಿಡಿದ ವೇತನ ಬಿಡುಗಡೆ ಆಗಿದೆ. ಯಾವ್ ಯಾವ್ದಕ್ಕೆ ಎಷ್ಟು ಎಂದು ವಿಲೇವಾರಿ  ಹೇಳು. ಮೊದಲು ಆ ಜೈನ್  ಗೆ ಫೋನ್ ಮಾಡಿ ಹೇಳು, ಹೇಳಿದ್ರೆ ಆವಾ ನಂಬೋಲ್ಲ ನಿನ್ನೆ ಅಕೌಂಟ್ ಗೆ  ಹಾಕಿದ ಹಣ ವಾಪಸು ಮಾಡಬೇಕು. ಸರಿ ಈಗಲೇ ಹೇಳುವೆ ನೀ ವಾಪಾಸು  ಮಾಡಿ ಬಿಡು. ಎಂದು ನಿಶಾಂತ್ ಹೇಳಿ ಕರೆಯನ್ನು ಮುಗಿಸಿದ. ಅಲ್ಲಿಗೆ ಒಂದು ವಿಲೇವಾರಿ ಆಯಿತು. ಅಂತೂ ಚಿಂತೆಯ ಮೂಟೆ ಹೊತ್ತು ಬಂದು ಎಲ್ಲ ಕೆಲಸ ಮುಗಿಸಿ ಬರುವಾಗ, ನಿಶಾಂತ್ ಆಣತಿ ಮೇರೆಗೆ ಒಂದಿಷ್ಟು ಸಿಹಿ ಹೊತ್ತು ತಂದಿದ್ದಳು. ವಾಪಸು ಬಂದಮೇಲೆ ಜೈನ್  ಕೊಡಬೇಕು ಅಂದೂ ಹೇಳಿದ್ದ. ಬಂದ ದಿನವೇ ಕರೆ ಮಾಡಿ ಇವತ್ತೇ ಬಾ ಹೇಗೂ  ಅಲ್ವಾ ಅಂದ್ರೆ ನಾ ಇಲ್ಲಿ ಇಲ್ಲ ನಾನು ಸ್ನೇಹಿತರ ಜೊತೆ ಇದ್ದೇನೆ. ಫ್ರಿಡ್ಜ್  ಮುಂದಿನ ವಾರ ಬರುವೆ ಅಂದ. ಸರಿ ಹಾಗೆ ಮಾಡು ಎಂದು ಎತ್ತಿ ಇಟ್ಟಿದ್ದೂ ಆಯಿತು. 

ಮಾರನೆ ದಿನ ಆಫೀಸ್ ಇಂದ ಮೆಸೇಜ್ ನಿನಾದ.. ನಿಶಾಂತ್ ನ ಕೆಲಸ ಏನಾಯಿತು , ಏನಾದ್ರು ಪ್ರಗತಿ ಇದೆಯಾ ? ನಿನ್ನ ಬಳಿ ಕೇಳಿದೆ ಅಂದು ಬೇಸರಿಸದಿರು. ನಿಶಾಂತ್ ಬಳಿ ಕೇಳಿ  ಇನ್ನಷ್ಟು ಅವ  ಖಿನ್ನನಾಗೋದು ಬೇಡ. ನನ್ನ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಎಲ್ಲಾ ಒಳ್ಳೆಯದಾಗುತ್ತೆ. ನಿನಾದ ಮಸೇಜ್ ಗೆ ಪ್ರತಿಕ್ರಿಯಿಸದೆ ಇದ್ದದ್ದನ್ನು ಕಂಡು ಮತ್ತೆ ಫೋನ್ ಮಾಡಿದ… ನಿನಾದ ಬರಿಯ ಒಂದು ನಿಟ್ಟುಸಿರು ಬಿಟ್ಟಳು "ನೋಡು ನೀ ಹೀಗೆ ಮೌನಿ ಯಾದರೆ ನಂಗೆ ಸಹಿಸೋಕೆ ಆಗೋಲ್ಲ. ನಾನಿದೀನಿ  ಯಾವುದಕ್ಕೂ ತಲೆ ಕೆಡಿಸಿ ಕೊಳ್ಬೇಡಾ… ಏನೂ ಆಗೋಲ್ಲ ದೈರ್ಯದಿಂದ ಇರು ಅಂದು ಸಮಾಧಾನಿಸಿ ಕರೆ ಮುಗಿಸಿದ. ಎರಡು ಮೂರು ದಿನ ಸದ್ದಿಲ್ಲದೇ ಓಡಿ  ಹೋಯಿತು. 

ಡಿಸೆಂಬರ್ ೬ ೨೦೧೨ ನಿನಾದಳ  ಬದುಕಿನ ಪರ್ವ ದಿನ.ಸಂಜೆ ಐದುವರೆ ಸಮಯಕ್ಕೆ ಕರೆ ಮಡಿ ನಾಳೆ ಬರುವೆ  ನಿಶಾಂತ್ ಜೊತೆ ಮಾತನಾಡಬೇಕು ಅಂದ. ಸರಿ  ನೀನು ಬಾ  ಅಂದು ನಿನಾದ ಒಪ್ಪಿಗೆ ಸೂಚಿಸಿದಳು. ಅವನ ಕರೆ ಮುಗಿಯುತ್ತಿದಂತೆ ನಿಶಾಂತ್ ಮೆಸೇಜ್ ಮಾಡಿ ಹೇಳಿದ ಅಂತೂ ಭಗವಂತ ನಿನ್ನ ಮೇಲೆ ಕರುಣೆ ತೋರಿದ ನೀ ಗೆದ್ದೇ… ದೇವರು ನಿಶಾಂತ್ ನ ಮೇಲೆ ಕೃಪೆ ತೋರಿದ ಕಾರಣ ಕೆಲಸದಲ್ಲಿ ಉಳಿದುಕೊಂಡ. ಮೊದಲು ಅವನಿಗೆ ಫೋನ್ ಮಾಡಬೇಕು ಅಂದು ಕೊಂಡರೆ ಫೋನಿನಲ್ಲಿ ಕರೆನ್ಸಿ ಇರಲಿಲ್ಲ ಹೋಗಲಿ ಮೆಸೇಜ್ ಮಾಡೋಣ ಅಂದು ಕೊಂಡರೆ ಅದಕ್ಕೂ ಇರಲಿಲ್ಲ, ಓಡಿ  ಬಂದು ಜಿ ಮೇಲ್, ಫೇಸ್ಬುಕ್ ನಲ್ಲಿ ಸಂದೇಶ ಕಳುಹಿಸಿದಳು. ಅವನ ಪ್ರತ್ಯುತ್ತರ  ಸಿಗಲಿಲ್ಲ. ಆಗ ಮತ್ತೆ ತುಂಟಿಯಾದ ನಿನಾದ  ಅವನಿಗೊಂದು ಸರ್ಪ್ರೈಸ್ ಕೊಡೋಣ ಎಂದು ತೀರ್ಮಾನಿಸಿ ಎಲ್ಲ  ತಯಾರಿ ನಡೆಸಿದಳು. ಮಾರನೆ ದಿನ ಆವಾ ಬಂದು  ಶುರು ಮಾಡಿದ, ನಿನಾದ ನೀ ಹೀಗೆ ಆದ್ರೆ ನೋಡು ನಿನ್ನ ಆರೋಗ್ಯ ಹಾಳಗತ್ತೆ ನೋಡು ಒಮ್ಮೆ ನಿನ್ನ ಮುಖ ಕನ್ನಡಿಯಲ್ಲಿ… ಅವಳು ಏನು ಹೇಳಲಿಲ್ಲ.. ನಿಶಾಂತ್… ನೀನಾದ್ರು ಹೇಳ್ಬಾರ್ದ ನಾ  ಕೊಟ್ಟಿರುವೆ.. ಇನ್ನೂ ಯಾಕೆ  ಚಿಂತೆ? ನೋಡು ನಿನಾದ.. ಮುಂದಿನ ವಾರದಿಂದ ನಿಶಾ೦ತ ನನ್ನ ಜೊತೆ ಅಲ್ಲಿ….  ನಿನ್ನ ಎಲ್ಲ ಕಷ್ಟ ದೂರ ಆಯಿತು. ಅದನ್ನ  ಬ೦ದೆ. ನೋಡು ಇನ್ನಾದ್ರು ನಗು… 

ನಿನಾದ ಸಿಹಿ ಪಾಯಸ, ಮೈಸೂರ್ ಪಾಕ್, ಜೆಲೆಬಿ ಎದುರು ತಂದು.. ಜೈನ್  ಇಲ್ನೋಡು.. ನಿಶಾಂತ್ ಅಲ್ಲಿ ಬರೋದು ಇಷ್ಟ ಇಲ್ಲ ಅಂತೆ ಅದಿಕ್ಕೆ ಇರೋ ಕೆಲಸದಲ್ಲಿ ಖಾಯಂ ಅಂತ ತುಂಬು ಹರ್ಷದಲ್ಲಿ ಹೇಳಿದಳು. ಆವಾ ನಂಬೋಕೆ ತಯಾರಿಲ್ಲಾ ಇಲ್ಲ ಜೈನ ಇದು ನಿಜ ನೀನೆ ಕೇಳು.. ಹೇಯ್ ನಿಶಾಂತ್ ನೀನೆ ಹೇಳು.. ಅಂದಳು. ಅಂತೂ ಆ ದಿನ ಹೇಯ್ ಕೋತಿ ನಂಗೆ ಹೇಳೋದು ಅಲ್ವಾ ? ಯಾವಾಗ ಆಗಿದ್ದು ಇದು? ನಿನ್ನೆ ಸಂಜೆ ನಿಂಗೆ ಫೋನ್ ಮಾಡೋಕೆ ಏನಾಗಿತ್ತು ? ಕರೆನ್ಸಿ ಇರಲಿಲ್ಲ  ನಾ ಮೇಲ್ & ಮೆಸೇಜ್ ಮಾಡಿದ್ದೆ ನೀ ಎಲ್ಲಿ  ಕತ್ತೆ ಮೆಯಿಸೊಕೆ ಹೋಗಿದ್ದೇ ? ಅಯ್ಯೋ ನಾ ನೋಡಲಿಲ್ಲ ಅಂದ. ಅದು ಗೊತ್ತಾಗಿ ನಾ ಹೀಗೆ ಮಾಡಿದೆ ಅಂದೆ. ಎಲ್ಲಿ ಲ್ಯಾಪಿ ಕೊಡು ನಾ ಮೇಲ್ ನೋಡ್ಬೇಕು ಅಂದು ನೋಡಿದ ಮೇಲೆ  ಸಮಾಧಾನ ಆಯಿತು. ಅಲ್ಲಿ ಬರೀ ಹರ್ಷ ಸಂತಸ ಸಂಬ್ರಮ…. 

********

ನಾನು ಸುಂದರ್ ಜೊತೆ ಮಾತನಾಡಿ ನಿಶಾಂತ್ ಗೆ ಕೆಲಸ ರೆಡಿ ಮಾಡಿಕೊಂಡು ಬಂದು ನಿಂಗೆ ಸರ್ಪ್ರೈಸ್ ಕೊಡೋಣ ಅಂದ್ರೆ ನೀ ಇದ್ದೆ ನೋಡು ನಂಗೆ ನಂಬೋಕೆ ಆಗದಷ್ಟು ದೊಡ್ಡ ಸರ್ಪ್ರೈಸ್ ಕೊಟ್ಟೆ. ಅಂತೂ ಈಗ ನಿನ್ನ ಮುಖ ಮೊದಲಿನ ತರನೇ ಇದೆ. ಹೀಗೆ ಇರಲಿ ನಿನ್ನ ನಗು ಎಂದೂ ಮಾಸದಿರಲಿ. ಎಂದು ಹಾರೈಸಿದ. ನಿಶಾಂತ್ ಜೈನ್ ನ, ನಿನಾದಳ ಸಂತೃಪ್ತಿಯನ್ನು ಕಂಗಳಲ್ಲೇ ಸವಿದ. ನಿನಾದ ತಂದು ಹಾಕಿದೆಲ್ಲಾ ಸದ್ದಿಲ್ಲದೇ ಖಾಲಿ ಯಾಗುತ್ತಿತ್ತು. ಜೈನ್ ಸಿಗುವ ಸವಲತ್ತು, ಪ್ರಯೋಜನಗಳ ಬಗ್ಗೆ ಕೇಳುತ್ತ ಇದ್ದ, ನಿಶಾಂತ್ ಹೇಳಿದ್ದನ್ನು ಕೇಳಿ, ಇವತ್ತು ಗೊತ್ತಾಯಿತು ಯಾಕೆ ನಿನಾದ ಅಷ್ಟು ಕಂಗೆಟ್ಟು ಹೋಗಿದ್ದು ಅಂತ. ಇರಲಿ ದೇವರು ನಿಮ್ಮಿಬ್ಬರನ್ನು ಚೆನ್ನಾಗಿ ಇಟ್ಟಿರಲಿ ಎಂದು ತುಂಬು ಮನಸ್ಸಿಂದ ಹಾರೈಸಿದ. ನಿಶಾಂತ್ ಮತ್ತೆ ಹಳೆ ಸಹುಧ್ಯೋಗಿಗಳ ಬಗ್ಗೆ ಕೇಳತೊಡಗಿದ. ಆಗ ಜೈನ್ ಎಲ್ಲ ಚೆನ್ನಾಗಿದ್ದಾರೆ ಆದರೆ ದಿಲ್ ಶಾದ್ ಮಾತ್ರ ಅನಾರೋಗ್ಯದ ಕಾರಣ ಭಾರತಕ್ಕೆ ಹೊರಟು  ಹೋದಳು.ಅವಳಿಗೆ ಆರೋಗ್ಯ ಸರಿ ಇಲ್ಲ. ಬಹುಶಃ ಅವಳು ಇನ್ನು ಕೆಲಸಕ್ಕೆ ವಾಪಾಸ್ ಬರೋಲ್ಲ ಅನ್ನಿಸುತ್ತೆ. ನಿಶಾಂತ್  ಖೇದ ವ್ಯಕ್ತ ಪಡಿಸಿದ. ಆಕೆಗೆ ಮದುವೆಯೂ ಆಗಲಿಲ್ಲ. ಅಮ್ಮ ಅಪ್ಪನೂ  ಇಲ್ಲ. ಅಕ್ಕ, ಅಕ್ಕನ ಮಕ್ಕಳು ಎಂದು ಇವಳು ಜೀವ ಸವೆಸಿದ್ದೇ ಬಂತು. ಹ್ಯಾಗಿದ್ದಾಳೋ ಏನೋ..? ಆಗ ಜೈನ್  ಅವಳು ಆಸ್ಪತ್ರೆಯಲ್ಲಿ ಇದ್ದಾಳೆ. ಅಡ್ಮಿಟ್ ಮಾದಿದ್ದಾರೆ. ಅವಳಿಗೆ ಏನೇನೂ ಹುಷಾರಿಲ್ಲ. ಹೀಗಾಗಿ ಜನರಲ್ ಮ್ಯಾನೇಜರ್  ಹತ್ರ ಮಾತನಾಡಿ ತಿಂಗಳಿಗೆ  ೩೦ ಸಾವಿರ ಅವಳಿಗೆ ಪ್ರತಿತಿಂಗಳು ಕಳುಹಿಸುತ್ತಿದ್ದೇನೆ. ಅವಳ ಔಷಧಿಗೆ ಆದರೂ ಆಗುತ್ತೆ. ಇಲ್ಲಿ ಇದ್ದಾಗ ತಡ ರಾತ್ರಿವರೆಗೂ ಕೆಲಸ ಮಾಡುತ್ತಿದ್ದಳು. ಅವಳ ದಕ್ಷತೆಗೆ ಇದಾದರೂ ಸಿಗಲಿ ಅಂತ ಯೋಚಿಸಿ ಹೇಳಿದೆ ಮ್ಯಾನೇಜರ್ ಒಪ್ಪಿದರು. ಇದೆಲ್ಲ ಕೇಳಿದ ನಿನಾದಾಗೆ ಏನು ಹೇಳಬೇಕೋ ತಿಳಿಯದಾಯಿತು. ನಿಶಾಂತ್ ಅಂತೂ ಇದನ್ನು ಕೇಳಿ ಮೌನಿಯಾಗಿ ಹೋದ. ಮತ್ತೂ ಒಂದಷ್ಟು ಸುದೀರ್ಘ ಮಾತು ಕತೆಯ ಬಳಿಕ ಜೈನ ನಿರ್ಗಮಿಸಿದ. 

ಹಿಂದೊಮ್ಮೆ ಮಾತಿನ ನಡುವೆ ತಿನ್ನೋಕೆ ಏನು ಇಷ್ಟ ನಿಂಗೆ ಅಂತ  ನಿನಾದ ಕೇಳಿದಾಗ ಏನೂ ಇಲ್ಲ ಅಂದಿದ್ದ ಆದರೆ ಮಾತಿನ ನಡುವೆ ನಂಗೆ ದೈ ವಡಾ ( ಮೊಸರೊಡೇ) ಇಷ್ಟ ಅಂದಿದ್ದ. ನಿನಾದ ಬರೀ ಸೋಮಾರಿ ಬೆಕ್ಕು. ಇಷ್ಟು ಕಷ್ಟದ್ದು ಯಾರು ಮಾಡುವರು ಅಂದು ಸುಮ್ನೆ ಇದ್ದಳು. ಆದರೂ ಜೈನ್ ಏನೂ ಬಾಯಿ ಬಿಟ್ಟು ಹೇಳದವ ಒಂದು ತಿಂಡಿ ಹೇಳಿದ್ದಾನೆ. ಮಾಡೋಣ ಅಂತ ಯೋಜನೆ ಹಾಕಿದಳು. ಆದರೆ ಅದುವರೆಗೆ ಅದರ ಸಹವಾಸವೇ ಇರಲಿಲ್ಲ. ಅಡುಗೆ ಅಂದ್ರೆ ಅನ್ನ, ಸಾರು,  ಪಲ್ಯ, ದೋಸೆ ಇಡ್ಲಿ, ಪಡ್ದು ಇಷ್ಟೇ ಅದರ ಆಚೆ ಯೋಚಿಸಲೇ ಇಲ್ಲ. ಯೋಚಿಸಲೇ ಇಲ್ಲ ಅಂದ ಮೇಲೆ  ಮಾಡಿ ಎಲ್ಲಿ ಗೊತ್ತು ? ಏನಾದರೂ ಗೊತ್ತಿಲ್ಲ ಅಂದ್ರೆ ಮೊದಲು ಅಮ್ಮನನ್ನು ಕೇಳುವ ಪರಿ ಪಾಠ ಆ ಬಾರಿಯೂ ಹಾಗೆ ಮಾಡಿದಳು. ಉದ್ದು ರುಬ್ಬಿ ಏನೋ ರೆಡಿ ಆಯಿತು. ಆದರೆ ಅದು ತೂತಿನ  ವಡೆ  ಆಗಲೇ ಇಲ್ಲ. ನಿನಾದಳಿಗೆ ಅದನ್ನು ಮಾಡೋಕೆ ಬರಲೇ ಇಲ್ಲ. ತಿಂದು  ರುಚಿ ನೋಡಿದರೆ ರುಚಿ ಚೆನ್ನಾಗಿತ್ತು. ಸರಿ ರುಚಿ ಸರಿ ಇದೆ. ಅದರ ಭಾಹ್ಯ ಸೌಂದರ್ಯ ನೋಡೋಕೆ ಯಾರೂ ಬರೋಲ್ಲ ಅಂದು ಮೊಸರಿ ನಲ್ಲಿ ಅದ್ದಿ ಬಿಟ್ಟಳು. 

ಎಂದಿನಂತೆ ಜೈನ್ ಬಂದ, ಆ ಬಾರಿ ಮತ್ತೊಂದು ಸರ್ಪ್ರೈಸ್ ಅವನಿಗೆ ಮೊಸರು ವಡೆ ನೋಡಿ ಹೇಯ್ ನಿನಾದ ನಂಗೆ ಮೊಸರು ವಡೆ  ಇಷ್ಟ ಅಂತ ಹೇಗೆ ಗೊತ್ತು ಅಂದ. ಕಳೆದ ಸಲ ನಿಂಗೆ ಗೊತ್ತಿಲ್ಲದ ಹಾಗೆ ನಿನ್ನಿಂದ ಕದ್ದೆ  ಅಂದಳು. ಆದರೆ ನಿಶಾಂತ್ ಆ ವಡೆ ಸರಿ ಆಗ್ಲಿಲ್ಲ ಎಂದು ದುಸು ದುಸು ಮಾಡಿಕೊಂಡಿದ್ದ. ತಿಂದು ನೋಡಿದ ಜೈನ್ ರುಚಿಯಾಗಿದೆ ಆದರೆ ನಂಗೆ ಸಕ್ಕರೆ ಹಾಕಿದ್ದು ಹೆಚ್ಚು ಇಷ್ಟ ಅಂದ. ಇರು ೫ ನಿಮಿಷ ನಿಂಗೆ ಸಕ್ಕರೆ ಹಾಕಿ ಕೊಡೋಣ ಅಂತ ಸಕ್ಕರೆ ಹಾಕಿ ತಂದು ಕೊಟ್ಟಿದ್ದೂ ಆಯಿತು. 

ನಿಶಾಂತ್ ಮಾತ್ರ ಅದ್ರಲ್ಲಿ ತೂತು ಇಲ್ಲ ಅದು ಯಾವ್ ನಮೂನೆ ವಡೆ  ಅಂತ ಹಂಗಿಸ್ತಾನೆ ಇದ್ದ. ನಿಂಗೆ ಏನು ಮಾಡೋಕೆ ಬರೋಲ್ಲ, ಇಲ್ಲದೆಲ್ಲಾ ಮಾಡಿ ಅವಾಂತರ ಮಾಡಿಕೊಳ್ಳೋದು ಅಷ್ಟೇ… ಜೈನ್ ಮಾತ್ರ" ಏಯ್ ನಿಶಾಂತ್ ಸುಮ್ನೆ ಇರೋ… ರುಚಿ ಇದೆ ನನಗಂತೂ ತುಂಬ ಇಷ್ಟ ಆಯಿತು, ನಿನಾದ… ಇನ್ನೆರಡು ವಡೆ ಹಾಕು" ಅಂದು ಕೂಗಿದ. ವಡೆ ತಿಂದ ಮೇಲೆ ಶ್ಯಾವಿಗೆ  ಕೀರು… ಕೊಟ್ಟಳು ನಿನಾದ. ಮೊದಲು ಬೌಲ್  ಗಾತ್ರ ನೋಡಿ "ಅಯ್ಯೋ ರಾಮ ಅಷ್ಟು ತಿನ್ನೋಕೆ ನಂಗೆ ಆಗೋಲ್ಲ ಅಂದ. ಕೋತಿ ನೀನು ಸುಳ್ಳು ಹೇಳಬೇಡ ನೀ ಇನ್ನೊ೦ದು ಸಲ ಕೇಳಿ ಹಾಕಿ ಕೊಳ್ಳದೆ ಇದ್ರೆ  ನೋಡೋಣ ಮುಂದೆ… ನೀ ಮೊದಲು ತಿಂದು ನೋಡು ಅಷ್ಟೇ.. ಅಂದು ಉಲಿದು ಹೋದಳು. ಒಂದು- ಎರಡು ಚಮಚ ತಿಂದವನೇ… ನನ್ನ ಅಮ್ಮ ಮಾಡಿದ ಹಾಗೆ ಇದೆ. ನಿನಾದಳ ಮುಖದಲ್ಲೊಂದು  ಸ್ನಿಗ್ಧ ನಗೆ…. ನಿಶಾಂತ್  ಜೊತೆ ಮಾತನಾಡುವ ಭರದಲ್ಲಿ  ಬೌಲ್ ಖಾಲಿ ಆಗಿದ್ದೇ ಗಮನಕ್ಕೆ ಬರಲಿಲ್ಲ.  ಬೌಲ್ ಖಾಲಿ ಆಗಿದ್ದನ್ನು ಗಮನಿಸಿ ನಿನಾದ ಇನ್ನೊ೦ದು ಬೌಲ್  ತಂದು ಎದುರು ಹಿಡಿದಳು. ನಾನು ನಿನ್ನ ಕರೆದು ಇನ್ನು ಸ್ವಲ್ಪ ಹಾಕು ಅನ್ನಬೇಕು ಅಂತ ಇದ್ದೆ. ನೀ ಭಯಂಕರ ಫಾಸ್ಟ್ !!! 

ಹೇಯ್ ಜೈನ್ ನಾನು ಹೇಳಿ ಎಲ್ಲಿ ಹೋಗಿದ್ದೆ… ನೀನು ಕೇಳಿಯೇ ಕೇಳುವೆ ಅಂತ… ಹೂ೦ ತುಂಬಾ ರುಚಿ ಆಗಿದೆ. ನಂಗೆ ನನ್ನ  ಮನೆಯಲ್ಲಿ ತಿಂದಂತೆ ಅನ್ನಿಸುತ್ತೆ. ಒಟ್ಟಾರೆ ನಾನು ಬರುವೆ ಅಂದ್ರೆ ನಿಂಗೆ ಶುಕ್ರವಾರವೂ ವಿರಾಮ ಇಲ್ಲ. ಇನ್ನು ಮುಂದೆ ನೀನು ಏನೂ ಮಾಡೋದೇ ಬೇಡ ಅಂದ. ಹೋಟೆಲ್ ಗೆ ಹೋಗೋಣ… ನಿನಾದ ನೇರ ಹೇಳಿ ಬಿಟ್ಟಳು ನೀವಿಬ್ಬರು ಹೋಗಿ ನಾನು ಬರೋಲ್ಲ. ನಂಗೆ ಹೊರಗಿದ್ದು ತಿಂದರೆ ಏನಾದರೂ ಶುರುವಾಗುತ್ತೆ. ಒದ್ದ್ಡೋದು ನಾನು.. ಹೀಗಾಗಿ ನಾನು ಮನೆಯಲ್ಲೇ ಮಾಡಿ ಹಾಕುವೆ.ನಾನು ಮಾಡಿದ್ದು ಸರಿ ಆಗ್ಲಿಲ್ಲ ಅಂತ ಹೇಳೋಕೆ ಇಷ್ಟು ಕಷ್ಟ ಪಡೋದು ಬೇಡ ನೀನು… ನಿಂಗೆ ಏನು ಅನ್ಸುತ್ತೋ ಹಾಗೆ ಮಾಡ್ಕೋ ಹೋಗು ಅಂತ ಹೇಳಿ ಬಿಟ್ಟಳು. "ಅಯ್ಯೋ ನಿನಾದ ನಾನೆಲ್ಲಿ ಹಾಗೆ ಹೇಳಿದೆ.. ನನ್ನಿಂದ ನಿಂಗೆ ಇರುವ ಒಂದು ದಿನವೂ ವಿರಾಮ ತೊಗೊಳ್ಳೋ  ಹಾಗೆ ಇಲ್ವಲ್ಲ ಅಂದೇ  ಅಷ್ಟೇ. ನಿಂಗೆ ತೊಂದ್ರೆ ಆಗೋಲ್ಲ ಅಂದ್ರೆ.. ನೀನೆ ಮಾಡಿ ಹಾಕು. " 

ನಿಶಾಂತ್ ಅಷ್ಟು ಹೊತ್ತಿಗೆ..  ಯಾಕೆ ಜೈನ್ ನ  ಗೋಳು ಹೊಯಿಕೊಲ್ಳೋದು ನೀನು..? ಆ ಭಗವಂತ ಯಾವ್ ಮೂಲೆಯಿಂದ ನಿನ್ನ ಒಂದು ಸೃಷ್ಟಿ ಮಾಡಿದನೋ ? ಬಂದವನಿಗೆ ನೆಮ್ಮದಿಯಲ್ಲಿ ಇರೋಕೆ ಬಿಡೋಲ್ಲ ನೀನು ಅಂತ ದ್ವನಿ ಎತ್ತರಿಸಿದ. ಆಗ ನಡುವೆ ಬಂದು ಜೈನ್ ಅಲ್ಲ ಏನಾಯಿತು ಅಂತ ಅವಳಿಗೆ ಬಯ್ಯೋದು ಅಲ್ಲ ಅಷ್ಟಕ್ಕೂ ಏನು ಮಾಡಿದ್ಲು ಈಗ.. ?? ಯಾಕೆ ಅವಳಿಗೆ ಬಯ್ಯೋದು ? ನೀ ಹೀಗೆ ಮಾಡೋದಾದ್ರೆ ಇನ್ ಮುಂದೆ ನಾನು ಬರೋದೆ ಇಲ್ಲ ಅಂದ. ಆಗ ನಿಶಾಂತ್ ಗೆ ಜ್ಞಾನೋದಯ ಆಗಿ, ಹಾಗೆ ಮಾಡಬೇಡ ಎಂದು  ಸುಮ್ಮನಾದ. ಏನೋ ಆಫೀಸ್ ವಿಷಯಗಳ ಚರ್ಚೆ, ವಿಚಾರ ವಿನಿಮಯ. ಬಾನಲ್ಲಿ ಶಶಿ ಮೂಡಿ ಬಂದಾಗ ಜೈನ್ ಹೊರತು ನಿಂತ. ಹೊರಡೋವಾಗ ಹೇಯ್ ನಿನಾದ ಖೀರು ಇದೆಯಾ ಅಂದು ಕೇಳಿದ. ಒಂದು ಡಬ್ಬದಲ್ಲಿ ಹಾಕಿ ಕೊಟ್ಟಿದ್ದೂ ಆಯಿತು. 

ಮುಂದಿನ ವಾರಾಂತ್ಯಗಳು  ಏನೇನೋ ಕಾರ್ಯಕ್ರಮಗಳು ಸುಮಾರು  ವಾರ ಕರೆಯಲು ಆಗಲಿಲ್ಲ. ಮುಂದಿನ ವಾರ ಕರೆಯೋಣ ಅಂತ ಕರೆದರೆ  ಏನೋ ಬರೋಕೆ ಆಗೋಲ್ಲ. ಆದರೆ garden ತುಂಬಾ ಮಿಸ್ಸಿಂಗ್ !! ಬಂದೆ ಬರುವೆ ಅಂದು ಹೇಳಿದ. ಈವಾರ ಬರೋಕೆ ಆಗೋಲ್ಲ ಅಂದ. ಸರಿ ಅಂದು ಸುಮ್ಮನಾದರೂ ಮುಂದಿನ ಸಲ ಏನು ಮಾಡೋದು ಗೊತ್ತಿದ್ದದ್ದು ಎಲ್ಲ ಮಾಡಿ ಹಾಕಿ ಆಗಿದೆ. ಇನ್ನು ಒಂದು ವಾರ ಟೈಮ್ ಇದೆ ಮೊದಲೇ ಕೇಳಿಕೊಂಡರೆ ನಿಶಾಂತ್ ಕೈಯಲ್ಲಿ ಬೈಸಿಕೊಳ್ಳೋದು ತಪ್ಪುತ್ತೆ ಅಂತ ಯೋಚಿಸಿ ಹೇಯ್ ಮುಂದಿನ ಸಲ ಬರುವಾಗ ಏನು ಮಾಡಲಿ ಅಂದು ಕೇಳಿದವಳಿಗೆ ಸಿಕ್ಕಿದ ಉತ್ತರ ನಿಂಗೆ ಪೂರಿ.. ಮಾಡೋಕೆ ಗೊತ್ತ ? ಬಾಜಿ / ಸಾಗು ಏನಾದ್ರು ನಡೆಯುತ್ತೆ. ಈ ಸಲ ಮಾತ್ರ ನಿನಾದ ಅವನ ಕೈಗೆ ಕೋಲು ಕೊಟ್ಟು ಪೆಟ್ಟು ತಿಂದಳು. ಜನ್ಮದಲ್ಲಿ ಪೂರಿ ಮಾಡಿರಲಿಲ್ಲ. ಅವತ್ತಿನಿಂದಲೇ ಇಂಟರ್ನೆಟ್ನಲ್ಲಿ ತಡಕಿ ತಡಕಿ ಪೂರಿಗೆ ಸೋಡಾ ಹಾಕದೆ ಮಾಡುವ ವಿಧಾನವನ್ನು ಇಡೀ ರಾತ್ರಿ ಹುಡುಕಿ, ಮಾರನೆ ದಿನ ಒಂದು ರೆಸೆಪಿ ಫೈನಲ್ ಮಾಡಿ ಪೂರಿ ಮಾಡಿ ನೋಡಿದಳು ಸರಿಯಾಗಿಯೇ ಬಂತು. ನಿಶಾಂತ್ ಅಂತೂ ತಿಂದು ಸೂಪರ್ ಪೂರಿ ಇದು ಅಂದ. 

ಇನ್ನೊಮ್ಮೆ  ಜೈನ್ ಬಂದಾಗ ಇದೆ ಮಾಡಿ ಹಾಕು ಅಂದ. ಆವ ಬರಲಿ ಮಾಡಿ ಹಾಕೋಣ ಅಂದಳು. ಕೊನೆಯಲ್ಲಿ ಹೇಳಿ ಬಿಟ್ಟಳು ಅಂತೂ ನಾನೊಂದು ಪೂರಿ ಮಾಡೋಕೆ ಕಲಿಯೋಕೆ ಜೈನ್ ಅದು ನಂಗಿಷ್ಟ ಅಂತ ಹೇಳಬೇಕಾಯಿತು. ನಿಶಾಂತ್ ಎಂತದೋ ಒಂದು ನೀ ಪೂರಿ ಮಾಡೋಕೆ ಕಲಿತೆ ನಂಗೆ ಅದೇ ಖುಷಿ ಅಂತ ಹೇಳಿದ. ಮುಂದಿನ ವಾರ ನಿನಾದ ಹುಷಾರಿಲ್ಲದೆ ಮಲಗಿದ ಕಾರಣ ಜೈನ್ ನ ಕರೆಯುವ ಗೋಜಿಗೆ ಹೋಗಲಿಲ್ಲ. ಆದರೆ ಆವಾ ಮಾತ್ರ ಫೋನ್ ಮಾಡಿ ನಿನಾದ ಸಾರೀ.. ನಂಗೆ ಎಲ್ಲೂ  ಬರುವ ಮನಸ್ಸೇ ಇಲ್ಲ, ಸಹುಧ್ಯೋಗಿ ದಿಲ್ಶಾದ್ ಇನ್ನಿಲ್ಲ. ಅದು ಕೇಳಿ ಮನಸೆಲ್ಲ ಕಸಿವಿಸಿ. ಮುಂದಿನ ವಾರ ಖಂಡಿತಾ ಬರುವೆ ಅಂದ. ಸರಿ,  ಹಾಗೇನು ಇಲ್ಲ ನಿಂಗೆ ಯಾವಾಗ ಬರಬೇಕೋ ಆಗ ಬಾ..  ಬರುವ ಮೊದಲು ಒಂದು ತಿಳಿಸು ಅಷ್ಟೇ.. ನಾವು ಕರೆಯಬೇಕು ಅಂತ ಕಾಯೋದು ಬೇಡ ಅಂದು ಹೇಳಿದಾಗ ಸರಿ.. ಬರೋ ಮೊದಲು ಒಂದು ಕರೆ ಅಥವ ಮೆಸೇಜ್ ಮಾಡು ಅಂತ ಹೇಳಿ ಕರೆ ಮುಗಿಸಿದಳು. 

ಮುಂದಿನವಾರ ಜೈನ್ ಬಂದಾಗ ಪೂರಿ ಆಲೂ ಪಲ್ಯ, ಮಾಡೋಕ್ ಗೊತ್ತಿದ್ದ ಒಂದೇ ಏಕೈಕ ಸಿಹಿ ಹಯಗ್ರೀವ ಮಡ್ಡಿ. ಈ ವಾರ ಏನು ತರಲೆ ಮಾಡೋದು ಅಂತ ಯೋಜನೆ ಹಾಕಿದ ನಿನಾದಗೆ ಏನು ಹೊಳೆಯಲೇ ಇಲ್ಲ. ಬರಿಯ ಜೈನ್, ನಿಶಾಂತ್ ನ ಅಭಿಪ್ರಾಯ ಗಳಿಗೆ ಕಿವಿಯಾದಳು.ಮಾತು ಮುಗಿತಾ ಬಂದಾಗ ನಿನಾದ ಪೂರಿ ಮಾಡಿ ಬಿಸಿ ಬಿಸಿ ಪೂರಿ, ಆಲೂ ಪಲ್ಯ ಎದುರಿಗೆ ಅವನಿಗೆ ಇನ್ನಷ್ಟು ಅಚ್ಚರಿ. ಅತ್ತ ನಿಶಾಂತ್ ನಿನ್ನ ದಯದಿಂದ  ನಂಗೆ ಪೂರಿ ಸವಿಯೋ ಭಾಗ್ಯ ಅಂತ ಛೇಡಿಸಿದ್ದೂ ಆಯಿತು. ಅಂತೂ ಅದೊಂದು ಪೂರಿ ಸಮಾರಾಧನೆ ಆಯಿತು. ಹಯಗ್ರೀವ ತಿಂದ ಜೈನ್ ಅಬ್ಬಾ ಅದು ಏನೆಲ್ಲಾ ಮಾಡುವೆಯೋ… ನಾ ಇದುವರೆಗೆ ಈ ತರದ ಸ್ವೀಟ್  ತಿಂದೆ ಇಲ್ಲ… ಈಗಲೇ ಹೇಳಿ ಬಿಡುವೆ ಬೇಗ ಡಬ್ಬ ರೆಡಿ ಮಾಡು. ಇದು ಎಷ್ಟು ದಿನ ಉಳಿಯುತ್ತೆ ? ಅಂದ ಜೈನ್ ಗೆ ನಿನಾದ… ನೀನು  ೨  ದಿನ ಇಟ್ಟು  ತಿನ್ನು. ಅಂದು ಡಬ್ಬದಲ್ಲಿ ಹಾಕಿ ಇಟ್ಟಳು. 

ಯಾವತ್ತು  ಹೋಗಲು ಅವಸರಿಸದ ಜೈನ್ ಅಂದು ನಾ ಹೋಗ್ತೀನಿ ಅಂತ ರಾಗ ತೆಗೆಯಲು ಶುರು. ನಿನಾದ ಅದನ್ನೇ ಹಿಡಿದು ರೆಗಿಸಿದಳು. ನೀ ಅಷ್ಟು ಅವಸರದಲ್ಲಿ ಬಂದಿದ್ದೀಕೆ..? ಏನೋ  ನಿನ್ನ ಗರ್ಲ್ ಫ್ರೆಂಡ್ ಬರೋಕೆ ಹೇಳಿದ್ಲಾ…? ಹೇಯ್ ನಿನ್ನ ಗರ್ಲ್ ಫ್ರೆಂಡ್ ಯಾರು ನಂಗೆ ಪರಿಚಯಿಸು.. ಪ್ಲೀಸ್ !! ಅವನಿಗೆ ಯಾವ ಗರ್ಲ್ ಫ್ರೆಂಡ್ ಆಗಲಿ ಯಾವ ಕೆಟ್ಟ ಚಟಗಳಾಗಲಿ ಇಲ್ಲ ಎನ್ನುವುದು ಖಚಿತವಾಗಿ ಗೊತ್ತಿದ್ದರೂ ಬೇಕೆಂದೇ ಪಿರಿ ಪಿರಿ ಮಾಡಿದಳು. ಅವನಿಗೆ ಇದ್ದ ಒಂದೇ ಕೆಟ್ಟ ಬುದ್ದಿ ಎಂದರೆ ಇಡೀ ದಿನ ಆಫೀಸ್ ನಲ್ಲೇ ಕೂತು ಬಿಡುವುದು. ಅದು ಬೆಳಗ್ಗಿನ ಜಾವ ೩ ನಾಲ್ಕು ಘಂಟೆಗಳ ವರೆಗೆ, ಇದು ಒಂದು ಬದಿಗೆ ಇಟ್ಟರೆ ಬೇರೆ ಯಾವ ದುರ್ಗುಣವೂ ಇರಲಿಲ್ಲ. 

ಅವ ಇಲ್ಲ ನಿನಾದ ನನ್ನ ಗೆಳೆಯರೆಲ್ಲ ಇದ್ರೂ ಅವರನ್ನೆಲ್ಲ ಮಾಲ್ ನಲ್ಲಿ ಬಿಟ್ಟು ನಾನು ಮಾತ್ರ ಇಲ್ಲಿ ಬಂದೆ. ಅವರು ಹೇಳಿದ್ರು ನಾವು ಬರ್ತೀವಿ ಅಂತ ನಾನು ಅವರನ್ನು ನೀವ್ ಬರೋದು ಬೇಡ ನೀವು ಎಲ್ಲಾದರೂ ಹೋಟೆಲ್ ಗೆ ಹೋಗಿ ಏನು ಬೇಕಿದ್ರೂ ತಿನ್ನಿ ಬಿಲ್ ನಾನು ಕೊಡುವೆ. ನಾನು ಮಾತ್ರ ಅಲ್ಲೇ ತಿಂದು ಬರುವೆ ಅಂತ ಹೇಳಿ ಬಂದಿದ್ದೇನೆ. ಇಷ್ಟು ಹೇಳಿದಾಗ ನಿಶಾಂತ್ ಏನೋ ನೀನು ಅವರನ್ನು ಕರ್ಕೊಂಡು ಬರೋದು ಅಲ್ವಾ.. ಅಂದಾಗ ನಂಗೊತ್ತಿತ್ತು ನೀ ಹೀಗೆ ಹೇಳುವೆ ಅಂತ. ಆದರೆ ಇಲ್ಲಿ ನಿನ್ನ ಒಬ್ಬನ ಅಭಿಪ್ರಾಯ ಅಷ್ಟೇ ಅಲ್ಲ ನಿನಾದಳ ಅಬಿಪ್ರಾಯ ಕೂಡ ಅಷ್ಟೇ ಮುಖ್ಯ ನಂಗೆ. ಅವಳು ಯಾವತ್ತು ಎಲ್ಲರ ಜೊತೆ ಬೇರೆಯೋಲ್ಲ. ಹೀಗಾಗಿ ಅವಳಿಗೆ ಕಿರಿ ಕಿರಿ ಮಾಡೋಕೆ ನಂಗೆ ಇಷ್ಟ ಇಲ್ಲ. ನಾ ಅವಳ ಮುಗ್ಧ ಮನಸ್ಸಿಗೆ ಘಾಸಿ ಮಾಡೋಲ್ಲ ಅಷ್ಟೇ. ಇನ್ನೆಂದೂ ನಾನು ಮಾತ್ರವೇ ಬರೋದು ನನ್ನ ಸ್ನೇಹಿತರಿಗೆ ಇಲ್ಲಿಗೆ ಎಂಟ್ರಿ ಇಲ್ಲ ಅಷ್ಟೇ. ಇದು ನಂಗೆ ಮಾತ್ರ ಮೀಸಲು. 

ಸಾಮಾನ್ಯವಾಗಿ ಚಳಿ ಗಾಲದಲ್ಲಿ  ಸ್ವೆಟರ್ ಇಲ್ಲದೆ ಹೊರ ಹೋಗದ ನಿನಾದ ಅಂದು ಸ್ವೆಟರ್ ಹಾಕದೆ ಜೈನ್ ನ ವಾಪಸ್ ಕಳಿಸಿ ಕೊಡೋಕೆ ನಿಶಾಂತ ಜೊತೆ ಹೊರಟಳು. ಅಲ್ಲಿ ಹೋದರೆ ಒಂದು ಬಸ್ ಬರಲಿಲ್ಲ ಒಂದು ಟ್ಯಾಕ್ಸಿ ಕೂಡ ಸಿಗಲಿಲ್ಲ ಇಲ್ಲ ಚಳಿಗಾಳಿ ಕ್ಷಣ ಕ್ಷಣಕ್ಕೆ  ಏರುತ್ತಿತ್ತು. ನಿನಾದ ಹಲ್ಲು ಕಟ ಕಟ ಮಾಡ ತೊಡಗಿದಳು. ನಿಶಾಂತ್ ನೀ ಮನೆಗೆ ಹೋಗು ನಾ ಅವನನ್ನು ಕಳಿಸಿ ಕೊಟ್ಟು ಬರುವೆ ಅಂದಾಗ, ನಿನಾದ ತೊಗೋ ನನ್ನ ಜರ್ಕಿನ್ ಹಾಕೋ ಎಂದು ಬಿಚ್ಚಿ ಕೈ ಗೆ ಇತ್ತ. "ಅಯ್ಯೋ ರಾಮ.. ಬೇಡ ಬೇಡ.. ಅಂತ ಹೇಳಿ ಅಲ್ಲೇ ಮುದುರಿ ನಿಂತಳು. ನೋಡು ಇನ್ನು ನಾಳೆ ನಿಂಗೆ ಶೀತ ಆಗುತ್ತೆ, ಬೇಗ ಹಾಕ್ಕೋ ಅಂದ. ಇಲ್ಲ ಏನಾಗಲ್ಲ.. ನಿಂಗೆ ಮೆಟ್ರೋದಲ್ಲಿ ಬೇಕಾಗುತ್ತೆ ನಿಂದು ನಿಂಗೆ ಇರಲಿ. ಅದು ಹೇಳುವ ಸಮಯಕ್ಕೆ ಬಸ್ ಬಂತು ಜೈನ್ ಬಸ್ ನಲ್ಲಿ ಹೋದ. 

ಆದರೆ ಮೊದಲ ಬಾರಿಗೆ ಮನಸಲ್ಲಿ ಏನೋ ಒಂದು ಅವ್ಯಕ್ತ ಭಾವ ಜೈನ್ ಹೀಗೇಕೆ ಮಾಡಿದ…. ಯಾರಲ್ಲಿ ಕೇಳೋದು ? ಸಂಬಂಧದ ವಿಚಾರದಲ್ಲಿ ಯಾವುದಕ್ಕೂ   ತಲೆ ಕೆಡಿಸಿ ಕೊಳ್ಳದ ನಿನಾದ ಏನೋ ಒಂದು ಅಂತ ಇದ್ದು ಬಿಟ್ಟಳು. ಆದರೆ ಅಲ್ಲಿಂದ ಮುಂದೆ ಜೈನ್ ನ ಪ್ರತಿ ನಡೆ ನುಡಿಯನ್ನು ಎಚ್ಚರಿಕೆ ಯಿಂದ ಗಮನಿಸ ತೊಡಗಿದಳು. ಆದರೆ ಏನೊಂದೂ ತಾಳ ತಪ್ಪಿದಂತೆ ಕಾಣಲೇ ಇಲ್ಲ. ಇದೊಂದು ಭ್ರಮೆ ಅಂತ ಎಲ್ಲ ಮರೆತು ಹಾಯಾಗಿದ್ದಳು. ಮುಂದೆ ಒಮ್ಮೆ ನಿನಾದ ವೈಧ್ಯರ ಬಳಿ ಹೋದಾಗ ವೈಧ್ಯರು ತೂಕ ಇಳಿಸಿಕೊಳ್ಳಿ ಅಂದರು. ಸರಿ ಅಂದು ಒಂದು ಶಟಲ್ ಬ್ಯಾಡ್ಮಿಂಟನ್ ಸೆಟ್ ತಂದಿದ್ದು ಆಯಿತು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x