ಅದೊಂದು ದಿನ ನಿಶಾಂತ್ ಫೋನ್ ಗೆ ಕರೆ ಮಾಡಿ ಮಾಡಿ ಸೋತು ಹೋಗಿ ನಿನಾದ ಫೋನ್ ಗೆ ಕರೆ ಮಾಡಿದ. ನಂಗೆ ತುರ್ತಾಗಿ ಕೆಲವು ವಿಷಯ ಕೇಳಬೇಕಿತ್ತು. ನಿಶಾಂತ್ ಎಲ್ಲಿ ?? ನಿನಾದ ಶಾಂತವಾಗಿ, ಬಹುಶಃ ನಿಶಾಂತ್ ಬ್ಯುಸಿ ಏನು ಕೇಳಬೇಕಿತ್ತು ? ಮನೆಗೆ ಬಂದ ಮೇಲೆ ವಾಪಾಸು ಕರೆ ಮಾಡಲು ಹೇಳುವೆ ಅಂದು ಉತ್ತರಿಸಿದಳು. ಏನೋ ಸುಮಾರು ಹೊತ್ತು ನಿಶಾಂತ್ & ಜೈನ್ ಮಾತನಾಡಿಕೊಂಡಿದ್ದರು. ದಿನಗಳು ಸಾಗಿ ಹೋಗುತ್ತಿದ್ದವು.. ಆಗೊಮ್ಮೆ ಈಗೊಮ್ಮೆ ನಿನಾದ ಕರೆ ಸ್ವೀಕರಿಸಿ ನಿಶಾಂತ್ ಗೆ ಮಾಹಿತಿ ನೀಡುತ್ತಿದ್ದಳು. ಯಾಕೋ ಜೈನ್ ಕಣ್ಣಿಂದ ಮರೆಯಾದ ಬಳಿಕ ಅವನ ಭಯವೂ ಮಾಯ ಆಗಿತ್ತು. ಅದೊಂದು ದಿನ ನಿನಾದ, ನಿಶಾಂತ್ ಪಾರ್ಕ್ ಗೆ ಹೋಗಿದ್ದಾಗ ಅಂದು ಮತ್ತೆ ಜೈನ್ ಕರೆ ಮಾಡಿದ್ದ. ಅಂದು ಭಾರೀ ಸಂಭ್ರಮದಲ್ಲಿ ಇದ್ದ. ಲೈಸನ್ಸ್ ಸಿಕ್ಕ ಸಂತಸ, ಆ ದೇಶದಲ್ಲಿ ಡ್ರೈವಿಂಗ್ ಲೈಸನ್ಸ್ ಒಂದು ಆಸ್ತಿಯೇ.. ಮೊದಲಿನ ಯಾವ ಭಯ ಇಲ್ಲದೆ ಇದ್ದುದರಿಂದ ನಿಶಾಂತ್ ಫೋನಿನಲ್ಲಿ ಮಾತಾಡಿದ್ದು ಸ್ವಲ್ಪ ಕೇಳಿಯೇ ಅವನ ಗೋಳು ಹೋಯಿಕೊಂಡಳು. ಹೂ೦.. ಇನ್ನು ಒಂದು ಪುಲಿ ಕೊಂಬು ಸಿಗೋದು ಇದೆ. ಹೇಗೆ ಮಾರ್ಕೆಟ್ ನಲ್ಲಿ ೨ ಕೆಜಿ ಚಿನ್ನಕ್ಕೆ ಅರ್ಹತೆ ಪಡೆದೆಯಾ??… ಇಷ್ಟಕ್ಕೂ ನೇರ ಅವನ ಜೊತೆ ಮಾತನಾಡಲಿಲ್ಲ. ಆದರೂ ಅವನಿಗೆ ಏನೋ ಸ್ವಲ್ಪ ಕೇಳಿಸಿಯೇ ಬಿಟ್ಟಿತು. ನಿಶಾಂತ್.. ನಿನಾದಗೆ ಫೋನ್ ಕೊಡು. ಮಾತನಾಡಬೇಕು ಅಂದ, ನಿನಾದ ಅಂದೇಕೋ ಒಳ್ಳೆ ಮೂಡ್ ನಲ್ಲಿ ಇದ್ದಳು ಹೀಗಾಗಿ ಮತ್ತೆ ಸಿಕ್ಕಿದ್ದೇ ಅವಕಾಶ ಅಂತ ಸ್ವಲ್ಪ ಜಾಸ್ತಿಯೇ ರೇಗಿಸಿದಳು. ನೀ ಒಂದು ಪಾರ್ಟಿ ಕೊಡೋದು ಬೆದ.. ಎಲ್ಲಾ ಗುಡ್ಡೆ ಹಾಕಿ ಇಡು… ನಿಜಕ್ಕೂ ನಿನ್ನಂತ ಆಸಾಮಿಯನ್ನು ನೋಡೇ ಇಲ್ಲ.. ಎಲ್ಲಾ ಓಕೆ ಈಗ ಪಾರ್ಟಿ ಯಾವಾಗ??? ಅಂದು ಕಾಲು ಎಳೆದಿದ್ದೇ ಎಳೆದಿದ್ದು. ಪಾಪ ಅವ ಏನು ಹೇಳಿದರೂ ಅದನ್ನೇ ತಿರುಗಿಸಿ ಮುಂದೆ ಮಾತನಾಡೋಕೆ ಆಗದಂತೆ ಮಾಡಿ ಬಿಟ್ಟಳು. ಪರವಾಗಿಲ್ಲ ನಿಂಗೆ ಒಳ್ಳೆ.. ಪುಲಿ ಕೊಂಬು ( ಗಟ್ಟಿ ಕುಳ ) ಸಿಗೊದರಲ್ಲಿ ಯಾವ ಸಂಶಯ ಇಲ್ಲ. ಅಂದು ಶುಭ ಕೋರಿ ಕರೆ ಮುಗಿಸಿದಳು. ಮತ್ತೆ ಕೆಲವು ದಿನ ಅವನ ಕರೆ ಬರಲಿಲ್ಲ. ಕೆಲ ತಿಂಗಳು ಕಳೆದು ಮತ್ತೆ ನಿಶಾಂತ್ ಗೆ ಕರೆ..ಎಮ್ ಬಿ. ಎ ಮುಗೀತು ಡಿಸ್ಟಿ೦ಶನ್ !!!ಆ ಸಲ ಎಲ್ಲಿ ನಿನದಾಗೆ ಫೋನ್ ಕೊಡು ಅಂದ… ಈ ಬಾರಿ ನಿನಾದ ಇನ್ನಷ್ಟು ರೇಗಿಸಿದಳು ಬೇಡ ಇನ್ನು ಓದಬೇಡ, ನೀ ಹತ್ತು ಕೆಜಿ ಚಿನ್ನ ದ ಲಿಸ್ಟ್ ನಲ್ಲಿ ಸೇರಿಕೊಂಡರೆ ಕಷ್ಟ ಕಣೋ.. ಅವಳು ೧೦ ಕೆಜಿ ಚಿನ್ನ ಹೊರ್ಬೇಕಲ್ಲ.. ಅವಳಿಗೆ ಜಾಸ್ತಿ ಕಷ್ಟ ಕೊಡಬೇಡ.. ಇನ್ನೂ ಒಂದು ಏನು ಗೊತ್ತಾ ಆಮೇಲೆ ನಾ ಅಷ್ಟು ತಂದಿದೀನಿ… ನಾ ಹೇಳಿದ ಹಾಗೆ ಕೇಳು ಅಂದ್ರೆ…? ಏನು ಮಾಡುವೆ? ನಿಂಗೆ ಯಾರ ಮಾತು ಕೇಳಿ ಗೊತ್ತೇ ಇಲ್ಲ… ಬೇಡವೋ.. ಅಂತ ರಾಗ ಎಳೆದಳು. ಅವನಿಗೆ ಸಾಕೋ ಸಾಕು ಮಾಡುವಷ್ಟು ರಗಳೆ ಎಬ್ಬಿಸಿ ಬಿಟ್ಟಳು.
ಕೊನೆಯಲ್ಲಿ ಕೇಳಿದಳು ಕೋಪ ಬಂತಾ ನಿಂಗೆ ?? ಇಲ್ಲ ಇಲ್ಲ ಅಂದು ಆವಾ ಹೇಳಿದರೂ ಅವನಿಗೆ ಸ್ವಲ್ಪ ಕೋಪ ಬ೦ತು ಅನ್ನೋದು ಅವಳಿಗೆ ಗೊತ್ತಾಗಿತ್ತು. ನೋಡು… ಸ್ವಲ್ಪ ಕೋಪ ಕಮ್ಮಿ ಮಾಡಿಕೊಳ್ಳು ಎಲ್ಲದಕ್ಕೂ ಒಳ್ಳೇದು ಅದು, ಅಂದಳು ಹೂ೦…. ನಂಗೆ ಕೋಪ ತುಂಬಾ ಬರತ್ತೆ.. ತಡೆದು ಕೊಳ್ಳೋಕೆ ಆಗೋಲ್ಲ… ಹಾಗಲ್ಲ.ಕೋಪ ನಂಗೂ ಬರತ್ತೆ. ಸ್ವಲ್ಪ ಕಮ್ಮಿ ಮಾಡಿಕೊಳ್ಳು ಪುಣ್ಯಾತ್ಮ… ಅಷ್ಟೇ ಅಂದಳು. ಸರಿ ಪ್ರಯತ್ನಿಸುವೆ ಅಂದ. ಮತ್ತೆ ಕೆಲವು ತಿಂಗಳು ಮಾತಿಲ್ಲ ಕತೆ ಇಲ್ಲ. ನಿಶಾಂತ್ ಬೇಡದ ಹುಚ್ಚು ಕೆಲಸಕ್ಕೆ ಕೈ ಹಾಕೊದ್ರಲ್ಲಿ ಸದಾ ಮುಂದು. ನಿಶಾಂತ್ ನ ಗೆಳೆಯ ಗೌತಮ್ ಒಂದು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈ ಹಾಕಿ ಒಂದು ಹತ್ತು ಲಕ್ಷ ಹಾಕು, ಅಂದ ಈ ನಿಶಾಂತ್ ಹಿಂದೂ ಮುಂದು ನೋಡದೆ ಹೂ೦.. ಗುಟ್ಟಿದ ಆದರೆ ಕೈಯಲ್ಲಿ ಅಷ್ಟು ಉಳಿತಾಯ ಇರಲಿಲ್ಲ. ನಿನಾದ ಬೇಡ ಎಂದು ಎಷ್ಟು ಹೇಳಿದರೂ ಕೇಳದೆ ನಿಶಾಂತ್ ಬ್ಯಾಂಕ್ ಲೋಅನ್ ಗೆ ಹೋದ, ಆದರೆ ಅಲ್ಲಿ ಏನೋ ತೊಡಕು ಲೋಅನ್ ಸಿಗಲಿಲ್ಲ. ಅಷ್ಟಕ್ಕೆ ಸುಮ್ಮನಿರಬಹುದಿತ್ತು, ಉಹೂ೦.. ಮತ್ತು ಒಂದು ಹೆಜ್ಜೆ ಮುಂದೆ ಹೋದ ನೋಡೋಣ ಗೆಳೆಯರು ಇದ್ದಾರೆ.. ನಿನಾದ ಬಡ ಕೊಳ್ಳುತ್ತಲೆ ಇದ್ದಳು. ಬೇಡ ಸ್ನೇಹ ಹಾಳಾಗುತ್ತೆ, ಬೇಡ ನಿಶಾಂತ್ – ನಮ್ಮ ಹತ್ರ ಹಣ ಇದ್ರೆ ವ್ಯವಹಾರ ಸಾಲ ಮಾಡಿ ವ್ಯವಹಾರ ಬೇಡ. ನಿನಾದಳ ಮಾತು ಗಾಳಿಯಲ್ಲಿ ತೇಲಿ ಹೋಯಿತು. ಸ್ನೇಹಿತರ ಬಳಿ ಕೇಳಿದ್ದೂ ಆಯಿತು. ಹೆಚ್ಚಿ ನೋರು ಮುಂದೆ ಬರಲಿಲ್ಲ. ಸ್ವಲ್ಪ ಸಮಯ ಕೊಡಿ ಅಂದು ಜಾರಿ ಕೊಂಡರು. ಆದರೆ ಈ ಜೈನ್ ಯಾವಾಗ ಬೇಕು ? ಇದೆ ವಾರ ಬೇಕು ಅಂದ್ರೆ ಇಷ್ಟು ಕೊಡುವೆ ಮುಂದಿನ ವಾರ ಆದ್ರೆ ವೇತನ ಸಿಗುತ್ತೆ ಎಲ್ಲ ಸೇರಿಸಿ ಒಂದು ದೊಡ್ಡ ಮೊತ್ತ ಮಾಡಿ ಕೊಡುವೆ ಅಂದ. ಇದು ಕೇಳಿದ ಕೂಡ್ಲೇ ನಿನಾದಳಿ ಗೆ ಮೈ ಉರಿದೆ ಹೋಯಿತು. ಆದರೂ ಏನು ತೋರಿಸಿಕೊಳ್ಳದೆ ಸುಮ್ಮನೆ ಇದ್ದಳು. ಮಾರನೆ ದಿನ ಜೈನ್ ನಿನಾದ ಗೆ ಕರೆ ಮಾಡಿ ಯಾಕೆ ಏನಾಯಿತು. ಕ್ಷೇಮ ತಾನೇ ? ಅದೇ ಮೊದಲ ಬಾರಿಗೆ ಜೈನ್ ಗೆ ಹೇಳಿದಳು. ನಿನ್ನ ಸಮಯ ಪ್ರಜ್ಞ್ಜೆಗೆ ವಂದನೆಗಳು ನೀನು ಕೊಡೋದು ಬೇಡ. ನಿಂಗೆ ನಿಶಾಂತ ಏನು ಹೇಳಿದನೋ ನಾನು ಕಾಣೆ.. ಅಂತಹ ತುರ್ತು ಪರಿಸ್ಥಿತಿ ಏನು ಇಲ್ಲ. ನಿಜ ಹೇಳಬೇಕಂದ್ರೆ ಇದು ನಂಗೆ ಇಷ್ಟ ಇಲ್ಲ. ಹೀಗಾಗಿ ನೀನು ಯಾವ ಯೋಚನೆ ಇಲ್ಲದೆ ಸುಮ್ಮನೆ ಇರು. ಇಷ್ಟು ಹೇಳಿದರೂ ಜೈನ್ ಗೆ ಸಮಾಧಾನ ಇಲ್ಲ. ಹೀಗಾಗಿ ಸ್ವಲ್ಪ ಜಾಸ್ತಿಯೇ ವಿವರಣೆ ಕೇಳಿ ಅಂತೂ ಕೊನೆಯಲ್ಲಿ ಏನು ಇಲ್ಲ ಅಂತ ನಿರಾಳವಾದ.
ಮತ್ತೆ ಮುಂದೆ ಎಂದೂ ಫೋನ್ ಕರೆಗಳು ಇಲ್ಲ. ದಿನಗಳು ಓಡೋಡಿ ಹೋದವು. ಒಂದು ದಿನ ಮತ್ತೆ ನಿನಾದಗೆ ಕರೆ, ಹಲೋ… ನಿಶಾಂತ ಮೊದಲಿದ್ದ ಕಂಪನಿಯಲ್ಲಿ ಇಲ್ಲ ಅಂತೆ, ನಾ ನಿಶಾಂತ್ ಫೋನಿಗೆ ಫೋನ್ ಮಾಡಿ ಸುಸ್ತಾದೆ ನೆಟ್ವರ್ಕ್ ಇಲ್ಲ, ಈಗ ಅರ್ಜೆಂಟ್ ಒಂದು ಲೆಕ್ಕ ಚಾರ ಕೇಳಬೇಕಿತ್ತು, ನಿಶಾಂತ್ ನ ಹೊಸ ಲ್ಯಾಂಡ್ ಲೈನ್ ನಂಬರ್ ಬೇಕು ಕೊಡು. ನಿನಾದ ಕೊಟ್ಟಿದ್ದೂ ಆಯಿತು. ಅಲ್ಲ ಯಾವಾಗ ಅಲ್ಲಿಂದ ಹೊಸ ಕಂಪನಿಗೆ ಹಾರಿದ್ದು. ಲೋ ಜೈನ್, ನೀ ಈ ಕತೆ ನಿಶಾಂತ್ ಬಾಯಲ್ಲೇ ಕೇಳು, ನಂಗೆ ಬೇರೆ ಫೋನ್ ಬರ್ತಿದೆ ಅಂತ ಕರೆ ಮುಗಿಸಿದಳು ನಿನಾದ. ನಿನಾದಗೆ ಹೇಳಿ ಕೊಳ್ಳುವ ಯಾವ ಸಂಬ್ರಮ ಉಳಿದಿರಲಿಲ್ಲ. ಹೀಗಾಗಿ ಯಾರಿಗೂ ಹೇಳಲಿಲ್ಲ. ಇದೆಲ್ಲ ಮುಗಿದು ಸ್ವಲ್ಪ ಸಮಯ ಆದಮೇಲೆ ನಿನಾದ ಯಾಕೋ ಹುಚ್ಚು ಸಾಹಸ ಮಾಡೋ ಹಟಕ್ಕೆ ಬಿದ್ದಳು. ಇಬ್ಬರೂ ಒಟ್ಟಿಗೆ ದುಡಿದರೂ ನಮ್ಮದು ಅಂತ ಇದುವರೆಗೂ ಏನೂ ಮಾಡಿ ಕೊಂಡಿಲ್ಲ್ಲ.. ನಾವ್ಯಾಕೆ ಇದ್ದ ಹಳೆ ಆಲದ ಮರಕ್ಕೆ ಜೋತು ಬೀಳೋದು ? ನೋಡೋ ನಂಗೆ ಆಲದ ಮರಕ್ಕೆ ಜೋತು ಬೀಳೋದು ಇಷ್ಟ ಇಲ್ಲ. ಅಂದು ಅದಕ್ಕೆ ಪರ್ಯಾಯ ವ್ಯವಸ್ಥೆ ಹುಡುಕೋಕೆ ಶುರು ಮಾಡಿದಳು. ಈ ನಿಶಾಂತ್ ಗೆ ಸಣ್ಣದು ಏನೂ ಕಾಣೋದೆ ಇಲ್ಲ. ಬೇಡ ಕಣೋ ಅಷ್ಟು ದೊಡ್ಡ ಸೈಟ್ ಅಂದ್ರೆ ಕೇಳಲೇ ಇಲ್ಲ. ಈಗ ಸಣ್ಣದು ಸಾಕು ಅಂದು ಮತ್ತೆ ಇದು ಸಣ್ಣದು ಆಯಿತು ಅಂದ್ರೆ ಒಂದಕ್ಕೆ ಎರಡು ಕೊಟ್ರು ಸಿಗೋಲ್ಲ ನೀ ಸುಮ್ಮನೆ ಇರು ಅಂತ ನಿನಾದಳ ಬಾಯಿ ಮುಚ್ಚಿಸಿದ್ದೂ ಆಯಿತು.
ಅಂತು ನಿನಾದ ಬೇಡ ಬೇಡಾ ಅಂತ ಬೊಬ್ಬಿಡುತ್ತಾ ಇದ್ದ ಹಾಗೆಯೇ… ಸೈಟ್ ಗೆ ಅಡ್ವಾನ್ಸ್ ಅಂತ ಹಣ ಕೊಟ್ಟಿದ್ದೂ ಆಯಿತು. ಇನ್ನು ಲೆಕ್ಕ ಮಾಡಿ ೯೦ ದಿನ ಇತ್ತು. ಅಷ್ಟರಲ್ಲಿ ಬಾಕಿ ಉಳಿದ ಹಣ ಹೊಂದಿಸ ಬೇಕಿತ್ತು. ಅಷ್ಟರಲ್ಲಿ ಲಾರ್ಡ್ ಆಸ್ಪತ್ರೆ ಸೇರಿದ ಸುದ್ದಿ. ಇನ್ನಿಲ್ಲದಷ್ಟು ತಲೆ ಬಿಸಿಯಾಗಿ ಹೋಯಿತು. ನೋಡು ನಿಶಾಂತ್… ನಾ ಹೇಳಿದೆ ಕಣೋ ಬೇಡ ಇಷ್ಟು ದೊಡ್ಡ ಸೈಟ್ ಬೇಡ ಅಂತ… ನೋಡು ಈಗ ಕೊಟ್ಟಿದಕ್ಕೆ ಬ್ಯಾಂಕ್ ಟ್ರಾನ್ ಸ್ಫಾರ್ ಬಿಟ್ರೆ ಬೇರೆ ಏನು ದಾಖಲೆ ಇಲ್ಲ. ಅಗ್ರೀಮೆಂಟ್ ಕಾಪಿ ಮೊದಲೇ ಇಲ್ಲ. ಏನು ಮಾಡೋದು ? ಬರೀ ತಲೆ ಕೆಡಿಸಿ ಕೊಂಡಿದ್ದೇ ಬಂತು. ಏನೂ ದಾರಿ ಹೊಳೆಯಲಿಲ್ಲ. ಇತ್ತ ಲ್ಯಾಂಡ್ ಲಾರ್ಡ್ ಕಾಲವಶ ವಾದರು. ಇನ್ನಷ್ಟು ಆತಂಕ ಆಗಿ ಹೋಯಿತು. ನಿಶಾಂತ್ ಬರೋ ಹಾಗೆ ಇರಲಿಲ್ಲ. ನಿನಾದ ಎದ್ದು ಬಂದಳು. ಅಂತೂ ಕೊನೆಗೆ ಲ್ಯಾಂಡ್ ಲಾರ್ಡ್ ಉತ್ತರ ಅಧಿಕಾರಿಗಳು, ನ್ಯಾಯವೇ ಒದಗಿಸಿ ಕೊಟ್ಟಿದ್ದರು. ಸ್ವಲ್ಪ ಸಮಯ ಕೊಡಿ ದಾಖಲೆಗಳು ಎಲ್ಲಾ ಸರಿ ಆದ ಮೇಲೆ ನಿಮ್ಮ ಹೆಸರಿಗೆ ಕೊಡೋಣ ಅಂದರು.
ನಿನಾದ ಒಂದು ನೆಮ್ಮದಿ ಉಸಿರು ಬಿಟ್ಟಳು. ಸ್ವಲ್ಪ ಸಮಯ ಸಿಕ್ಕಿತ್ತು. ಆದರ ಧನ ಮೂಲ ಯಾವುದೂ ಇರಲಿಲ್ಲ. ಸರಿ ಇದ್ದ ಉಳಿತಾಯವನ್ನೇ ಬಳಸಿಕೊಳ್ಳೋಣ ಅಂತ ಯೋಚನೆ ಮಾಡಿದಳು. ಆದರೆ ಅದೇ ಸಮಯಕ್ಕೆ ಮನೆ ಬದಲಿಸಲೇ ಬೇಕಾಗಿ ಬಂದು ಇದ್ದ ಎಲ್ಲ ಉಳಿತಾಯ ತೆಗೆದು ಮನೆ ಬದಲಾಯಿಸಿದ್ದೂ ಆಯಿತು. ಮುಂದೆ ಏನು ?? ಗೊತ್ತಿಲ್ಲ ಇಷ್ಟೇ… ಸ್ಟೇಟ್ ಬ್ಯಾಂಕ್ ಲ್ಯಾಂಡ್ ಲೋನ್ ಕೊಡುತ್ತೆ ಆದರೆ ಅದು ಸಾಲೊಲ್ಲ. ರಿಜಿಸ್ಟ್ರೇಷನ್ ಆಗೋ ಬೆಲೆಯ ೮೦% ಕೊಡೋದು. ಇಲ್ಲಿ ರಿಜಿಸ್ಟ್ರೇಷನ್ ಆಗೋ ಬೆಲೆ ತುಂಬ ಕಮ್ಮಿ. ಹೀಗಾಗಿ ಆ ಮಾರ್ಗ ಉಪಯೋಗಕ್ಕೆ ಬರಲಿಲ್ಲ. ಇದ್ದ ಸ್ವಲ್ಪ ಚಿನ್ನ ಬ್ಯಾಂಕ್ ನಲ್ಲಿ ಇಟ್ಟರೆ ಬೇಕಷ್ಟು ಸಿಗಬಹುದು ಅಂದು ಲೆಕ್ಕ ಹಾಕುತ್ತಿದ್ದ ನಿನಾದ ನಿಶಾಂತ್ ಗೆ ಅವಳ ಯೋಚನೆ ಹೇಳಿ ಬಿಟ್ಟಳು. ಆಗ ನಿಶಾಂತ್ ನೋಡು ನಿನಾದ.. ಅದೆಷ್ಟು ಆಸೆ ಪಟ್ಟು ಮಾಡಿಸಿ ಕೊಂಡಿದ್ದು ನೀನು..? ಹೌದು.. ಆದರೆ ಈಗ ಬೇರೆ ದಾರಿ ಇಲ್ಲ. ಅದೊಂದೇ ಉಳಿದ ದಾರಿ. ಇರು ಅವಸರ ಬೇಡ, ಏನಾದರೂ ಮಾಡೋಣ ಅಂದು ನಿಶಾಂತ್ ಭರವಸೆ ಮೂಡಿಸಿದ.
ದಿನಗಳು ಓಡೋಡಿ ಸಾಗುತ್ತಿದ್ದವು. ಏನು ಹೊಳೆಯಲಿಲ್ಲ. ಈ ನಡುವೆ ನಿಶಾಂತ್ ನ ಸಹುಧ್ಯೊಗಿ ನನ್ನ ಫ್ಲಾಟ್ ಒಂದು ಮಾರೋದು ಇದೆ ಅದು ಮಾರಿ ಹೋದ್ರೆ ನಿಂಗೆ ದುಡ್ಡು ಕೊಡುವೆ ಅಂದ. ನಿನಾದ ಆಗಲೇ ಹೇಳಿದಳು ಇದು ಆಗೋಲ್ಲ ಅನ್ನೋದರ ಇನ್ನೊಂದು ಮುಖ. ಅದೊಂದು ದಿನ ನಿನಾದಳಿಗೆ ಒಂದು ಯೋಚನೆ ಹೀಗೆ ಬಂದು ಹೋಯಿತು. ಒಂದು ಕೆಲಸ ಮಾಡಬಹುದು. ನಮಗೆ ಇಲ್ಲಿನ ಸ್ಥಳೀಯ ಬ್ಯಾಂಕ್ ನಲ್ಲಿ ಸಾಲ ಕೊಡೋಲ್ಲ. ಇರಬಹುದು. ಆದರೆ ನಿನ ಸ್ನೇಹಿತರು ಯಾರದ್ರೂ ನಿನ್ನ ಸಹಾಯಕ್ಕೆ ಬಂದರೆ ನಾವು ತಿಂಗಳು ತೀರಿಸಿ ಬಿಡೋಣ. ಎಲ್ಲ ಬ್ಯಾಂಕ್ ಚಾರ್ಜ್, ಬಡ್ಡಿ ನಾವೇ ಕಟ್ಟೋಣ.ಅಂತ ನಿಶಾಂತ್ ಗೆ ಹೇಳಿದಳು. ನಿಶಾಂತ್ ಗೂ ಸಲಹೆ ಸರಿ ಎನ್ನಿಸಿತು. ಆದರೆ ಹೀಗೆ ಮುಂದೆ ಬರುವವರಾರು?
ಒಂದು ದಿನ ಏನೋ ಮಾತನಾಡಿಕೊಂಡು ಕೂತವಳಿಗೆ ಈ ವಿಷಯ ತಲೆಗೆ ಬಂದು ನೋಡು ನಿಶಾಂತ್… ಈ ಕೆಲಸಕ್ಕೆ ಮುಂದೆ ಬಂದ್ರೆ ಜೈನ್ ಮಾತ್ರ.. ಒಂದು ಮಾತು ಅವನ ಬಳಿ ಕೇಳಿ ನೋಡು, ನಿನಾದ ಹೇಗೆ ನಾನು ಕೇಳಲಿ…. ?? !! ನೀನಲ್ಲದೆ ನಾನು ಕೇಳೋಕೆ ಆಗುತ್ತಾ ? ಯೋಚಿಸಿ ನೋಡು.. ಆವಾ ಏನಿದ್ರೂ ನೇರ ನೇರ.. ಆಗುತ್ತೆ ಅಥವಾ ಇಲ್ಲ ಅಷ್ಟೇ.. ಸುಮ್ನೆ ಕಾಲ ಹರಣ ಮಾಡೋಲ್ಲ. ಹೀಗಾಗಿ ಒಮ್ಮೆ ನಿನ್ನ ಎಲ್ಲ ಅಹಂ ಅನ್ನು ಬದಿಗೆ ಒತ್ತಿ ಕೇಳಿ ಬಿಡು. ಸರಿ ಕೇಳುವೆ ಅಂದಾಗ, ನಿನಾದಳ ಮನಸ್ಸು ಹೇಳುತ್ತಾ ಇತ್ತು. "ಜೈನ್ ಒಪ್ಪಿಕೊಳ್ತಾನೆ ನೀ ಹೆದರ ಬೇಡ". ನಿಶಾಂತ್ ಫೋನ್ ಮಾಡಿದಾಗ ಅತ್ತ ಕಡೆ ಯಿಂದ ಸ್ವಿಚ್ ಆಫ್. ಎರಡು ದಿನ ಬಿಟ್ಟು ಮಾಡಿದಾಗ "ನಂಗೆ ಹುಷಾರಿಲ್ಲ ಅದಿಕ್ಕೆ ಮೊಬೈಲ್ ಆಫ್ ಇತ್ತು ". ಏನಾಯಿತು? ಅಂತ ಕೇಳಿದರೆ ಏನು ಇಲ್ಲ ಥೈರಾಯಿಡ್ ಸರ್ಜೆರಿ ಆಯಿತು ಅಂದ, ಹೀಗಾಗಿ ಕೇಳೋದು ಎಲ್ಲ ಗಂಟಲಲ್ಲಿ ಉಳಿದು ಹೋಯಿತು ನಿನಾದ ಅಂತ ವಿಷಾದದಿಂದ ನಿನಾದಳಿಗೆ ಆಫೀಸ್ ಗೆ ಫೋನ್ ಮಾಡಿ ಹೇಳಿದ ನಿಶಾಂತ್.
ಅಂದು ಮೊದಲ ಬಾರಿಗೆ ಜೈನ್ ಗೆ ಫೋನ್ ಮಾಡಬೇಕು ಅಂದು ಕೊಂಡಳು. ಆದರೆ ಥೈರಾಯಿಡ್ ಅಂದಿದ್ದು ನೆನಪಾಗಿ ಫೋನ್ ಮಾಡಿದೆ ಮಾತನಾಡೋಕೆ ಕಷ್ಟ ಆದೀತು ಹೀಗಾಗಿ ಹೇಗೂ ವಿಶ್ರಥಿ ತೊಗೊತಿದ್ದಾನೆ ಫೇಸ್ ಬುಕ್ ನಲ್ಲಿ ಒಂದು ಮಸೇಜ್ ಹಾಕಿ ಕೇಳೋಣ ಅಂದು ಫೇಸ್ ಬುಕ್ ಹೊಕ್ಕು ಮೆಸೇಜ್ ಮಾಡಿದಳು, ಸುಮಾರು ಹೊತ್ತು ಉತ್ತರ ಇರಲಿಲ್ಲ. ಉತ್ತರ ಬಂದಾಗ ನಿನಾದ ಅಲ್ಲಿಂದ ಹೊರ ಬಂದಿದ್ದಳು. ಮಾರನೇ ದಿನ ಉತ್ತರ ನೋಡಿ ಮತ್ತೆ ಮಾತನಾಡಿಸಿದಾಗ , ಮಾತ್ನದೊಕೆ ಕಷ್ಟ ಆಗುತ್ತೆ, ನುಂಗೊಕೆ ಕಷ್ಟ ಆಗೊತ್ತೆ ಅಂದ. ಅಂತೂ ನಿನಾದ ಫೋನ್ ಮಾಡದೆ ಇದ್ದಿದ್ದು ಒಳ್ಳೇದೆ ಆಯಿತು ಅಂದು ಕೊಂಡಳು. ಆದರೆ ಮೊದಲ ಸಲ ಏನಾಯಿತು ನಿಂಗೆ ಅಂದು ಕೇಳಿದಳು. ನನ್ನ ಥೈರಾಯಿಡ್ ಗ್ರಂಥಿಯಲ್ಲಿ ಊತ ಕಾಣಿಸಿ ಕೊಂಡಿದೆ. ಅದಕ್ಕಾಗಿ ಶಸ್ತ್ರ ಚಿಕಿತ್ಸೆ ಮಾಡಿದರು ಅಂದ. ನಿನ್ನ ಸಮಸ್ಯೆ ಏನು? ಹೈಪರ್ ಥೈರಾಯಿಡಿಸಂ ?? ಗೊತ್ತಿಲ್ಲ ಸ್ಯಾಂಪಲ್ ಬಯಾಪ್ಸಿ ಗಾಗಿ ಕಳುಹಿಸ ಲಾಗಿದೆ ವಾರದ ಬಳಿಕ ರಿಪೋರ್ಟ್ ಬರುತ್ತೆ ಅಂದು ಹೇಳಿದ. ಈ ನಿನಾದಳಿಗೆ ತಲೆಯೊಳಗೆಲ್ಲ ಆಯೋ ಮಯ…ಲೋ ಜೈನ್ ನೀ ಸ್ವಲ್ಪ ಕೋಪ ಕಮ್ಮಿ ಮಾಡಿಕೊಳ್ಳು ಕಣೋ ನಿನ್ನ ಆರೋಗ್ಯ ಸುಧಾರಣೆ ಕಾಣುತ್ತೆ. ಯಾಕೆ ಕೋಪ ಮಾಡಿಕೊಳ್ಳುವೆ ? ಅ೦ದರೆ.. ಆತ "ನಿನಾದ… ನಂಗೆ ಕೋಪ ತಡೆದು ಕೊಳ್ಳೋಕೆ ಆಗೋಲ್ಲ ನಾನೇನು ಮಾಡಲಿ ಹೇಳು " ಅಂದಾಗ ನಿನಾದ ನೀ ಸಂಗೀತದ ಮೊರೆ ಹೋಗು ಕೋಪ ಕಮ್ಮಿ ಯಾಗುತ್ತೆ ಅಂದಳು. ನಿಶಾಂತ್ ನಿನ್ನೆ ಫೋನ್ ಮಾಡಿದ, ಏನೋ ಹೇಳ್ಬೇಕು ಅಂತ ಇದ್ದ ಅನ್ಸುತ್ತೆ. ಏನು ವಿಷಯ ? ಅಂದಾಗ ವಿಷಯ ಹೇಳೋಕೆ ನಿನಾದಳಿಗೆ ಬಾಯಿ ಆದರೂ ಎಲ್ಲಿ ಇತ್ತು? ಜೈನ್.. ಏನು ಇಲ್ಲವಲ್ಲ… ಅಂದು ಮಾತು ತೇಲಿಸಿ ಕೊಂಡು ಹೋದಳು.
ಆಮೇಲೆ ಅದೆಷ್ಟೇ ಒತ್ತಡ ಇದ್ದರೂ ಕೆಲಸದಲ್ಲಿ ದಿನಕೊಮ್ಮೆ ಹ್ಯಾಗಿರುವೆ ಅಂತ ಮೆಸೇಜ್ ಮಾಡೋಕೆ ಮರೆಯಲಿಲ್ಲ. ತಿಂಗಳ ಬಳಿಕ ನಿನಾದಳ ಆರೋಗ್ಯ ಕೂಡ ಕೆಟ್ಟು ಹೋಗಿ ಏನು ಬೇಡ ಅನ್ನೋ ಸ್ಥಿತಿಗೆ ಬಂದು ಹೋಯಿತು. ನಿಜ ಚಿಂತೆಯೇ ಇಷ್ಟಕೆಲ್ಲ ಕಾರಣ… ಹಣಕ್ಕೆ ಏನು ಮಾಡೋದು? ಉತ್ತರ ಸಿಗದ ಯಕ್ಷ ಪ್ರಶ್ನೆ ! ಸುಮ್ಮನೆ ಕೂತರೆ ತಲೆ ಹಾಳಾಗುತ್ತೆ ಏನಾದ್ರು ಓದಿ ಕೊಂಡು ಇರೋಣ ಅಂದು ಫೇಸ್ ಬುಕ್ ಗೆ ಬಂದಳು . ನೆನಪಿದೆ ಆ ದಿನ ಅಗಸ್ಟ್ ೩ ೨೦೧೨, ಹೀಗೆ ಕೂತಿದ್ದಾಗ ನಿಶಾಂತ್ ಮೊನ್ನೆ ಜೈನ್ ಕರೆ ಮಾಡಿದೆ ನೋ ಆನ್ಸರ್, ಹಿಂದೆ ಕರೆಯೂ ಮಾಡಲಿಲ್ಲ.. ಅಂತ ಹೇಳಿದಾಗ ಎಲ್ಲಿ ಅವನ ಆರೋಗ್ಯ ಮತ್ತೆ ಸರಿ ಇಲ್ವೋ ಏನೋ ನೀ ಸುಮ್ಮನೆ ಇರು ಅಂದು ಬಿಟ್ಟಳು ನಿನಾದ. ಅಷ್ಟೇ ಹೊತ್ತಿಗೆ ಜೈನ್ ಫೇಸ್ ಬುಕ್ ನ ಪ್ರೊಫೈಲ್ ಚಿತ್ರ ಬದಲಿಸಿದ. ಅದೇ ಸಮಯಕ್ಕೆ ಹಲೋ ಹಾಗಿದೀಯ ನಿನಾದ ಅಂದ. ಇರು ಆಮೇಲೆ ನಿಶಾಂತ್ ಗೆ ಫೋನ್ ಮಾಡುವೆ ಮೊನ್ನೆ ಆವಾ ಫೋನ್ ಮಾಡಿದ್ದ ನಾ ಊರಿಗೆ ಹೋಗಿದ್ದೆ ಕ್ಷಮೆ ಇರಲಿ. ನಿನ್ನೆ ತಡ ರಾತ್ರಿ ಮತ್ತೆ ಮರಳಿ ಬಂದೆ, ಅಂದ ಸರಿ ಹ್ಯಾಗಿರುವೆ ಅಂದರೆ ನಾನು ಕ್ಷೇಮ ಈ ಗ ಹೊರಗೆ ಹೋಗಬೇಕಿದೆ ಆಮೇಲೆ ಸಿಗುವೆ ಅಂದು ಹೋದ.
ನಿಶಾಂತ್.. ಜೈನ ಊರಲ್ಲಿ ಇರಲಿಲ್ಲ ಈಗ ಫೋನ್ ಮಾಡು ಅಂದೆ. ಫೋನ್ ಮಾಡಿ ಮಾತನಾಡಿ ಭಾರೀ ಕಷ್ಟ ದಿಂದ ವಿಷಯ ತಿಳಿಸಿದ್ದೂ ಆಯಿತು. ಜೈನ ಶಾಂತವಾಗಿ ೨-೩ ದಿನ ಸಮಯ ಕೊಡು ಎಲ್ಲ ಮಾಹಿತಿ ತಿಳಿದು ಕೊಂಡು ಹೇಳುವೆ ಅಂದ. ಒಂದು ವಾರ ಕಳೆದು ನಿಶಂಗೆ ಕರೆ ಮಾಡಿ ನಿಂಗೆ ಎಷ್ಟು ಬೇಕು ಹೇಳು ನೋಡೋಣ ಎಷ್ಠಾ ಗತ್ತೊ ಅಷ್ಟು ಎಷ್ಟು ಕೊಡುವೆ ಅಂದ. ನಿಶಾಂತ ಒಂದು ಮೊತ್ತ ಹೇಳಿದ. ಮತ್ತು ವಾರಕಳೆದು ನನ್ನಬ್ಯಾಂಕ್ ಸ್ಟೇಟಸ್ ಗೆ ಅಷ್ಟು ಕೊಡೋಲ್ಲ ಅಂತೆ ಇಷ್ಟು ಕೊಡ್ತಾರೆ ಅಂತೆ ಉಳಿದ ಹಣ ಒಂದು ತಿಂಗಳ ಬಳಿಕ ನನ್ನ ವೇತನದ ಬಳಿಕ ಕೊಡುವೆ. ಆದೀತಾ ಎಂದಾಗ ನಿಶಾಂತ್ ಗೆ ಏನು ಹೇಳಲು ಅಲ್ಲಿ ಉಳಿದಿತ್ತು. ಸರಿ ಬ್ಯಾಂಕ್ ಎಷ್ಟು ಕೊಡುತ್ತೋ ಅಷ್ಟು ಕೊಡಲಿ ಉಳಿ ದಿದ್ದಕ್ಕೆ ಏನಾದ್ರು ಮಾಡೋಣ. ನಿನ್ನ ಉಪಕಾರ ಈ ಜನ್ಮ ಪೂರ ಮರೆಯಲಾಗದ್ದು. ಅಂದು ಕೃತಜ್ಞತೆ ಸಲ್ಲಿಸಿದ.
****
ಅಂದು ೩೧ ಅಗಸ್ಟ್ ೨೦೧೨ ರಾತ್ರಿ ಸಮಯ ೧೦ ಘಂಟೆ ನಿಶಾಂತ ಮಲಗಿ ಆಗಿತ್ತು ಫೋನು ಅಳೋಕೆ ಸುರು ಯಾರು ಅಂದು ನೋಡಿದರೆ ಜೈನ್ ವಾಪಸು ಮಾಡಲು ನೋಡಿದರೆ ಕರೆನ್ಸಿ ಇರಲಿಲ್ಲ ಸರಿ ನೇರ ಬಂದು ಫೇಸ್ ಬುಕ್ ನಲ್ಲಿ ಹೊಕ್ಕಳು.. ಅಷ್ಟು ಹೊತ್ತಿಗೆ ಮಸೇಜ್ ಇತ್ತು ಬ್ಯಾಂಕ್ ಅಕೌಂಟ್ ನಂಬರ್ ಬೇಕು ನಾಳೆ ನಿಮಗೆ ಹಣ ತಲುಪಿಸುವೆ. ಮಾರನೆ ದಿನ ಹಣ ಬಂದಾಗಿತ್ತು. ಅದು ಸಂಜೆ ಲ್ಯಾಂಡ್ ಲಾರ್ಡ್ ಕಡೆಯಿಂದ ಯಾವಾಗ ಬರುವಿರಿ ? ಅಂತ ಫೋನ್, ಎಲ್ಲ ದಾಖಲೆ ರೆಡಿ ಆಗಿದೆ.
[…] ಇಲ್ಲಿಯವರೆಗೆ […]