ಹೇ ಗೆಳೆಯ ಅದೇನ್ ನಿನ್ನ ಕಣ್ಣ ಹೊಳಪು, ಅದೇನ್ ನಿನ್ನ ಕಾಳಜಿ, ಅದೇನ್ ನಿನ್ನ ಭರವಸೆ, ಅದೇನ್ ನಿನ್ ನಂಬ್ಕೆ ಇದೆಲ್ಲದ್ರ ಅರ್ಥ ಖಂಡಿತವಾಗಿಯೂ ಒಲವಲ್ಲವೇ? ಇನಿಯ. ಇಣುಕಿ ಇಣುಕಿ ಹೃದಯದ ಕಿಟಕಿ ತೆಗೆದೆಬಿಟ್ಟೆ ಕೊನೆಗೂ ನೀನು ಸುಳಿವಿಲ್ಲದ ತಂಗಾಳಿಯ ಹಾಗೆ , ಕತ್ಲೇನೆ ಕಂಡಿರದ ದೀಪದ ಹಾಗೆ,ಹೇ ಜಾದುಗಾರ ಅದೇನ್ ಮೋಡಿ ಮಾಡ್ಬಿಟ್ಟೆ ಈ ಬಡಪಾಯಿ ಹೃದಯಕ್ಕೆ, ಪ್ರತಿ ಬಡಿತಕ್ಕೂ ನಿನ್ ಹೆಸರನ್ನೇ ಮಿಡಿಯುತ್ತೆ. ಅಷ್ಟೇ ಅಲ್ಲ ಈ ಹಾಳಾದ್ ಮನಸ್ ಕೂಡ ನಿನ್ನನ್ನೇ ಸದಾ ನೆನಪ್ಸಿತ್ತೆ. ಇನ್ನು ಬಡ್ಡಿಮಗಂದ್ ಸಮಯದ ಕಥೆ ಮುಗಿದೇ ಹೋಯ್ತು ಬಿಡು ಪ್ರತಿ ಕ್ಷಣ ಕ್ಷಣಕ್ಕೂ ನೀನ್ ಜೊತ್ಗೆ ಇರ್ಬೇಕು ಅನ್ಸುತ್ತೆ ಕಣೋ.
ನಾನ್ ಇರ್ಬೇಕೊ ಬ್ಯಾಡ್ವೊ ಮಾರಾಯಾ ಅದೇನ್ ಕಾಡ್ತಿಯಾ ನೀನು ಕನಸಾಗಿ, ನನಸಾಗಿ, ಮತ್ತೆ ಎದುರಾಗಿ ಈ ಎಲ್ಲಾ ತಳಮಳಗೊಂಡ ಭಾವನೆಗಳನ್ನ ಹೇಳ್ಬೇಕೆಂದು ಉದರದಿಂದ ಹೃದಯ ದಾಟಿ ತುಟಿವರ್ಗೋ ಬಂದ್ ಮಾತ್ಗಳು ನಿನ್ ಕಂಡೊಡನೆ ದಿಕ್ಕಿಲ್ಲ್ದೆ ಓಡಿ ಹೋಗಿ ಬಿಡ್ತವೆ. ಓ ಇನಿಯನೇ ನಿನ್ ಅಂದ-ಚೆಂದ, ಆಸ್ತಿ ಗಿಸ್ತಿಗೆ ಮರಳ್ಗಾದ ಈ ಜೀವ ಯಾಕೋ ನಿನ್ ನಿಷ್ಕಲ್ಮಶ ಮನಸ್ಗೆ ಮರುಳಾಗಿದೆ. ನನ್ಗೆ ಗೋತ್ತು ನೀನ್ ಖಾಲಿ ಕೈ ಕಾಲಿದಾಸ ಅಂತಾ ಆದ್ರೆ ಜವಾಬ್ದಾರಿಗಳ ಮೂಟೆ ಹೆಗಲಲ್ಲಿ ಹೋತ್ತು ನಿನ್ದೆ ಆದ ಕನಸುಗಳ ಗಂಟುಮೂಟೆ ಕಟ್ಟಿ ಹಟ್ಟದ ಮೇಲಿಟ್ಟಿದಿಯಾ ಅಂತಾ ಆದ್ರೆ ಯಾಕೋ ಗೋತ್ತಿಲ್ಲ ಆ ಗಂಟುಗಳನ್ನ ನಾನು ಬಿಚ್ಚಬೇಕೆನಿಸುತಿದೆ ಜೀವನ ಪೂರ್ತಿ ನಿನ್ ಪಿರುತಿ ಅಡುಗೆಯಲಿ ಬೇಯಬೇಕಿನಿಸಿದೆ……
ಹೇ ಒಲವೇ ನಂಬ್ಕಿಗೆ ಇನ್ನೊಂದ್ ಹೆಸ್ರೆ ನೀನು ಅದ್ಕೆ ನಾನು ನಿನ್ನ ಪಿರುತಿಗಿಂತ ನಿನ್ ನಂಬಿರುವೆ ಈ ಬಡಪಾಯಿ ಹೃದಯ ಮಾರಾಟಕ್ಕಿದೆ ನಿನಗಲ್ಲದೆ ಯಾರಿಗೂ ಈ ಹೃದಯವನ್ನ ಕೊಂಡುಕೊಳ್ಳುವ ಶಕ್ತಿಇಲ್ಲ ಅನ್ಸುತ್ತೆ ನನ್ಗೆ….
ನೀನಾಗಿಯೇ ಸೃಷ್ಟಿಸಿರುವ
ಮಹಲ್ಗೆ ನಾನಾಗುವೆ ತಾಜ್
ಅಮೃತಶಿಲೆಗಳ ಬಳಕೆ ಬೇಡ ಒಡೆಯ
ಸೋಗೆಯ ಮಹಲೇ ಲೇಸು ಗೆಳೆಯ….
ಮಲಗಲು ಅಟ್ಟಣೆಯ ಕಲ್ಪನೆ ಏಕೆ ಪ್ರಿಯಾ
ಚಿನ್ನದ ಮಣ್ಣಿನ ಹಾಸಿಗೆಯೇ ಸಾಕಲ್ಲವೇ…
ಆಳುಮುಳು ಗೊಬ್ಬರ ಬೆರೆಸಿದ
ರಸಕವಳದ ರುಚಿಯಾಕೆ ಗೆಳೆಯ
ಅಂಬಲಿ ಕುಡಿದು ಇರುವೆ ಅರಸಿಯಂತೆ….
ತೋರಿಕೆಯ ಒಡವೆಯ ಆಸೆ ತೊರೆದು ಬಂದು ಬಿಡುವೆ ನಿನ್ನೊಂದಿಗೆ…
ಕೊಡಿಸಿಬಿಡು ಮೀಸಲಿರುವ
ಆಲಿಂಗನದ ಚುಂಬನದ ಸರಮಾಲೆಯನ್ನೇ…
ನೀನಾಗಿಯೇ ಸೃಷ್ಟಿಸಿರುವ
ಮಹಲ್ಗೆ ನಾನೇ ತಾಜ್……
ಏನಂತಿಯಾ ಇನಿಯ ನಿನ್ನ ಪುಟಾಣಿ ಮಹಲ್ ಗೆ ನಾನೇ ಮಾಮ್ತಾಜ್ ನೀನೆ ಶಹಜಾನ್ ಅಲ್ವಾ ನನ್ಗೆ ಗೋತ್ತು ಕಣೋ ನೀನ್ ಮನಸ್ಸಲಿ ನಾನು ಇದಿನೀ ಅಂತಾ ಆದ್ರೆ ನೀನು ಹೇಳ್ತಿಲ್ಲಾ ಅಷ್ಟೇ ನೀನ್ ಏನಾದರೂ ಮಾಡ್ಕೋ ಅದೇಲ್ಲಾ ಗೋತ್ತಿಲ್ಲ ಆದ್ರೆ ನೀನ್ ಜೀವನ್ದ್ ಪೂರ್ತಿ ನಾನೇ ಇರ್ಬೇಕು ನನ್ಗೆ ರಾಜನೂ ನೀನೆ ಇನಿಯನು ನೀನೆ…….
ನನ್ಗೆ ನಿನ್ ತರ ಕದ್ದು ಮುಚ್ಚಿ ಪಿರುತಿ ಮಾಡೋಕೆ ಬರೋದಿಲ್ಲ ಕಣೋ ನಾನ್ ಏನ್ ನಿನ್ಗೆ ಸಾವಿರ ಲಕ್ಷಗಟ್ಲೇ ಕಾಸ್ ಕೇಳ್ತಿಲ್ಲಾ ಬೆಲೆನೆ ಕಟ್ಟೋಕೆ ಆಗ್ದೆ ಇರೋ ಜೀವನ್ನನಾ ಭಿಕ್ಷೆ ಕೇಳ್ತಾ ಇದಿನಿ ಈ ಬಡಪಾಯಿ ಭಿಕ್ಷುಕಿಗೆ ಭಿಕ್ಷೆ ಹಾಕ್ತಿಯಾ ಇಲ್ಲ ಖಾಲಿ ಕೈಯಲಿ ವಾಪಸ್ ಕಳ್ಸತ್ತಿಯೋ ನಿನ್ಗೆ ಬಿಟ್ಟಿದ್ದು…
ನಿನ್ನ ಉತ್ತರದ ನಿರೀಕ್ಷೆಯಲ್ಲಿರುವ ನಿನ್ನೊಲವಿನ ಭಿಕ್ಷುಕಿ
-ಪೂಜಾ.ಎಲ್.ಕೆ
Supper