ಮೊದಲು ಓದುಗನಾಗು

ಒಡಲಾಳದ ಪದ್ಯಗಳು: ಎಚ್.‌ ಷೌಕತ್‌ ಅಲಿ, ಮದ್ದೂರು

ಕ್ರಿಯಾಶೀಲ ಬರಹಗಾರ ಕವಿ ವಿಮರ್ಶಕ ಕಥಾಸಂಕಲನಕಾರ ನಾಗೇಶ್ ನಾಯಕ್ ಬೆಳಗಾವಿ ಜಿಲ್ಲೆಯ ಸವದತ್ತಿ ಹುಟ್ಟೂರು. ಶಿಕ್ಷಕರಾಗಿ ಮಡಿಕೇರಿಯಲ್ಲಿ ಸೇವೆ. ಜೊತೆ ಜೊತೆಯಲ್ಲಿ ಕಥೆ-ಕವನಗಳನ್ನು ನಾಡಿನ ಪತ್ರಿಕೆಗಳಲ್ಲಿ ಪ್ರಕಟಿಸಿ ತೃಪ್ತಿಯಿಂದ ಸ್ಪೂರ್ತಿಗೊಂಡು ಹತ್ತು ಹಲವು ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿರುವ ಮತ್ತು ಪ್ರಮುಖ ಬರಹಗಾರರಲ್ಲಿ ಗುರುತಿಸಿಕೊಂಡ ಆತ್ಮೀಯ ಲೇಖಕ. ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಅನೇಕ ಸಮ್ಮೇಳನಗಳಲ್ಲಿ ಆಕಾಶವಾಣಿಯಲ್ಲಿ ಮತ್ತು ಚಂದನ ವಾಹಿನಿಯ ಸಂದರ್ಶನದ ಮೂಲಕ ಕನ್ನಡಿಗರಿಗೆ ಚಿರಪರಿಚಿತ ನಾಗೇಶ್ ನಾಯಕ್.
ಪ್ರಸ್ತುತ ಇವರ ಕವನ ಸಂಕಲನ ‘ಒಡಲ ಕಿಚ್ಚಿನ ಹಿಲಾಲು ಹಿಡಿದು’ ವಿಭಿನ್ನವಾಗಿ ರಚಿಸಲ್ಪಟ್ಟ ಕವಿತೆಗಳು. ಈ ಕೃತಿಯಲ್ಲಿವೆ ಇಲ್ಲಿ ಶೋಷಣೆ ಎಲ್ಲಾ ಹಂತದಲ್ಲೂ ನಡೆಯುತ್ತಿರುವಾಗ ಹೃದಯದ ಬಾಗಿಲನ್ನು ತಟ್ಟಿ ಅವರಲ್ಲಿ ಜಾಗೃತಿ ಮೂಡಿಸಿ ಪ್ರಗತಿಯನ್ನು ಸಾಧಿಸುವ ಪ್ರಯತ್ನ ನಾಗೇಶ್ ಅವರು ಅತ್ಯಂತ ಗಂಭೀರವಾಗಿ ಮಾರ್ಮಿಕವಾಗಿ ಮತ್ತು ನೈಜವಾಗಿ ಚಿತ್ರಿಸುವಲ್ಲಿ ಕವಿಯ ಶ್ರಮ ಕೃತಿಯಲ್ಲಿ ಅಪಾರ. ಮೆಚ್ಚುಗೆ ಗಳಿಸುವಲ್ಲಿ ಮತ್ತು ಓದುಗರ ಮನಸ್ಸಿನಲ್ಲಿ ನೆನಪಾಗಿ ಕಾಡುವ ಕವಿತೆಗಳಾಗಿ ಮತ್ತೆ ಮತ್ತೆ ತಮ್ಮ ಅಸ್ತಿತ್ವವನ್ನು ಪಡೆದುಕೊಳ್ಳುವಲ್ಲಿ ಯಶ ಕಂಡಿದ್ದಾರೆ.

ಕವನ ಸಂಕಲನದ ಶೀರ್ಷಿಕೆಯ ಕವಿತೆ ‘ಒಡಲ ಕಿಚ್ಚಿನ ಹಿಲಾಲು ಹಿಡಿದು’ ಕವನದಲ್ಲಿ
‘ಗರಿ ಮುದುರಿಕೊಂಡ ರೆಕ್ಕೆಗಳ
ಇನ್ನಾದರೂ ಬಿಚ್ಚ ಬೇಕಿದೆ
ಕುಕ್ಕಿ ತಿನ್ನುವ ರಣಹದ್ದುಗಳ
ರಕ್ತ ಹೀರಬೇಕಿದೆ
ಬಚ್ಚಿಟ್ಟ ಒಡಲ ಕಿಚ್ಚಿನ
ಹಿಲಾಲು ಹಿಡಿದು
ಹಲಾಲುಕೋರರ ಮಹಲಿಗೆ
ಮುತ್ತಿಗೆ ಹಾಕಬೇಕಿದೆ’

ಕೂಲಿಕಾರರು ನಿರ್ಗತಿಕರು ಅಮಾಯಕರು ಕೇರಿಯಲ್ಲಿ ಇರುವವರ ಶ್ರಮದ ಫಲವೇ ಶ್ರೀಮಂತ ಮಹಲು ಮನೆ ಮಾಳಿಗೆಗೆ ಎತ್ತರ ಅತಿ ಎತ್ತರದ ಕಟ್ಟಡಗಳ ನಿರ್ಮಾಣ ಹಂತ ದುಡಿಯುವ ಕೂಲಿ ಕಾರ್ಮಿಕರು ಮತ್ತೆ ಅದೇ ಕೇರಿ ಕೆಲಸ ಆದ ಮೇಲೆ ನೀನ್ಯಾರು ಅಂತನೆ ವಿಚಾರಿಸದೆ ಶ್ರೀಮಂತವರ್ಗ ಇವರಿಗೆ ತಿರಸ್ಕಾರ ಸಾವು-ನೋವು ಯಾವುದಕ್ಕೆ ಯಾವುದಕ್ಕೂ ಇಲ್ಲದವರಿಗಾಗಿ ದನಿ ಎತ್ತಬೇಕಾಗಿದೆ. ಈ ಕಿರಾತಕರ ಹಿಂಸಾಪ್ರವೃತ್ತಿ ಕಡಿವಾಣ ಹಾಕಬೇಕಿದೆ. ರಕ್ತ ಕುದಿಯುತ್ತಿದೆ ಶೋಷಣೆಯ ಚಿತ್ರಣ ಕವಿಯ ಅಂತರಂಗ ಹೊಕ್ಕಿದೆ.

ಬಡತನದ ವಾಸ್ತವ ಸತ್ಯದ ಪರಿಚಯ ಕವಿ ನಾಗೇಶ್ ರವರು ಅತ್ಯಂತ ಮಾರ್ಮಿಕವಾಗಿ ಸುದ್ದಿ ತರುವ ‘ಹನ್ನೆರಡ ಪೋರ’ ಎಂಬ ಕವಿತೆಯಲ್ಲಿ ಚಿತ್ರಿಸಿದ್ದಾರೆ. ಪೋರ ನಂಬಿ ಕುಳಿತಿರುವ ಮನೆ ಚಿತ್ರಣ ಕಣ್ತುಂಬಿ ಬರುತ್ತದೆ.
“ಮುಸುರೆ ತಿಕ್ಕುವ ಅವ್ವ
ದುಡಿದದ್ದನ್ನು ಗಡಂಗಿ ಗೆ ಸುರುವಿ
ತೂರಾಡುವ ಅಪ್ಪ
ಪುಟ್ಟ ತಂಗಿಯ ಕನಸುಕಂಗಳು
ಓದಿಗೆ ಎಂದೋ ಬಿದ್ದ ಅರ್ಧಚಂದ್ರ
ಇನ್ನೇನು ಬಿದ್ದೇ ಬೀಳುತ್ತೇನೆ ಎಂದು
ಭಯ ಬೀಳಿಸುವ ಜೋಪಡಿ
ಊಹುಂ
ನಾವ್ಯಾರೂ ಅವನ ಕಣ್ಣೊಳಗೆ
ಇಣುಕುವುದೇ ಇಲ್ಲ”

ಜವಾಬ್ದಾರಿ ಹೊತ್ತ ತಾಯಿ ಬೇರೆಯವರ ಮನೆಯ ಕೆಲಸದಾಕೆ, ಕುಡುಕ ಅಪ್ಪ, ತಂಗಿ ಮದುವೆ ಚಿಂತೆ, ತನ್ನ ಓದಿಗೆ ತಿಲಾಂಜಲಿ ಇವತ್ತೋ ನಾಳೆಯೋ ಬೀಳುವ ಜೋಪಡಿ ಇದು ಸಂಸಾರದ ಕಥೆ ನಾಗೇಶ್ ಲೇಖನಿ ಮಾಡಿದೆ. ಕವಿ ಇಲ್ಲಿ ಕಲ್ಪನಾವಿಲಾಸ ಅಲ್ಲಿಯ ವಾಸ್ತವ ಬದುಕನ್ನು ಕಂಡು ಮರುಕ ಪಡೋ ಭಾವಜೀವಿ. ಮಾತಿಗೂ ಮೌನಕ್ಕೂ ವಾದ ನಡೆದಾಗ ಗೆಲವು ಯಾರ ಪಾಲಿಗೆ. ನಾಗೇಶ್ ರವರು ‘ಮೌನ ಮೀರಿದ ಮಾತು’ ಕವಿತೆ ಒಂದು ಚಿಕ್ಕ ಚಿಕ್ಕ ಶಬ್ದಗಳಲ್ಲಿ ದೊಡ್ಡ ದೊಡ್ಡ ಅರ್ಥ ನೀಡುವುದರಲ್ಲಿ ಸಿದ್ಧಹಸ್ತರು.

“ಹಸಿದ ಹೊಟ್ಟೆಯ ಬೆಂಕಿ
ಒಡಲ ಸುಡುತಿರಲು
ಉಣಿಸಿ ತಣಿಸಲು ಮೌನಕ್ಕೆ
ಸಾಧ್ಯವಿಲ್ಲ.”
ಎಲ್ಲಿ ಮಾತಿಗೆ ಮನ್ನಣೆಯೇ ಇಲ್ಲವೋ ಅಲ್ಲಿ ಮೌನಕ್ಕೆ ಬೆಲೆಯೇ ಇರದು. ಹೊಟ್ಟೆ ಹಸಿವ ಮೌನವಾಗಿದ್ದರೆ ಅವನ ಹೊಟ್ಟೆ ತುಂಬುವುದಿಲ್ಲ.’ ತಾಳ್ಮೆಯೇ ತಪಸ್ಸು ‘ಎಂದು ಒಂದು ಗಾದೆ ಮಾತಿದೆ. ಮೌನವಾಗಿದ್ದುಕೊಂಡು ಎಷ್ಟು ಸಮಯ ಸಹನೆಯಿಂದ ಹಸಿದ ಹೊಟ್ಟೆಯಲ್ಲಿ ಇರೋದಕ್ಕೆ ಸಾಧ್ಯ? ಆಗ ಮೌನ ಮುರಿದು ಮಾತಾಡಿದರೆ ಹಸಿದವರಿಗೆ ಅನ್ನವಾದರೂ ಸಿಗುತ್ತು. ಇಲ್ಲಿ ನಾಗೇಶ್ ರವರು ಓದುಗರಿಗೆ ಒಂದು ಸಲಹೆ ನೀಡುತ್ತಾರೆ.ಎಲ್ಲಿ ಮಾತು ಅಥವಾ ಎಲ್ಲಿ ಮೌನ ಯೋಚಿಸಿ ತೀರ್ಮಾನಿಸಿ ಆಯ್ಕೆ ಮಾಡಿಕೊಳ್ಳಬಹುದು ಇಲ್ಲವೆಂದರೆ ಗೊಂದಲವಾಗಿತ್ತು.
“ದೇವ ಗಣದ ದೊರೆಗೊಂದು ಬಿನ್ನಹ” ಕವಿತೆಯಲ್ಲಿ ದೇವರಲ್ಲಿ ಪ್ರಾರ್ಥಿಸುವ ಕವಿ ನಾಗೇಶ್ ಮನುಕುಲದ ಒಳಿತಿಗಾಗಿ ಹಂಬಲಿಸುವ ಜೀವ.

‘ಮಿಡಿವ ನೋವಿಗೂ ಒಂದು
ನೇವರಿಗೆಯ ಸ್ಪರ್ಶ ಕೊಡು
ಹರಿವ ಕಣ್ಣೀರಿಗೂ ಒಂದು
ತೊಡೆಯುವ ಜೀವ ನೀಡು’

ದುಃಖದ ಕಂಬನಿ ಗಳನ್ನು ಒರೆಸುವ ಸಾಂತ್ವನ ನೀಡುವ ಸ್ಪರ್ಶ ನೀಡುವ ದುಃಖಿತ ಜೀವಕ್ಕೆ ಸಮಾಧಾನಿಸುವ ನೇವರಿಗೆಯ ಬಗ್ಗೆಯ ಸ್ಪರ್ಶ ನೀಡು. ಆ ದುಃಖ ಹಂಚಿಕೊಳ್ಳುವ ಒಂದು ಆತ್ಮೀಯ ಜೀವ ನೀಡು. ಓ ದೇವರೇ ನೀ ಎಲ್ಲರ ಇಷ್ಟಾರ್ಥ ಸಿದ್ಧಿಸಿ ಎಲ್ಲರಿಗೂ ಬಲ ಕೊಡು ಪ್ರಭುವೇ ಎಂದು ಕವಿ ಕವಿತೆಯಲ್ಲಿ ಬೇಡುತ್ತಾನೆ.

‘ಆಸೆಯೆಂಬ ಮೋಹ ತ್ಯಜಿಸು
ದುಃಖ ಸನಿಹ ಸುಳಿಯದು
ದುರಾಸೆ ದೋಣಿ ಹತ್ತಬೇಡ
ತೀರ ಎಂದು ತಲುಪದು ‘

‘ಬುದ್ಧನ ಎಂಬ ಬೆಳಕು’ ಈ ಕವನದ ಸಾಲುಗಳು ಮಹಾತ್ಮ ಬುದ್ಧನ ಆಸೆಯೇ ದುಃಖಕ್ಕೆ ಮೂಲ ಎಂಬ ಮಾತನ್ನು ನೆನಪಿಗೆ ತರುತ್ತದೆ ಎಂದು ಮನುಷ್ಯ ಆಸೆಯ ಹಾಳಾಗಿ ಇಲ್ಲದ್ದನ್ನು ಬಯಸಿ ಬಯಸಿ ಬರಿದಾಗಿ ದುಃಖ ದುಮ್ಮಾನ ಚಿಂತೆ ನಿರಾಸೆಗಳಿಗೆ ಬಲಿಯಾಗುತ್ತಿದ್ದಾನೆ. ಯಾವತ್ತಿಗೂ ದುರಾಸೆಯೆ ಆಗಿದೆ. ಆಸೆಗೆ ಕೊನೆಯೆಂಬುದಿಲ್ಲ. ಅತಿಯಾಸೆ ಗತಿಗೇಡು ಎಂಬ ಮಾತಿನಂತೆ ಆಗುವುದು ಖರೆ. ಕವಿ ನಾಗೇಶ್ ಬುದ್ಧನ ಬೆಳಕು ಮನುಕುಲಕ್ಕೆ ಪ್ರಕಾಶಿಸಲಿ ಎಂದು ಬಯಸುವುದು ಚಂದ ಅನಿಸಿತುಪ್ರಕಾಶಿಸಲಿ ಎಂದು ಬಯಸುವುದು ಚಂದ ಅನಿಸಿತು.

ಕವಿ ನಾಗೇಶ್ ರವರ ಯಾವುದೇ ಕವಿತೆಯಾಗಲೀ ಅದರಲ್ಲಿ ಯಾರು ಎಷ್ಟು ನೋವು ಕೊಟ್ಟರೋ ಅವರಿಗೆ ಒಳ್ಳೆಯದನ್ನು ಬಯಸುವ ಹೃದಯವಂತರು ಅವರ ಹಾರೈಕೆ ಪದ್ಯದಲ್ಲಿ
ಕೊನೆಗೊಂದು ಮಾತು
ತೊರೆದು ಹೋಗುವವರ
ಹಿಡಿದು ಕೂರಿಸಲಾಗದು
ದಿವಿನಾಗಿರಲಿ ಬಾಳು ಎಂಬ
ಹಾರೈಕೆಯೊಂದರ ಹೊರತು
ನೀನು ಹೆಜ್ಜೆಯಿಟ್ಟ ಹಾದಿಯಲ್ಲೆಲ್ಲ
ಹೂವರಳಲಿ
ಮುಳ್ಳಿನ ಮೊನಚು
ಅಂಗಾಲಿಗೇ ಮೀಸಲಿರಲಿ

ಬಿಟ್ಟು ಹೋಗುವಳು ಬಾಳು ನೀಡಿಯಾನು ತಿರಸ್ಕರಿಸಿದ ಸತ್ಕಾರ ಹೋಗು ನೀನು ಹೋದೆಡೆ ನೀ ಹೆಜ್ಜೆ ಇಟ್ಟ ಹಾದಿಯಲ್ಲ ಹೂವುಗಳ ಅರಳಲಿ ನೀನಾದರೂ ಸುಖವಾಗಿರು ಇದು ನನ್ನ ಹಾರೈಕೆ ನೀ ಕೊಟ್ಟ ನೋವು ನನ್ನ ಪಾಲಿಗೆ ಸುಳ್ಳಾಗಲಿ ಎಂದು ನನ್ನನ್ನು ಹೃದಯವಂತ ಹಲವು ಕವಿತೆಗಳು ನನ್ನವ್ವ ಅರೆತೆರೆದ ಕಣ್ಣುಗಳ ಮುಚ್ಚಲಾಗದು ಬರಬೇಕು ಉಸಿರಾಡುವ ವಾಸವಾಗಿದ್ದೇನೆ ಸ್ವಾಮಿ ಎಲ್ಲಾ ಪದ್ಯಗಳಲ್ಲಿ ನಾವಿನ್ಯತೆ ಇದೆ ಏನೋ ಹೊಸ ವಿಚಾರ ಓದುಗರಿಗೆ ಸಿಗುತ್ತದೆ. ಸಾಧನೆಗಳ ಸರಮಾಲೆಗಳ ಸರದಾರ ಕವಿ ನಾಗೇಶ್ ನಿಮಗೆ ವಾಗ್ದೇವಿಯ ಕೃಪೆ ಲಭಿಸಲಿ ನನ್ನ ಶುಭಕಾಮನೆ ಯು ಜೊತೆಗಿರಲಿ ನಮಸ್ತೆ.

-ಎಚ್.‌ ಷೌಕತ್‌ ಅಲಿ, ಮದ್ದೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *