ಪ್ರೀತಿ ಪ್ರೇಮ

ಒಂದು ಆತ್ಮೀಯ ಆರೈಕೆ ಮರೆಯಾದಾಗ..: ವೃಶ್ಚಿಕ ಮುನಿ

ನೀನು ಮರೆಯಾದ ಹಾದಿಗುಂಟ..

ಸಾಲು ಮರದ ಹಾದಿಗುಂಟ ಮಳೆ ಬಿದ್ದ ನೆಲ, ಗಾಳಿಗೆ ಉದುರಿ ಬಿದ್ದ ಹಳದಿ ಹೂ, ಎಲೆ ಬಳುಕುಸುತ್ತಾ ಬಿಸುವ ತಂಪು ತಂಗಾಳಿ ಮೇಲೆ ಕವಿದ ಮೋಡ, ತೋಯ್ದ ಟಾರು ರಸ್ತೆಯ ಮೇಲೆ ಚೆಲ್ಲಿದ ಹಣ್ಣಲೆ ತೊಟ್ಟಿಕ್ಕುವ ಸಣ್ಣ ಹನಿಯ ಸಿಂಚನ. ದೂರದಲಿ ರವಿಯ ಹಳದಿ ಕಿರಣ, ಆ ಸಮಯಕ್ಕೆ ಒಂದು ರಮ್ಯತೆ ಇರಲು ಆತ್ಮೀಯ ಜೀವ ಜೊತೆಯಿರಲು ನಡಿಗೆ ದೀರ್ಘವಾಗಿರಲು ಇಟ್ಟ ಅಡಿಯ ಲೆಕ್ಕವಿಲ್ಲ ಒಂದು.. ಎರಡು.. ಮೂರು.. ಹೀಗೆ ಉಸಿರಿರೋವರೆಗೂ, ಸವಿದಷ್ಟು ಪ್ರೀತಿಯ ಸನಿಹ ಎನ್ನಬಹುದು. ಸಾಗುವಷ್ಟು ದೂರ ನಮ್ಮದೇ ಎನ್ನಬಹುದು ಸಾಗುವುದು ನಾವೇ.. ಮಾತು ಮಾತುಗಳ ಭೋರ್ಗರೆತ ಬದುಕು ಭಾವನೆಗಳ ವಿನಿಮಯ ತುಸು ನಗು, ತಸುವೆ ಕೋಪ, ಅತಿಅನ್ನಿಸುವಷ್ಟು ಪ್ರೀತಿ ಇವುಗಳ ನಡುವೆ ಹೆಜ್ಜೆ ಇಟ್ಟಾಗ ತಾಸುಗಳಗಳ ಲೆಕ್ಕವಿಲ್ಲ ಸಮಯದ ಪರಿವೂ ಇಲ್ಲ ಸಂಜೆ ಸರಿದ್ದಿತು, ಈಗ ಒಂದಷ್ಟು ಮೌನ. ಆ ಕಡೆಯಂದ ಪಿಸುಮಾತು ಭಾವಲಹರಿ ಈ ಸಂಜೆಗೆ ಸರಿಸಾಟಿ ಉಲ್ಲದ ಅನುಭವ ಮನಕ್ಕೂ ದೇಹಕ್ಕೂ. ಮನಸು ಹಗುರ,ಭಾವನೆಗಳ ಹರಿದಾಟ ಕಣ್ಣು ಹರಿದಾರಿ. ಹೀಗೆ ಅವಳ ದಿನಚರಿಯಲ್ಲಿ ಕಳೆದು ಹೋದ ಅನುಭವ. ಮೌನಕ್ಕೆ ಮಾತು ಒಳದಾರಿ ಬಾಳಹಾದಿಯಲ್ಲಿ ಪಯಣ ಮಾಡುವ ಈ ಮನಸು ಆ ರಾತ್ರಿ ಈ ಕಪ್ಪಣೆಯ ಟಾರು ರಸ್ತೆಯ ಮೇಲೆ ಸುಮ್ಮನೇ ಮಲಗಿದೆ.ನನ್ನ ಪಯಣ ಸಾಗಿಯೆ ಇದೆ ಅವಳದು ಸಾಗಿದೆ. ಅವಳ ಹೊಸ ಹಳೆಯ ನೆನಪಗಳನ್ನು ತೋಡಿಕೊಂಡಾಗ ಆ ನೆನಪಿಗಳಿಗೆ ಮೊದಲ ಕೇಳುಗನಾಗಿದ್ದೆ ನಾನು. ಸಂತೋಷಕ್ಕೆ ನಾನೇ ಸಂಭ್ರಮಿಸಿದ್ದೆ. ನೋವುಗಳಿಗೆ ಕಣ್ಣಹನಿಯಾಗಿದ್ದೆ.

ವಿಧಿ ಕೊಟ್ಟ ಉಡುಗರೆ….

ಅದೃಷ್ಟ ಒಡ್ಡುವ ಪರೀಕ್ಷಗೆ ನಾವು ಬುಡಮೇಲು ಆಗುತ್ತೇವೆ. ಜೀವನ ಅಂದುಕೊಂಡಂತಿಲ್ಲ ಇರಬೇಕೆಂಬ ನಿಯಮವೂ ಇಲ್ಲ. ನಾನೀಗ ಈ ಹಿಂದಿನ ವೃತ್ತಾಂತವನ್ನು ತೆರೆದುಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತೇನೆ. ಈ ಮಳೆ ಬಿದ್ದ ರಾತ್ರಿಯು ನನ್ನ ಸಂಗಡವಿದೆ. ನನ್ನ ತಿಳುವಳಿಕೆಯಲ್ಲಿ ಅವಳ ಸಂಗದಲ್ಲಿ ನೆಡೆದಾಡಿದ ದಾರಿ, ದೇವಸ್ಥಾನ, ಅನುಭವಿಸಿದ ಸಂಕಟ ಈ ಎಲ್ಲ ನೆನಪಿನ ಬುತ್ತಿಯನ್ನು ಬಿಚ್ಚಿ ಉಣ್ಣತೊಡಗಿದರೆ ಸಂತೋಷದಷ್ಟೇ ವಿಷಾದವೂ ಮುಂದು ಮಾಡಿಕೊಂಡು ಬರುತ್ತದೆ. ಅವತ್ತು ಅವಳ ಹೃದಯದಿಂದ ಆ ಮಾತು ನನ್ನ ಮನಸನಾಳಕ್ಕೆ ಇಳಿಯಿತು. ದುಃಖ ಸಂತೋಷ ನೆಮ್ಮದಿ ನಗುವಿನ ಪ್ರವಾಹವನ್ನು ಹರಿಸಿತು. ಹಲವಾರು ಮಾತುಗಳು ತಾನೇ ತಾನಾಗಿಯೇ ಮುಗಿದು ಹೋದವು. ಯಾವ ಮಾತುಗಳಿಗೂ ಮಾತನಾಡುವ ದೈರ್ಯವಿಲ್ಲ. ಅ ದುಃಖಕ್ಕೆ ಅವಳ ಕೈ ಕಡಲಾಗಬೇಕಿತ್ತು ಆದರೆ ಆ ಕ್ಷಣ ಕೈ ಕೊಸರಿಕೊಂಡಿತ್ತು. ಅನುರೀತಿಯಿಂದಾರೂ ಸಮಾಧಾನದ ಉಸಿರು ನನ್ನನ್ನು ಸಮಾದಾನಿಸುವ ಗೋಜಿಗೆ ಹೋಗಲಿಲ್ಲ. ಆದರೆ ನೋವಿನ ತಾಕಲಾಟ ಸಂಕಟ ಅವಳು ಕಣ್ಣನಲ್ಲಿ ತುಳುಕುತ್ತಿತು. ಆ ಕಣ್ಣನ್ನು ಒಂದು ಕ್ಷಣವೂ ನೋಡಲಾಗಲ್ಲಿ.

ಅದೃಷ್ಟದ ಆಟದಲ್ಲಿ ನಾನು ದಾಳ….

ಜೀವನದಲ್ಲಿ ಸಿಕ್ಕ ಉತ್ತಮ ಗೆಳತಿ ನೀನು. ಈಗ ಮನಸು ಮೌನದ ಅಡಿಳಾಗಿದೆ ಹಳೆಯ ನೆನಪುಗಳಿಗೆ ಸಿಕ್ಕ ಕಣ್ಣು ತೇವಗೊಂಡಿವೆ. ಯಾವ ಹೆಣ್ಣು ಜೀವದೊಂದಿಗೆ ನಾನು ಮಾತು, ಸಲುಗೆ ಕಣ್ಣೋಟವನ್ನು ಹರಿಸಿದವನಲ್ಲ. ಬಂದ ಹೊಸತರಲ್ಲಿ ಅತಿಯಾಗಿ ಕಾಡಿದ ಕಣ್ಣು ಅವಳದು ಈಗಲೂ ಕಾಡುತ್ತಿರು ಕಣ್ಣು ಅದು. ಕ್ಯಾಂಪಸ್ಸಿನೊಳಗೆ ಪ್ರೀತಿ ಪರಿಚಯದ ಗಂಧಗಾಳಿಯನ್ನು ತಿಳಿಯದವನಿಗೆ ಪ್ರೀತಿ ಸವಿಉಣಿಸಿದವಳು. ಸುಲುಗೆಯಲ್ಲಿ ಮನಗೆದ್ದವಳು. ಹಸಿದ ಭೂಮಿಗೆ ಹನಿನೀರನಿತ್ತವಳು. ಗಾಂಭಿರ್ಯರತೆಯ ನಗುಮಿಶ್ರತ ಅವಳ ಕಾಳಜಿ ಪರ ವ್ಯಕ್ತಿತ್ವದ ಆಕರ್ಷಣೆಯು ನನ್ನನ್ನು ಅತಿಯಾಗಿ ಕಾಡಿತು.ನನಗೆ ಗೊತ್ತಿಲ್ಲದೆ ನನ್ನೊಳಗಿನ ಕಾಳಜಿಯನ್ನು ಉದ್ದಿಪನಗೊಳಸಿತು ಪುಳಕದ ಜಾಡಿನಲ್ಲಿ ಜಾರಿ ಹೋಯಿತು ಮನಸು.ಕನಸು ಕನವರಿಕೆಗಳಲ್ಲವೂ ನಿನ್ನಂತೆ ಚಿತ್ರತವಾಗತೊಡಗಿದವು. ಅತಿ ವಿಶೇಷ ಪ್ರೀತಿ ನಿನ್ನದು ನನ್ನಸಾಧನೆ ಕನಸು ಕನವರಿಕೆಗಳಿಗೆ ಅವಳ ಒಲಬಲವಿತ್ತು. ಅದರ ಜೊತೆ ನನ್ನ ಸಾಧನೆ ಮನದಲ್ಲಿತ್ತು. ಅದಕ್ಕೆ ಸದಾ ಒತ್ತಾಸೆಯಾಗಿರುತ್ತಿದ್ದಳು. ನನ್ನ ಬಾಳಿನ ಮಿನುಗುವ ನಕ್ಷತ್ರ ನೀನು ಅತಿಶೋಕ್ತಿಯನ್ನಬೇಡ. ಮಾತಿಗೂ ಮೌನಕ್ಕೂ ನಡುವೆ ನಿಂತವಳು.

ಕಲ್ಪನೆ ನಡುವೆ ಕಾಣೆಯಾದವನು..

ನನ್ನೊಳಗಿನ ಕಲ್ಪನೆಗಳಿಗೆ ಸ್ಪೂರ್ತಿ ನೀನು.ಇದು ಮನಸಿನ ಮಾತು. ನೀನು ಧಾರೆಎರೆದ ಪ್ರೀತಿಯನ್ನು ಹೊತ್ತ ಎದೆಭಾರದಲ್ಲಿ ಮೂಳುಗಿ ಈ ಅಕ್ಷರದಲ್ಲಿ ಒಡಮೂಡಿತ್ತಿದೆ. ಕವಿತೆಯಾಗಿಯೋ, ಗದ್ಯವಾಗಿಯೋ, ಮನದ ಲಾವಣಿಯಾಗಿಯೋ ನನ್ನೊಳಗೆ ಸದಾ ಹರಿಯುತ್ತಿರುತ್ತದೆ ಜೀವದಲ್ಲಿ ಜೀವದ ನಂತರವೂ. ಇರಲಿ ಬಿಡು ನಮ್ಮ ಗೆಳೆತನದಲಿ ಯಾವುದು ಅತಿಯಾಗುದಿಲ್ಲ. ಈ ಜೀವಿತ ಪ್ರಪಂಚದ ನಡುವೆಯೂ ನಾವು ಶಾಶ್ವತ ಲೋಕದ ಪ್ರತಿಮೆಯಾಗಿಬಿಡುತ್ತೇವೆ.
ಪ್ರೀತಿಯ ನಡುವೆ ಸತ್ತು ಬದುಕಿದವನು..

ಆದರೆ ಇಷ್ಟು ಸುಂದರವಾಗಿ ಕಟ್ಟಿದ ಕನಸುಗಳು ಕಳಚುತ್ತಿವೆ. ಬಿಟ್ಟು ಹೋದ ದಾರಿಯಲ್ಲಿ ಮರೆತು ಹೋದ ಹೂವಿನಂತೆ ಮನಸು ಬಾಡುತ್ತಿದೆ. ರಾತ್ರಿಗಳಿಗೆ ನಿದ್ದೆಯ ತೆರಿಗೆ ಕಟ್ಟಿದ್ದೇನೆ. ಯಾವುದಕ್ಕೂ ಜಗದ ಮನವು ನೆನಪಿನ ಹೊಡತಕ್ಕೆ ತನ್ನತನವನ್ನೇ ಕಳೆದುಕೊಂಡಿದೆ. ಸೂತ್ರ ತಪ್ಪಿಸಿಕೊಂಡು ಅಲೆಯುವ ಮನಸು ಮೌನದ ದೊರೆಯಾಗಿದೆ. ಕಾಣದ ಊರಿನಲ್ಲಿ ಇರುವ ನಿನಗೆ ನಾನು ಬರೆದ ಪತ್ರ ಮನದ ಅಂಚೆಗೆ ಹಾಕುವ ಮುನ್ನ ಮರೆದೆ ಓದು ಈ ಪತ್ರವನ್ನು. ನೀನಿಲ್ಲದ ನಡುವೆ ನೆನಪಿನ ಜೊತೆ ಜಗಳಕ್ಕಿಳಿದು ಕಣ್ಣ ಹನಿಗಳ ಸಾಕ್ಷಿಯೊಂದಿಗೆ ನಡುಗುವ ಕೈ ಬರಹಕ್ಕೆ ಒಂದು ಸಣ್ಣ ವಿರಾಮ, ನೀನಿಲ್ಲದ ಬದುಕಿಗೆ ಪೂರ್ಣವಿರಾಮ.

ವೃಶ್ಚಿಕ ಮುನಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *