ಎರಡು ಕೋಮಿನ ಜನರ ನಡುವೆ ಜಗಳ ಆರಂಭವಾಗಿತ್ತು..
ಕಾರಣ ತಮ್ಮ ಧರ್ಮದ ಭಿತ್ತಿ ಪತ್ರ ಅಂಟಿಸಿ ಅಪ ಪ್ರಚಾರ ಮಾಡಿದರೆಂದು…
ಒಂದು ಆಡು ಬಂದು ಆ ಭಿತ್ತಿಪತ್ರವನ್ನು ನಿಧಾನವಾಗಿ ಹರಿದು ಮೆಲ್ಲತೊಡಗಿತು..
*****
ಅಣ್ಣ ತನ್ನ ತಂಗಿಯ ಗಂಡನ ಮನೆಯ ಪರಿಸ್ಥಿತಿ ಬಗ್ಗೆ ಹೆಂಡತಿ ಜೊತೆ ಹೇಳಿ ವ್ಯಥೆ ಪಡುತ್ತಿದ್ದ…ಆದರೆ
ಹೆಂಡತಿ ತನ್ನ ಮನೆಯಲ್ಲಿ ನರಕ ಅನುಭವಿಸುವುದ ಕಂಡೂ ಕಾಣದಂತೆ ನಟಿಸುತ್ತಿದ್ದ.
*****
ಅಮ್ಮ ನಿನ್ನ ಸೊಸೆಯನ್ನು ಹದ್ದುಬಸ್ತಿನಲ್ಲಿಡು ಇಲ್ಲಾಂದ್ರೆ ನಿನ್ನ ಮೂಲೆಗೆ ಹಾಕಿಯಾಳು ಎಂದು ಅತ್ತೆಯನ್ನು ಅನಾಥಶ್ರಮ ಸೇರಿಸಿದ ಮಗಳು ಅಮ್ಮನಿಗೆ ತನ್ನ ನಿಜರೂಪ ತೋರಿಸಿದಳು…
*****
ಅಮ್ಮ ನಾನು ಬೇರೆ ಊರಿಗೆ ವರ್ಗ ಮಾಡಿಸಿಕೊಂಡೆ.
ಹೆಂಡತಿ ಮಗುವಿನ ಜೊತೆ ಹೋಗುತ್ತಿದ್ದೇನೆ. ಕಾರಣ
ನಿನಗೆ ರಾತ್ರಿ ಮಗು ಅತ್ತಾಗ ನಿದ್ದೆಗೆಡಲು ಕಷ್ಟವಲ್ಲವೇ ಅಮ್ಮ.!!!
ಅಮ್ಮ ವಿಷಾದ ನಗೆ ನಕ್ಕು ನುಡಿದಳು…
ನಿನ್ನ ಮಗುವಿನಂತೆ ಹತ್ತು ಮಕ್ಕಳ ಹೆತ್ತು ಹೊತ್ತ ತಾಯಿ ನಾನು ಎಂದು…
*****
ದಾರಿಯಲ್ಲಿ ಹೆಣ್ಣು ಒಂಟಿಯಾಗಿ ಹೋಗುತ್ತಿದ್ದಳು.
ಅವನು ಹಿಂದೆಯೇ ಬೆನ್ನಟ್ಟಿ ಹೊರಟ..
ಅವ ಕೇಳಿದ ಹೇ ಹೆಣ್ಣೆ ನಿನ್ನ ಬೆಲೆ ಎಷ್ಟು??
ಹುಡುಗಿ ತಿರುಗಿ ನಿಂತು ನುಡಿದಳು ನಾನು ನಿನ್ನ "ತಂಗಿ"ಹೇಳು ನನಗೆಷ್ಟು ಬೆಲೆ ಕಟ್ಟುವೆ?
*****
ಹೊಸದಾಗಿ ಮದುವೆಯಾಗಿ ಬಂದ ಕಿರಿಸೊಸೆಗೆ
"ನಮ್ಮದು ದೊಡ್ಡ ಸಂಸಾರ ಎಲ್ಲರ ಜೊತೆ ಹೊಂದಿಕೊಂಡು ಜೀವನ ನಡೆಸು"
ಎಂದು ಉಪದೇಶ ನೀಡಿದ ಹಿರಿಸೊಸೆ
ತಾನು ಬೇರೆಮನೆ ಮಾಡಲು ಗಂಡನಿಗೆ ಪೀಡಿಸುತ್ತಿದ್ದಳು…
*****
ಎಲ್ಲವೂ ಚೆಂದಾಗಿದೆ.
ಎಲ್ಲವೂ ತುಂಬಾ ಚೆನ್ನಾಗಿವೆ…