ಪಂಜು-ವಿಶೇಷ

ಏನೆಂದು ಬರೆಯಲಿ, ಬಾರದ ಅಕ್ಷರ ಎದೆ ಗಾಳಕ್ಕೆ ಸಿಕ್ಕಿ ಮೇಲೆ ಬರದ “ಮೀನು”: ಸ್ಫೂರ್ತಿ ಗೌಡ

ಹೆಣ್ಣು ಒಂದು ಅಕ್ಷರ ಬರೆದರೆ ಅದರ ಹಿಂದೆ ಅದೆಂತದೋ ಇತಿಹಾಸ ಕಂಪನ.. ಪಾಂಡವರು ಮಾಡಿದ ರಾಜಸೂಯದಂತಹ ತನ್ಮಯತೆ…ಹೆಣ್ಣೆಂದರೆ ದೇಹವಲ್ಲ, ನಿನ್ನ ಚೆಲ್ಲಾಟಕ್ಕೆ ಕಿಬ್ಬೊಟ್ಟೆ ಕೊಟ್ಟು ಕರಗಿಸುವವಳಲ್ಲ, ನಿನ್ನ ಅಂತಃಕರಣಕ್ಕೆ ಕುಣಿದು ತಣಿಸುವ ರಮಣಿಯಲ್ಲ, ನಿನ್ನ ದುಖಃಕ್ಕೆ ಎದೆ ಒಡ್ಡಿ ತಲೆ ಸವರುವ ಮುದ್ದಲ್ಲ, ಹೆಣ್ಣು… ತಾಳಿಕಟ್ಟಿದ ಗಂಡಿನ ಬಂಧ ಬಿಟ್ಟು ಚೆನ್ನಮಲ್ಲಿಕಾರ್ಜುನೇ ಗಂಡನೆಂದು ಪೂಜಿಸಿದ ಮಹಾದೇವಿ, ಕಾಣದ ಗೋಕುಲ ನಂದನನಿಗೆ ಹಾತೊರೆದು ತನ್ನ ತನವೆಲ್ಲಾ ಸಮರ್ಪಿಸಿದ ಮೀರಾ, ಭೋಗ ಸುಖವ ಬಿಟ್ಟು ಓಡಿ ಬಂದು ಲಿಂಗಕ್ಕೆ ಶರಣು ಶರಣು ಎನ್ನುವ ಆ ಹೆಣ್ಣು… ಸೂಕ್ಷ್ಮ ಸಂವೇದಗಳೇ ಕಥೆಯಾಗಿ ಹರಿಸಿದ ತ್ರಿವೇಣಿ.. ಹೆಣ್ಣಿನ ದಿಗಂಬರತೆಯನ್ನು ಬಿಚ್ಚಿದ ಸಾ.ರಾ ಅಬೂಬಕ್ಕರ್.. ಐದು ಗಂಡಂದಿರನ್ನು ಅಂಗೈ ಬೆರಳಿನಂಗೆ ಹಸ್ತದಲ್ಲಿ ಬೆಚ್ಚಗಿರಿಸಿದ ಆ ಗರತಿ ಪಾಂಚಾಲಿ.. 

ಹೆಣ್ಣೆಂದರೇ ಗೊಂದಲವಲ್ಲ ಪರಿಪೂರ್ಣವಾಗುವ ತವಕ, ಅವಳು ನಿಟ್ಟುಸಿರಲ್ಲ ಯಾರನ್ನೋ ಕಾಯುವ ರಕ್ಷೆಯ ಬಿಸಿ., ಹತಾಶೆಯಲ್ಲ ಭಾವ ಭಕ್ತಿಯ ಬಿಂಬ.. ಕಾಮನೆ ಕರಗಿಸಿ ನೀಡಬಲ್ಲಳು ಸೃಷ್ಠಿ.. ಪ್ರೀತಿಯಲ್ಲಿ ಸೋತರೆ ನಿನಗೆ ಶರಣಾರ್ತಿ, ನಿನ್ನ ಸಂಯಮಕ್ಕೆ ಗಂಟೆ ಗಡಿಯಾರವಾಗಿ ಸಮದೂಗಿಸಿ ನಡೆಸುವ ಪ್ರಜ್ಞೆ.. ಆದರೆ ಅಬ್ಬ! ನಿನ್ನದು ಅದೆಂಥ ರಭಸ ಎಲ್ಲಾ ಭಾವನೆಗಳು ಒಮ್ಮಲೇ ಬಡಿದು ನೆಲದ ಮರಳು ಕಿತ್ತು ಹರಿದು ಕಡಲ ಸೇರಿಸುವ ಕೋಪ.. ಗಡಸು, ಗಮಲು, ಗೌಪ್ಯ ಗಂಡಿನ ನಡುವೆ ಪರಿಸರ, ಪ್ರಕೃತಿ, ಪರಿಮಳ, ಪರಿಕಾರ ಅವಳು.. ಕಣ್ಣಂಚಲಿ ಕರಗುವ ಹೆಣ್ಣಿಗೆ ಕಟ್ಟು ಕಟ್ಟಳೆಗಳೇಕೆ, ಬಾಗಿ ಬಳ್ಳಿಯಾಗುವ ಗಿಡಕ್ಕೆ ಬಂಧವೇಕೆ?? 

ನೀನು ಅಲ್ಲಿ ಅತ್ತರೆ ಇಲ್ಲಿ ನನ್ನ ತಾಕಿದ ನೋವು ಹರಿದಾವು ಕೆಮ್ಮಣ್ಣ ರಾಡಿ.. ನಿನ್ನ ಉರಿಗೊಪಕ್ಕೆ ನಾನಿಲ್ಲಿ ಬಿರಿದ ಬರಡು ಬಯಲು.. ನಲ್ಮೆಯ ಸಂಬಂಧಕ್ಕೆ ತಾಳಿ ಬೇಡದಿದ್ದರೂ ಬೇಕು ಬಂಧ.. ಬೀದಿ ಬಸವನಂತಲ್ಲ ಸಂಬಂಧ.. ಬಸವನ್ಗೆ ಆಹಾರ ಸಿಗಬಹುದು ಆರೈಕೆಯಲ್ಲ… ಬಿಗುಮಾನ ಬಿಡು ಗಂಡೇ ನೀನು ಅಪ್ಪಲಾದರು ಬಾಗಬೇಕು ಹೆಣ್ಣಿಗೆ!!  ಮೊಣಗಾಲೂರಲೇ ಬೇಕು ನಿನ್ನ ತೃಷೆಗೆ.. ಪ್ರೀತಿಸಿ ಕಾಯಿಸಿ ಕುಡಿದರೆ ತಿಳಿ ನೀಲಿ.. ಕದಡಿ ಕದಡಿ ಕಾಡಿಸಿ ಕುಡಿದರೆ ಭಾವದ ರಾಡಿ, ಹೆಣ್ಣೆಂಬಕೆ ಮೀಸಲಾತಿ ಏಕೆ ನಿನ್ನ ಅರ್ಧಾಂಗಿಯಲ್ಲ ನಿನ್ನ ಸರ್ವಾಂಗಿ.. 

ಧರಣಿಯಲ್ಲಿ ಯಾವ ಹೆಣ್ಣನ್ನಾದರೂ ಜಾಜಿ ಹೂವಿನಂಗೆ ಅರಳಿಸಿ ಅರ್ಥೈಸಬಹುದು,, ಹುಬ್ಬುಗಳ ಕೊಂಕು, ಕಣ್ಣಹನಿಗಳ ನಿಶ್ಯಬ್ದತೆ, ಮುಖದ ಮೇಲೆ ಬಾರಿಸಿಸುವ ಕೋಪ, ಸೋಲರಿಯದ ಸೌಷ್ಠವ ಅರಿತರೆ ಗಂಡೇ ನೀ ಗೆದ್ದಂಗೇ..

ಯಾವುದೂ ತಿಳಿಯದೆ ವಾದಿಸಿ, ಆಪಾದಿಸಿ, ಕೆರಳಿಸಿ, ಕೊಂಕಿಸಿ, ಕಾಡಿಸಿದರೂ ಕ್ಷಮಯಾಧರಿತ್ರಿ ಕಾಯುವಳು ಸರಸ್ವತಿ ಸನಿಹದಲ್ಲಿ…

ಗಂಡು ಸೃಷ್ಠಿಗಲ್ಲದಿದ್ದರು…ಅಹಂ ಗಂಡಸತ್ತನಕ್ಕೆ ಧಿಕಾರ!

-ಹರವು ಸ್ಫೂರ್ತಿಗೌಡ

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಏನೆಂದು ಬರೆಯಲಿ, ಬಾರದ ಅಕ್ಷರ ಎದೆ ಗಾಳಕ್ಕೆ ಸಿಕ್ಕಿ ಮೇಲೆ ಬರದ “ಮೀನು”: ಸ್ಫೂರ್ತಿ ಗೌಡ

  1. ಚೆನ್ನಾಗಿದೆ.. 
    ಅಕ್ಷರಗಳು ಚುಚ್ಚುತ್ತವೆ .. ನೇರ ಎದೆಯೊಳಗೆ 
     
     
     

  2. ಶ್ರೀಮಂತ ಪದಗಳು. ಅರ್ಥಗರ್ಭಿತ ವಾಕ್ಯಗಳು.  ಪದಗಳ ಆಯ್ಕೆ, ವಾಕ್ಯರಚನೆ, ಹೇಳಿದ ರೀತಿ ಎಲ್ಲಾನೂ ಚೆನ್ನಾಗಿವೆ. ತುಂಬಾ ಹರಿತವಾಗಿದೆ ಬರಹ. ಅಲ್ಲಲ್ಲಿ ಒಂದೆರಡು  (ಟೈಪಿಂಗ್)  ತಪ್ಪುಗಳು ಕಾಣಸಿಕ್ಕಿದವು.  ಅದರ ಕಡೆಗೆ ಸ್ವಲ್ಪ ಗಮನ ಕೊಡಿ.

  3. ಚುಚ್ಚುವ ಅಕ್ಷರಗಳೆ ನಿಜ ಪ್ರೇಮ ಮತ್ತು ಕಾಮದ ಸಂಭಂದದ ಬಗ್ಗೆ ಸ್ವಲ್ಪ ಗೊಂದಲಗಳಿವೆ–ಉದಾ: ಮೊಣಗಾಲೂರಲೇ ಬೇಕು ನಿನ್ನ ತೃಷೆಗೆ. ಇಲ್ಲಿ ಗಂಡು ಮಾತ್ರ ಕಾಮಿ ಎಂದಾಗುತ್ತದೆ. ಮತ್ತು ತುಂಬಾ ಆಳವಾಗಿ ನೋಡಿದರೆ ಇದರ ಸೈಡ್ ಎಪೆಕ್ಟ್ಸ್ ಬಗ್ಗೆ ಮಾತಾಡಬೇಕಾಗುತ್ತದೆ. ಗಂಡೊಬ್ಬನೆ ರಭಸ, ಒರಟು, ಎಂಬಿತ್ಯಾದಿ ಅರ್ಥಗಳು ಇಲ್ಲಿ ಇದೆಯಾದರೂ ಈ ಲೇಖನವೇ ಹೆಣ್ಣಿನ ರಭಸ ಮತ್ತು ತೀಕ್ಷ್ಣತೆಯನ್ನು ತೋರಿಸುತ್ತದೆ ಹಾಗಾಗಿ ಭಾವನೆಗಳು ಹೆಣ್ಣು ಮತ್ತು ಗಂಡು ಇವರಿಬ್ಬರಲ್ಲೂ ಒಂದೆ ರೀತಿ ಇರುತ್ತದಾದರೂ ಇದು ಹೆಣ್ಣಿನ ಭಾವನೆ ಇದು ಗಂಡಿನ ಭಾವನೆ ಎಂಬ ಸಾಮಾನ್ಯಿಕರಣವನ್ನು ಹೊರತು ಪಡಿಸುವಂತ ಇಂತ ಲೇಖನಗಳು ಬೇಕು. ಅಹಂ ಹೆಣ್ಣಿನಲ್ಲೂ ಇರುತ್ತದಲ್ಲವೇ.. ? ಒಟ್ಟಾರೆಯಾಗಿ ಗಮನ ಸೆಳೆಯುತ್ತದೆ. ಅಭಿನಂದನೆಗಳು, ಶುಭಾಶಯಗಳು ಮತ್ತು ದಿಕ್ಕಾರಕ್ಕೆ ಸ್ವಾಗತ..:))

  4. ಗಂಡಸು ಜಾತಿಗೆ ಸುತ್ತಿಗೆಯಿಂದ ಹೊಡೆದಂತಿದೆಯಲ್ರೀ?!! ಅಬ್ಬಬ್ಬಾ….!

  5. ಎಲ್ಲಾ ಪ್ರತಿಕ್ರಿಯೆಗಳನ್ನು ನೋಡಿ ಸ್ವಲ್ಪ ಗಲಿಬಿಲಿಗೊಂಡೆನಾನು ಗಂಡು ಜಾತಿಗೆ ದಿಕ್ಕಾರ ಹೇಳಿದರೆ ಅದು ಅಸಂಬದ್ಧವಾಗುತ್ತೆ, ನನ್ನ ಅಪ್ಪ, ಗಂಡ, ಮಗ, ತಮ್ಮ, ಅಣ್ಣ ಎಲ್ಲರೂ ಗಂಡಸರೇ.. ಇಲ್ಲಿ ನಾನು ಸೂಕ್ಷ್ಮವಾಗಿ ಹೇಳಿರುವುದು 'ಗಂಡು ಸೃಷ್ಠಿಗಲ್ಲದಿದ್ದರೂ, ಅಹಂ ಗಂಡಸ್ತತನಕ್ಕೆ ದಿಕ್ಕಾರ' ಎಂದು ದಯವಿಟ್ಟು ಇದ್ದನು ಗಮನಿಸಿ 

Leave a Reply

Your email address will not be published. Required fields are marked *