ಏಕಾಂಗಿ ಮನಸು ಮತ್ತು ಅವಳ ಕನಸು: ರವಿಕಿರಣ್

 

"ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ ನಿಂಗೆ?"

 ಕುತೂಹಲಕ್ಕೆ ಕೇಳಿದ್ಲಾ? ಚೇಷ್ಟೆಗೆ ಕೇಳಿದ್ಲಾ? ಅರ್ಥವಾಗಲಿಲ್ಲ. ಹೌದು ಗಾಳಿ ಯಾಕೆ ಸದ್ದು ಮಾಡತ್ತೆ? ನಾನೂ ಚಿಂತೆ ಎನ್ನುವ ಚಿತೆಗೆ ಜಾರಿದಂತಾಯ್ತು. ಎಲ್ಲೋ ಪೇಟೆಯ ಮಧ್ಯವೋ, ಬಸ್ಸಿನಲ್ಲಿ, ಬೈಕಿನಲ್ಲಿ ಹೋಗುವಾಗಲೋ, ಇಲ್ಲ ಯಾವುದೋ  ಪಾರ್ಕು,ಹೋಟೆಲ್,ಮನೆ,ದೇವಸ್ಥಾನ,ಚರ್ಚ್ ಎಲ್ಲೇ ಈ ಪ್ರಶ್ನೆ ಕೇಳಿದ್ದರೂ, ಉತ್ತರ ಕೊಡುವ ಪ್ರಯತ್ನ ಮಾಡಬಹುದಿತ್ತು. ನ್ಯೂಟ್ರಾನ್,ಪ್ರೋಟಾನ್,ಎಲೆಕ್ಟ್ರಾನುಗಳ ಜೊತೆ ಗಾಡ್ ಪಾರ್ಟಿಕಲನ್ನೂ ಬಳಸಿ, ನ್ಯೂಟನ್ ನಿಯಮಗಳನ್ನು ದ್ವೈತಾದ್ವೈತಗಳ ಜೊತೆ ಮಿಶ್ರಮಾಡಿ ಹೇಳಲು ಪ್ರಯತ್ನಿಸಿ ಹಾದಿ ತಪ್ಪಿಸುವ ಪ್ರಯತ್ನವನ್ನಾದರೂ ಮಾಡಬಹುದಿತ್ತು. ಬೀಸುವ ಗಾಳಿಗೆ ಅಡೆತಡೆ ಉಂಟಾಗಿ, ವೇಗದಲ್ಲಿ ವ್ಯತ್ಯಾಸವಾಗಿ… ಈ ಬೋಳುಗುಡ್ಡದ ಮೇಲೆ ಇವಳಿಗೆ  ಎಂಥ 'ವೇವ್ ಥಿಯರಿ'. ನನ್ನಷ್ಟಕ್ಕೆ ನಕ್ಕು ಸುಮ್ಮನಾದೆ.       

ನನಗೇನೂ ಇಂಥ: ಪ್ರಶ್ನೆಗಳು ಹೊಸದಲ್ಲ. ಅದೆಷ್ಟೋ ಪ್ರಶ್ನೆಗಳಿಗೆ ಮಹಾಜ್ಞಾನಿಯಂತೆ, ವೇದಾಂತಿಯಂತೆ ವಿವಿಧ ಆಯಾಮಗಳಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ಗೊತ್ತಿಲ್ಲದ್ದನ್ನು ಗೊತ್ತಿದೆ ಎನ್ನುವಂತೆ ಹೇಳಲು ಹೊರಟು 'ಪೆದ್ದ' ಎನ್ನುವ ವಿಶೇಷಣವನ್ನೂ ಪಡೆದಾಗಿದೆ. ಇವಲ್ಲವುದರ ನಡುವೆಯೇ, ಆಕೆಯ ಮುಗ್ದ ನಗುವಿಗೆ, ಸಹಜ ಸಂತಸಕ್ಕೆ ಕಾರಣನಾದೆ ಎನ್ನುವ ಸಂತೃಪ್ತಿಯ ಭಾವ, ಮನಸ್ಸಿಗೆ ಸಿಗುವ ನೆಮ್ಮದಿ, ಖುಷಿ ಎಲ್ಲವನ್ನೂ ಅನುಭವಿಸಿದ್ದೇನೆ.

ಬಿರುಗಾಳಿ, ಸುಳಿಗಾಳಿಗಳಷ್ಟೇ ಅಲ್ಲ, ನಿನ್ನ ಉಸಿರಿನ ಬಿಸಿಗಾಳಿಯೂ ಶಬ್ದ ಮಾಡುತ್ತದೆ. 'ಅದೊಂದು ರೀತಿಯ ಅಮಲೂ ಸಹ ' ಎಂದು ಹೇಳುವ ಪ್ರಯತ್ನ ಮಾಡಿ, ಹೇಳಲಾರದೆ ಸೋತಿದ್ದೇನೆ. ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರಯತ್ನ ಮಾಡಿ, ದೃಷ್ಟಿ ಯುದ್ದದಲ್ಲಿ ಸೋತು ಸುಣ್ಣವಾಗಿದ್ದೇನೆ. ಪಕ್ಕದಲ್ಲಿ ಕುಳಿತವಳ ಮುಂಗುರುಳು ತಂಗಾಳಿಯ ಜೊತೆ ಚೆಲ್ಲಾಡುವುದನ್ನು ನೋಡಿ, ಸರಿಪಡಿಸಲು ಹೋದ ಕೈ, ಅವಳ ಗದರುವ ನೋಟಕ್ಕೆ ಬೆದರಿ, ನನಗರಿವಿಲ್ಲದೆಯೇ ಹಿಂದೆಗೆದಿದೆ. ಈ ರೀತಿ ವಿಷಯಗಳು ಬಂದಾಗ, ಪ್ರೀತಿ ಪ್ರೇಮಗಳ ಜಗತ್ತಲ್ಲಿ ಹುಡುಗರಿಗಿಂತ ಹುಡುಗಿಯರಿಗೆ ಧೈರ್ಯ ಜಾಸ್ತಿಯಂತೆ ಹೌದಾ? ನನ್ನ ಪ್ರಶ್ನೆಗೆ ನಗುವೊಂದೇ ಉತ್ತರವಾ? ಅರ್ಥವಾದಳು ಎಂದುಕೊಂಡರೆ ನನ್ನಾಳ ನೀನೇನು ಬಲ್ಲೆ ಎನ್ನುವಂತಹ ನೋಟ?.. ಮತ್ತದೇ ಪ್ರಶ್ನೆ.

"ಹುಡುಗರ ಬಾಳಿನ ಸುಂದರ ಸಂಜೆಗಳನ್ನು ಹಾಳು ಮಾಡಲೆಂದೇ ಈ ಹುಡುಗಿಯರು ಹುಟ್ಟಿರುವುದು", ಭಗ್ನ ಪ್ರೇಮಿ ಮಿತ್ರನೊಬ್ಬನ ಗೊಣಗಾಟ ಕಿವಿಯಲ್ಲಿ ರಿಂಗಣಿಸಿತು. ಹೌದು ಹೌದು, ನನ್ನದೂ ಸಹಮತವಿದೆ ಎಂಬಂತೆ ತಲೆ ಅಲ್ಲಾಡತೊಡಗಿತು. ಛೆ, ಸುಖಾ ಸುಮ್ಮನೆ ಅಪವಾದ ಹೊರಿಸಬಾರದು. ಅದೆಷ್ಟು ಸಂಜೆಗಳನ್ನು ನಾನು ಇವಳೊಡನೆ ಕಳೆದಿಲ್ಲ? ಈ ಸಂಜೆಗಳಿಗಾಗಿಯೇ ಅದೆಷ್ಟು ಹಗಲು ರಾತ್ರಿಗಳನ್ನು ಕಷ್ಟಪಟ್ಟು ಸವೆಸಿದ್ದೇನೆ. ಲೆಕ್ಕ ಇಟ್ಟವರಾರು?

"ನೀನಿಲ್ಲದ ಬದುಕು ಮರುಭೂಮಿ ಕಣೇ" ಎಂದು ಹೇಳಲು ಪ್ರಯತ್ನಿಸಿ ಸೋತಿದ್ದು ಎಷ್ಟು ಬಾರಿಯೋ?. 'ಮಿಸ್ ಯು…' ತುಸು ಜೋರಾಗೇ ಹೇಳಿ ಬಿಟ್ಟೆನಾ?. ಈ ಹಾಳಾದ ಕಣ್ಣೀರು, ದುಃಖದಲ್ಲೂ, ಆನಂದದಲ್ಲೂ ಧಾರಾಳವಾಗಿ ಸುರಿಯುತ್ತದೆ. ಇದು ಆನಂದ ಭಾಷ್ಪವಾ?, ದುಃಖಕ್ಕೆ ಬಂದಿದ್ದಾ?. ಇವಳು ಗುರುತಿಸುವ ಮೊದಲೇ ಒರೆಸಿಕೊಂಡು ಬಿಡೋಣ ಎಂದು ಮುಖದತ್ತ ಕರವಸ್ತ್ರ ಒಯ್ದಾಗಲೇ, ತಾನೂ ತೊಟ್ಟಿಕ್ಕುವ ಕಣ್ಣೀರಿನೊಡನೆಯೇ ಹೇಳಿದಳಲ್ಲ, "ಇರಲಿ ಬಿಡು ಗಾಳಿಗೆ ಆರುತ್ತೆ".

ಯಾಕೆ ಹೀಗೆ ಇವಳು? ನಾನೇ ಹೇಳಲಿ ಎಂದು ಕಾಯುತ್ತಿದ್ದಳ? ಇಲ್ಲ ಸುಮ್ಮನೆ ಸತಾಯಿಸುತ್ತಿದ್ದಾಳ? ತುಂಬಾ ಮಾತನಾಡಬೇಕು ಬಾ, ಎಂದು ಕರೆಯುವುದು. ಬಂದಾಗಲೆಲ್ಲ ಇಂಥ ಪ್ರಶ್ನೆಗಳು, ಇಲ್ಲವಾದರೆ ಮುಗುಳ್ನಗೆ, ಮೌನ, ಮತ್ತೆರಡು ಹನಿ ಅಶ್ರುಧಾರೆ. 'ಮೂಕ ಪ್ರಾಣಿಗಳೇ ನಮಗಿಂತ ಎಷ್ಟೋ ವಾಸಿ' ಎಷ್ಟೋ ಬಾರಿ ಅನಿಸಿದ್ದಿದೆ..!. ಸಮುದ್ರ ತೀರ, ನದಿ ದಡ, ಪಾರ್ಕು, ಬಸ್ಸು, ಕಾಲುದಾರಿ, ಈ ಬೋಳುಗುಡ್ಡ, ಯಾವುದನ್ನ ಬಿಟ್ಟಿದ್ದೇವೆ? ಇನ್ನು ಇವಳು ಕರೆದರೆ ಬರಲೇ ಬಾರದು ಎನ್ನುವ ಅದೆಷ್ಟೋ ತೀರ್ಮಾನಗಳನ್ನೂ ಒಂದೇ ಒಂದು ಮೆಸೇಜ್ ಅಳಿಸಿ ಬಿಡುತ್ತದಲ್ಲ !

"ಏಯ್, ಗಾಳಿ ಏಕೆ ಸದ್ದು ಮಾಡತ್ತೆ ಹೇಳೋ.."

ಕುಳಿತಿರುವ ಒಂದು ಗಂಟೆಯಲ್ಲಿ ಅದೆಷ್ಟನೆ ಬಾರಿ ಕೇಳುತ್ತಿದ್ದಾಳೆ? ಇವತ್ತು 'ತಬ್ಬಿ ಹಿಡಿದು, ಮೊದಲ ಮುತ್ತಿಟ್ಟು  ಪ್ರಶ್ನೆಗೆ ಉತ್ತರ ಹೇಳಲೇ ಬೇಕು.

"ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ..?"

"ಮುತ್ತಿಡುವ ಶಬ್ದ ಆಚೆ ಈಚೆ ಕೇಳದಿರಲಿ ಅಂತ..!"

ಬಲಗಡೆ, ಅವಳು ಕುಳಿತಿರುತ್ತಿದ್ದ ಬಂಡೆ. ಆದರೆ ಪ್ರಶ್ನೆ ಕೇಳುತ್ತಿರುವುದು ಅವಳಲ್ಲ, 'ಗಾಳಿಯೇ'.. ಅರಿವಿಲ್ಲದೆಯೇ ತೊಟ್ಟಿಕ್ಕಿದ ಕಣ್ಣೀರು.

ಹೌದು, ನನಗೆ ನಾನೇ ಹೇಳಿಕೊಂಡೆ,

'ಹಾಗೆ ಇರಲಿ ಬಿಡು, ಆರುತ್ತೆ'..  

– ರವಿಕಿರಣ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

20 Comments
Oldest
Newest Most Voted
Inline Feedbacks
View all comments
sharada moleyar
sharada moleyar
11 years ago

good.

Ganesh Khare
Ganesh Khare
11 years ago

 ವಾ ವಾ… ಪ್ರೀತಿಯ ಮಧುರ ಕ್ಷಣಗಳ ವರ್ಣನೆ ಅದೆಷ್ಟು ಸುಂದರ.. ಆಹಾ!  ಆ ವರ್ಣನೆಯ ನಡುವೆ ಕೆಲ ಕ್ಷಣ ಮರೆತೇ ಹೋಗಿತ್ತು "ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ ನಿಂಗೆ?" ಅನ್ನುವ ಪ್ರಶ್ನೆ. ಬೆಳಿಗ್ಗೆ ಬೆಳಿಗ್ಗೆ ನಿಮ್ಮ ಈ ಪ್ರೀತಿಯ ಸುಂದರ ಬರಹ ಓದಿ ಮನ ಪ್ರಸನ್ನವಾಯಿತು. ನಿಜಕ್ಕೊ ನನಗೂ ಇಂಥಹ ಕ್ಷಣಗಳನ್ನ ಅನುಭವಿಸುವ ಮನಸಾಗತೊಡಗಿದೆ.
ಶುಭವಾಗಲಿ ಗೆಳೆಯ.

Krishnanand
Krishnanand
11 years ago

nice ravi… good effort…

ravikiran
11 years ago

ಧನ್ಯವಾದಗಳು ಗಣೇಶ್. ಈ ಪ್ರತಿಕ್ರಿಯೆ ನನ್ನ ಪಾಲಿಗೆ ಅತ್ಯಮೂಲ್ಯ, ಏಕೆಂದರೆ, ಪತ್ರಿಕೆ ರೂಪದ ತಾಣವೊಂದರಲ್ಲಿ, ನನ್ನ ಲೇಖನದ ಬಗ್ಗೆ ದೊರೆತ ಮೊದಲ ಸುದೀರ್ಘ ಪ್ರತಿಕ್ರಿಯೆ ಇದು. ಅಷ್ಟೇ ಅಲ್ಲ,
ನಿಮ್ಮ ಪ್ರತಿಕ್ರಿಯೆಗಳು ಬರೆಯಲು ಇನ್ನಷ್ಟು ಹುಮ್ಮಸ್ಸು ಕೊಡುವಂತಿದೆ. ಪ್ರೀತಿಯನ್ನು ಅನುಭವಿಸುವ ಕ್ಷಣಗಳು ಎಲ್ಲರಿಗೂ ಸಿಗಲಿ ಎಂಬ ಹಾರೈಕೆಗಳೊಂದಿಗೆ,,,,,
-ರವಿಕಿರಣ್ 

ravikiran
11 years ago

sharada moleyar: ಧನ್ಯವಾದಗಳು 🙂

ಸುಮತಿ ದೀಪ ಹೆಗ್ಡೆ

ತುಂಬಾ ಇಷ್ಟ ಆಯ್ತು, ರವಿಕಿರಣ್… keep writing… 🙂

ಶ್ರೀವತ್ಸ ಕಂಚೀಮನೆ.

ಕಣ್ಣೀರು ಖುಷಿಗಾಗಿ ಮಾತ್ರ ಹರಿಯಲಿ…ಪ್ರೇಮ ಪಯಣದಲ್ಲಿ…
ತುಂಬಾ ಇಷ್ಟವಾಯಿತು…ಮಧುರ ಭಾವ ಲಹರಿ…

ದಿವ್ಯ ಆಂಜನಪ್ಪ

(Y) ಧನ್ಯವಾದಗಳು

ravikiran
11 years ago

@ ಶ್ರೀವತ್ಸ ಕಂಚೀಮನೆ.: ಸಾಹಿತ್ಯದ ಆಳ ಅಗಲಗಳ ಬಗ್ಗೆ ಅರಿತಿರುವ, ಸ್ವತಹ ಬ್ಲಾಗಿಗರೂ ಆಗಿರುವ ತಮ್ಮ ಪ್ರತಿಕ್ರಿಯೆ ನಿಜಕ್ಕೂ ನನ್ನ ಪಾಲಿಗೆ ಅತ್ಯಮೂಲ್ಯ.
ವಂದನೆಗಳೊಂದಿಗೆ
 -ರವಿಕಿರಣ್

ravikiran
11 years ago

ಸಾಹಿತ್ಯದ ಆಳ ಅಗಲಗಳ ಬಗ್ಗೆ ಅರಿತಿರುವ, ಸ್ವತಹ ಬ್ಲಾಗಿಗರೂ ಆಗಿರುವ ತಮ್ಮ ಪ್ರತಿಕ್ರಿಯೆ ನಿಜಕ್ಕೂ ನನ್ನ ಪಾಲಿಗೆ ಅತ್ಯಮೂಲ್ಯ.
ವಂದನೆಗಳೊಂದಿಗೆ
 -ರವಿಕಿರಣ್

ravikiran
11 years ago

Krishnanand: Thank you sir 🙂

hipparagi Siddaram
hipparagi Siddaram
11 years ago

ಆಪ್ತವೆನಿಸುವ ಬರಹ…..ಚೆನ್ನಾಗಿದೆ…..ಶುಭದಿನ !

ravikiran
11 years ago

@hipparagi Siddaram: ಧನ್ಯವಾದಗಳು ಸರ್ 🙂

Raghunandan K
11 years ago

ಹಾಗೇ ಆರಬಹುದಾದ ಕಣ್ಣೀರ ಹನಿಗಳಿಗೆ ಗಾಳಿ ಮುತ್ತು ಕೊಟ್ಟು ಹೋಗುತ್ತಾ..??
ವಾವ್… ಒಂದೇ ರೀತಿ ಕಾಣುವ ಪ್ರೇಮ ಬರಹಗಳ ಏಕತಾನತೆಯಿಂದ ತುಸು ಆಚೆಗೆ ಸರಿದು ನಿಂತ ಬರಹವೆನಿಸಿ ಆಪ್ತವಾಯಿತು ರವಿಕಿರಣ್, 
ನಿಮ್ಮ ಮತ್ತಷ್ಟು ಬರಹಗಳು ನಮ್ಮ ಓದಿಗೆ ಸಿಗಲಿ.

ravikiran
11 years ago

"ಹಾಗೇ ಆರಬಹುದಾದ ಕಣ್ಣೀರ ಹನಿಗಳಿಗೆ ಗಾಳಿ ಮುತ್ತು ಕೊಟ್ಟು ಹೋಗುತ್ತಾ..??",
@ Raghunandan K : ಗಾಳಿ ಕೊಡುವ ಮುತ್ತಿನಿಂದಲೇ ಕಣ್ಣೀರ ಹನಿ ಆರತೊಡಗಿದ್ದೆನ್ನಿಸುತ್ತೆ!! 🙂
ಧನ್ಯವಾದಗಳು ಸರ್…
ವಂದನೆಗಳೊಂದಿಗೆ,
-ರವಿಕಿರಣ್ 

Santhoshkumar LM
11 years ago

Hi Ravikiran,
ಬರೆಯುವ ಕಲೆ, ತಾಕತ್ತು ನಿಮ್ಮೊಳಗಿದೆ. ಬರೆಯುತ್ತಲಿರಿ. ಇಷ್ಟವಾಯಿತು 🙂

ravikiran
11 years ago

@Santosh kumar LM.

Thank you sir …

Radhesh
Radhesh
11 years ago

Very Nice Ravi…Keep it up !

ravikiran
11 years ago

Thank you Radhesh 🙂

20
0
Would love your thoughts, please comment.x
()
x